ಜಾನಪದ ಸಾಹಿತ್ಯ ಮತ್ತು ಆಧುನಿಕತೆಯ ಪ್ರಭಾವ

Main Article Content

ಲಕ್ಷ್ಮೀ ಎಲ್. ಪೂಜಾರಿ

Abstract

ಜಾನಪದ ಸಾಹಿತ್ಯವು ತಲೆತಲೆಮಾರುಗಳಿಂದ ಬೆಳೆದು ಬಂದಿರುವ ಸಾಂಸ್ಕೃತಿಕ ಸಂಪ್ರದಾಯವಾಗಿದ್ದು, ಇದು ಸಮಾಜದ ಜನಪದ ಸಂಸ್ಕೃತಿಯ ಒಂದು ಭಾಗ. ಜನರ ಪದವೇ ಜಾನಪದ. ಜನಪದ ಆಕಾಶದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ. ಗಾದೆ, ಒಡಪು, ಒಗಟು ಹೀಗೆ. ವಿಶಿಷ್ಟ ಸಾಹಿತ್ಯವಾದ ಜನಪದ ಸಾಹಿತ್ಯವನ್ನು ಬಿ.ಎಂ.ಶ್ರೀ. ʼಜನವಾಣಿ ಬೇರು ಕವಿವಾಣಿ ಹೂವುʼ ಎಂದು ಕರೆದಿದ್ದಾರೆ. ʼಜಾನಪದ ಎಂದರೆ ಹಳ್ಳಿ, ಹಳ್ಳಿ ಎಂದರೆ ಜಾನಪದʼ ಎನ್ನುವಷ್ಟರ ಮಟ್ಟಿಗೆ ಹುದುಗಿ ಹೋಗಿರುವ ಜಾನಪದ ಹಳ್ಳಿಗರ ಒಂದು ವಿಶಿಷ್ಟ ಸಾಂಸ್ಕೃತಿಕ ರೂಪ. ನಗರೀಕರಣದ ಪ್ರಭಾವ ಕೂಡ ಸಾಕಷ್ಟು ಬೀರಿದೆ. ನಗರಗಳ ಬೆಳವಣಿಗೆಯಿಂದ ಹಳ್ಳಿಗಳಲ್ಲಿ ಜನರು ಉದ್ಯೋಗ ಅರಸಿ ನಗರಕ್ಕೆ ಹೋಗುವುದರಿಂದ ಹಳ್ಳಿಗಳಲ್ಲಿ ನಗರೀಕರಣದ ಪ್ರಭಾವ ಪ್ರಾರಂಭವಾಯಿತು. 200 ವರ್ಷಗಳ ಕಾಲ ಆಳ್ವಿಕೆ ಮಾಡಿದಂತಹ ಬ್ರಿಟಿಷರಿಗಿಂತ 20 ವರ್ಷಗಳಲ್ಲಿ ಆಗಿರುವ ಪ್ರಭಾವ ಎಂತಹದು ಎನ್ನುವುದನ್ನು ಗುರುತಿಸಬಹುದು. ಜನಪದರು ಆಧುನಿಕತೆಯ ಪ್ರಭಾವದಿಂದ ಆಧುನಿಕ ಮಾಧ್ಯಮಗಳಾದ ಟಿ.ವಿ., ಮೊಬೈಲ್, ಗಣಕಯಂತ್ರಗಳ ಬಳಕೆಯಿಂದ ಹಿಂದಿನಿಂದಲೂ ಬಂದಂತಹ ಹಾಡುಕುಣಿತಗಳು ಇಂದು ಕಾಣದ ಹಾಗೆ ಆಗಿವೆ. ಜನಪದರು ಮನರಂಜನೆಯನ್ನು ತಮ್ಮ ಬದುಕಿನ ಅನುಭವಗಳ ಮೂಲಕ ಪಡೆಯುತ್ತಿದ್ದರು. ಈಗ ಮಾಧ್ಯಮಗಳ ಪ್ರಭಾವದಿಂದ ಅದು ಕಣ್ಮರೆಯಾಗುತ್ತಿದೆ. ಜಾನಪದ ಜನರ ಪದವಾಗಿತ್ತು. ಜನಪದರು ತಾವು ಅನುಭವಿಸಿದ ಅನುಭವಗಳನ್ನು ಹಾಡು, ನೃತ್ಯ, ಕುಣಿತ, ಆಟಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಇವುಗಳೇ ಅವರಿಗೆ ಮನರಂಜನೆಯಾಗಿತ್ತು. ಯಾವುದೇ ಮಾಧ್ಯಮಗಳಿರಲಿಲ್ಲ. ತಾವೇ ಈ ರೀತಿಯಾಗಿ ಖುಷಿ ಪಡುತ್ತಾ ಕಾಲ ಕಳೆಯುತ್ತಿದ್ದರು.

Article Details

Section

Research Articles

Author Biography

ಲಕ್ಷ್ಮೀ ಎಲ್. ಪೂಜಾರಿ

ಕನ್ನಡ ಉಪನ್ಯಾಸಕಿ, ಎಸ್.ಎಸ್.ಎಮ್.ಎಸ್. ಕಾಲೇಜು, ಅಥಣಿ.

How to Cite

ಲಕ್ಷ್ಮೀ ಎಲ್. ಪೂಜಾರಿ. (2025). ಜಾನಪದ ಸಾಹಿತ್ಯ ಮತ್ತು ಆಧುನಿಕತೆಯ ಪ್ರಭಾವ. ಅಕ್ಷರಸೂರ್ಯ (AKSHARASURYA), 8(01), 220 to 226. https://aksharasurya.com/index.php/latest/article/view/1379

References

ಜವರೇಗೌಡ ದೇ., (2001), ಜಾನಪದ ಅಧ್ಯಯನ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಪರಮಶಿವಯ್ಯ ಜಿ. ಶಂ., (2015), ಜನಪದ ಸಾಹಿತ್ಯ ಸಮೀಕ್ಷೆ, ಕನ್ನಡ ಸಾಹಿತ್ಯ ಪರಿಷತ್ತು.

ರಾಮಚಂದ್ರಗೌಡ ಹಿ. ಶಿ., (2010), ಕನ್ನಡ ಜನಪದ ಸಾಹಿತ್ಯ ಪ್ರಕಾರಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ.

ಹಲಸಂಗಿ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ, (2008), ಗರತಿಯ ಹಾಡು, ಸಮಾಜ ಪುಸ್ತಕಾಲಯ, ಧಾರವಾಡ.

Most read articles by the same author(s)