ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ

Main Article Content

ರಂಗಸ್ವಾಮಿ
ಎಚ್.ಎಂ. ಧರ್ಮೇಗೌಡ

Abstract

ವೇದಗಳ ಕಾಲದಿಂದಲೂ ಉಳಿಸಿಕೊಂಡು ಬಂದಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆ ತೀವ್ರವಾದ ಆಘಾತಕ್ಕೆ ಒಳಗಾಗಿದ್ದು ಭಾರತ ವಸಾಹತು ಯಾಜಮಾನ್ಯಕ್ಕೆ ಒಳಪಟ್ಟ ಮೇಲೆ ತೀವ್ರವಾದ ಸಾಮಾಜಿಕ ಬದಲಾವಣೆಗಳನ್ನು ಕಂಡಿತು. ವಸಾಹತು ಯಾಜಮಾನ್ಯ ಹೊತ್ತುತಂದ ಅನ್ಯಧರ್ಮ, ಅನ್ಯ ಸಂಸ್ಕೃತಿಗಳಿಗೆ ದೇಸಿ ಸಂಸ್ಕೃತಿಗಳು ಹಲವು ಬಗೆಯಲ್ಲಿ ಪ್ರತಿಕ್ರಿಯಿಸಿದವು. ದೇಸಿ ಸಮಾಜದ ಪಾರಂಪರಿಕ ಹಿಂಸೆಗಳನ್ನು ಅನುಭವಿಸಿಕೊಂಡು ಬಂದಿದ್ದ ತಳಸಮುದಾಯಗಳಿಗೆ ವಸಾಹತೀಕರಣ ಬಿಡುಗಡೆಯ ಹಾದಿಯಾಗಿ ಕಂಡುಬಂದಿತು. ಅಂಬೇಡ್ಕರ್ ಅವರು ವಸಾಹತು ಮೂಲದ ಆಧುನಿಕ ಶಿಕ್ಷಣ, ಇಂಗ್ಲಿಷ್ ಭಾಷೆ, ಪ್ರಜಾಪ್ರಭುತ್ವವಾದಿ, ರಾಜಕೀಯ ವ್ಯವಸ್ಥೆಯ ಸ್ಥಾಪನೆ ಮಾಡುವುದರ ಮೂಲಕ ದಲಿತರ ಬಿಡುಗಡೆಯ ಹಾದಿಯನ್ನು ಕಂಡುಕೊಂಡರು. ಅಂಬೇಡ್ಕರ್ ಅವರ ಈ ಬಗೆಯ ಹೋರಾಟ ಮತ್ತು ಚಿಂತನೆಗಳಿಗೆ ಅನೇಕ ಸಮಕಾಲೀನ ಚಿಂತಕರು, ಹೋರಾಟಗಾರರು ಕಾರಣೀಭೂತರಾದರು. ಇವರಲ್ಲಿ ಪ್ರಮುಖರಾದಂತಹ ಮಹಾತ್ಮ ಜ್ಯೋತಿರಾವ್ ಫುಲೆ, ಶಾಹುಮಹಾರಾಜ್, ನಾರಾಯಣಗುರು, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ದೇವರಾಯ ಇಂಗಳೆ, ಸ್ವಾಮಿ ಧರ್ಮತೀರ್ಥ, ರಾಮಮನೋಹರ ಲೋಹಿಯಾ, ಬಿ. ಶ್ಯಾಮಸುಂದರ್ ಅವರ ಆಲೋಚನೆಗಳು ಅಂಬೇಡ್ಕರ್ ಚಿಂತನೆಗಳಿಗೆ ಪೂರಕವಾದವುಗಳಾಗಿವೆ. ಡಾ. ಬಿ. ಆರ್. ಅಂಬೇಡ್ಕರ್ ಅವರ ರಾಷ್ಟ್ರೀಯತೆಯನ್ನು ನಾವು ಪರ ಮತ್ತು ವಿರುದ್ಧವಾಗಿರುವಂತಹ ಸೈದ್ಧಾಂತಿಕ ನಿಲುವುಗಳ ಆಧಾರದ ಮೇಲೆ ವಿಶ್ಲೇಷಣೆ ಮಾಡಬೇಕಾಗಿದೆ. ಪ್ರಾಚೀನ ಕಾಲದಲ್ಲಿ ನಮ್ಮ ಭಾರತವು ಆಧ್ಯಾತ್ಮಿಕ ರಾಷ್ಟ್ರೀಯತೆಯನ್ನು ಹೊಂದಿತ್ತು ಎಂಬುದು ಕೆಲವು ಭಾರತೀಯ ಲೇಖಕರ ಅಭಿಪ್ರಾಯವಾಗಿದೆ.

Article Details

Section

Research Articles

Author Biographies

ರಂಗಸ್ವಾಮಿ

ಸಂಶೋಧಕರು, ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ ಜಿಲ್ಲೆ.

ಎಚ್.ಎಂ. ಧರ್ಮೇಗೌಡ

ಪ್ರಾಧ್ಯಾಪಕರು, ವಿಶ್ವವಿದ್ಯಾಲಯ ಶ್ರೀಮದ್ ರಂಭಾಪುರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು, ಶಂಕರಘಟ್ಟ, ಶಿವಮೊಗ್ಗ ಜಿಲ್ಲೆ.

How to Cite

ರಂಗಸ್ವಾಮಿ, & ಎಚ್.ಎಂ. ಧರ್ಮೇಗೌಡ. (2025). ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಷ್ಟ್ರೀಯತೆಯ ಪರಿಕಲ್ಪನೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ. ಅಕ್ಷರಸೂರ್ಯ (AKSHARASURYA), 6(05), 157 to 168. https://aksharasurya.com/index.php/latest/article/view/1245

References

ಅಂಬೇಡ್ಕರ್ ಬಿ.ಆರ್., (2015), ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು: ಸಂಪುಟ-1-6, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್. (2017). ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ-7, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.

ದೇವರಾಜ್ ಡಿ.ಆರ್., (2024), ಸಂವಾದ (ಅಂಬೇಡ್ಕರ್ ವಿಶೇಷಾಂಕ), ಏಪ್ರಿಲ್ 2024.

ಧನಂಜಯ್ ಕೀರ್ (ಮೂಲ), ಕುಮಾರಯ್ಯ ಡಿ.ಕೆ. (ಅನು), (2014), ಡಾ. ಬಿ.ಆರ್. ಅಂಬೇಡ್ಕ‌ರ್ ಜೀವನ ಮತ್ತು ಜೀವನ ಧೈಯ, ಗೋಕುಲ್ ಪ್ರಕಾಶನ, ಪುಣೆ.

ನಂಜುಂಡಸ್ವಾಮಿ ಎ.ಎಸ್., (1960), ಭಾರತೀಯ ರಾಷ್ಟ್ರೀಯತೆಯ ವಿಕಾಸ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಪಣಿಕ್ಕರ್ ಕೆ.ಎನ್., (2016), ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

ರೋಮಿಲಾಥಾಪರ್, (2012), ರಾಷ್ಟ್ರೀಯತೆ-ಇತಿಹಾಸ, ಕಾನೂನು ಮತ್ತು ಸಂಸ್ಕೃತಿ ಕೇಂದ್ರಿತ ಚಿಂತನೆ, ಅಭಿರುಚಿ ಪ್ರಕಾಶನ, ಮೈಸೂರು.

ಸಿಂಹ ಶ.ಸ., (2021), ಶ್ರೀ ಅರವಿಂದರ ರಾಷ್ಟ್ರೀಯತೆ, ಔರೋನಾದ ಪಬ್ಲಿಷರ್ಸ್, ಬೆಂಗಳೂರು.

Arun Shourie, (2012), Worshipping of False God (Ambedkar and the Facts which have been Erased), Harper Collins Publishers, New York.