Table of Contents
Research Articles
ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು
01 to 09
ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಆ ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು, ಭಾರತದ ಸಂವಿಧಾನದಲ್ಲಿ ಆ ಮೌಲ್ಯಗಳನ್ನು ಹಲವಾರು ವಿಧಿಗಳ ರೂಪದಲ್ಲಿ ಕ್ರೋಢೀಕರಿಸಿ, ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ಆತ್ಮಗೌರವ ಮತ್ತು ಅನ್ಯಾಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಮೂಡಿಸಿದ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರು. ಮೂಲತ ಅಂಬೇಡ್ಕರ್‌ರವರು, ಬೆಳೆದು ಬಂದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಅಸ್ಪೃಶ್ಯತೆ, ಬಡತನ, ದೌರ್ಜನ್ಯ ಈ ಎಲ್ಲಾ ಜಾತಿಯ ಅಸಮಾನತೆಗಳ ಭೀತಿಗಳನ್ನು, ಒಳಗೊಂಡ ಸಮಾಜವಾಗಿತ್ತು. ಹಾಗಾಗಿ ಸಹಜವಾಗಿಯೇ ಶೋಷಿತ ಸಮುದಾಯಗಳ ಶೋಷಣೆಯ ವಿವಿಧ ಸ್ವರೂಪಗಳು ಅವರ ಹೋರಾಟಗಳಲ್ಲಿ ಪ್ರತಿಫಲನಗೊಂಡಿವೆ. ಈ ಮೂಲಭೂತವಾದ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು, ಒಬ್ಬ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿ, ಬಾಬಾಸಾಹೇಬ್ ಅಂಬೇಡ್ಕರ್ರವರ ಆಯ್ದ ಬರಹಗಳು, ಹೋರಾಟಗಳು, ಮತ್ತು ಹೋರಾಟದ ಭಾಗವಾಗಿ ಎತ್ತಿರುವ ಮೂಲಭೂತ ಪ್ರಶ್ನೆಗಳನ್ನು ಈ ಸಂಶೋಧನಾ ಬರಹದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಮುಂದುವರಿದು, ಅಂಬೇಡ್ಕರ್‌ರವರು ದಲಿತ ವಿಮೋಚಕ, ಸಂವಿಧಾನ ಶಿಲ್ಪಿ, ಮೀಸಲಾತಿ ಕಾನೂನುಬದ್ಧಗೊಳಿಸಿದ ದಲಿತ ಹೋರಾಟಗಾರ; ಈ ಸೀಮಿತ ಚೌಕಟ್ಟನ್ನು ಮೀರಿ ಅವರ ಬದುಕು ಮತ್ತು ಹೋರಾಟಗಳನ್ನು ಗುರುತಿಸುವ ಪ್ರಯತ್ನ, ಅವರ ಬರವಣಿಗೆಗಳಲ್ಲಿ ಅಭಿವ್ಯಕ್ತಗೊಂಡಿರುವ ಸಮಾಜಮುಖಿ ಚಿಂತನೆಗಳು, ಮತ್ತು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಸ್ಥಾಪಕರಾಗಿ ಮತ್ತು ಪ್ರತಿಪಾದಕರಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ವಿಚಾರಧಾರೆಗಳು, ಪ್ರಸ್ತುತ ಭಾರತ ಎದುರಿಸುತ್ತಿರುವ ಸವಾಲುಗಳ ನೆಲೆಯಲ್ಲಿ ಅವರ ಚಿಂತನೆಗಳ ಪ್ರಸ್ತುತತೆ ಈ ಮೂಲಭೂತವಾದ ವಿಚಾರಗಳನ್ನು ಪ್ರಧಾನವಾಗಿ ಚರ್ಚೆ ಮಾಡಲಾಗಿದೆ. ಅಂತಿಮವಾಗಿ, ಈ ಸಂಶೋಧನಾ ಬರಹ, ಎಲ್ಲಾ ತಾರತಮ್ಯಗಳನ್ನು ಮೀರಿದ ಮಾನವತಾ ಸಮಾಜ, ಎಲ್ಲರನ್ನು ಒಳಗೊಳ್ಳುವ, ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ದೌರ್ಜನ್ಯ ಮುಕ್ತ ಸಮಾಜವಾಗಿ, ರೂಪಿಸುವ ಮತ್ತು ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿಯಾಗುವ ಮಹತ್ವಪೂರ್ಣ ಸಾಂವಿಧಾನಿಕ ಜವಾಬ್ದಾರಿಗಳ ಭಾಗವಾಗಿ ಅಂಬೇಡ್ಕರ್ ಚಿಂತನೆಗಳು ಪ್ರಸ್ತುತವೆಂದು, ಖಾತರಿಪಡಿಸುತ್ತದೆ.
ಬಾಬಾ ಸಾಹೇಬ್ ಅಂಬೇಡ್ಕರ್: ಸಾಮಾಜಿಕ ನ್ಯಾಯದ ರೂವಾರಿ
10 to 16
ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರತಿಭೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಗ್ರಮಾನ್ಯರು. ಅವರು ರಾಜಕೀಯ ತಜ್ಞರು, ಕಾನೂನು ತಜ್ಞರು, ಆರ್ಥಿಕ ಚಿಂತಕರು, ಸಾಮಾಜಿಕ ನ್ಯಾಯದ ಹೋರಾಟಗಾರರು, ತತ್ವಜ್ಞಾನಿಗಳು, ಲೇಖಕರು, ಬಹುಭಾಷ ವಿದ್ವಾಂಸರು, ಭಾರತ ರಾಷ್ಟ್ರದ ಮಹಾನ್ ನೇತಾರ, ಭಾರತದ ಶ್ರೇಷ್ಠ ಮಾನವತಾವಾದಿ, ಪ್ರಜಾತಂತ್ರ ಕಾರಣಿ ಮತ್ತು ಸಾಮಾಜಿಕ ಕ್ರಾಂತಿಕಾರಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮಹಾಜ್ಞಾನಿ ಹಾಗೂ ಭಾರತದ ಸಂವಿಧಾನ ರಚನ ಕರಡು ಸಮಿತಿಯ ಅಧ್ಯಕ್ಷರು. ಹೀಗೆ ಇವರ ಶ್ರೇಷ್ಠತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಶ್ರೇಷ್ಠ ವ್ಯಕ್ತಿ ಭಾರತದಲ್ಲಿದ್ದ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ತಾನೇ ಸಂವಿಧಾನವನ್ನು ರಚಿಸಿ ಸಾಮಾಜಿಕ ನ್ಯಾಯವನ್ನು ನೀಡಿದ ಸಾಮಾಜಿಕ ಚಿಂತಕ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಮೊದಲು ವರ್ಣ ವ್ಯವಸ್ಥೆ ರೂಡಿಯಲ್ಲಿತ್ತು. ಅದು ಯಾವಾಗ ಯಾವ ಕಾರಣಗಳಿಂದ ಆರಂಭಗೊಂಡಿತು ಎಂದು ಹೇಳುವುದು ಕಷ್ಟ. ಏಕೆಂದರೆ ಯಾವುದೇ ಸಾಮಾಜಿಕ ವ್ಯವಸ್ಥೆಯ ಉಗಮದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ, ವೇದಗಳಿಂದಲೇ ವರ್ಣವಸ್ಥೆ ಆರಂಭವಾಗಿದೆ ಎನ್ನುವುದು ಬಹುಜನ ಒಪ್ಪಿತವಾದ. ಚಾತುರ್ವಣ ಎಂಬುದು ಹಿಂದೂ ಧರ್ಮದ ಒಂದು ಸಾಮಾಜಿಕ ವಿಭಜನಾ ವ್ಯವಸ್ಥೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಈ ವರ್ಣ ವ್ಯವಸ್ಥೆಯು ಪ್ರಾಚೀನ ಸಮಾಜದಲ್ಲಿ ಶ್ರಮ ವಿಭಜನೆ ತತ್ವದಲ್ಲಿ ರೂಪಿತವಾಗಿದೆ. ಅಧ್ಯಯನ ಅಧ್ಯಾಪನ ಯಜ್ಞ ಯಾಗಾದಿಗಳ ಕಾರಣದಿಂದ ಬ್ರಾಹ್ಮಣ, ರಾಜ ಆಡಳಿತ, ರಾಜ್ಯ ಸುಭಿಕ್ಷತೆಯ ಕಾರಣದಿಂದ ಕ್ಷತ್ರಿಯ, ವ್ಯಾಪಾರ ವ್ಯವಹಾರಗಳ ಕಾರಣದಿಂದ ವೈಶ್ಯ, ಕೃಷಿ ಮತ್ತು ಕೂಲಿಕಾರ್ಯಗಳು ಕಾರಣದಿಂದ ಶೂದ್ರ ಎಂದು ನಿರ್ವಹಿಸಿರುವ ಬಗೆಯನ್ನು ಕಾಣಬಹುದು. ಓದುವ ಕಾರಣದಿಂದ ಬ್ರಾಹ್ಮಣ ಮೇಲ್ವರ್ಗದವರಾಗಿ, ಕಾಯಕದ ಕಾರಣದಿಂದ ಶೂದ್ರ ಕೆಳ ವರ್ಗದವನಾಗಿ ಗುರುತಿಸಲ್ಪಡುತ್ತಿರುವುದು ದುರಾದೃಷ್ಟಕರ.
ಆಯಗಾರಿಕೆ ಮತ್ತು ಹರಿಜನರು (ಛಲವಾದಿಗರು) (ವಿಜಯಪುರ ಜಿಲ್ಲೆ ಅನುಲಕ್ಷಿಸಿ)
17 to 24
ಕೃಷಿ ಭಾರತೀಯ ಗ್ರಾಮಗಳ ಪ್ರಧಾನ ವೃತ್ತಿಯಾಗಿದ್ದು, ಜನಸಂಖ್ಯೆಯ ಬಹುತೇಕ ಭಾಗ ವರ್ಷವಿಡೀ ಕೃಷಿಯಲ್ಲಿಯೇ ತೊಡಗಿರುತ್ತದೆ. ಗ್ರಾಮ ಜೀವನವು ಪರಸ್ಪರಾವಲಂಬಿಯಾಗಿ, ಹಲವಾರು ವಿಶಿಷ್ಟ ಸೇವಾ, ವಿನಿಮಯ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಸಂಗಮವಾಗಿದೆ. ರೈತರು ಒಕ್ಕಲುತನದ ಜೊತೆಗೆ-ಬಡಿಗೇರರು ಬಡಗಿತನ, ಕಮ್ಮಾರರು ಕಮ್ಮಾರಿಕೆ, ಕುಂಬಾರರು ಕುಂಬಾರಿಕೆ, ನೇಕಾರರು ನೇಕಾರಿಕೆ, ಮಡಿವಾಳರು ಬಟ್ಟೆಗಳನ್ನು ಶುಚಿಮಾಡಿಕೊಡುವುದು, ಚಮ್ಮಾರರು ಚಮ್ಮಾರಿಕೆ ಇಂತಹ ವಿವಿಧ ಕಾಯಕಗಳಲ್ಲಿ ನಿರತರಾಗಿದ್ದಾರೆ. ಹಣದ ಚಲಾವಣೆ ಅಧಿಕೃತವಾಗಿ ಆರಂಭವಾದ ಸಂದರ್ಭದಲ್ಲಿಯೂ ಸಹ, ಕೃಷಿಕರು ಬೆಳೆಯುವ ದವಸಧಾನ್ಯಗಳು ತಮಗೆ ಬೇಕಾದ ಬಟ್ಟೆ-ಬರೆ, ಪಾತ್ರೆ ಪಗಡೆ ಮತ್ತು ಸೇವೆಗೆ ಪ್ರತಿಫಲವಾಗಿ ನೀಡುವ ಪರಿಪಾಟ ಗ್ರಾಮೀಣ ಪ್ರದೇಶದಲ್ಲಿ ಬೆಳೆದುಬಂದಿದೆ. ಅಂತಹ ವಿಶಿಷ್ಟ ಸೇವೆಗಳನ್ನು ಸಲ್ಲಿಸುವ ಕೆಲಸಗಾರರಿಗೂ ಮತ್ತು ಕೃಷಿಕರಿಗೂ ನಿಕಟವಾದ ಸಂಬಂಧ ತಲೆತಲಾಂತರವಾಗಿ ಗ್ರಾಮಗಳಲ್ಲಿ ಸಾಗಿಬಂದಿದೆ. ಈ ಬಗೆಯ ಸಹಕಾರ ಜೀವನ ವ್ಯವಸ್ಥೆ ಭಾರತೀಯ ಗ್ರಾಮಗಳಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದ ಒಂದು ವಿಶಿಷ್ಟ ಅಂಶವಾಗಿದ್ದು, ಹಲವಾರು ಗ್ರಾಮಗಳಲ್ಲಿ ಇಂದಿಗೂ ಸಹ ಪ್ರಚಲಿತವಾಗಿರುವುದನ್ನು ಕಾಣುತ್ತೇವೆ.
ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಬಲೀಕರಣ
25 to 29
'ಸಂವಿಧಾನ ಶಿಲ್ಪಿ' 'ಬಾಬಾ ಸಾಹೇಬ್' ಎಂದು ಜನಪ್ರಿಯರಾಗಿರುವ ಡಾ. ಬಿ. ಆರ್. ಅಂಬೇಡ್ಕರ್‌ರು ಭಾರತ ದೇಶ ಕಂಡ ಬಹುದೊಡ್ಡ ಸಮಾಜ ಸುಧಾರಕ ನ್ಯಾಯಶಾಸ್ತ್ರಜ್ಞರೂ ಅರ್ಥಶಾಸ್ತ್ರಜ್ಞರೂ ಆಗಿರುವ ಬಿ. ಆರ್. ಅಂಬೇಡ್ಕರ್ ಅವರು ಮಾಹಾನ್ ಚಿಂತಕರು ಹೌದು. ಶ್ರೇಷ್ಠ ರಾಜಕೀಯ ನಾಯಕರಾಗಿರುವ ಇವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಸಮಾಜದ ಕಲ್ಯಾಣಕ್ಕಾಗಿ ಮಹಿಳೆಯರು ಮತ್ತು ದೀನದಲಿತ ವರ್ಗಕ್ಕಾಗಿ ಕೆಲಸ ಮಾಡಿದರು. ಎಲ್ಲಾ ಸಮಾಜಕ್ಕೂ ದಾರಿದೀಪರಾಗಿರುವ ಬಿ. ಆರ್. ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕಾಗಿ ಹೋರಾಟ ಮಾಡಿದ್ದಲ್ಲ. ಕಾರ್ಮಿಕರು, ರೈತರು ಮತ್ತು ಮಹಿಳೆಯರನ್ನು ಒಳಗೊಂಡಿರುವ 'ಅಸಮಾನ ಸಾಮಾಜಿಕ ವ್ಯವಸ್ಥೆ ಮತ್ತು ತುಳಿತಕ್ಕೊಳಗಾದ ವರ್ಗದ ಮಾನವ ಹಕ್ಕುಗಳ ಹೋರಾಟಗಾರರಾಗಿ ಹೋರಾಡಿದವರು ಜಡವಾದ ಸಮಾಜವನ್ನು ಪುನರುಜ್ಜಿವನಗೊಳಿಸಲು ಡಾ. ಬಿ. ಆರ್. ಅಂಬೇಡ್ಕರ್ ಮಾಡಿದ ಚಿಂತನೆಗಳು, ಪ್ರಯೋಗಗಳು ಹೋರಾಟಗಳು ಮಹತ್ವ ಪಡೆದು ಸಮ ಸಮಾಜಕ್ಕೆ ಸಹಬಾಳ್ವೆಗೆ ಪೂರಕವಾಗಿವೆ. ಹೀಗೆ ಅಂಬೇಡ್ಕರ್‌ರು ಶೋಷಿತ ಸಮುದಾಯದ ಹೋರಾಟಕ್ಕೆ ಬಹುದೊಡ್ಡ 'ಐಕಾನ್' ಆಗಿ ಹೊರಹೊಮ್ಮಿದರು, ಸ್ವಾಭಿಮಾನದ ಸಂಕೇತವಾದರು.
ಅಂಬೇಡ್ಕರ್: ಮೀಸಲಾತಿ
30 to 35
ಬಾಬಾ ಸಾಹೇಬ್ ಅಂಬೇಡ್ಕರ್ ಭಾರತ ಕಂಡ ಮಹಾನ್ ಮಾನವತವಾದಿ. ಭಾರತದಲ್ಲಿದ್ದ ವರ್ಣ, ವರ್ಗ ಮತ್ತು ಜಾತಿ ವ್ಯವಸ್ಥೆಯನ್ನು ಬುಡ ಸಮೇತ ನಾಶ ಮಾಡದ ಹೊರತು, ಭಾರತದ ಸಮಾಜ ಸುಧಾರಣೆಗೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ ಸಮಾಜ ಸುಧಾರಕರು. ಸಾಮಾಜಿಕ ಸ್ತರಗಳ ಮೂಲಕ ಇದ್ದ ತಾರತಮ್ಯವನ್ನು ಹೋಗಲಾಡಿಸಲು ಜನಸಾಮಾನ್ಯರಲ್ಲಿ ವಿಚಾರಧಾರೆಗಳನ್ನು ಕಟ್ಟಿಕೊಟ್ಟ ಮಹಾನ್ ವಿಚಾರವಾದಿ. ಹೀಗಾಗಿಯೇ ಬಾಬಾ ಸಾಹೇಬರು ಭಾರತೀಯ ಸಮಾಜದ ಪ್ರಗತಿಯು ಸಮಾನತೆಯಲ್ಲಿ ಅಡಗಿದೆ ಎಂದು ಬಲವಾಗಿ ನಂಬಿದ್ದರು. ವರ್ಣಗಳು ಪುರುಷನಿಂದ, ಮನುವಿನಿಂದ, ಪ್ರಜಾಪತಿಯಿಂದ, ವಾರ್ತ್ ನಿಂದ ಮತ್ತು ಸೋಮನಿಂದ ಹುಟ್ಟಿವೆ ಎಂದು ವೇದಗಳು ಪ್ರತಿಪಾದಿಸುತ್ತವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಋಗ್ವದದಲ್ಲಿ ಪ್ರತಿಪಾದಿತವಾಗಿದೆ. ವರ್ಣ ವ್ಯವಸ್ಥೆಯ ಹುಟ್ಟಿನ ಕುರಿತು ಎಷ್ಟು ಚರ್ಚೆಗಳಿವೆಯೋ ಅಷ್ಟೇ ವರ್ಣಾಶ್ರಮ ವ್ಯವಸ್ಥೆಯ ಸಂಖ್ಯೆಯ ಬಗ್ಗೆಗಿನ ಚರ್ಚೆಗಳು ಇವೆ. ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಶೂದ್ರರನ್ನು ಅತ್ಯಂತ ಹೀನವಾಗಿ ಕಾಣಲಾಗುತ್ತಿತ್ತು. ಸಾರ್ವಜನಿಕ ದೇವಾಲಯವನ್ನು ಅವರು ಪ್ರವೇಶಿಸುವಂತಿರಲಿಲ್ಲ. ಸಾರ್ವಜನಿಕ ಕೆರೆಕಟ್ಟೆಗಳ ನೀರನ್ನು ಮುಟ್ಟುವಂತಿರಲಿಲ್ಲ. ಕೃಷಿಯನ್ನು ಮಾಡುವಂತಿರಲಿಲ್ಲ. ಅವರದೆಂದು ಹೇಳಿಕೊಳ್ಳಲಿಕ್ಕೆ ಸ್ವಂತ ವಸ್ತುವನ್ನು ಇಟ್ಟುಕೊಳ್ಳುವಂತಿರಲಿಲ್ಲ. ಓದು ಕಲಿಕೆ, ಮಾತು, ಅಭಿವ್ಯಕ್ತಿ, ಹೋರಾಟ, ಪ್ರತಿಭಟನೆ ಮತ್ತು ನ್ಯಾಯ ಕೇಳುವ ಹಕ್ಕು ಸಾಧ್ಯವೇ ಇರಲಿಲ್ಲ. ಮನುಷ್ಯ ಮನುಷ್ಯರ ನಡುವೆ ಇರುವ ಈ ತಾರತಮ್ಯ ಬಾಬಾ ಸಾಹೇಬರ ಹೃದಯವನ್ನು ಕಲುಕಿತು. ಅದಕ್ಕಾಗಿ ಬಾಬಾ ಸಾಹೇಬರು ಸಾಮಾಜಿಕ ನ್ಯಾಯದ ಹೋರಾಟದ ಪರಿವರ್ತನೆಯ ಬಾಗಿಲನ್ನು ತೆರೆದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ಪೃಶ್ಯತಾ ಆಚರಣೆಯನ್ನು ವಿರೋಧಿಸಿ 'ಬಹಿಷ್ಕೃತ ಹಿತಕಾರಣಿ' ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅಸ್ಪೃಶ್ಯ ಎಂದು ಕರೆದು ಎಲ್ಲಾ ಸೌಲಭ್ಯಗಳಿಂದ ದೂರವಿಟ್ಟಿದ್ದನ್ನು ಸಾರ್ವಜನಿಕ ವಲಯಗಳಲ್ಲಿ ಪ್ರಶ್ನಿಸುವಂತೆ ಮಾಡಲಾಯಿತು. ದಲಿತರಿಗೆ ವಿಶೇಷ ಸೌಲಭ್ಯಕ್ಕಾಗಿ ಅವರು ನಡೆಸಿದ ಹೋರಾಟವೇ ಆಧುನಿಕ ಮೀಸಲಾತಿಯ ಹೋರಾಟವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ. ಆರ್. ಅಂಬೇಡ್ಕರ್
36 to 45
ವಿಸ್ತಾರವಾದ ದೇಶ, ವೈವಿಧ್ಯಮಯವಾದ ಸಂಸ್ಕೃತಿಗಳು, ಸಾವಿರಾರು ಭಾಷೆಗಳು, ಸಾವಿರಾರು ಜಾತಿಗಳು, ವಿಭಿನ್ನ ಮತಗಳು ಈ ಮಣ್ಣಿನಲ್ಲಿ ಜೀವಿಸುತ್ತಿವೆ. ಈ ಎಲ್ಲವುಗಳಿಗೆ ಜೀವ ಕೊಡುವ ತತ್ವ ಯಾವುದು? ಮತ್ತು ಇವುಗಳನ್ನು ಬೆಸೆಯುವ ಸೂತ್ರ ಯಾವುದು? ಎಂಬ ಆಲೋಚನೆಗಳ ಬೆನ್ನ ಹತ್ತಿದಾಗ ಸಿಗುವ ಪೂರಕ ಶಕ್ತಿಗಳ ಬಗ್ಗೆ ಅಧ್ಯಯನಕ್ಕೆ ಪ್ರಜಾಪ್ರಭುತ್ವವೊಂದು ಮುಖ್ಯವಾಗಿ ಮುನ್ನೆಲೆಗೆ ಬರುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಇದು ಬೆಳೆದು ಬಂದ ಪರಂಪರೆ, ಅದು ಗಟ್ಟಿಗೊಂಡ ಹಿನ್ನೆಲೆಗಳು ಆಸಕ್ತಿದಾಯಕಗಳಾಗಿವೆ. ಬಾಬಾ ಸಾಹೇಬರು ಪ್ರಜಾಪ್ರಭುತ್ವವನ್ನು ಭಾರತೀಯ ಮಣ್ಣಿನಲ್ಲಿ ಕೃಷಿ ಮಾಡಿದ ಬಗ್ಗೆ ಗಮನಾರ್ಹವಾದದ್ದು. ಎಲ್ಲಾ ಜನರು ಬದುಕಲಿಕ್ಕೆ ಬೇಕಾದ ಜೀವನ ವಿಧಾನ ಮತ್ತು ಆಡಳಿತ ಕ್ರಮವಾಗಿಸುವಲ್ಲಿ ಸಶಕ್ತವಾದ ಸೂತ್ರವೊಂದನ್ನು ಪೋಣಿಸಿದ್ದಾರೆ. ದೇಹಕ್ಕೆ ಹೊಂದಿಕೊಳ್ಳುವ ಅಂಗಿಯನ್ನೆ ಹೊಲಿಯಬೇಕು. ಅಳತೆ ಮೀರಿದರೆ ಅದು ತನ್ನ ಬಾಹ್ಯ ಮತ್ತು ಅಂತರಂಗಕ್ಕೆ ಸರಿ ಹೊಂದುವುದಿಲ್ಲ. ಆಗ ಅದರ ನಿಜ ಸೌಂದರ್ಯವೂ ಹಾಳಾಗುತ್ತದೆ. ಹಾಗಾಗಿ ಭಾರತದಂತಹ ದೇಶಕ್ಕೆ ಸತ್ವಶಾಲಿಯಾಗಿ ಚಲಾವಣೆಗೊಳ್ಳುವ ಜೀವ ಸತ್ವವೆಂದರೆ ಅದು ಪ್ರಜಾಪ್ರಭುತ್ವ. ಎಲ್ಲರನ್ನೂ ಒಂದು ದಾರಕ್ಕೆ ಸೇರಿಸಿ ಕೊಂಡೊಯುವ ಬೇಸುಗೆ ಎಂಬುದನ್ನರಿತು ಸಂವಿಧಾನದಲ್ಲಿ ಇದಕ್ಕೆ ಒಂದು ಸ್ಪರ್ಶ ನೀಡಿದ್ದಾರೆ. ಪ್ರಜಾಪ್ರಭುತ್ವ ಎನ್ನುವುದು ಪ್ರಜೆಗಳಿಂದ ಉತ್ಪನ್ನಗೊಳ್ಳುವ ಅಧಿಕಾರ. ಆ ಅಧಿಕಾರದಿಂದ ಜನರ ಆಶೋತ್ತರಗಳಿಗೆ, ಆಕಾಂಕ್ಷೆಗಳಿಗೆ, ಮನೋಭಾವಗಳಿಗೆ ಸ್ಪಂದನೆ, ಸಂವೇದನೆ, ಸಹವರ್ತಿತನ, ಸಹಭಾಗಿತ್ವಗಳು ಹುಟ್ಟು ಹಾಕಬೇಕು. ಜನ ಕಲ್ಯಾಣಕ್ಕೆ ಅನುವು ಮಾಡಿಕೊಡಬೇಕು. ಏಕೆಂದರೆ ಪ್ರತಿಯೊಂದು ಜೀವಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಗಳು ಅಗತ್ಯ ಹಾಗೂ ಅನಿವಾರ್ಯವಾಗಿರುತ್ತವೆ. ಇವು ನೆಲೆಗೊಳ್ಳಲು ಪ್ರಜಾಪ್ರಭುತ್ವದಂತಹ ಅಂತಃಸತ್ವಬೇಕು. ದುರ್ದಮ್ಯವಾದ ಕಾಡಿನಂತೆ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬಂದಿರುವ ವ್ಯವಸ್ಥೆಯು ಬೆರೆಯುವುದು ಕಷ್ಟಸಾಧ್ಯ. ಸಮಾಜಮುಖಿಯಾಗಿ, ಮುಖ್ಯವಾಹಿನಿಗೆ ತರಲು ಅವರ ಪ್ರಯತ್ನ ಅದಮ್ಯವಾದದ್ದು. ಪ್ರಜಾಪ್ರಭುತ್ವ ಎನ್ನುವುದು ಬಹು ಸಂಖ್ಯಾತರ ಪರವಾದ. ಅಲ್ಪ ಸಂಖ್ಯಾತರ ವಿರೋಧವಾದ ವರ್ತನೆಗಳು ಈ ಮಣ್ಣಿಗೆ ಒಗ್ಗವು. ಒಂದು ಸರ್ಕಾರ ಜನರಿಂದ ಆಯ್ಕೆಯಾದ ಮೇಲೆ ಅದರ ಕರ್ತವ್ಯ ಮತ್ತು ಜವಾಬ್ದಾರಿಗಳು ಮುಖ್ಯವಾಗುತ್ತವೆ. ಅದು ಸಂಧಿಸುವ ಹಾಗೂ ಕ್ರಮಿಸುವ ದಾರಿಯೂ ಗಮ್ಯವಾಗುತ್ತದೆ. ಕಟ್ಟಕಡೆಯ ವ್ಯಕ್ತಿಗೂ ಅವು ತಲುಪಬೇಕು. ಪ್ರಜಾಪ್ರಭುತ್ವದ ತತ್ವಗಳು ಸರ್ವಾಂಗೀಣ ಅಭಿವೃದ್ಧಿಗೆ ಕೊಟ್ಟ ಒತ್ತಾಸೆಗಳೇನು? ಅದರ ಸವಾಲುಗಳೇನು? ಎಂಬುದು ಚರ್ಚಿತ ವಿಷಯವಾಗುತ್ತದೆ. ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಾಮಾಜಿಕತೆ, ಶೈಕ್ಷಣಿಕತೆ, ಆರ್ಥಿಕತೆ ಹಾಗೂ ರಾಜಕೀಯ ಮುಂತಾದ ವಲಯಗಳಲ್ಲಿ ಅದು ಪ್ರವೇಶ ಪಡೆದು ಜನರ ಜೀವಾಳದಲ್ಲಿ ಅಸ್ಥಿತ್ವ ಪಡೆದ ರೀತಿಯೂ ಈ ಅಧ್ಯಯನದ ಪ್ರಧಾನ ಆಶಯವಾಗಿದೆ.
ಧರ್ಮ ಮತ್ತು ಅಂಬೇಡ್ಕರ್
46 to 53
ಅಂಬೇಡ್ಕರ್ ಭಾರತದ ಒಬ್ಬ ಶ್ರೇಷ್ಠ ಪ್ರತಿಭಾವಂತ ಬುದ್ದಿ ಜೀವಿ ಮತ್ತು ಮೇಧಾವಿ. ಪ್ರಪಂಚದ ಅಪ್ರತಿಮ ಚಿಂತಕರ ಸಾಲಿನಲ್ಲಿ ನಿಲ್ಲಬಲ್ಲ, ಮೇರು ವ್ಯಕ್ತಿತ್ವವುಳ್ಳ ಚಿಂತನಶೀಲ ವ್ಯಕ್ತಿ. ಅವರು ಜಗತ್ತಿನ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಆಸಕ್ತಿ ಮತ್ತು ಕುತೂಹಲದಿಂದ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದರು. ಧರ್ಮವನ್ನು ಕುರಿತಂತೆ ರಾಬರ್ಟ್ ಸನ್ ಸ್ಮಿತ್ ಅವರ ಪರಿಕಲ್ಪನೆಯನ್ನು ಅಂಬೇಡ್ಕರ್ ಹಿಂದೂ ಧರ್ಮದ ತತ್ವಜ್ಞಾವನ್ನು ಕುರಿತ ತಮ್ಮ ಕೃತಿಯಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. ಧರ್ಮ ಯಾವುದೇ ಕಾರಣಕ್ಕೂ ದುರ್ಬಲರನ್ನು ಶೋಷಿಸುವ ಅಸ್ತವಾಗಬಾರದು. ಹಿಂದೂ ಧಾರ್ಮಿಕ ವ್ಯವಸ್ಥೆಯಲ್ಲಿ ದೈವಿಕ ಪ್ರಭುತ್ವದ ಲಿಖಿತ ಸಂವಿಧಾನ ಮತ್ತು ಪುರೋಹಿತಶಾಹಿಯ ಅಘೋಷಿತ ಪ್ರಾಬಲ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಧರ್ಮದಲ್ಲಿ ಬಹುಸಂಖ್ಯಾತ ಹಿಂದುಳಿದ ಸಮುದಾಯಗಳ ಜನತೆ ಸಮಾನತೆಯಿಂದ ವಂಚಿತರಾಗಿದ್ದಾರೆ. ಇಂತಹ ಧಾರ್ಮಿಕ ಕಟ್ಟುಪಾಡುಗಳು ಭಾರತೀಯ ಸಮಾಜದಲ್ಲಿ ಬಹುಜನ ಬಂಧುಗಳಿಗೆ ಉಸಿರು ಕಟ್ಟಿಸುವಂತಹ ವಾತಾವರಣವನ್ನು ನಿರ್ಮಿಸಿವೆ. ಹಿಂದೂಧರ್ಮದ ಸಿದ್ದಾಂತಗಳನ್ನು ವಂಶಪಾರಂಪರ್ಯವಾಗಿ ಪಡೆಯುವ ಚರಾಸ್ತಿಯಂತೆ ವೈದಿಕಶಾಹಿ ಸಂರಕ್ಷಿಸಿದೆ. ಇಂತಹ ಧರ್ಮ ಪ್ರಕೃತಿ ಧರ್ಮಕ್ಕೆ ತದ್ವಿರುದ್ಧವಾಗಿದೆ.
ವಚನ ಚಳವಳಿ ಮತ್ತು ಮಹಿಳೆ
54 to 59
ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡಂತಹ ವಿಶಿಷ್ಟ ಸಾಹಿತ್ಯದ ಪ್ರಕಾರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ಈ ಯುಗವನ್ನು ಸಾಮಾಜಿಕ ಪರಿವರ್ತನೆ ಯುಗ ಎಂದು ಕರೆಯುವಷ್ಟರಮಟ್ಟಿಗೆ ಬದಲಾವಣೆ ಆಗಿರುವುದನ್ನು ಕಾಣುತ್ತೇವೆ. ವಚನ ಎಂದರೆ ಮಾತು, ಉಕ್ತಿ ಎಂಬ ಅರ್ಥವನ್ನು ಹೊಂದಿದ್ದು ಗದ್ಯ ಪದ್ಯಗಳ ರೂಪದಲ್ಲಿ ಕಂಡುಬಂದಿದೆ ಮಹಿಳೆಯರ ಸಮಾನತೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಶತಮಾನಗಳಿಂದ ಅಸ್ಪೃಳಾಗಿದ್ದ ಅದೃಶ್ಯಳಾಗಿದ್ದ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಪುರುಷನ ಹಾಗೆ ಮಹಿಳೆಗೆ ಸಮಾನವಾದ ಸ್ಥಾನವನ್ನು ನೀಡುವ ಮೂಲಕ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಒಂದು ಬೃಹತ್ ಬದಲಾವಣೆ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಸ್ತ್ರೀಯರ ಸಮಾನತೆಗಾಗಿ ಮಾಡಿದ ಮೊದಲ ಚಳುವಳಿ ವಚನ ಚಳುವಳಿ ಎಂದು ಹಲವಾರು ಆಧಾರಗಳಿಂದ ತಿಳಿದು ಬಂದಿದೆ. ಸಮಾಜದಲ್ಲಿ ವರ್ಣ-ವರ್ಗಗಳ ಅಸಮಾನತೆಯಿಂದ ಜನರು ಶೋಷಣೆಗೊಳಗಾಗಿದ್ದರೆ; ಲಿಂಗ ತಾರತಮ್ಯದಿಂದ ಮಹಿಳೆ ಶೋಷಣೆಗೊಳಗಾಗಿದ್ದಾಳೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಇಂತಹ ತಾರತಮ್ಯವನ್ನು ಸಹಿಸದೇ ವಿರೋಧಿಸಿದರು. ಹೆಣ್ಣನ್ನು ಭೋಗದ ವಸ್ತು ರಕ್ಕಸಿ, ಅಪಶಕುನ, ಮತ್ತು ಮಕ್ಕಳನ್ನು ಹೆರುವ ಯಂತ್ರ ಅವಳು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದು ಯಾವುದೇ ರೀತಿಯ ಸ್ವಾತಂತ್ರಯಿಲ್ಲದಂತಹ ಕಾಲದಲ್ಲಿ ಮೊಟ್ಟ ಮೊದಲು ಹೋರಾಟ ನಡೆಸಿದವರು ವಚನಕಾರರು. ಈ ಚಳುವಳಿಯೇ ವಚನ ವಚನಚಳುವಳಿಯಾಗಿದೆ.
ಮಹಾರಾಷ್ಟ್ರದಲ್ಲಿ ದಲಿತ ಚಳುವಳಿ: ಮಹಿಳಾ ಪ್ರತಿನಿಧೀಕರಣ
60 to 71
ಕೌಟುಂಬಿಕ ಜವಾಬ್ದಾರಿಗಳಲ್ಲಿ ಮುಳುಗಿ ಹೋಗಿರುವ ಮಹಿಳೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾರ್ವಜನಿಕ ಹೋರಾಟ, ರಾಜಕಾರಣ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡರೂ ಎಲೆ ಮರೆಯ ಕಾಯಿಯಂತೆ ಇರಬೇಕಾಗುತ್ತದೆ. ಹೀಗಿರುವಾಗಲೇ ಮಹಾರಾಷ್ಟ್ರದ ಸಾರ್ವಜನಿಕ ಹೋರಾಟಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದನ್ನು ಕಾಣಬಹುದು. ಅಂಬೇಡ್ಕರ್‌ರ ಜೊತೆಗೆ ನಿಮ್ಮ ವರ್ಗಗಳ ಮಹಾವಿಮೋಚನಾ ಚಳುವಳಿಯಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡರು. ಭಾರತ ರಾಜಕೀಯ ಸ್ವಾತಂತ್ರ್ಯ ಪಡೆಯುವ ಹವಣಿಕೆಯಲ್ಲಿದ್ದಾಗ ಅಂಬೇಡ್ಕರ್‌ರು ಸಮಾಜದ ಅಂಚಿಗೆ ದೂಡಲ್ಪಟ್ಟವರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ದಲಿತ ಸಂಘಟನೆ, ಹೋರಾಟ, ಚಳುವಳಿ, ದಲಿತ ಪತ್ರಿಕೆಗಳ ಪ್ರಕಟಣೆ, ಎದುರಿಸಿದ ಚುನಾವಣೆ, ಬೌದ್ಧ ಧರ್ಮ ಮತಾಂತರ ಹೀಗೆ ಅವರು ಕೈಗೊಂಡ ಮಹತ್ವದ ಕಾರ್ಯಗಳಲ್ಲಿ ಪುರುಷರಂತೆ ಅಪಾರ ಸಂಖ್ಯೆಯ ದಲಿತ ಮಹಿಳೆಯರು ಅವರೊಡನೆ ಇದ್ದರು. ಆದರೆ ಕಾಂಗ್ರೆಸ್ ಮುನ್ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟದ ಮಹಿಳೆಯರು ಮುನ್ನೆಲೆಗೆ ಬಂದಂತೆ ಅಂಬೇಡ್ಕರ್ ಜೊತೆಗಿನ ದಲಿತ ಚಳುವಳಿಯಲ್ಲಿದ್ದ ಮಹಿಳೆಯರು ಮುನ್ನೆಲೆಗೆ ಬರಲೇ ಇಲ್ಲ. ದಲಿತ ಹೋರಾಟದ ಕುರಿತು ಸಂಶೋಧನೆ ಮತ್ತು ಇತಿಹಾಸವನ್ನು ದಾಖಲಿಸುವಾಗಲೂ ಮಹಿಳೆಯರು ಕಾಣದೆ ಹೋದರು. ಇತಿಹಾಸದಲ್ಲಿ ಮರೆಯಾದ ಆದರೆ ನಿಮ್ನ ವರ್ಗಗಳ ವಿಮೋಚನಾ ಚಳುವಳಿಯಲ್ಲಿ ಅಂಬೇಡ್ಕರ್‌ರ ಹೆಗಲಿಗೆ ಹೆಗಲು ಕೊಟ್ಟ ಮಹಿಳೆಯರ ಪ್ರಾತಿನಿಧ್ಯವನ್ನು ಅವಲೋಕಿಸುವುದು ಮುಖ್ಯವಾಗಿದೆ. ಈ ಲೇಖನದಲ್ಲಿ ಅಂಬೇಡ್ಕರ್ ಅವರು ದಲಿತ ಚಳುವಳಿಯ ಮುಖಂಡತ್ವವನ್ನು ವಹಿಸಿದಲ್ಲಿಂದ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವವರೆಗಿನ ಎಲ್ಲ ಮಹತ್ವದ ಕಾರ್ಯಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಅವಲೋಕಿಸಲಾಗಿದೆ.
ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್
72 to 83
ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ್ಥಾನವಿಲ್ಲದೆ ತಲಾಂತರದಿಂದ ಶಿಕ್ಷಣ, ಸಮಾಜ, ಧರ್ಮ ರಾಜಕೀಯ ಆರ್ಥಿಕ ಹೀಗೆ ಹಲವಾರು ವಲಯಗಳಿಂದ ವಂಚಿತಳಾಗಿ ಕೇವಲ ನಾಲ್ಕು ಗೋಡೆಯ ನಡುವೆ ಅವನು ಕಟ್ಟಿದ ಗೋಡೆಯಲ್ಲಿಯೇ ಅವನ ಕುಟುಂಬ ಮಕ್ಕಳ ಪಾಲನೆ ಪೋಷಣೆಯಲ್ಲಿ ತನ್ನ ಜೀವನ ಮುಡುಪಾಗಿಟ್ಟಿದ್ದವಳು ಸಂಚಿ ಹೊನ್ನಮ್ಮ, ಮತ್ತು 12ನೇ ಶನಮಾನದಲ್ಲಿ ಅಕ್ಕಮಹಾದೇವಿ ಈ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ ಅವಳನ್ನು ಆ ಬಂಧನದಿಂದ ಮುಕ್ತಗೊಳಿಸಲು ಹೋರಾಡಿ ಅವಳಿಗೆ ಅಕ್ಷರ ಪ್ರಪಂಚದೆಡೆ ಕೊಂಡುಯ್ಯವುದರ ಮೂಲಕ ಸಮಾಜ-ದಲ್ಲಿ ತನ್ನ ಅಸ್ಥತ್ವನ್ನು ಉಳಿಸಿಕೊಳ್ಳವುದರ ಬಗ್ಗೆ ಹೋರಾಡಿದಳು. ಅದೇ ರೀತಿ ಸಾವಿತ್ರಿ ಬಾಪುಲೆಯವರು ಅಕ್ಷರ ಕ್ರಾಂತಿ ಮತ್ತು ವಿಮೋಚನೆಗಾಗಿ ಒಂದು ಕ್ರಾಂತಿಯನ್ನೇ ಹುಟ್ಟಿ ಹಾಕಿದರು. ನಂತರದಲ್ಲಿ ಸಮಾಜದಲ್ಲಿ ತಾನು ವಂಚಿತವಾಗಿದ್ದ ಎಲ್ಲ ರಂಗದಲ್ಲಿಯೂ ಸಾಕ್ಷಿಯಾಗಿ ನಿಂತಳು ಇಂದು ಸಮಾಜದಲ್ಲಿ ಪುರುಷ ಸಮಾಜವನ್ನು ದಿಕ್ಕರಿಸಿ ಸ್ವತಂತ್ರ್ಯವಾಗಿ ಬಾಳುತ್ತಿದ್ದಾಳೆ ಎಂದರೆ ಅದಕ್ಕೆ ಮುಖ್ಯ ಸಾಕ್ಷಿ ಡಾ. ಬಿ. ಆರ್. ಅಂಬೇಡ್ಕರ್. ತಾವು ಕಾನೂನು ಮಂತ್ರಿಯಾಗಿದ್ದಾಗ ಹಾಗೂ ಭಾರತದಲ್ಲಿ ಇಡೀ ಸಮಾಜ ನೆಮ್ಮದಿಯಿಂದ ಬದುಕಲು ಸಹಾಯವಾಗುವಂತೆ ಸಂವಿಧಾನವನ್ನು ಕಟ್ಟಿ ಅದರಲ್ಲಿ ಮಹಿಳೆಯ ಅಭಿವೃದ್ದಿಗಾಗಿಯೇ ಕಾನೂನಿನಾತ್ಮಕವಾಗಿ ಕೆಲವು ಹಕ್ಕುಗಳನ್ನು ತಂದು ಅವಳನ್ನು ಮಾನಸಿಕವಾಗಿ ಭೌದ್ಧಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಗಟ್ಟಿಯಾಗಿ ನಿಂತು ಪುರುಷನಿಗೆ ಸರಿಸಮನಾಗಿ ದುಡಿತ್ತಿರುವ ಇಂದಿನ ಮಹಿಳೆ ಮುಖ್ಯ ಚೇತನ ಮತ್ತು ಬೆಂಬಲಾಗಿರುವ ಡಾ. ಅಂಬೇಡ್ಕರ್‌ವರ ಕೊಡುಗೆ, ತತ್ವ, ಸಾಧನೆಗಳ ಒಂದು ಚಿಂತನೆ ಈ ಲೇಖನದ ಉದೇಶವಾಗಿದೆ.
ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ
84 to 93
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ್ಚಿ ಬೆಳಗಿಸಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ, ದೇವರ ದಾಸಿಮಯ್ಯ ಹೀಗೆ ಇನ್ನೂ ಹಲವಾರು ಶರಣರು ತಮ್ಮ ಮೌಲ್ಯಯುತವಾದ ವಚನಗಳಿಂದ ಸಮಾಜದ ಬದಲಾವಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಜಗತ್ತಿನ ಯಾವ ಭಾಷೆಯಲ್ಲಿ ಆಗದ ಸಾಹಿತ್ಯ ರಚನೆ ಈ ಕಾಲದಲ್ಲಿ ಹುಲುಸಾಗಿ ಬೆಳೆಯಿತು.
ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು
94 to 104
ಡಾ. ಬಿ.ಆರ್. ಅಂಬೇಡ್ಕರ್ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ್ವಗಳನ್ನು ಪ್ರತಿಪಾದಿಸುವುದಷ್ಟೇ ಅಲ್ಲ ಅನುಷ್ಟಾನಗೊಳಿಸಿದ್ದಾರೆ. ಮೂಖನಾಯಕ, ಸಮತಾ, ಬಹಿಷ್ಕೃತ ಭಾರತ ಎಂಬ ಪತ್ರಿಕೆಗಳ ಮೂಲಕ ದಮನಿತರನ್ನು ಜಾಗೃತರಾಗಿಸಿದರು. 1924ರಲ್ಲಿ 'ಬಹಿಷ್ಕೃತ ಹಿತಕಾರಿಣಿ ಸಭಾ' ಸಂಸ್ಥೆಯನ್ನು ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಸ್ಥಾಪಿಸಿದರು. 'ಚೌಡಾರ್ ಕೆರೆ' ನೀರಿನ ಸತ್ಯಾಗ್ರಹ ಮತ್ತು ಕಾಲಾರಾಮ ದೇವಾಲಯ ಪ್ರವೇಶಕ್ಕಾಗಿ ಹೋರಾಟ ನಡೆಸಿ ಯಶಸ್ವಿಯಾದರು. ದುಂಡುಮೇಜಿನ ಸಮ್ಮೇಳನದಲ್ಲಿ ಅಸ್ಪೃಶ್ಯರ ಪ್ರತಿನಿಧಿಯಾಗಿ ಭಾಗವಹಿಸಿ ತಾರ್ಕಿಕ ವಾದ ಮಂಡಿಸಿ ಶಾಸನ ಸಭೆಗಳಲ್ಲಿ ಅಸ್ಪೃಶ್ಯರ ಮೀಸಲಾತಿಗಾಗಿ ಹೋರಾಡಿದರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಸಾಂವಿಧಾನಿಕ ಕಾನೂನಿನ ಚೌಕಟ್ಟಿನಲ್ಲಿ ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಸೂಕ್ತ ಮೀಸಲಾತಿ ಸೌಲಭ್ಯ, ಸಮಾನತೆಯ ಹಕ್ಕು(ವಿಧಿ-14), ಅಸ್ಪೃಶ್ಯತೆ ನಿಷೇಧ(ವಿಧಿ-17), ಗೌರವದಿಂದ ಬದುಕುವ ಹಕ್ಕು(ವಿಧಿ-21) ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್‌ರವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಸತ್ತಿನಲ್ಲಿ, ರಾಜ್ಯ ಶಾಸನಸಭೆಯಲ್ಲಿ ತಕ್ಕ ಪಾತಿನಿಧ್ಯವನ್ನು ಗಳಿಸಿಕೊಟ್ಟರು. ಕಾನೂನು ಮಂತ್ರಿಯಾಗಿ ಹಿಂದೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವುದಕ್ಕಾಗಿ 'ಹಿಂದೂ ಕೋಡ್ ಬಿಲ್ 'ನ್ನು ತಯಾರಿಸಿ ಸಂಸತ್ತಿನಲ್ಲಿ ಮಂಡಿಸಿ ಶತಾಯಗತಾಯ ಪ್ರಯತ್ನಿಸಿದಾಗ್ಯೂ ಒಪ್ಪಿತವಾಗದ ಕಾರಣ ತಮ್ಮ ಮಂತ್ರಿ ಸ್ಥಾನಕ್ಕೆ 1951 ಸೆಪ್ಟೆಂಬರ್ 27 ರಂದು ರಾಜಿನಾಮೆ ನೀಡಿದರು. ಸಾಮಾಜಿಕ ನ್ಯಾಯವನ್ನು ಭಾರತ ಸಂವಿಧಾನದ ಆಧಾರ ಮತ್ತು ಸ್ಪೂರ್ತಿಯಾಗಿಸಿದ್ದಾರೆ. ಅವರು ನಡೆಸಿದ ಹೋರಾಟಗಳಲ್ಲಿ, ಮಾಡಿದ ಭಾಷಣಗಳಲ್ಲಿ, ರಚಿಸಿದ ಕೃತಿಗಳಲ್ಲಿ ಅವರ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಕಾಣಬಹುದು. ಈ ಲೇಖನದಲ್ಲಿ ಅವರು ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟ ಮತ್ತು ಚಿಂತನೆಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
ಅಸ್ಪೃಶ್ಯತೆಯ ನಿರ್ಮೂಲನೆಯಲ್ಲಿ ಸಾಂವಿಧಾನಿಕ ನಿಬಂಧನೆಗಳ ಪಾತ್ರ
105 to 113
ಭಾರತವು ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಜನಿಸಿದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಅಡಿಯಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಪಡೆದು ಸಮಾಜದಲ್ಲಿ ಘನತೆಯಿಂದ ಜೀವಿಸಲು ಅವಕಾಶವಿದೆ. ಭಾರತದಲ್ಲಿ ಸಾವಿರಾರು ಜಾತಿಗಳ ಸಂಕೀರ್ಣತೆಯಿದ್ದರೂ ಸಹ ಎಲ್ಲರೂ ಸಮಾನರು ಎಂಬ ಸಮಾನತೆಯ ಆಶಯವನ್ನು ಇಲ್ಲಿನ ಸಂವಿಧಾನ ಎತ್ತಿಹಿಡಿದಿದೆ. ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ನಮ್ಮದಾಗಿದ್ದು ಇದರ ಹೆಮ್ಮೆಯ ಸಂಗತಿಯೆಂದರೆ ಅದುವೇ ಸಮಾನತೆ ಎಂದು ಹೇಳಬಹುದು. ಭಾರತದ ಸರ್ಕಾರವು ಸಂವಿಧಾನ ಜಾರಿಯಾದಾಗಿನಿಂದ ಹಿಡಿದು ಪ್ರಸ್ತುತ ದಿನಮಾನದವರೆಗೆ ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಭ್ರಾತೃತ್ವ ಭಾವನೆಯೊಂದಿಗೆ ಯಾವುದೇ ಜಾತಿ, ವರ್ಗ ಮತ್ತು ಮತಗಳ ಬೇಧಭಾವವಿಲ್ಲದೇ 'ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಸಮಾನರು' ಎನ್ನುವಂತೆ ಕಾಯ್ದೆ ಕಾನೂನುಗಳನ್ನು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಭಾರತ ಸರ್ಕಾರವು ಮೊದಲ ಬಾರಿಗೆ ಅಸ್ಪೃಶ್ಯತೆಯನ್ನು ತಡೆಯಲು 1955ರಲ್ಲಿ ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ಜಾರಿಗೊಳಿಸಿತು. ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯ ಆಚರಣೆಯನ್ನು ನಿಷೇಧಿಸಿದ್ದು ಇದನ್ನು ಆಚರಿಸುವವರಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಾ ಬಂದಿದೆ. ಆದರೂ ಸಹ ಈ ರೀತಿಯ ಸಮಾನತೆಯ ಅಂಶಗಳ ನಡುವೆ ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ ಎಂಬ ಪಿಡುಗು ಹಿಂದಿನಿಂದ ಇಂದಿನವರೆಗೂ ನಡೆದು ಬಂದಿದ್ದು ಅದರ ನಿರ್ಮೂಲನೆಗೆ ಸಾಂವಿಧಾನಿಕ ನಿಬಂಧನೆಗಳು ಮತ್ತು ಕಾನೂನಾತ್ಮಕ ನಿಯಮಗಳಿದ್ದರೂ ಸಹ ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆಗೊಂಡಿದೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತಿಕೊಂಡಾಗ ಅದಕ್ಕೆ ಬರುವ ಉತ್ತರ ಇದು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಗೊಂಡಿಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳು ಕಂಡುಬರುತ್ತವೆ. ಆದ್ದರಿಂದ ಈ ಸಮಸ್ಯೆಯ ಪರಿಹಾರದಲ್ಲಿ ಸಾಂವಿಧಾನಿಕ ನಿಬಂಧನೆಗಳ ಪಾತ್ರ ಏನೆಂಬುದನ್ನು ಕಂಡುಕೊಳ್ಳುವುದು ಪ್ರಸ್ತುತ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ.
೨೧ನೆಯ ಶತಮಾನದ ಕನ್ನಡ ನಾಟಕ ಮತ್ತು ರಂಗಭೂಮಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್
114 to 120
ರಂಗಭೂಮಿಯೊಂದು ಜಾಗತೀಕ ಕಲಾಭಿವ್ಯಕ್ತಿ ಮಾಧ್ಯಮವಾಗಿದೆ, ನಾಟಕವು ಜಗತ್ತಿನ ಸಾಂಸ್ಕೃತಿಕ ಸೃಜನಶೀಲತೆಯ ಅಸ್ಮಿತೆಯ ಭಾಗವಾಗಿ ಲೋಕದರ್ಶನವನ್ನು ಒಡಮೂಡಿಸುವಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣಗುರುಗಳಂತಹ ಆದರ್ಶಪ್ರಾಯರಾದವರ ಜೀವನ ಆಧಾರಿತ ನಾಟಕಗಳನ್ನು ರಂಗರೂಪಕ್ಕೆ ತಂದು ಸಮುದಾಯಗಳತ್ತ ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ನಾಡಿಗಿದೆ. ಅಂಬೇಡ್ಕರ್ ಅವರು 'ತಳಸಮುದಾಯಗಳಿಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೂ ಅಕ್ಷರದ ಮೂಲಕ ವಿಮೋಚನೆ ಸಾಧ್ಯ' ಎಂಬುದನ್ನು ತಿಳಿಸಿಕೊಟ್ಟರು. ಇವರ ಬದುಕು, ಬರಹ ಮತ್ತು ಭಾಷಣಗಳಲ್ಲಿನ ಚಿಂತನಾಧಾರೆಗಳನ್ನು ಕನ್ನಡ ನಾಟಕ ಮತ್ತು ರಂಗಭೂಮಿಗೆ ಅಳವಡಿಕೊಳ್ಳುವುದರ ತುರ್ತು ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ರಂಗಕರ್ಮಿಗಳು ಮತ್ತು ನಾಟಕಕಾರರು ದಾಪುಗಾಲು ಇಟ್ಟಿರುವುದು ಭವಿಷ್ಯದ ಭರವಸೆಯ ಧೋತಕವಾಗಿದೆ. ಹೊಸ ತಲೆಮಾರಿನ ರಂಗ ನಿರ್ದೇಶಕರಾದ ಕೆ. ಪಿ. ಲಕ್ಷ್ಮಣ್ ಅವರು ತಮ್ಮ ರಂಗರೂಪಗಳಾದ 'ದಕ್ಷಕಥಾ ದೇವಿ ಕಾವ್ಯ', 'ಪಂಚಮ ಪದ' ಮತ್ತು 'ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ' ನಾಟಕಗಳಲ್ಲಿ ಡಾ ಬಿ. ಆರ್. ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವುದು ವಿಶೇಷವಾಗಿದೆ. 'ಪಂಚಮ ಪದ ರಂಗರೂಪದಲ್ಲಿ ತಳಸಮುದಾಯಗಳ ಜೀವನಚರಿತ್ರೆಯನ್ನು ದೃಶ್ಯಕಾವ್ಯವಾಗಿಸಿರುವುದು ದಲಿತ ಚಳುವಳಿಗಳು ರೂಪುಗೊಂಡ ಇತಿಹಾಸವನ್ನು ನೆನಪಿಸುತ್ತದೆ. ಈ ರಂಗರೂಪವು ವ್ಯಕ್ತಿ ಘನತೆಯ ಗುರುತುಗಳನ್ನು ಕಂಡುಕೊಳ್ಳುವ ಮಾರ್ಗವಾಗಿದೆ. ಈಗೆ ಹಲವಾರು ನಾಟಕಕಾರರು ಹಾಗೂ ನಾಟಕ ಕಾರ್ತಿಯರು ತಮ್ಮ ನಾಟಕಗಳಲ್ಲಿ ಸಂವಿಧಾನಾತ್ಮಕ ಚಿಂತನೆಗಳ ಎಳೆಗಳನ್ನು ತಂದಿರುವುದು ಗುರುತಿಸಬಹುದು.
ಅಂಬೇಡ್ಕರ್: ಅಸ್ಪೃಶ್ಯರ ಆರ್ಥಿಕ ಸ್ವಾವಲಂಬನೆಗಾಗಿ ನಡೆಸಿದ ಚಿಂತನೆಗಳು
121 to 132
ಇಂದು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ಏಳಿಗೆಯು ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಉಳಿಯುತ್ತ ಬಂದಿದೆ. ಕಳೆದ ನಲವತ್ತು ವರ್ಷಗಳಿಂದ ಅಂದರೆ 1991 ರಿಂದ ಮಾಹಿತಿ ತಂತ್ರಜ್ಞಾನದಿಂದ ಪ್ರಾರಂಭವಾಗಿ 2018ರ ಮೇಕಿಂಗ್ ಇಂಡಿಯಾ ವರೆಗೆ ಅನೇಕ ಯೋಜನೆಗಳು ಹತ್ತಾರು ಭಾಗ್ಯಗಳು ಅಪಾರ ಪ್ರಮಾಣದ ಆರ್ಥಿಕ ನೆರವು ನೀಡಲಾಗಿದೆ. ಆದರೂ ಸಮಾಜದಲ್ಲಿ ಆರ್ಥಿಕ ದುರ್ಬಲ ವರ್ಗ ಸಮಾಜಿಕವಾಗಿ ಮುಖ್ಯವಾಹಿನಿಯಲ್ಲಿ ಬಂದು ಮಹತ್ತರವಾದ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಬಡತನ ನಿರ್ಮೂಲನೆ ಅಸಾಧ್ಯವೇನೋ ಅನಿಸುವಷ್ಟರ ಮಟ್ಟಕ್ಕೆ ಬಂದು ನಿಂತಿದೆ. ದೌರ್ಜನ್ಯ, ದಬ್ಬಾಳಿಕೆ, ಕೊಲೆ, ಸುಲಿಗೆ, ಮೋಸ, ಸಂಪತ್ತಿನ ಕ್ರೋಢಿಕರಣಕ್ಕಾಗಿ ನಡೆಯುತ್ತ ಕಾನೂನೆ ಭಯಪಡುವ ಮಟ್ಟಕ್ಕೆ ನಡೆಯುತ್ತಿವೆ. ಇದರ ಪರಿಣಾಮ ಜನ ಅನ್ಯ ಧರ್ಮಕ್ಕೆ ಮತಾಂತರ ಹೊಂದುತ್ತ ಅಲ್ಲಿಯೂ ನೆಮ್ಮದಿ ಕಾಣದೆ, ಅತ್ತ ಇರಲೂ ಆಗದೆ ಇತ್ತ ಬದುಕಲೂ ಆಗದೆ ನರಳುತ್ತಿದ್ದಾರೆ. ಮತಾಂತರದಲ್ಲೂ ಹಣ ಸಂಪಾದನೆ ಮಾಡುತ್ತಿರುವ ಹುನ್ನಾರಗಳು ಕಂಡುಬರುತ್ತಿವೆ. ಇಷ್ಟಾದರೂ ಅಸ್ಪೃಶ್ಯತೆ, ಜಾತಿಯತೆಯ ಪಿಡುಗು ಸಮಸ್ಯೆಯಾಗಿಯೇ ಉಳಿದಿದೆ. ವಿದ್ಯಾವಂತ ಪ್ರಜ್ಞಾಹೀನನಾಗಿ ಮಾನವೀಯತೆ ಮರೆತಿದ್ದಾನೆ. ತತ್ತ್ವ ಸಿದ್ದಾಂತಗಳು ಭ್ರಷ್ಟತೆಯಲ್ಲಿ ಕಳೆದು ಹೋಗಿದೆ. ಈ ಕಾಲಘಟ್ಟಕ್ಕೆ ರಾಷ್ಟ್ರಭಕ್ತಿಯುಳ್ಳ ಪ್ರತಿಯೊಬ್ಬ ಚಿಂತಕನೂ ಮತ್ತೆ ಮತ್ತೆ ಅಂಬೇಡ್ಕರ್‌ರ ಸಮಸಮಾನತೆಯ ವಿಚಾರಗಳನ್ನು ಚರ್ಚಿಸುವ ಅವಶ್ಯಕತೆ ಇಂದಿಗೆ ಅಗತ್ಯವೂ, ಅವಶ್ಯವೂ ಆಗಿದೆ. ಇಂತಹ ಕಾರ್ಯವನ್ನು ಸ್ವಾತಂತ್ರ್ಯ ಪೂರ್ವದಲ್ಲೆ ಅಂಬೇಡ್ಕರ್‌ರು ಈ ನೆಲದ ಅಸ್ಪೃಶ್ಯರಿಗಾಗಿ ಅಧ್ಯಾಯನ ಮಾಡಿ ಗ್ರಂಥರೂಪದಲ್ಲಿರಿಸಿ ಹೋಗಿದ್ದಾರೆ ಅದನ್ನು ಅಧ್ಯಾಯನ ಮಾಡಿ ಅನುಷ್ಠಾನಗೊಳಿಸುವ ಇಚ್ಚಾಶಕ್ತಿಯಾಗಲಿ ನಮ್ಮ ಜನರಲ್ಲಿ ಕಾಣುತ್ತಿಲ್ಲ. ಆಳುವವರಿಗೆ ಮನಸ್ಸಾಗುತ್ತಿಲ್ಲ. ಅಗತ್ಯವಿರುವವರು ಬೇಡಿಕೆಯನ್ನು ಮುಂದಿಡುತ್ತಿಲ್ಲ. ಈ ವಿಶಾದಕರ ವಿಚಾರವನ್ನು ಈ ಲೇಖನವು ಸಾಕ್ಷಿಕರಿಸಿದೆ.
ಬೌದ್ಧ ಧಮ್ಮ ಮತ್ತು ಮಹಿಳೆ
133 to 140
ಈ ಲೇಖನದಲ್ಲಿ ಬುದ್ದನ ಮೇಲಿನ ಕೆಲವು ಆರೋಪಗಳಿಗೆ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಅದಕ್ಕೆ ಅಂಬೇಡ್ಕರ್ ಅವರು ತಮ್ಮ ಬರಹ ಮತ್ತು ಭಾಷಣಗಳಲ್ಲಿ ಆರೋಪಗಳಿಗೆ ವಿವರಣೆ ನೀಡಿದ್ದಾರೆ. ಅದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಬುದ್ಧ ತನ್ನ ಹೆಂಡತಿಯಾದ ಯಶೋಧರೆಯ ಅನುಮತಿ ಕೇಳದೆ ತೊರೆದು ಬಂದ, ಮಗನ ಮುಖವನ್ನು ಸಹ ನೋಡಲಿಲ್ಲ. ಬುದ್ದ ತನ್ನ ಸಂಘದಲ್ಲಿ ಮಹಿಳೆಯರಿಗೆ ಪ್ರವೇಶ ನೀಡಲಿಲ್ಲ. ಬುದ್ದ ತನ್ನ ಸಂಘದವರಿಗೆ ಮಹಿಳೆಯರ ವಿಷಯದಲ್ಲಿ ಸದಾ ಜಾಗ್ರತೆ ವಹಿಸಬೇಕು ಎಂದು ಹೇಳುತ್ತಿದ್ದ ಎಂಬುದು ಬುದ್ದನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಕಾರಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ವೈದಿಕ ಧರ್ಮ ಪ್ರಣೀತ ಮನುಸ್ಮೃತಿ, ರಾಮಾಯಣ ಮತ್ತು ಮಹಾಭಾರತ ಕೃತಿಗಳು ಮಹಿಳೆಯರನ್ನು ಹೇಗೆ ಚಿತ್ರಿಸಿವೆ, ಅದರಲ್ಲಿ ಮಹಿಳೆಯರ ಸ್ಥಾನಮಾನಗಳೇನು? ಎಂಬುದನ್ನು ತುಲನಾತ್ಮಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಶ್ರೇಷ್ಠತೆಯ ಅಮಲು ಮಹಿಳೆಯರ ಉನ್ನತಿಗೆ ತೊಡಕಾಗಿದೆ ಎಂಬುದು ಸಮಾಜಕ್ಕೆ ಸ್ವತಃ ಮಹಿಳೆಯರಿಗೂ ಬೇಡದ ವಿಷಯವಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಗಾಂಧೀಜಿ: ಜಾತಿ, ವರ್ಣ, ಹಿಂದುತ್ವ ಕುರಿತು ಅಭಿಪ್ರಾಯ-ಭಿನ್ನಾಭಿಪ್ರಾಯಗಳು
141 to 150
ವರ್ತಮಾನದಲ್ಲಿ ಗಾಂಧೀಜಿ ಮತ್ತು ಡಾ. ಬಿ. ಆರ್, ಅಂಬೇಡ್ಕರ್‌ರವರನ್ನು ಅನುಸಂಧಾನ ಮಾಡಿದಾಗ ಇವರಿಬ್ಬರ ನಡುವಿನ ಜಾತಿ, ವರ್ಣ, ಹಿಂದುತ್ವ ಕುರಿತು ಅನೇಕ ಹುಸಿ ಚರ್ಚೆಗಳು, ಪ್ರಚಾರ, ಸೆಮಿನಾರ್‌ಳು, ಪತ್ರಿಕೆಗಳ ಮೂಲಕ ಬಿತ್ತರವಾಗುತ್ತಿವೆ. ದೇಶದ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಈ ಅಭಿಪ್ರಾಯ-ಭಿನ್ನಾಭಿಪ್ರಾಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಲೇಖನದ ಮೂಲಕ ನಿಜವನ್ನು ಅರಿಯುವ ಮುಖೇನ ಹೊಸದೊಂದು ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಕನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್ ಚಿಂತನೆ
151 to 156
ಅಂಬೇಡ್ಕರ್ ಸಿದ್ಧಾಂತದ ಪ್ರಭಾವವಾಗಿ ಇಡೀ ಭಾರತ ಸೇರಿದಂತೆ ಈ ನಾಡಿನ ಅಸ್ಪೃಶ್ಯ ಅಕ್ಷರಸ್ಥ ಸಮುದಾಯದ ಎದೆಯಾಳದಲ್ಲಿ ಹುಟ್ಟಿದ ಹೋರಾಟವನ್ನು ದಲಿತ ಹೋರಾಟ ಎಂದು ಕರೆಯಲಾಗಿದೆ. ನಂತರ ಕರ್ನಾಟಕದಲ್ಲಿ ದಲಿತ ಚಳುವಳಿ ಮುಂದುವರೆಯಲು ಕಾರಣವಾಯಿತು. ಈ ದಲಿತ ಚಳುವಳಿ ಯಶಸ್ವಿಯಾಗಲು ದಲಿತ ಸಾಹಿತ್ಯವೂ ಕಾರಣವಾಯಿತು. ಈ ದಲಿತ ಸಾಹಿತ್ಯವೂ ದಲಿತರ ವರ್ತಮಾನದ ಬದುಕಿನ ಕರಾಳತೆಯನ್ನು ಶೋಧಿಸಿದವು ಅವುಗಳಲ್ಲಿದ್ದ ಅಸಮಾನತೆ ಮತ್ತು ಅನ್ಯಾಯದ ನೆಲೆಗಳನ್ನು ಗುರುತಿಸಿದವು, ಅದನ್ನು ಹೋಗಲಾಡಿಸುವ ದಾರಿಗಳ ಬಗ್ಗೆ ಆಲೋಚಿಸಿದವು. ಕನ್ನಡ ಸಾಹಿತ್ಯದಲ್ಲಿ ಬಸವ, ಬುದ್ದ, ಮಾರ್ಕ್ಸ್ರಂತಹ ಚಿಂತನೆಗಳ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ ಹಾಗೇ ಅಂಬೇಡ್ಕರ್ ಚಿಂತನೆಗಳು ಕನ್ನಡ ಸಾಹಿತ್ಯದ ಮೇಲೆ ಹೆಚ್ಚು ಪ್ರಭಾವ ಬೀರಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ
157 to 168
ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅನುಭವಿಸಿಕೊಂಡು ಬಂದಿದ್ದ ತಳಸಮುದಾಯಗಳಿಗೆ ವಸಾಹತೀಕರಣ ಬಿಡುಗಡೆಯ ಹಾದಿಯಾಗಿ ಕಂಡುಬಂದಿತು. ಅಂಬೇಡ್ಕರ್ ಅವರು ವಸಾಹತು ಮೂಲದ ಆಧುನಿಕ ಶಿಕ್ಷಣ, ಇಂಗ್ಲಿಷ್ ಭಾಷೆ, ಪ್ರಜಾಪ್ರಭುತ್ವವಾದಿ, ರಾಜಕೀಯ ವ್ಯವಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ದಲಿತರ ಬಿಡುಗಡೆಯ ಹಾದಿಯನ್ನು ಕಂಡುಕೊಂಡರು. ಅಂಬೇಡ್ಕರ್ ಅವರ ಈ ಬಗೆಯ ಹೋರಾಟ ಮತ್ತು ಚಿಂತನೆಗಳಿಗೆ ಅನೇಕ ಸಮಕಾಲೀನ ಚಿಂತಕರು, ಹೋರಾಟಗಾರರು ಕಾರಣೀಭೂತರಾದರು. ಇವರಲ್ಲಿ ಪ್ರಮುಖರಾದಂತಹ ಮಹಾತ್ಮ ಜ್ಯೋತಿರಾವ್ ಫುಲೆ, ಶಾಹುಮಹಾರಾಜ್, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ದೇವರಾಯ ಇಂಗಳೆ, ಸ್ವಾಮಿ ಧರ್ಮತೀರ್ಥ, ರಾಮಮನೋಹರ ಲೋಹಿಯಾ, ಬಿ. ಶ್ಯಾಮಸುಂದರ್ ಅವರ ಆಲೋಚನೆಗಳು ಅಂಬೇಡ್ಕರ್ ಚಿಂತನೆಗಳಿಗೆ ಪೂರಕವಾದವುಗಳಾಗಿವೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ರಾಷ್ಟ್ರೀಯತೆಯನ್ನು ನಾವು ಪರ ಮತ್ತು ವಿರುದ್ಧವಾಗಿರುವಂತಹ ಸೈದ್ಧಾಂತಿಕ ನಿಲುವುಗಳ ಆಧಾರದ ಮೇಲೆ ವಿಶ್ಲೇಷಣೆ ಮಾಡಬೇಕಾಗಿದೆ. ಪ್ರಾಚೀನ ಕಾಲದಲ್ಲಿ ನಮ್ಮ ಭಾರತವು ಆಧ್ಯಾತ್ಮಿಕ ರಾಷ್ಟ್ರೀಯತೆಯನ್ನು ಹೊಂದಿತ್ತು ಎಂಬುದು ಕೆಲವು ಭಾರತೀಯ ಲೇಖಕರ ಅಭಿಪ್ರಾಯವಾಗಿದೆ.
ಶಿಕ್ಷಣವೆಂದರೆ ಜೀವನಕ್ಕೆ ಸಿದ್ಧತೆಯಲ್ಲ, ಶಿಕ್ಷಣವೇ ಜೀವನ
169 to 174
ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ. ಶಿಕ್ಷಣ ಜೀವನಕ್ಕೆ ಸಿದ್ಧತೆ ಮಾತ್ರವಲ್ಲ, ಅದು ಜೀವನವೇ ಆಗಿದೆ. ಶಿಕ್ಷಣವು ಕೇವಲ ಉದ್ಯೋಗ ಅಥವಾ ಜೀವನೋದ್ಯಮಕ್ಕೆ ಪೂರಕವಾಗಿರುವುದಷ್ಟೇ ಅಲ್ಲ, ಅದು ವ್ಯಕ್ತಿಯ ಬುದ್ಧಿ, ಚಿಂತನೆ, ವ್ಯಕ್ತಿತ್ವ ಮತ್ತು ಸಮಾಜದ ಪ್ರಗತಿಗೆ ಸಹಾಯಕವಾಗಬೇಕು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಶಿಕ್ಷಣವು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸುವ ಪ್ರಮುಖ ಸಾಧನವಾಗಿದೆ. ವಿದ್ಯಾಭ್ಯಾಸವು ವ್ಯಕ್ತಿಗೆ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳಲು, ಸ್ವತಂತ್ರವಾಗಿ ಚಿಂತಿಸಲು, ಹಾಗೂ ತಾನು ಎದುರಿಸುವ ಸವಾಲುಗಳಿಗೆ ಉತ್ತರಿಸಲು ಶಕ್ತಿಯನ್ನು ನೀಡುತ್ತದೆ. ಸಮೃದ್ದ ಜೀವನಕ್ಕಾಗಿ ಕೇವಲ ಹಣಕಾಸಿನ ಪ್ರಗತಿಯನ್ನಷ್ಟೇ ಗಮನಿಸುವುದಕ್ಕಿಂತ, ಮಾನವೀಯತೆ, ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಾಪಾಡುವುದು ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ಶಿಕ್ಷಣವೇ ಜೀವನವೆಂದರೆ, ಅದು ವ್ಯಕ್ತಿಯ ಸಾಂಸ್ಕೃತಿಕ, ಬೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ನಿರಂತರವಾಗಿ ನಡೆಸುವ ಪ್ರಕ್ರಿಯೆಯಾಗಿರಬೇಕು. ಈ ಸತ್ಯವನ್ನು ಅರಿತುಕೊಂಡಾಗಲೇ ನಾವು ಒಂದು ಪ್ರಬುದ್ಧ, ಪ್ರಗತಿಪರ ಸಮಾಜವನ್ನು ನಿರ್ಮಿಸಬಹುದು.
ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಅಸ್ಪೃಶ್ಯತೆ
175 to 185
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಹಿಂದೂ ಸಮಾಜಕ್ಕೆ ಕಳಂಕವೆನಿಸಿರುವ ಅಸ್ಪೃಶ್ಯತೆಯ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಭಾರತದಲ್ಲಿ ಮಾತ್ರ ಇದರ ಆಚರಣೆ ಏಕೆ ಮುಂದುವರೆದಿದೆ ಎಂಬುದರ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. ಹಿಂದೂ ಸಮಾಜವನ್ನು ಮಾನವೀಯ ಮೌಲ್ಯಗಳು ಸಮಾನತೆ ಸ್ವಾತಂತ್ರ್ಯ, ನ್ಯಾಯ, ವಿಶ್ವ ಭ್ರಾತೃತ್ವದ ಆಧಾರದ ಮೇಲೆ ಪುನರ್ಘಟಿಸುವ ಪ್ರಯತ್ನವನ್ನು ಅವರ ಸಾಮಾಜಿಕ ಚಿಂತನೆಯಲ್ಲಿ ಕಾಣಬಹುದು. ಸಾಮಾಜಿಕ ಸಂಶೋಧನೆಯ ನೆಲೆಗಟ್ಟಿನಲ್ಲಿ ಅಂಬೇಡ್ಕರ್ ಅವರ ಅಸ್ಪೃಶ್ಯತೆಯ ಕುರಿತ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಚಾರಗಳು ತುಂಬಾ ಮಹತ್ವವಾಗಿವೆ. ಯುರೋಪಿನ ಚರಿತ್ರೆಯಲ್ಲಿ ಕಂಡುಬರುವ ಅನೇಕ ಅನ್ಯಾಯಗಳನ್ನು ಮೂಢನಂಬಿಕೆಗಳನ್ನು ನಿವಾರಿಸಲಾಗಿದೆ. ಆದರೆ ಭಾರತದಲ್ಲಿ ಹಿಂದೂ ಬ್ರಾಹ್ಮಣರು ಅಸ್ಪಶ್ಯತೆಯ ನಂಬಿಕೆಯಿಂದ ಮುಕ್ತವಾಗಿರುವುದು ನಿರೀಕ್ಷಿತ ಪ್ರಮಾಣದಲ್ಲಿ ಕಂಡು ಬರುತ್ತಿಲ್ಲ. ಹಿಂದುಗಳು ಅಸ್ಪೃಶ್ಯತೆ ವಿಷಯದಲ್ಲಿ ಸ್ವಹಿತಾಸಕ್ತಿ ಹೊಂದಿರುವುದು ಮೇಲ್ನೋಟಕ್ಕೆ ಗೋಚರಿಸುವ ಸಂಗತಿಯಾಗಿದೆ. ಧರ್ಮದ ತಳಹದಿಯನ್ನು ಹೊಂದಿರುವ ಅಸ್ಪೃಶ್ಯತೆಯು ಹಿಂದುಗಳ ನಡುವೆ ನ್ಯಾಯ ಸ್ಥಾಪಿಸಲು ಅಸಮರ್ಥವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಅಸ್ಪೃಶ್ಯರು ಜ್ಞಾನ ಮತ್ತು ಶಿಕ್ಷಣವನ್ನು ಪಡೆದುಕೊಳ್ಳುವುದರ ಮೂಲಕ ಅನ್ಯಾಯ ಅನರ್ಥ ಅಥವಾ ಅನಾಚಾರಗಳನ್ನು ವಿರೋಧಿಸಬಹುದು ಎಂಬುದು ಅಂಬೇಡ್ಕರ್ ಅವರ ಪ್ರಬಲವಾದ ನಂಬಿಕೆಯಾಗಿತ್ತು. ಜಗತ್ತಿನ ಇತರ ದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ದಾಸ್ಯ ಪ್ರವೃತ್ತಿಗೂ ಅವುಗಳ ತಳಹದಿಗೂ ಭಾರತದಲ್ಲಿನ ಅಸ್ಪೃಶ್ಯತೆಯ ತಳಹದಿಗೂ ಇರುವ ಸ್ಪಷ್ಟ ವ್ಯತ್ಯಾಸವನ್ನು ಅಂಬೇಡ್ಕರ್ ಗುರುತಿಸಿದ್ದರು. ಮಾನವ ಇತಿಹಾಸದಲ್ಲಿ ಅತ್ಯಂತ ನಿಕೃಷ್ಟ ಆಚರಣೆ ಅಸ್ಪೃಶ್ಯತೆ ಎಂಬುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತು. ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆಯ ನಿವಾರಣೆ ಕುರಿತು ಹಿಂದುಗಳ ಹಾಗೂ ಅಸ್ಪೃಶ್ಯರ ನಡುವೆ ಘರ್ಷಣೆ ಅನಿವಾರ್ಯ ಎಂಬುದನ್ನು ಮನಗಂಡಿದ್ದರು. ಸಂವಿಧಾನದ ಆರ್ಟಿಕಲ್ 17ರಲ್ಲಿ ಅಸ್ಪೃಶ್ಯತೆ ನಿವಾರಣೆಯ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಅಂಬೇಡ್ಕರ್‌ರ ಅಸ್ಪೃಶ್ಯತೆಯ ನಿವಾರಣೆಯ ಕನಸು ಇನ್ನು ಪೂರ್ಣವಾಗಿ ಸಾಕಾರಗೊಂಡಿಲ್ಲವೆಂದು ಹೇಳಬಹುದು. ಧರ್ಮದ ಬೆಂಬಲವಿರುವ ಒಂದು ಸಾಮಾಜಿಕ ಆಚರಣೆಯ ನಿವಾರಣೆ ಎಷ್ಟು ಕಷ್ಟ ಸಾಧ್ಯ ಎಂಬುದನ್ನು ಅಂಬೇಡ್ಕರ್ ಮನಗಂಡಿದ್ದರು.
ಜನಮಾಧ್ಯಮವಾಗಿ ಸಾಮಾಜಿಕ ಜಾಲತಾಣ.
186 to 200
ಇತ್ತೀಚಿನ ತಂತ್ರಜ್ಞಾನ ವಿಕಾಸದೊಂದಿಗೆ ಸಾಮಾಜಿಕ ಜಾಲತಾಣಗಳು ಜನಮಾಧ್ಯಮದ ಪ್ರಮುಖ ಅಂಗವಾಗಿ ಪ್ರಭಾವ ಬೀರುತ್ತಿವೆ. ಮಾಹಿತಿಯ ತ್ವರಿತ ಹರಡುವಿಕೆ, ವ್ಯಾಪಕ ಪ್ರಭಾವ ಮತ್ತು ಸಮುದಾಯಗಳ ರೂಪುಗೊಳಿಸುವಿಕೆ ಎಂಬ ಅಂಶಗಳಿಂದ ಇವು ಪ್ರಬಲ ಮಾಧ್ಯಮವಾಗಿ ಪರಿಣಮಿಸಿವೆ. ಇವು ವೈಯಕ್ತಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಅಸ್ತಿತ್ವವು ಸಂವಹನದಲ್ಲಿ ಹೊಸ ಯುಗವನ್ನು ಆರಂಭಿಸಿದ್ದು, ಲೋಕದ ಎಲ್ಲೆಡೆಯ ಜನರನ್ನು ಪರಸ್ಪರ ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ. ಇವು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವುದರೊಂದಿಗೆ, ಸುದ್ದಿಗಳನ್ನು ಹರಡುವ ಪ್ರಮುಖ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತವೆ. ಜನಪ್ರಿಯತೆಯನ್ನು ಗಳಿಸಲು ಹಾಗೂ ಬುದ್ದಿವಂತ ಸಮಾಜವನ್ನು ರೂಪಿಸಲು ಸಾಮಾಜಿಕ ಜಾಲತಾಣಗಳು ಬಹುಪಾಲು ಸಹಾಯ ಮಾಡುತ್ತವೆ. ಇದನ್ನು ಶಿಕ್ಷಕರು, ವಿದ್ವಾಂಸರು ಮತ್ತು ವ್ಯಾವಹಾರಿಕ ಕ್ಷೇತ್ರದ ತಜ್ಞರು ತಮ್ಮ ಕಾರ್ಯಕ್ಷೇತ್ರದ ಅಭಿವೃದ್ಧಿಗಾಗಿ, ಜ್ಞಾನಾರ್ಜನೆಗಾಗಿ ಬಳಸುತ್ತಿದ್ದಾರೆ. ಇವಲ್ಲದೆ, ಈ ಜಾಲತಾಣಗಳ ದುರ್ಬಳಕೆಯು ತಪ್ಪು ಮಾಹಿತಿಯ ವಿಸ್ತರಣೆ, ಗೌಪ್ಯತೆ ಉಲ್ಲಂಘನೆ ಹಾಗೂ ಸಾಮಾಜಿಕ ಬದಲಾಗುವಿಕೆ ಉಂಟುಮಾಡುವ ಸಾಧ್ಯತೆಯನ್ನೂ ಹೊಂದಿದೆ. ಸುಳ್ಳು ಸುದ್ದಿ ಹರಡುವಿಕೆ, ಸೈಬರ್ ಅಪರಾಧಗಳು ಹಾಗೂ ಮಾನಸಿಕ ಒತ್ತಡವನ್ನೂ ಇದರಿಂದ ಎದುರಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗೃತಿಯಿಂದ ನಡೆದುಕೊಳ್ಳುವುದು ಹಾಗೂ ಮಾಹಿತಿ ಪರಿಶೀಲನೆಗೆ ಹೆಚ್ಚಿನ ಗಮನ ನೀಡುವುದು ಪ್ರಮುಖ ಹಾಗೂ ಅತ್ಯವಶ್ಯಕವಾಗಿದೆ. ಸಾಮಾಜಿಕ ಜಾಲತಾಣಗಳು ವ್ಯಾಪಾರದ ಕ್ಷೇತ್ರದಲ್ಲಿಯೂ ದೊಡ್ಡ ಕ್ರಾಂತಿಯನ್ನು ಉಂಟುಮಾಡಿವೆ. ಡಿಜಿಟಲ್ ಮಾರ್ಕೆಟಿಂಗ್, ಆನ್‌ಲೈನ್ ವ್ಯಾಪಾರ, ಸಣ್ಣ ಹಾಗೂ ದೊಡ್ಡ ಉದ್ಯಮಗಳಿಗೆ ಪ್ರಚಾರ ನೀಡುವಂತೆ ಇದು ಹೊಸ ಆಯಾಮವನ್ನು ಸೃಷ್ಟಿಸಿದೆ. ಉದ್ಯೋಗ ಅವಕಾಶಗಳು, ಹೊಸ ವೃತ್ತಿಪರ ನೆಟ್‌ವರ್ಕಿಂಗ್ ಸಾಧನೆ ಮತ್ತು ಉದ್ಯೋಗ ಹುಡುಕುವ ಪ್ರಕ್ರಿಯೆಗೂ ಇದು ಸಹಾಯ ಮಾಡುತ್ತಿದೆ. ಭವಿಷ್ಯದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಇನ್ನಷ್ಟು ಹೆಚ್ಚಾಗಲಿದ್ದು, ಪರಿಣಾಮಕಾರಿಯಾದ ಬಳಕೆ ಮತ್ತು ನಿಯಂತ್ರಣ ಅನಿವಾರ್ಯವಾಗಿದೆ. ಶಿಕ್ಷಣ, ಸಂಶೋಧನೆ, ಉದ್ಯೋಗ, ಉದ್ಯಮ ಮತ್ತು ಸಾಮಾಜಿಕ ಹಿತಾಸಕ್ತಿ ಸಂಘಟನೆಗಳಿಗೆ ಇದು ಹೊಸ ತಲೆಮಾರು ತರಬೇತಿಯಂತಾಗಬಹುದು. ಜಾಲತಾಣವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿದರೆ, ಸಾಮಾಜಿಕ ಜಾಲತಾಣಗಳು ಆಧುನಿಕ ಯುಗದ ಪರಿಣಾಮಕಾರಿಯಾದ ಮಾಧ್ಯಮವೆಂಬುದರಲ್ಲಿ ಸಂಶಯವಿಲ್ಲ. ಆದರೆ, ದುರಪಯೋಗವನ್ನು ತಡೆಗಟ್ಟಲು ಮತ್ತು ಮಾಹಿತಿಯ ಮೌಲ್ಯವನ್ನು ಹೆಚ್ಚಿಸಲು ಸರ್ಕಾರದ ಸೈಬರ್ ನಿಯಂತ್ರಿತ ವಿಭಾಗಗಳು ಮತ್ತು ವ್ಯಕ್ತಿಯು ಜವಾಬ್ದಾರಿಯುತ ಬಳಕೆ ಅಗತ್ಯವಾಗಿದೆ.
ವಚನ ಚಳುವಳಿ ಮತ್ತು ಮಹಿಳಾ ಸಮಾನತೆ.
201 to 206
ಹನ್ನೆರಡನೆಯ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ಓರೆಕೋರೆಗಳ ವಿಶ್ಲೇಷಣೆ ಕಾಯಕ ಶ್ರದ್ಧೆಯೊಂದಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸಿದವರು ಶಿವಶರಣರು. ತಮ್ಮ ವಚನಗಳಲ್ಲಿ ಲಿಂಗಾತೀತ ನೆಲೆಯನ್ನು ಪುರಸ್ಕರಿಸಿ, ಲಿಂಗತಾರತಮ್ಯದ ಸಮಾಜದಲ್ಲಿ ವಿಚಾರ, ವಿಮರ್ಶೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಚನ ಚಳುವಳಿ. ಹೆಣ್ಣನ್ನು 'ಮಾಯೆ' ಎಂದು ಹೀಗಳೆಯುತ್ತಿದ್ದ ಪುರುಷ ಪ್ರಧಾನ ಮನೋಧೋರಣೆಗೆ ತಡೆಹಾಕಿ ಹೆಣ್ಣನ್ನು ಹತ್ತಿಕ್ಕುವ ಸಮಾಜದ ಕೌರ್ಯವನ್ನು ಖಂಡಿಸಿ ಸ್ತ್ರೀಸಂವೇದನೆಗೆ ಹೊಸ ಆಯಾಮವನ್ನು ತಂದುಕೊಟ್ಟವರು ವಚನಕಾರರು. ಇದರಿಂದ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ದೊರೆತು ಅನುಭವ ಮಂಟಪದಲ್ಲಿ ಪುರುಷರ ಸಮಾನವಾಗಿ ಚರ್ಚೆ ಮಾಡಿ ಸಮಾಜಕ್ಕೆ ಮಹಿಳೆಯರ ಕೊಡುಗೆ ಏನೆಂಬುದು ಅವರು ತೋರಿಸಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಮಹಿಳೆ ಪುರುಷ ಸರಿಸಮಾನವಾಗಿ ಅನುಭವ ಮಂಟಪದ ಚರ್ಚೆಯಲ್ಲಿ ಭಾಗವಹಿಸುವ, ವಿಚಾರ ವಿಮರ್ಶೆ ಮಾಡುವ, ಕಾಯಕ ದಾಸೋಹ ಮಾಡುವ ಮುಂತಾದ ನೆಲೆಗಳಲ್ಲಿ, ಆಯಾಮಗಳಲ್ಲಿ ತನ್ನ ಅಸ್ತಿತ್ವ, ಅಸ್ಮಿತೆಯನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯ ಸಮಾನತೆಗೆ ಶರಣರು ಅವಕಾಶ ಕಲ್ಪಿಸಿಕೊಟ್ಟರು. ಪ್ರಸ್ತುತ ಲೇಖನದಲ್ಲಿ ವಚನ ಆಂದೋಲನದಲ್ಲಿ ಶಿವಶರಣರು ಮಹಿಳೆಗೆ ನೀಡಿದ ಪ್ರಾಮುಖ್ಯತೆಯನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
ಡಾ. ಅಂಬೇಡ್ಕರ್‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ.
207 to 219
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ॥ ಬಿ. ಆರ್. ಅಂಬೇಡ್ಕರ್‌ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌರ್ಜನ್ಯದ ವಿರುದ್ಧ ಸಂಘಟಿತರಾಗುವುದು ಸಾಧ್ಯವೇ ಆಗಲಿಲ್ಲವೆಂಬುದು ನಿಜಕ್ಕೂ ದುರಂತವೇ ಸರಿ. ತಮ್ಮ ಜೀವನವನ್ನೇ ಶೋಷಿತ ಜನಾಂಗಗಳ ವಿಮೋಚನೆಗೆ ಧಾರೆ ಎರೆದ ಸಮಾಜಕ್ಕೆ ಮರಳಿ ಸಮಾಜದ ಋಣ ತೀರಿಸಿ ಎಂಬುದು ಅವರ ಕೊನೆಯ ದಿನಗಳ ಹೇಳಿಕೆಯಾಗಿತ್ತು.
ಕಾರ್ಮಿಕರ ಹಿತರಕ್ಷಕ ಡಾ. ಬಾಬಾಸಾಹೇಬ್ ಅಂಬೇಡ್ಕರ್.
220 to 225
ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ಹಾಗೂ ರಾಜಕೀಯ ಕೊಡುಗೆ ಅಪಾರ. ಬಹುಜನರ ಬವಣೆಯ ಬದುಕಿನೊಳಗೆ ಇಳಿದು ಲವಣದಂತೆ ಕರಗಿರುವ ಬಾಬಾಸಾಹೇಬರು ಅಪ್ಪಟ ಪ್ರಜಾಪ್ರಭುತ್ವವಾದಿ. ರೈತರು, ಕಾರ್ಮಿಕರು, ಹೆಣ್ಣು ಮಕ್ಕಳ ಉನ್ನತಿಗೆ ಹಾಗೂ ಸಕಲ ಜೀವಿಗಳ ಘನತೆಗೆ ಅಗತ್ಯವಾದ ಮಾರ್ಗಗಳನ್ನು ಶೋಧಿಸಿದ ಶ್ರೇಷ್ಠ ವಿಮೋಚಕ. ಭಾರತದಲ್ಲಿ ಕಾರ್ಮಿಕರಿಗೆ ಯಾವುದೇ ಹಕ್ಕುಗಳು ದೊರೆತಿದ್ದರೆ, ಕಾರ್ಮಿಕರು ಅದರ ಫಲಾನುಭವಿಗಳು ಆಗಿದ್ದರೆ ಅದರ ಸಂಪೂರ್ಣ ಯಶಸ್ಸು ಬಾಬಾಸಾಹೇಬರಿಗೆ ಸಲ್ಲಬೇಕು. ಪ್ರಸ್ತುತ ಲೇಖನದಲ್ಲಿ ಜನಪರವಾದ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದ ಬಾಬಾಸಾಹೇಬರ ಪಾತ್ರವನ್ನು ಅಭಿವ್ಯಕ್ತಿಸುವ ಪ್ರಯತ್ನ ಮಾಡಲಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆ: ಒಂದು ವಿಶ್ಲೇಷಣೆ
226 to 232
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಾತಿ ನಿರ್ಮೂಲನೆ (Annihilation of Caste) ಕೃತಿ ಭಾರತೀಯ ಜಾತಿ ವ್ಯವಸ್ಥೆಯ ವಿರುದ್ಧ ನೀಡಿದ ಅತ್ಯಂತ ಪ್ರಬಲ ವಿಮರ್ಶೆಗಳಲ್ಲಿ ಒಂದಾಗಿದೆ. 1936ರಲ್ಲಿ ಜಾತ್ ಪಾತ್ ತೋಡಕ್ ಮಂಡಳಿಗೆ ಈ ಭಾಷಣವನ್ನು ನೀಡಲು ಉದ್ದೇಶಿಸಲಾಗಿತ್ತಾದರೂ, ಸಂಘಟಕರು ಅದರ ವಿಷಯವನ್ನು ತೀವ್ರವಾದದ್ದು ಎಂದು ಪರಿಗಣಿಸಿ ಅದನ್ನು ನಿರಾಕರಿಸಿದರು. ನಂತರ ಅಂಬೇಡ್ಕರ್ ಅವರು ಈ ಭಾಷಣವನ್ನು ಸ್ವತಃ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಈ ಪ್ರಬಂಧದಲ್ಲಿ ಅಂಬೇಡ್ಕರ್ ಅವರ ಜಾತಿ ಸಂಬಂಧಿತ ಆಲೋಚನೆಗಳ ವಿಶ್ಲೇಷಣೆ, ಹಾಗೂ ಜಾತಿ ನಿರ್ಮೂಲನೆಗಾಗಿ ಅವರು ನೀಡಿದ ಸಂವಿಧಾನಾತ್ಮಕ ಕೊಡುಗೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗಿದೆ. ಜೊತೆಗೆ, ಈ ಕೃತಿಯ ಪ್ರಸ್ತುತತೆ ಮತ್ತು ಸಮಕಾಲೀನ ಜಾತಿ ರಾಜಕೀಯದ ಮೇಲೆ ಇದರ ಪರಿಣಾಮವನ್ನೂ ಅವಲೋಕಿಸಲಾಗುತ್ತದೆ.
ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ
233 to 240
ಆತ್ಮಾನುಭಾವದ ಚೈತನ್ಯ ಮತ್ತು ಸಮಾಜಕಲ್ಯಾಣದ ತೀವ್ರಕಾಳಜಿಯೊಂದಿಗೆ ಮೂಢನಂಬಿಕೆ, ಕಂದಾಚಾರಗಳಿಂದ ಜಡವಾಗಿದ್ದ ಸಮಾಜವನ್ನು ಪರಿವರ್ತಿಸುವ ಸಂಕಲ್ಪದಿಂದ ಅವರು ಒಂದು ವಿನೂತನ ಚಳುವಳಿಯನ್ನೇ ಪ್ರಾರಂಭಿಸಿದರು. ಮೇಲು-ಕೀಳು ಎಂಬ ವರ್ಣ ಅಸಮಾನತೆ;ಬಡವ ಬಲ್ಲಿದ ಎಂಬ ವರ್ಗ ತಾರತಮ್ಯ;ಹೆಣ್ಣು-ಗಂಡು ಎಂಬ ಲಿಂಗಭೇದ ಇವೆಲ್ಲ ತರತಮ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜವನ್ನು ಅವರು ಕಟ್ಟಬಯಸಿದರು. ಇದಕ್ಕಾಗಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಬಸವಣ್ಣ ಸಂಚಾಲಕನಾಗಿ ಮುಂದೆ ನಿಂತ. ಮಹಾನುಭಾವಿ ಅಲ್ಲಮಪ್ರಭುವಿನ ಮಾರ್ಗದರ್ಶನ ದೊರೆಯಿತು. ಚೆನ್ನಬಸವ, ಅಕ್ಕನಾಗಮ್ಮ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಮೊದಲಾದ ನೂರಾರು ವಚನಕಾರರು ಕಾರ್ಯಕರ್ತರಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಸವಾದಿ ಶರಣರು ಕಲ್ಯಾಣದಲ್ಲಿ ಹೊತ್ತಿಸಿದ ಈ ಬೆಳಕಿನ ಕಿರಣಗಳು ಕನ್ನಡ ನಾಡಿನಾದ್ಯಂತ ಮತ್ತು ಅದರಾಚೆಗೂ ವ್ಯಾಪಕವಾಗಿ ಹರಡಿದವು. ಉಡುತಡಿಯಿಂದ ಅಕ್ಕಮಹಾದೇವಿ, ಬಳ್ಳಿಗಾವೆಯಿಂದ ಪ್ರಭುದೇವ, ಸೊನ್ನಲಿಗೆಯಿಂದ ಸಿದ್ದರಾಮ ಶಿವಯೋಗಿ, ನೆರೆಯ ಪ್ರಾಂತ್ಯದಿಂದ ತೆಲುಗು ಜೊಮ್ಮಯ್ಯ ದೂರದ ಕಾಶ್ಮೀರದಿಂದ ಮಹಾದೇವ-ಮಹಾದೇವಮ್ಮ-ಹೀಗೆ ನೂರಾರು ಚೈತನ್ಯಗಳು ಬಂದು ಕಲ್ಯಾಣದಲ್ಲಿ ಸಂಗಮಿಸಿದವು. ಈ ಇಡೀ ಸಮುದಾಯ ಸಾಮೂಹಿಕವಾಗಿ; ಅಸಮಾನತೆ, ದುಃಖ-ದಾರಿದ್ರ, ಹಿಂಸೆ ಕ್ರೌರ್ಯ ಮೌಡ್ಯತೆಗಳಿಂದ ತತ್ತರಿಸಿ ಹೋಗಿದ್ದ ಸಮಾಜವನ್ನು ಪರಿವರ್ತಿಸಿ, ಅಲ್ಲಿ ಸಮಾನತೆ, ಸುಖ, ಸಂತೋಷ, ಶಾಂತಿ, ಆತ್ಮ ಜ್ಞಾನದ ಬೀಜ ಬಿತ್ತಿ ಹೊಸ ವಾತಾವರಣ ನಿರ್ಮಿಸುವ ಶುಭಸಂಕಲ್ಪ ಮಾಡಿದರು. ಇದು ಕೇವಲ ಕರ್ನಾಟಕದ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಇಡೀ ಭರತಖಂಡದ ವ್ಯಾಪ್ತಿಯಲ್ಲಿ ಒಂದು ಐತಿಹಾಸಿಕ ಮಹತ್ವದ ಸಂದರ್ಭವೆಂದೇ ಹೇಳಬಹುದು.
ವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ
241 to 248
ಆತ್ಮಕಥೆ ಕನ್ನಡ ಸಾಹಿತ್ಯದ ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದಿರುವುದನ್ನು ನೋಡುತ್ತೇವೆ. ಮನುಷ್ಯನ ಸುತ್ತಲೂ ನಡೆಯುವ ಮತ್ತು ಅವರ ಅಂತರಾಳದಲ್ಲಿರುವ ಹೂರಣಗಳನ್ನು ಹೊರ ಹಾಕುವ ಒಂದು ಪ್ರಕಾರವಾಗಿ ಕಾಣುತ್ತೇವೆ. ಒಬ್ಬ ಮನುಷ್ಯನ ಇಡೀ ಬದುಕಿನಲ್ಲಿ ನಡೆದಂತಹ ತಪ್ಪು-ಸರಿ, ಸಿಹಿ-ಕಹಿ ಘಟನೆಗಳಿಗೆ ಅಕ್ಷರ ರೂಪವನ್ನು ನೀಡುತ್ತಾನೆ. ತಮ್ಮ ಅಂತರಾಳದ ತಮುಲಗಳನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಲಾಗುತ್ತದೆ. ಆದರೆ ಬಾಬಾ ಸಾಹೇಬರು ಬರೆದ ಅವರ ಆತ್ಮಕಥೆಯಲ್ಲಿ ಅವರ ಬದುಕಿನ ಕಹಿ ಘಟನೆಗಳು ಹೇಗೆ ಮುಂದೆ ಅವರು ಇಡೀ ಸಮಾಜದ ಏಳಿಗೆಗಾಗಿ ಅವುಗಳನ್ನೆ ಆಧಾರವಾಗಿ ಬಳಸಿಕೊಂಡರು ಎನ್ನುವುದನ್ನು ಅವರ ಬದುಕೆ ನಮಗೆ ತೋರಿಸಿಕೊಡುತ್ತದೆ. 'ವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ' ಇದು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಆತ್ಮಕಥೆ ಅವರ ಬದುಕಿಗೆ ಸಂಬಂಧಿಸಿದ ಕಹಿ ಘಟನೆಗಳ ಅನಾವರಣವನ್ನು ಇಲ್ಲಿ ಕಾಣುತ್ತೇವೆ. ಈ ಆತ್ಮಕತೆಯು ಫ್ಲಾಶ್ ಬ್ಯಾಕ್ ತಂತ್ರವನ್ನು ಒಳಗೊಂಡಿದೆ. ಹಾಗೆ ಈ ಲೇಖನದಲ್ಲಿ ಬಾಬಾ ಸಾಹೇಬರ ಬದುಕಿನಲ್ಲಿ ನಡೆದಂತಹ ಘಟನೆಗಳನ್ನು ಇಟ್ಟುಕೊಂಡು ಪ್ರಸ್ತುತ ಘಟನೆಗಳೊಂದಿಗೆ ಸಮೀಕರಿಸಿ ಪ್ರತ್ಯೇಕ ಮತಕ್ಷೇತ್ರವನ್ನು ಬಾಬಾ ಸಾಹೇಬರು ಯಾಕೆ? ಬಯಸಿದ್ದರು. ಅದರ ಫಲವಾಗಿಯೇ ಇಂದು ದೊರೆತ ಮೀಸಲಾತಿಯ ಕುರಿತು ಇಲ್ಲಿ ಚರ್ಚಿಸಲಾಗಿದೆ.
ಸಾಮ್ರಾಟ ಅಶೋಕನ ಕಾಲ ಮತ್ತು ಸಾಮಾಜಿಕ ಕ್ರಾಂತಿ
249 to 255
ಇತಿಹಾಸಕಾರ ಹೆಚ್.ಜಿ. ವೆಲ್ಸ್ "ಇತಿಹಾಸದ ಆಗಸದಲ್ಲಿ ಸಾವಿರಾರು ಜನ ರಾಜ ಮಹಾರಾಜರು ಆಳಿ ಹೋಗಿದ್ದಾರೆ. ಆದರೆ, ಸಾಮ್ರಾಟ ಅಶೋಕ ಮಾತ್ರ ಅಂದಿನಿಂದ, ಇಂದಿನವರೆಗೂ ಪ್ರಕಾಶಮಾನವಾದ ನಕ್ಷತ್ರವಾಗಿ ಪ್ರಜ್ವಲಿಸುತ್ತಿದ್ದಾನೆ” ಎಂದು ಹೇಳಿದ್ದಾರೆ. ಮೌರ್ಯ ಸಾಮ್ರಾಜ್ಯದ ಸ್ಥಾಪಕರಾದ ಚಂದ್ರಗುಪ್ತ ಮೌರ್ಯನ ಮೊಮ್ಮಗ ಹಾಗೂ ರಾಜ ಬಿಂದುಸಾರನ ಮಗನಾದ ಸಾಮ್ರಾಟ ಅಶೋಕ ಕ್ರಿಸ್ತ ಪೂರ್ವ 304 ರಿಂದ ಕ್ರಿ.ಪೂ. 232ರ ವರೆಗೆ ಬದುಕಿದ್ದ. ಕ್ರಿ.ಪೂ. 268 ರಿಂದ 232ರ ವರೆಗೆ ಏಷಿಯಾದ ಅತಿ ದೊಡ್ಡ ಭೂಭಾಗವನ್ನು ಆಳಿದ ದೊರೆ. ಸಾಮ್ರಾಟ ಅಶೋಕನ ಕಾಲ ಮತ್ತು ಆಳ್ವಿಕೆ ಭಾರತದ ಇತಿಹಾಸದ ಗತಿ ಮತ್ತು ಮಾರ್ಗವನ್ನೇ ಬದಲಿಸಿತು. ಅಶೋಕ ಗೌತಮ ಬುದ್ಧನು ಕಾಲವಾಗಿ ಸುಮಾರು 300 ವರ್ಷಗಳ ನಂತರ ಬದುಕಿದ್ದ ರಾಜ. ಗೌತಮ ಬುದ್ಧರ ಪ್ರಜ್ಞೆ, ಶೀಲ, ಕರುಣೆಯ ಧಮ್ಮ ಕ್ರಾಂತಿಯನ್ನು ತನ್ನ ಆಡಳಿತದ ಮಂತ್ರ ಮತ್ತು ಶಾಸನವಾಗಿಸಿ ತನ್ನ ಪ್ರಜೆಗಳನ್ನು ಮತ್ತು ಸಮಾಜವನ್ನು ವೈಚಾರಿಕತೆ, ನೀತಿ ಮತ್ತು ಕರುಣೆಯ ಮಾರ್ಗದಲ್ಲಿ ನಡೆಸಿದ ಆದರ್ಶ ದೊರೆ. ಬುದ್ಧರ ಉಪದೇಶವನ್ನು ಅಫ್ಘಾನಿಸ್ತಾನ ಕನ್ಯಾಕುಮಾರಿಯವರೆಗೆ ಮತ್ತು ಗ್ರೀಸ್, ಈಜಿಪ್ಟ್, ಸಿರಿಯಾಗಳಿಗೂ ಹಬ್ಬಿಸಿದ ಧಮ್ಮ ಪೋಷಕ. ಪ್ರಸ್ತುತ ಲೇಖನ ಅಶೋಕನ ಕಾಲದ ಕ್ರಾಂತಿಕಾರಿ ಬದಲಾವಣೆಯನ್ನು ಆತನು ಅನುಸರಿಸಿದ ಸಾಮಾಜಿಕ, ಆರ್ಥಿಕ, ರಾಜಕೀಯ ನೀತಿಗಳನ್ನು ಅಧ್ಯಯನ ಮಾಡಲು ಬಯಸುತ್ತದೆ.
Dr. Babasaheb Ambedkar's Philosophy on Education
256 to 265
Dr. Babasaheb Ambedkar's Educational philosophy is reflected in his educational thoughts. Education is the comer stone of progress and upliftment. It leads to increased awareness and social consciousness of the people and provides for more responsible leadership of the nation. Dr. Babasaheb Ambedkar knew well that the more the education, the more the chances for progress and the easier the opportunities for Oppressed and depressed communities but since he thought that by giving his people political power, the problem of their education would be automatically solved through governmental efforts and agencies, he devoted his time and talent more to securing political rights than to securing educational uplift.
Dr. B.R. Ambedkar as Father of Indian Democracy
266 to 272
Dr. B.R. Ambedkar is considered the father of Indian democracy. As the principal architect of the Indian Constitution, he played a crucial role in shaping the country's democratic framework. Ambedkar championed the rights of marginalized communities, especially the Dalits, and worked tirelessly to promote social justice, equality, and liberty. His contributions to drafting the Constitution of India laid the foundation for a democratic, secular, and inclusive nation. Ambedkar's emphasis on human rights, the abolition of untouchability, and the empowerment of oppressed sections of society remain central to India's democratic ideals.
Role of Dr. B.R. Ambedkar in the Emancipation of Women
273 to 281
Dr. B.R. Ambedkar, a champion of social justice, played a pivotal role in the emancipation of women in India. He recognized the intersectionality of caste and gender oppression, and his efforts aimed to dismantle these dual systems of oppression. Ambedkar advocated for women's education, property rights, and equality in marriage and divorce laws. He also worked tirelessly to abolish discriminatory practices such as sati, child marriage, and the devadasi system. Through his writings, speeches, and legislative efforts, Ambedkar challenged patriarchal norms and societal attitudes that perpetuated women's subordination. His vision for a more equitable society continues to inspire feminist movements and social justice activism in India today. Ambedkar's vision for women's emancipation was intertwined with his efforts to annihilate the caste system. He believed that the caste system was responsible for women's subordination and exploitation. To address this, Ambedkar emphasized the importance of education, economic empowerment, and social reform. He advocated for equal economic rights for women, including equal pay for equal work and equal right to work.
Critical Analysis of Dr. BR Ambedkar's Vision
282 to 293
The focus of this study is intended to identify the critical analysis of Ambedkar's idea in the stimulus vision of modern concepts. The acceleration of those visions has created a common bearing of things that may polish remaining restructured questions to ask through the fundamental social opportunities, equalities, democratic conservation and representation possibility in the matter of re-union of constitutional sustainability and integrity of sovereign ruling with or without political stamina. Provided that the critical intensity has made a clear picture of responsible tact and non-responsible tact, two categorical dismantling facts already happened it may exhibit on Ambedkar's visions through the self-disciplinary actions over that were in vain at least. The paramount observation has declared that, this study has laid down various aspects and ideas but it may think overall where had no clear to upcoming intensity of common proceedings i.e., regarding the law bondage especially certain amicable amendments, summarised mismatch, priority non-selection etc, where has a detailed sample matter unfortunately may be fluctuated even though which remaining a determined rejection and also it may import a certain issue automatically created and complexities driven wherein reflect a descending order of codification documents, that may be enforced at all. Hence, this article primarily accepts the predominant issues therein taken and to controlled both as theoretical and analytical examination whether it may be sought a deem fit or not, or may be a social negligence and target compactness or whether has deem rejoined a contemplated exclusion of modern vision of the Ambedkar's perceptions, mainly in the constitutional and social representation and legal citizen rights and opportunities and its various approaches.
The Reclaiming Dr. B.R. Ambedkar's Legacy: Contemporary Relevance and Challenges
294 to 303
This article revisits the legacy of Dr.B.R. Ambedkar, a pivotal figure in Indian history, and explores its contemporary relevance and challenges. As a champion of social justice, Ambedkar's ideas on caste annihilation, gender equality, and economic empowerment continue to resonate with marginalized communities in India. However, his legacy has also been subject to co-option, appropriation, and contestation by various groups, including the state, political parties, and dominant castes. This article critically examines the ways in which Ambedkar's legacy has been reclaimed and reinterpreted by different stakeholders, including Dalit activists, feminist scholars, and progressive intellectuals. It argues that Ambedkar's ideas remain relevant today, particularly in the context of rising inequality, caste violence, and patriarchal oppression. However, the article also highlights the challenges of reclaiming Ambedkar's legacy in a context where his ideas are often diluted, distorted, or co-opted by dominant groups. It suggests that a critical and nuanced understanding of Ambedkar's thought is necessary to reclaim his legacy and to harness its transformative potential for social justice and human emancipation.
The Economic Justice and Equality: Dr. B.R. Ambedkar's Vision for a More Equitable Society
304 to 313
This article explores Dr. B.R. Ambedkar's vision for economic justice and equality, and its relevance in contemporary India. His economic ideas, rooted in Buddhist philosophy and influenced by Fabian socialism, emphasized the need for state intervention to address economic inequality and promote social justice. And also examines Ambedkar's economic thoughts on issues such as land reforms, agricultural development, and industrialization. It also analyzes his critiques of capitalism and neoliberalism, and his vision for a more equitable society based on the principles of social democracy. It concludes by highlighting the need to reclaim Ambedkar's economic legacy and promote his vision for economic justice and equality in India.
Contribution of Dr B.R. Ambedkar in the Making of Indian Constitution
314 to 322
Dr. B.R. Ambedkar, revered as the architect of the Indian Constitution, played a pivotal role in shaping the legal and social foundations of modern India. Drawing from various Western constitutions, he skilfully modified their principles to suit the complex social fabric of Indian society. His vision emphasized the need for a strong Centre to maintain unity and integrity in a diverse nation. He advocated for single citizenship to promote a sense of national identity and endorsed English as a link language to bridge linguistic divides. While supporting the formation of linguistic states, he ensured that the official language policy respected India's multilingual character. His commitment to secularism was rooted in the belief that the State should play a proactive role in reforming religion to uphold individual rights and eliminate social evils. Despite being a champion of social justice, he was initially opposed to caste-based reservations, fearing long-term divisions; however, he later supported temporary safeguards for Scheduled Castes and Tribes. He firmly upheld fundamental rights and was a staunch protector of minority rights. Through the Directive Principles of State Policy, He laid the groundwork for a welfare state. His contributions reflect a deep commitment to democracy, equality, and justice for all sections of Indian society.
Dalit and contemporary issues in India
323 to 331
Nowadays in India there is the situation that makes the unity and prestigious matter a disgusting one. The main issue is the exploitation and underrated attitude towards the Dalits, who are among the 80% of the residents of India. They are the rural area people who are mainly illiterate and usually find the exploitation against them are their fate. A numerous reform movements had started for their reformation and to make them aware of their rights which are included in the constitution of India. Many reformers had contributed for these reforms and had tried hard for the sake of Dalits, but the activities against Dalits are more and more agitative nowadays. The recent issues of Madhu in Kerala and some incidents that had occurred in our country made these things worse than ever. In our country the Dalit movements had become a riddle and there were no benefits for Dalits occurred.
Educate, Agitate, Organize: Ambedkar's Ideals and their influence on Indian Cinema
332 to 338
Dr. B.R. Ambedkar's profound impact on Indian society extends beyond his role as the chief architect of the Indian Constitution, influencing various art forms, including cinema. His principles of equality, dignity, and resistance against caste-based oppression have inspired filmmakers to challenge social hierarchies and advocate for justice. This article explores the intersection of Ambedkar's ideology and Indian cinema, highlighting how filmmakers use their medium to amplify marginalized voices and promote social change. Although Ambedkar didn't directly discuss cinema, his views on literature, drama, and art as instruments of social transformation are well-documented. He believed creative expressions should serve as tools for justice and empowerment. The article delves into Ambedkar's influential slogan "Educate, Agitate, Organize," which emphasizes the importance of education in overcoming caste oppression and generating consciousness among the oppressed. By applying this philosophy to Indian cinema, the article examines how films can educate audiences about social issues, agitate against injustice, and organize collective action for positive change. This analysis provides insight into the significant role Indian cinema plays in promoting social justice and equality, reflecting Ambedkar's lasting legacy.
Eco-Social Justice: B. R. Ambedkar's Understanding of Caste, Environment and Sustainable Development in India
339 to 344
This article considers as the intersection of caste, nature and sustainable development in the philosophy of justice of B. R. Ambedkar. It as argues about the environmental degradation in India is intimately linked with caste-based discrimination and that Ambedkar's emphasis on social and economic rights are a key to eco social justice. By examining Ambedkar's views on land reforms, water rights, workers' rights and moral living through Buddhism. This study brings his contributions to words contemporary environmental theory to the forefront. Ambedkar's emphasis on state intervention and redistribution of resources is consistent with the values of environmental justice in terms of enhancing equal access to natural resources. His conception of Navayana Buddhism also presents an ethical framework for sustainability based on the non-violence and the compassion. This paper also discusses policy implications, it's the need for caste-sensitive environmental governance in order to promote inclusive and equitable sustainability practice has been emphasized. By incorporating Ambedkarite ethics are related to this work calls for a wider model of climate justice that is attuned to the socio-economic inequalities are that contextualize environmental experience in India.
Reminiscing Dr. Ambedkar's Philosophy towards Gender Discrimination
345 to 353
Indian culture is an apologue that is divided into various characteristics. Its soul is the Hindu Dharamshastras that produces caste, gender inequity, untouchability, pure or impure, superior or inferior, in which women have been considered impure and inferior. Women had not the right to take education, to express her expression in the public sphere and it was a mandatory law for her; the law comes through the centuries from the Vedic period to the present. It has become a tradition to consider women as subordinate. For women, however, many social reformers have worked for her emancipation in various manners: Jotiba Phule, Savitri Phule, Periyar E.V Ramaswami, Maharishi Karve and Dr.B.R. Ambedkar. However, enhancement of women's condition, it is not appropriate in the present context. Moreover, its symptoms have changed and it has become a discourse in society. In the present context, one raises questions: Do women have freedom of expression herself.is she free in a real sense? Why is she not free from servitude? Who is responsible for her? Why there is no upgrading of women's condition in Indian society? Are any politics involved? Or is she herself diligent for it or others? Even though we are celebrating the 78th birth birth-anniversary of Indian Independence, all these questions are in mind, but it is needed to comprehend Dr.B.R. Ambedkar and his contribution to women's freedom. He is not merely a prolific writer, but also a social reformer, sociologist, anthropologist, economist, political thinker and its architect of Indian constitution. The aim of this paper is to examine how Ambedkar's philosophy is significant in the present socio-cultural and political milieu for women's liberation. It can be said that his ideology is based on three tenets: Liberty, Equality, and Fraternity'. and it is a disaster that women have been remained in margin from mainstream on these three principles.
Architect of Justice: Dr. B.R. Ambedkar's Vision for Democratic Equality
354 to 364
Dr. B.R. Ambedkar, a renowned social reformer, jurist, and the principal architect of the Indian Constitution, played a pivotal role in shaping the political landscape of modern India. His political philosophy is deeply rooted in the principles of social justice, equality, and democracy. Ambedkar vehemently criticized the oppressive caste system and the institutionalized discrimination faced by Dalits and other marginalized communities. His work highlighted the need for systemic reforms to dismantle social hierarchies and promote inclusivity. Central to his political thought was the concept of equality, not just in terms of political rights but also social, economic, and cultural dimensions. Ambedkar's advocacy for the empowerment of Dalits and his efforts to provide them political representation were groundbreaking. He championed the reservation system as a means of affirmative action to uplift disadvantaged groups. Moreover, his influence in the drafting of the Indian Constitution ensured the inclusion of provisions that protected individual rights and promoted a democratic framework. Ambedkar's vision extended beyond Hinduism, as he embraced Buddhism as a path for social liberation. His legacy, deeply embedded in the quest for human dignity and social justice, continues to inspire contemporary movements for equality and rights. Ambedkar's political philosophy remains relevant in addressing today's issues of caste-based discrimination and inequality.