ವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ
Main Article Content
Abstract
ಆತ್ಮಕಥೆ ಕನ್ನಡ ಸಾಹಿತ್ಯದ ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆದು ಬಂದಿರುವುದನ್ನು ನೋಡುತ್ತೇವೆ. ಮನುಷ್ಯನ ಸುತ್ತಲೂ ನಡೆಯುವ ಮತ್ತು ಅವರ ಅಂತರಾಳದಲ್ಲಿರುವ ಹೂರಣಗಳನ್ನು ಹೊರ ಹಾಕುವ ಒಂದು ಪ್ರಕಾರವಾಗಿ ಕಾಣುತ್ತೇವೆ. ಒಬ್ಬ ಮನುಷ್ಯನ ಇಡೀ ಬದುಕಿನಲ್ಲಿ ನಡೆದಂತಹ ತಪ್ಪು-ಸರಿ, ಸಿಹಿ-ಕಹಿ ಘಟನೆಗಳಿಗೆ ಅಕ್ಷರ ರೂಪವನ್ನು ನೀಡುತ್ತಾನೆ. ತಮ್ಮ ಅಂತರಾಳದ ತಮುಲಗಳನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಲಾಗುತ್ತದೆ. ಆದರೆ ಬಾಬಾ ಸಾಹೇಬರು ಬರೆದ ಅವರ ಆತ್ಮಕಥೆಯಲ್ಲಿ ಅವರ ಬದುಕಿನ ಕಹಿ ಘಟನೆಗಳು ಹೇಗೆ ಮುಂದೆ ಅವರು ಇಡೀ ಸಮಾಜದ ಏಳಿಗೆಗಾಗಿ ಅವುಗಳನ್ನೆ ಆಧಾರವಾಗಿ ಬಳಸಿಕೊಂಡರು ಎನ್ನುವುದನ್ನು ಅವರ ಬದುಕೆ ನಮಗೆ ತೋರಿಸಿಕೊಡುತ್ತದೆ. 'ವೀಸಾದ ನಿರೀಕ್ಷೆಯಲ್ಲಿನ ನೆನಪುಗಳ ಸುರುಳಿ' ಇದು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಆತ್ಮಕಥೆ ಅವರ ಬದುಕಿಗೆ ಸಂಬಂಧಿಸಿದ ಕಹಿ ಘಟನೆಗಳ ಅನಾವರಣವನ್ನು ಇಲ್ಲಿ ಕಾಣುತ್ತೇವೆ. ಈ ಆತ್ಮಕತೆಯು ಫ್ಲಾಶ್ ಬ್ಯಾಕ್ ತಂತ್ರವನ್ನು ಒಳಗೊಂಡಿದೆ. ಹಾಗೆ ಈ ಲೇಖನದಲ್ಲಿ ಬಾಬಾ ಸಾಹೇಬರ ಬದುಕಿನಲ್ಲಿ ನಡೆದಂತಹ ಘಟನೆಗಳನ್ನು ಇಟ್ಟುಕೊಂಡು ಪ್ರಸ್ತುತ ಘಟನೆಗಳೊಂದಿಗೆ ಸಮೀಕರಿಸಿ ಪ್ರತ್ಯೇಕ ಮತಕ್ಷೇತ್ರವನ್ನು ಬಾಬಾ ಸಾಹೇಬರು ಯಾಕೆ? ಬಯಸಿದ್ದರು. ಅದರ ಫಲವಾಗಿಯೇ ಇಂದು ದೊರೆತ ಮೀಸಲಾತಿಯ ಕುರಿತು ಇಲ್ಲಿ ಚರ್ಚಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಚಿನ್ನಸ್ವಾಮಿ ಸೋಸಲೆ ಎನ್., (2013), ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು, ಯಾಜಿ ಪ್ರಕಾಶನ, ಬಳ್ಳಾರಿ.
ಅಪ್ಪಗೆರೆ ಸೋಮಶೇಖರ್, (2023), ಮಾನವತೆಯ ಮಾರ್ಗದಾತ, ಅಚಲ ಪುಸ್ತಕ, ಬೆಂಗಳೂರು.
ನಾಗಮೋಹನದಾಸ್ ಹೆಜ್.ಎನ್., (2022), ಮೀಸಲಾತಿ ಭ್ರಮೆ ಮತ್ತು ವಾಸ್ತವ, ಜನ ಪ್ರಕಾಶನ, ಬೆಂಗಳೂರು.