ಮಹಾರಾಷ್ಟ್ರದಲ್ಲಿ ದಲಿತ ಚಳುವಳಿ: ಮಹಿಳಾ ಪ್ರತಿನಿಧೀಕರಣ

Main Article Content

ಮಹಾದೇವಿ ಹುಣಶೀಬೀಜ

Abstract

ಕೌಟುಂಬಿಕ ಜವಾಬ್ದಾರಿಗಳಲ್ಲಿ ಮುಳುಗಿ ಹೋಗಿರುವ ಮಹಿಳೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾರ್ವಜನಿಕ ಹೋರಾಟ, ರಾಜಕಾರಣ, ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡರೂ ಎಲೆ ಮರೆಯ ಕಾಯಿಯಂತೆ ಇರಬೇಕಾಗುತ್ತದೆ. ಹೀಗಿರುವಾಗಲೇ ಮಹಾರಾಷ್ಟ್ರದ ಸಾರ್ವಜನಿಕ ಹೋರಾಟಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದನ್ನು ಕಾಣಬಹುದು. ಅಂಬೇಡ್ಕರ್‌ರ ಜೊತೆಗೆ ನಿಮ್ಮ ವರ್ಗಗಳ ಮಹಾವಿಮೋಚನಾ ಚಳುವಳಿಯಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡರು. ಭಾರತ ರಾಜಕೀಯ ಸ್ವಾತಂತ್ರ್ಯ ಪಡೆಯುವ ಹವಣಿಕೆಯಲ್ಲಿದ್ದಾಗ ಅಂಬೇಡ್ಕರ್‌ರು ಸಮಾಜದ ಅಂಚಿಗೆ ದೂಡಲ್ಪಟ್ಟವರ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ದಲಿತ ಸಂಘಟನೆ, ಹೋರಾಟ, ಚಳುವಳಿ, ದಲಿತ ಪತ್ರಿಕೆಗಳ ಪ್ರಕಟಣೆ, ಎದುರಿಸಿದ ಚುನಾವಣೆ, ಬೌದ್ಧ ಧರ್ಮ ಮತಾಂತರ ಹೀಗೆ ಅವರು ಕೈಗೊಂಡ ಮಹತ್ವದ ಕಾರ್ಯಗಳಲ್ಲಿ ಪುರುಷರಂತೆ ಅಪಾರ ಸಂಖ್ಯೆಯ ದಲಿತ ಮಹಿಳೆಯರು ಅವರೊಡನೆ ಇದ್ದರು. ಆದರೆ ಕಾಂಗ್ರೆಸ್ ಮುನ್ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟದ ಮಹಿಳೆಯರು ಮುನ್ನೆಲೆಗೆ ಬಂದಂತೆ ಅಂಬೇಡ್ಕರ್ ಜೊತೆಗಿನ ದಲಿತ ಚಳುವಳಿಯಲ್ಲಿದ್ದ ಮಹಿಳೆಯರು ಮುನ್ನೆಲೆಗೆ ಬರಲೇ ಇಲ್ಲ. ದಲಿತ ಹೋರಾಟದ ಕುರಿತು ಸಂಶೋಧನೆ ಮತ್ತು ಇತಿಹಾಸವನ್ನು ದಾಖಲಿಸುವಾಗಲೂ ಮಹಿಳೆಯರು ಕಾಣದೆ ಹೋದರು. ಇತಿಹಾಸದಲ್ಲಿ ಮರೆಯಾದ ಆದರೆ ನಿಮ್ನ ವರ್ಗಗಳ ವಿಮೋಚನಾ ಚಳುವಳಿಯಲ್ಲಿ ಅಂಬೇಡ್ಕರ್‌ರ ಹೆಗಲಿಗೆ ಹೆಗಲು ಕೊಟ್ಟ ಮಹಿಳೆಯರ ಪ್ರಾತಿನಿಧ್ಯವನ್ನು ಅವಲೋಕಿಸುವುದು ಮುಖ್ಯವಾಗಿದೆ. ಈ ಲೇಖನದಲ್ಲಿ ಅಂಬೇಡ್ಕರ್ ಅವರು ದಲಿತ ಚಳುವಳಿಯ ಮುಖಂಡತ್ವವನ್ನು ವಹಿಸಿದಲ್ಲಿಂದ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದುವವರೆಗಿನ ಎಲ್ಲ ಮಹತ್ವದ ಕಾರ್ಯಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಅವಲೋಕಿಸಲಾಗಿದೆ.

Article Details

Section

Research Articles

Author Biography

ಮಹಾದೇವಿ ಹುಣಶೀಬೀಜ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ. ಎಲ್. ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ, ಬೆಳಗಾವಿ.

How to Cite

ಮಹಾದೇವಿ ಹುಣಶೀಬೀಜ. (2025). ಮಹಾರಾಷ್ಟ್ರದಲ್ಲಿ ದಲಿತ ಚಳುವಳಿ: ಮಹಿಳಾ ಪ್ರತಿನಿಧೀಕರಣ. ಅಕ್ಷರಸೂರ್ಯ (AKSHARASURYA), 6(05), 60 to 71. https://aksharasurya.com/index.php/latest/article/view/1235

References

ಊರ್ಮಿಳಾ ಪವಾರ್ & ಮೀನಾಕ್ಷಿ ಮೂನ್ (ಮೂಲ), ಸರಸ್ವತಿ ದು. (ಅನು), (2022), ನಾವೂ ಇತಿಹಾಸ ಕಟ್ಟಿದೆವು, ಕವಿ ಪ್ರಕಾಶನ, ಉತ್ತರ ಕನ್ನಡ.

ಅರವಿಂದ ಮಾಲಗತ್ತಿ, (2002), ದಲಿತ ಮಾರ್ಗ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಮುನಿವೆಂಕಟಪ್ಪ, (2009), ದಲಿತ ಚಳುವಳಿ ಚರಿತ್ರೆ, ತನು ಮನ ಪ್ರಕಾಶನ, ಮೈಸೂರು.

Most read articles by the same author(s)