ಮುಕ್ತಾಯಕ್ಕಳ ವಚನಗಳಲ್ಲಿ ಅನುಭಾವದ ನೆಲೆಗಳು

Main Article Content

ಮಹಾದೇವಿ ಹುಣಶೀಬೀಜ

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12ನೇ ಶತಮಾನವು ಸಾಮಾಜಿಕ, ಧಾರ್ಮಿಕ, ವೈಚಾರಿಕ ನೆಲೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಕ್ತವಾಗಿಸಿದ ಸುವರ್ಣಕಾಲವೆಂದು ಕರೆಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಪುರುಷರಂತೆ ಮಹಿಳೆಯರು ಸ್ವಭಿಪ್ರಾಯಗಳನ್ನು ವ್ಯಕ್ತಪಡಿಸಲು ವಚನ ಸಾಹಿತ್ಯವು ವೇದಿಕೆಯನ್ನು ಒದಗಿಸಿತು. ಬಸವಾದಿ ಪ್ರಮಥರು ನೀಡಿದ ಪ್ರೋತ್ಸಾಹದಿಂದಾಗಿ ಹಲವಾರು ಶರಣೆಯರು ವಚನಗಳನ್ನು ರಚಿಸಿ ಅನುಭಾವ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಾಮನೆಯಲ್ಲಿ ಚರ್ಚೆಗಿಳಿದು ತಮ್ಮ ಗೊಂದಲಗಳಿಗೆ ಪರಿಹಾರವನ್ನೂ ಕಂಡುಕೊಂಡಿದ್ದಾರೆ. ಅವರಲ್ಲಿ ಮುಖ್ಯವಾಗಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ ಪ್ರಮುಖರು. ಅದರಲ್ಲೂ ಅಲ್ಲಮಪ್ರಭುಗಳನ್ನೇ ಪರೀಕ್ಷಿಸಿ ಗುರುವಾಗಿ ಸ್ವೀಕರಿಸಿದ ಮುಕ್ತಾಯಕ್ಕಳ ಅನುಭಾವದ ನೆಲೆ ಇತರ ಶರಣೆಯರಿಗಿಂತ ಭಿನ್ನವಾದುದು. ಸಹೋದರ ಅಜಗಣ್ಣನ ಮಾರ್ಗದಲ್ಲಿ ನಡೆದ ಮುಕ್ತಾಯಕ್ಕ ಅದ್ವೈತದ ಅನುಭೂತಿಯನ್ನು ಪಡೆದವಳು. ಮುಕ್ತಾಯಕ್ಕಳ ಸುಮಾರು 37 ವಚನಗಳು ದೊರೆತಿವೆ. ಅವು ಅಲ್ಲಮ ಮುಕ್ತಾಯಕ್ಕರ ಸಂವಾದದ ರೂಪದಲ್ಲಿವೆ ಎಂದು ಮೇಲ್ನೋಟಕ್ಕೆ ಕಂಡರೂ ಅವುಗಳಲ್ಲಿ ವ್ಯಕ್ತವಾಗಿರುವ ವಿಚಾರಧಾರೆಗಳು ಆಕೆಯು ಕಂಡ ಆಧ್ಯಾತ್ಮಿಕ ಅನುಭೂತಿಯ ಉತ್ತುಂಗಕ್ಕೆ ಸಾಕ್ಷಿಯಾಗಿವೆ. ಈ ಪ್ರಬಂಧದಲ್ಲಿ ಮುಕ್ತಾಯಕ್ಕಳ ವಚನಗಳನ್ನು ಅನುಭಾವದ ನೆಲೆಯಲ್ಲಿ ಅಧ್ಯಯನಕ್ಕೆ ಆಯ್ದುಕೊಳ್ಳಲಾಗಿದೆ.

Article Details

Section

Research Articles

Author Biography

ಮಹಾದೇವಿ ಹುಣಶೀಬೀಜ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ, ಬೆಳಗಾವಿ.

How to Cite

ಮಹಾದೇವಿ ಹುಣಶೀಬೀಜ. (2025). ಮುಕ್ತಾಯಕ್ಕಳ ವಚನಗಳಲ್ಲಿ ಅನುಭಾವದ ನೆಲೆಗಳು. ಅಕ್ಷರಸೂರ್ಯ (AKSHARASURYA), 7(03), 130 to 143. https://aksharasurya.com/index.php/latest/article/view/1196

References

ಭೂಸರೆಡ್ಡಿ ಎಸ್.ಎಸ್. & ಮಧು ವೆಂಕಾರೆಡ್ಡಿ, (1993), ಮುಕ್ತಾಯಕ್ಕನ ವಚನಗಳು, ಬಸವ ಸಮಿತಿ, ಬೆಂಗಳೂರು.

ಸುಜಾತ ವಿಶ್ವನಾಥ, (2023), ಶಿವಶರಣೆಯರು, ವಿಶ್ವಪ್ರಕಾಶನ, ಬೆಂಗಳೂರು.

ಶಿವಣ್ಣ ಆರ್. (ಸಂ), (2017), 12ನೇ ಶತಮಾನದ ಶರಣೆಯರು, ಬಸವತತ್ವ ಪ್ರಚಾರ ಹಾಗೂ ಸಂಶೋಧನಾ ಕೇಂದ್ರ, ಬೆಂಗಳೂರು.

ಭೂಸನೂರಮಠ ಸಂ.ಶಿ. (ಸಂ), (1958), ಪ್ರಭುದೇವರ ಶೂನ್ಯ ಸಂಪಾದನೆ, ಶ್ರೀ. ಸಿದ್ಧಲಿಂಗೇಶ್ವರಮಠ, ಗುಲ್ಬರ್ಗಾ.

Most read articles by the same author(s)