ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್

Main Article Content

ಮಂಜುಳಾಕ್ಷಿ ಎಲ್.

Abstract

ಕಾಲಾಂತರದಿಂದಲೂ ಮಹಿಳೆ ಸಮಾಜದಲ್ಲಿ ತನ್ನ ಅಸ್ವತ್ವಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಧ್ವನಿ ಎತ್ತುತ್ತಲೆ ಬಂದಿದ್ದಾಳೆ. ಇದನ್ನು ನಾವು ಜನಪದ ಹೆಣ್ಣು ಅದರ ಪ್ರಕಾರವಾದ ತ್ರಿಪದಿಯಲ್ಲಿ ತನ್ನ ನೋವನ್ನು ಮತ್ತು ಸಮಾಜದ ಕಟ್ಟುಪಾಡು ಕಂದಾಚಾರಗಳನ್ನು ಮೌನವಾಗಿಯೇ ವಿರೋಧಿಸುತ್ತಾ ಬಂದಿದ್ದಾಳೆ. ಸಾಹಿತ್ಯದಲ್ಲಿ ಅವಳು ತಾಯಿಯಾಗಿ ಅಕ್ಕ-ತಂಗಿ, ನಾದಿನಿ, ಹೆಂಡತಿ, ಅತ್ತೆ ಹೀಗೆ ಅನೇಕ ಪಾತ್ರಗಳಲ್ಲಿ ಪುರುಷನೊಂದಿಗೆ ಜೀವಿಸುತ್ತಾ ಮಾನ್ಯತೆ ಪಡೆದಿದ್ದು ಅವನಿಂದ ದೇವತೆಯಾಗಿ, ಪ್ರಿಯೆಯಾಗಿ, ಕುಟುಂಬದ ಕಣ್ಣಾಗಿ, ಅವನ ಅರ್ಧಾಂಗಿಯಾಗಿದ್ದರೂ ಕೂಡ ಸಮಾಜದಲ್ಲಿ ಅವಳಿಗೆ ಅಂದಲ್ಲ ಇಂದಿಗೂ ಎರಡನೇ ದರ್ಜೆಯ ಸ್ಥಾನವಿದೆ ಅವಳನ್ನು ಪುರುಷ ಸಮಾಜ ತನ್ನ ಬಂಧಿಯಲ್ಲೇ ಬಂಧಿಸಿ ಅವಳ ಮೇಲೆ ಕಟ್ಟುಪಾಡು, ಕಂದಾಚಾರ ಪದ್ಧತಿಗಳನ್ನು ಹೇರುತ್ತಾ ಸಮಾಜದಲ್ಲಿ ಅವಳಿ ಯಾವುದೇ ಸ್ಥಾನವಿಲ್ಲದೆ ತಲಾಂತರದಿಂದ ಶಿಕ್ಷಣ, ಸಮಾಜ, ಧರ್ಮ ರಾಜಕೀಯ ಆರ್ಥಿಕ ಹೀಗೆ ಹಲವಾರು ವಲಯಗಳಿಂದ ವಂಚಿತಳಾಗಿ ಕೇವಲ ನಾಲ್ಕು ಗೋಡೆಯ ನಡುವೆ ಅವನು ಕಟ್ಟಿದ ಗೋಡೆಯಲ್ಲಿಯೇ ಅವನ ಕುಟುಂಬ ಮಕ್ಕಳ ಪಾಲನೆ ಪೋಷಣೆಯಲ್ಲಿ ತನ್ನ ಜೀವನ ಮುಡುಪಾಗಿಟ್ಟಿದ್ದವಳು ಸಂಚಿ ಹೊನ್ನಮ್ಮ, ಮತ್ತು 12ನೇ ಶನಮಾನದಲ್ಲಿ ಅಕ್ಕಮಹಾದೇವಿ ಈ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ ಅವಳನ್ನು ಆ ಬಂಧನದಿಂದ ಮುಕ್ತಗೊಳಿಸಲು ಹೋರಾಡಿ ಅವಳಿಗೆ ಅಕ್ಷರ ಪ್ರಪಂಚದೆಡೆ ಕೊಂಡುಯ್ಯವುದರ ಮೂಲಕ ಸಮಾಜ-ದಲ್ಲಿ ತನ್ನ ಅಸ್ಥತ್ವನ್ನು ಉಳಿಸಿಕೊಳ್ಳವುದರ ಬಗ್ಗೆ ಹೋರಾಡಿದಳು. ಅದೇ ರೀತಿ ಸಾವಿತ್ರಿ ಬಾಪುಲೆಯವರು ಅಕ್ಷರ ಕ್ರಾಂತಿ ಮತ್ತು ವಿಮೋಚನೆಗಾಗಿ ಒಂದು ಕ್ರಾಂತಿಯನ್ನೇ ಹುಟ್ಟಿ ಹಾಕಿದರು. ನಂತರದಲ್ಲಿ ಸಮಾಜದಲ್ಲಿ ತಾನು ವಂಚಿತವಾಗಿದ್ದ ಎಲ್ಲ ರಂಗದಲ್ಲಿಯೂ ಸಾಕ್ಷಿಯಾಗಿ ನಿಂತಳು ಇಂದು ಸಮಾಜದಲ್ಲಿ ಪುರುಷ ಸಮಾಜವನ್ನು ದಿಕ್ಕರಿಸಿ ಸ್ವತಂತ್ರ್ಯವಾಗಿ ಬಾಳುತ್ತಿದ್ದಾಳೆ ಎಂದರೆ ಅದಕ್ಕೆ ಮುಖ್ಯ ಸಾಕ್ಷಿ ಡಾ. ಬಿ. ಆರ್. ಅಂಬೇಡ್ಕರ್. ತಾವು ಕಾನೂನು ಮಂತ್ರಿಯಾಗಿದ್ದಾಗ ಹಾಗೂ ಭಾರತದಲ್ಲಿ ಇಡೀ ಸಮಾಜ ನೆಮ್ಮದಿಯಿಂದ ಬದುಕಲು ಸಹಾಯವಾಗುವಂತೆ ಸಂವಿಧಾನವನ್ನು ಕಟ್ಟಿ ಅದರಲ್ಲಿ ಮಹಿಳೆಯ ಅಭಿವೃದ್ದಿಗಾಗಿಯೇ ಕಾನೂನಿನಾತ್ಮಕವಾಗಿ ಕೆಲವು ಹಕ್ಕುಗಳನ್ನು ತಂದು ಅವಳನ್ನು ಮಾನಸಿಕವಾಗಿ ಭೌದ್ಧಿಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಗಟ್ಟಿಯಾಗಿ ನಿಂತು ಪುರುಷನಿಗೆ ಸರಿಸಮನಾಗಿ ದುಡಿತ್ತಿರುವ ಇಂದಿನ ಮಹಿಳೆ ಮುಖ್ಯ ಚೇತನ ಮತ್ತು ಬೆಂಬಲಾಗಿರುವ ಡಾ. ಅಂಬೇಡ್ಕರ್‌ವರ ಕೊಡುಗೆ, ತತ್ವ, ಸಾಧನೆಗಳ ಒಂದು ಚಿಂತನೆ ಈ ಲೇಖನದ ಉದೇಶವಾಗಿದೆ.


 

Article Details

Section

Research Articles

Author Biography

ಮಂಜುಳಾಕ್ಷಿ ಎಲ್.

ಸಹಾಯಕ ಪ್ರಾಧ್ಯಾಪಕಿ, ಭಾಷಾವಿಜ್ಞಾನ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ.

How to Cite

ಮಂಜುಳಾಕ್ಷಿ ಎಲ್. (2025). ಮಹಿಳೆ ಸಮಾನತೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್. ಅಕ್ಷರಸೂರ್ಯ (AKSHARASURYA), 6(05), 72 to 83. https://aksharasurya.com/index.php/latest/article/view/1236

References

ಅಂಬೇಡ್ಕರ್ ಬಿ. ಆರ್., (2015), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಬೆಂಗಳೂರು.

ಪ್ರಮಿಳಾ ಬಾರ್ಕೂರು. (2024). ಮಹಿಳಾ ವಿಮೋಚನೆ: ವಿವಿಧ ಆಯಾಮಗಳು. ಅಕ್ಷರಸೂರ್ಯ (AKSHARASURYA), 5(04), 132 to 141. Retrieved from https://akshara-surya. com/index. php/latest/article/view/569

ಹೇಮಲತಾ, (2009), ಮಹಿಳಾ ಶಿಕ್ಷಣದ ಮಹತ್ವ, ಬೆಳವಣಿಗೆ ಹಾಗೂ ಸಶಸ್ತೀಕರಣ, ಡಿ. ವಿಕೆ. ಮೂರ್ತಿ ಪ್ರಕಾಶನ, ಮೈಸೂರು.

Most read articles by the same author(s)