ವಚನ ಚಳುವಳಿ ಮತ್ತು ಮಹಿಳಾ ಸಮಾನತೆ.

Main Article Content

ಸಾವಿತ್ರಿ ಮಠ.

Abstract

ಹನ್ನೆರಡನೆಯ ಶತಮಾನದಲ್ಲಿ ವಚನಗಳ ಮೂಲಕ ಸಾಮಾಜಿಕ ಚಿಂತನೆ, ವೈಚಾರಿಕತೆ, ಧಾರ್ಮಿಕ ಓರೆಕೋರೆಗಳ ವಿಶ್ಲೇಷಣೆ ಕಾಯಕ ಶ್ರದ್ಧೆಯೊಂದಿಗೆ ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸಿದವರು ಶಿವಶರಣರು. ತಮ್ಮ ವಚನಗಳಲ್ಲಿ ಲಿಂಗಾತೀತ ನೆಲೆಯನ್ನು ಪುರಸ್ಕರಿಸಿ, ಲಿಂಗತಾರತಮ್ಯದ ಸಮಾಜದಲ್ಲಿ ವಿಚಾರ, ವಿಮರ್ಶೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಚನ ಚಳುವಳಿ. ಹೆಣ್ಣನ್ನು 'ಮಾಯೆ' ಎಂದು ಹೀಗಳೆಯುತ್ತಿದ್ದ ಪುರುಷ ಪ್ರಧಾನ ಮನೋಧೋರಣೆಗೆ ತಡೆಹಾಕಿ ಹೆಣ್ಣನ್ನು ಹತ್ತಿಕ್ಕುವ ಸಮಾಜದ ಕೌರ್ಯವನ್ನು ಖಂಡಿಸಿ ಸ್ತ್ರೀಸಂವೇದನೆಗೆ ಹೊಸ ಆಯಾಮವನ್ನು ತಂದುಕೊಟ್ಟವರು ವಚನಕಾರರು. ಇದರಿಂದ ಸಮಾಜದಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳು ದೊರೆತು ಅನುಭವ ಮಂಟಪದಲ್ಲಿ ಪುರುಷರ ಸಮಾನವಾಗಿ ಚರ್ಚೆ ಮಾಡಿ ಸಮಾಜಕ್ಕೆ ಮಹಿಳೆಯರ ಕೊಡುಗೆ ಏನೆಂಬುದು ಅವರು ತೋರಿಸಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಮಹಿಳೆ ಪುರುಷ ಸರಿಸಮಾನವಾಗಿ ಅನುಭವ ಮಂಟಪದ ಚರ್ಚೆಯಲ್ಲಿ ಭಾಗವಹಿಸುವ, ವಿಚಾರ ವಿಮರ್ಶೆ ಮಾಡುವ, ಕಾಯಕ ದಾಸೋಹ ಮಾಡುವ ಮುಂತಾದ ನೆಲೆಗಳಲ್ಲಿ, ಆಯಾಮಗಳಲ್ಲಿ ತನ್ನ ಅಸ್ತಿತ್ವ, ಅಸ್ಮಿತೆಯನ್ನು ಉಳಿಸಿಕೊಳ್ಳುವ ಸ್ವಾತಂತ್ರ್ಯ ಸಮಾನತೆಗೆ ಶರಣರು ಅವಕಾಶ ಕಲ್ಪಿಸಿಕೊಟ್ಟರು. ಪ್ರಸ್ತುತ ಲೇಖನದಲ್ಲಿ ವಚನ ಆಂದೋಲನದಲ್ಲಿ ಶಿವಶರಣರು ಮಹಿಳೆಗೆ ನೀಡಿದ ಪ್ರಾಮುಖ್ಯತೆಯನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.

Article Details

Section

Research Articles

Author Biography

ಸಾವಿತ್ರಿ ಮಠ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸ.ಪ್ರ.ದ. ಕಾಲೇಜು, ಮಹಾಗಾಂಟ ಕ್ರಾಸ್, ತಾ: ಕಮಲಾಪುರ, ಜಿ: ಕಲಬುರಗಿ.

How to Cite

ಸಾವಿತ್ರಿ ಮಠ. (2025). ವಚನ ಚಳುವಳಿ ಮತ್ತು ಮಹಿಳಾ ಸಮಾನತೆ. ಅಕ್ಷರಸೂರ್ಯ (AKSHARASURYA), 6(05), 201 to 206. https://aksharasurya.com/index.php/latest/article/view/1249

References

ಅರುಣಕುಮಾರಿ ಬಿ.ಎನ್. (ಸಂ), (೨೦೨೦), ಕನ್ನಡ ಮಹಿಳಾ ಸಾಹಿತ್ಯ ಅಸ್ಮಿತೆ, ಸುವಿ ಪಬ್ಲಿಕೇಷನ್, ಶಿಕಾರಿಪುರ.

ಬಸವರಾಜ ಎವಲೆ & ಕಲ್ಯಾಣರಾವ ಜಿ. ಪಾಟೀಲ (ಸಂ), (೨೦೨೩), ವಚನ ಸಾಹಿತ್ಯ ತಾತ್ವಿಕ ನೆಲೆಗಳು, ಎಸ್.ಎಸ್.ಕೆ. ಬಸವೇಶ್ವರ ಮಹಾವಿದ್ಯಾಲಯ ಬಸವಕಲ್ಯಾಣ, ಬೀದರ.

ಚಿದಾನಂದಮೂರ್ತಿ ಎಂ., (೨೦೧೮), ವಚನ ಸಾಹಿತ್ಯ, ಸಪ್ನ ಬುಕ್ ಹೌಸ್, ಬೆಂಗಳೂರು.