ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕ‌ರ್ ಚಿಂತನೆಗಳು

Main Article Content

ಆಶಾಲತಾ ಪಿ.

Abstract

ಭಾರತದಲ್ಲಿ ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಮಹಿಳಾ ಹಕ್ಕುಗಳ ಬಗೆಗೆ ತೀವ್ರವಾಗಿ ಚಿಂತಿಸಿ, ಆ ಸಾಮಾಜಿಕ ಸುಧಾರಣೆಗಳಿಗೆ ಕಾನೂನಿನ ಚೌಕಟ್ಟು ಅವಶ್ಯವೆಂದು, ಭಾರತದ ಸಂವಿಧಾನದಲ್ಲಿ ಆ ಮೌಲ್ಯಗಳನ್ನು ಹಲವಾರು ವಿಧಿಗಳ ರೂಪದಲ್ಲಿ ಕ್ರೋಢೀಕರಿಸಿ, ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ, ಆತ್ಮಗೌರವ ಮತ್ತು ಅನ್ಯಾಯಗಳ ವಿರುದ್ಧ ಹೋರಾಟದ ಮನೋಭಾವವನ್ನು ಮೂಡಿಸಿದ ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರು. ಮೂಲತ ಅಂಬೇಡ್ಕರ್‌ರವರು, ಬೆಳೆದು ಬಂದ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು, ಅಸ್ಪೃಶ್ಯತೆ, ಬಡತನ, ದೌರ್ಜನ್ಯ ಈ ಎಲ್ಲಾ ಜಾತಿಯ ಅಸಮಾನತೆಗಳ ಭೀತಿಗಳನ್ನು, ಒಳಗೊಂಡ ಸಮಾಜವಾಗಿತ್ತು. ಹಾಗಾಗಿ ಸಹಜವಾಗಿಯೇ ಶೋಷಿತ ಸಮುದಾಯಗಳ ಶೋಷಣೆಯ ವಿವಿಧ ಸ್ವರೂಪಗಳು ಅವರ ಹೋರಾಟಗಳಲ್ಲಿ ಪ್ರತಿಫಲನಗೊಂಡಿವೆ. ಈ ಮೂಲಭೂತವಾದ ವಿಚಾರಗಳನ್ನು ಪ್ರಧಾನವಾಗಿಟ್ಟುಕೊಂಡು, ಒಬ್ಬ ರಾಜ್ಯಶಾಸ್ತ್ರದ ವಿದ್ಯಾರ್ಥಿಯಾಗಿ, ಬಾಬಾಸಾಹೇಬ್ ಅಂಬೇಡ್ಕ‌ರ್ರವರ ಆಯ್ದ ಬರಹಗಳು, ಹೋರಾಟಗಳು, ಮತ್ತು ಹೋರಾಟದ ಭಾಗವಾಗಿ ಎತ್ತಿರುವ ಮೂಲಭೂತ ಪ್ರಶ್ನೆಗಳನ್ನು ಈ ಸಂಶೋಧನಾ ಬರಹದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಮುಂದುವರಿದು, ಅಂಬೇಡ್ಕರ್‌ರವರು ದಲಿತ ವಿಮೋಚಕ, ಸಂವಿಧಾನ ಶಿಲ್ಪಿ, ಮೀಸಲಾತಿ ಕಾನೂನುಬದ್ಧಗೊಳಿಸಿದ ದಲಿತ ಹೋರಾಟಗಾರ; ಈ ಸೀಮಿತ ಚೌಕಟ್ಟನ್ನು ಮೀರಿ ಅವರ ಬದುಕು ಮತ್ತು ಹೋರಾಟಗಳನ್ನು ಗುರುತಿಸುವ ಪ್ರಯತ್ನ, ಅವರ ಬರವಣಿಗೆಗಳಲ್ಲಿ ಅಭಿವ್ಯಕ್ತಗೊಂಡಿರುವ ಸಮಾಜಮುಖಿ ಚಿಂತನೆಗಳು, ಮತ್ತು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಸ್ಥಾಪಕರಾಗಿ ಮತ್ತು ಪ್ರತಿಪಾದಕರಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ವಿಚಾರಧಾರೆಗಳು, ಪ್ರಸ್ತುತ ಭಾರತ ಎದುರಿಸುತ್ತಿರುವ ಸವಾಲುಗಳ ನೆಲೆಯಲ್ಲಿ ಅವರ ಚಿಂತನೆಗಳ ಪ್ರಸ್ತುತತೆ ಈ ಮೂಲಭೂತವಾದ ವಿಚಾರಗಳನ್ನು ಪ್ರಧಾನವಾಗಿ ಚರ್ಚೆ ಮಾಡಲಾಗಿದೆ. ಅಂತಿಮವಾಗಿ, ಈ ಸಂಶೋಧನಾ ಬರಹ, ಎಲ್ಲಾ ತಾರತಮ್ಯಗಳನ್ನು ಮೀರಿದ ಮಾನವತಾ ಸಮಾಜ, ಎಲ್ಲರನ್ನು ಒಳಗೊಳ್ಳುವ, ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ದೌರ್ಜನ್ಯ ಮುಕ್ತ ಸಮಾಜವಾಗಿ, ರೂಪಿಸುವ ಮತ್ತು ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿಯಾಗುವ ಮಹತ್ವಪೂರ್ಣ ಸಾಂವಿಧಾನಿಕ ಜವಾಬ್ದಾರಿಗಳ ಭಾಗವಾಗಿ ಅಂಬೇಡ್ಕ‌ರ್ ಚಿಂತನೆಗಳು ಪ್ರಸ್ತುತವೆಂದು, ಖಾತರಿಪಡಿಸುತ್ತದೆ.

Article Details

Section

Research Articles

Author Biography

ಆಶಾಲತಾ ಪಿ.

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಗೋವಿಂದದಾಸ ಕಾಲೇಜು, ಸುರತ್ಕಲ್, ಮಂಗಳೂರು.

How to Cite

ಆಶಾಲತಾ ಪಿ. (2025). ಭಾರತದ ಪ್ರಜಾತಂತ್ರ: ಡಾ. ಬಿ.ಆರ್. ಅಂಬೇಡ್ಕ‌ರ್ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 6(05), 01 to 09. https://aksharasurya.com/index.php/latest/article/view/1225

References

ಅಂಬೇಡ್ಕರ್ ಬಿ. ಆರ್., (1995), ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರೈಟಿಂಗ್ಸ್ ಆಂಡ್ ಸ್ಪೀಚಸ್: ಸಂಪುಟ-14, ಭಾಗ-1, ಎಜ್ಯುಕೇಶನ್ ಡಿಪಾರ್ಟೆಂಟ್, ಗೌರ್ನಮೆಂಟ್ ಆಫ್ ಮಹಾರಾಷ್ಟ್ರ, ಮಹಾರಾಷ್ಟ್ರ.

ಧನಂಜಯ್ ಕೀರ್, (1954), ಡಾ. ಅಂಬೇಡ್ಕರ್ ಲೈಫ್ ಆಂಡ್ ಮಿಶನ್ ಬಾಂಬೇ : ಪಾಪ್ಯುಲ‌ರ್ ಪ್ರಕಾಶನ, ಮುಂಬೈ.

ಸುಖದೇವ್ ತೋರಟ್, (2009), ದಲಿತ್ ಇನ್ ಇಂಡಿಯಾ: ಸಚ್ ಫಾರ್‌ಯೇ ಕಾಮನ್ ಡೆಸ್ಟಿನಿ, ಸೇಜ್ ಪಬ್ಲಿಕೇಶನ್, ನ್ಯೂಡೆಲ್ಲಿ.

ವೋರಾ ರಾಜೇಂದ್ರ ಪಾಲ್ಟಿಕರ್ & ಸುಹಾಸ್ (ಸಂ), (2004) ಇಂಡಿಯನ್ ಡೆಮಾಕ್ರಸಿ: ಮೀನಿಂಗ್ಸ್ ಪ್ರಾಕ್ಟಿಸಸ್, ಯುನಿವರ್ಸಿಟಿ ಆಫ್ ಪುಣೆ, ಪುಣೆ.

ಜಾಫೆಟ್ ಎಸ್ , (2017), ಅಂಬೇಡ್ಕರ್ ಚಿಂತನೆಗಳ ಪ್ರವೇಶಿಕೆ, ಸಂಚಾಲಕರು ಡಾ. ಬಿ.ಆರ್. ಅಂಬೇಡ್ಕರ್ 125ನೇ ಜಯಂತಿಯ ವರ್ಷಾಚರಣೆಯ ಅಂತರಾಷ್ಟ್ರೀಯ ಸಮ್ಮೇಳನಾ ಆಯೋಜನಾ ಸಮಿತಿ, ಬೆಂಗಳೂರು.

ಆಲಿ, ಅಸ್ಟರ್‌, ಡೆಮಾಕ್ರಸಿ ಆಂಡ್ ಪಾಲಿಟರ್ಸ್ ಆಫ್ ಐಡೆಂಟಿಟಿ, ಇಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲೀ, 24 ಮಾರ್ಚ್ 1998.

ಭಾಂಭರಿ ಸಿ. ಪಿ., ರಿಸರ್ವೇಶನ್ಸ್ ಆಂಡ್ ಕಾಸ್ಟಿಸಂ, ಇಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, 2005.