ವಚನ ಚಳವಳಿ ಮತ್ತು ಮಹಿಳೆ

Main Article Content

ಲಕ್ಷ್ಮೀ ಎಲ್. ಪೂಜಾರಿ

Abstract

ವಚನ ಸಾಹಿತ್ಯ ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡಂತಹ ವಿಶಿಷ್ಟ ಸಾಹಿತ್ಯದ ಪ್ರಕಾರ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಕಾಣುತ್ತೇವೆ. ಈ ಯುಗವನ್ನು ಸಾಮಾಜಿಕ ಪರಿವರ್ತನೆ ಯುಗ ಎಂದು ಕರೆಯುವಷ್ಟರಮಟ್ಟಿಗೆ ಬದಲಾವಣೆ ಆಗಿರುವುದನ್ನು ಕಾಣುತ್ತೇವೆ. ವಚನ ಎಂದರೆ ಮಾತು, ಉಕ್ತಿ ಎಂಬ ಅರ್ಥವನ್ನು ಹೊಂದಿದ್ದು ಗದ್ಯ ಪದ್ಯಗಳ ರೂಪದಲ್ಲಿ ಕಂಡುಬಂದಿದೆ ಮಹಿಳೆಯರ ಸಮಾನತೆಗೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಶತಮಾನಗಳಿಂದ ಅಸ್ಪೃಳಾಗಿದ್ದ ಅದೃಶ್ಯಳಾಗಿದ್ದ ಹೆಣ್ಣನ್ನು ವಚನಕಾರರು ಮಾನವೀಯ ದೃಷ್ಟಿಯಿಂದ ಕಂಡಿದ್ದಾರೆ. ಪುರುಷನ ಹಾಗೆ ಮಹಿಳೆಗೆ ಸಮಾನವಾದ ಸ್ಥಾನವನ್ನು ನೀಡುವ ಮೂಲಕ 12ನೇ ಶತಮಾನದಲ್ಲಿ ವಚನಕಾರರು ಮಾಡಿದ ಒಂದು ಬೃಹತ್ ಬದಲಾವಣೆ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಸ್ತ್ರೀಯರ ಸಮಾನತೆಗಾಗಿ ಮಾಡಿದ ಮೊದಲ ಚಳುವಳಿ ವಚನ ಚಳುವಳಿ ಎಂದು ಹಲವಾರು ಆಧಾರಗಳಿಂದ ತಿಳಿದು ಬಂದಿದೆ. ಸಮಾಜದಲ್ಲಿ ವರ್ಣ-ವರ್ಗಗಳ ಅಸಮಾನತೆಯಿಂದ ಜನರು ಶೋಷಣೆಗೊಳಗಾಗಿದ್ದರೆ; ಲಿಂಗ ತಾರತಮ್ಯದಿಂದ ಮಹಿಳೆ ಶೋಷಣೆಗೊಳಗಾಗಿದ್ದಾಳೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಇಂತಹ ತಾರತಮ್ಯವನ್ನು ಸಹಿಸದೇ ವಿರೋಧಿಸಿದರು. ಹೆಣ್ಣನ್ನು ಭೋಗದ ವಸ್ತು ರಕ್ಕಸಿ, ಅಪಶಕುನ, ಮತ್ತು ಮಕ್ಕಳನ್ನು ಹೆರುವ ಯಂತ್ರ ಅವಳು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದು ಯಾವುದೇ ರೀತಿಯ ಸ್ವಾತಂತ್ರಯಿಲ್ಲದಂತಹ ಕಾಲದಲ್ಲಿ ಮೊಟ್ಟ ಮೊದಲು ಹೋರಾಟ ನಡೆಸಿದವರು ವಚನಕಾರರು. ಈ ಚಳುವಳಿಯೇ ವಚನ ವಚನಚಳುವಳಿಯಾಗಿದೆ.

Article Details

Section

Research Articles

Author Biography

ಲಕ್ಷ್ಮೀ ಎಲ್. ಪೂಜಾರಿ

ಸಹಾಯಕ ಪ್ರಧ್ಯಾಪಕಿ, ಕನ್ನಡ ವಿಭಾಗ, ಕೆ. ಎಲ್, ಇ ಸಂಸ್ಥೆಯ ಎಸ್. ಎಸ್. ಎಮ್. ಎಸ್. ಮಹಾವಿದ್ಯಾಲಯ, ಅಥಣಿ.

How to Cite

ಲಕ್ಷ್ಮೀ ಎಲ್. ಪೂಜಾರಿ. (2025). ವಚನ ಚಳವಳಿ ಮತ್ತು ಮಹಿಳೆ. ಅಕ್ಷರಸೂರ್ಯ (AKSHARASURYA), 6(05), 54 to 59. https://aksharasurya.com/index.php/latest/article/view/1234

References

ಚಿದಾನಂದಮೂರ್ತಿ ಎಂ. (ಸಂ), (2008), ಸಾಮಾನ್ಯರಿಗೆ ಸಾಹಿತ್ಯ ಚರಿತ್ರೆ: ವಚನ ಸಾಹಿತ್ಯ: ಸಂಪುಟ-05, ಬೇಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಕಾಂಬಳೆ ವಿ. ಆರ್., (2020), ಅನುಸಂಧಾನ, ಎಸ್. ಎಲ್. ಎನ್. ಪಬ್ಲಿಕೇಷನ್, ಬೇಂಗಳೂರು.

ವೀರಣ್ಣ ರಾಜೂರ, (1991), ಶಿವಶರಣರ ವಚನ ಸಂಪುಟ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

Most read articles by the same author(s)