ಆಯಗಾರಿಕೆ ಮತ್ತು ಹರಿಜನರು (ಛಲವಾದಿಗರು) (ವಿಜಯಪುರ ಜಿಲ್ಲೆ ಅನುಲಕ್ಷಿಸಿ)
Main Article Content
Abstract
ಕೃಷಿ ಭಾರತೀಯ ಗ್ರಾಮಗಳ ಪ್ರಧಾನ ವೃತ್ತಿಯಾಗಿದ್ದು, ಜನಸಂಖ್ಯೆಯ ಬಹುತೇಕ ಭಾಗ ವರ್ಷವಿಡೀ ಕೃಷಿಯಲ್ಲಿಯೇ ತೊಡಗಿರುತ್ತದೆ. ಗ್ರಾಮ ಜೀವನವು ಪರಸ್ಪರಾವಲಂಬಿಯಾಗಿ, ಹಲವಾರು ವಿಶಿಷ್ಟ ಸೇವಾ, ವಿನಿಮಯ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಸಂಗಮವಾಗಿದೆ. ರೈತರು ಒಕ್ಕಲುತನದ ಜೊತೆಗೆ-ಬಡಿಗೇರರು ಬಡಗಿತನ, ಕಮ್ಮಾರರು ಕಮ್ಮಾರಿಕೆ, ಕುಂಬಾರರು ಕುಂಬಾರಿಕೆ, ನೇಕಾರರು ನೇಕಾರಿಕೆ, ಮಡಿವಾಳರು ಬಟ್ಟೆಗಳನ್ನು ಶುಚಿಮಾಡಿಕೊಡುವುದು, ಚಮ್ಮಾರರು ಚಮ್ಮಾರಿಕೆ ಇಂತಹ ವಿವಿಧ ಕಾಯಕಗಳಲ್ಲಿ ನಿರತರಾಗಿದ್ದಾರೆ. ಹಣದ ಚಲಾವಣೆ ಅಧಿಕೃತವಾಗಿ ಆರಂಭವಾದ ಸಂದರ್ಭದಲ್ಲಿಯೂ ಸಹ, ಕೃಷಿಕರು ಬೆಳೆಯುವ ದವಸಧಾನ್ಯಗಳು ತಮಗೆ ಬೇಕಾದ ಬಟ್ಟೆ-ಬರೆ, ಪಾತ್ರೆ ಪಗಡೆ ಮತ್ತು ಸೇವೆಗೆ ಪ್ರತಿಫಲವಾಗಿ ನೀಡುವ ಪರಿಪಾಟ ಗ್ರಾಮೀಣ ಪ್ರದೇಶದಲ್ಲಿ ಬೆಳೆದುಬಂದಿದೆ. ಅಂತಹ ವಿಶಿಷ್ಟ ಸೇವೆಗಳನ್ನು ಸಲ್ಲಿಸುವ ಕೆಲಸಗಾರರಿಗೂ ಮತ್ತು ಕೃಷಿಕರಿಗೂ ನಿಕಟವಾದ ಸಂಬಂಧ ತಲೆತಲಾಂತರವಾಗಿ ಗ್ರಾಮಗಳಲ್ಲಿ ಸಾಗಿಬಂದಿದೆ. ಈ ಬಗೆಯ ಸಹಕಾರ ಜೀವನ ವ್ಯವಸ್ಥೆ ಭಾರತೀಯ ಗ್ರಾಮಗಳಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದ ಒಂದು ವಿಶಿಷ್ಟ ಅಂಶವಾಗಿದ್ದು, ಹಲವಾರು ಗ್ರಾಮಗಳಲ್ಲಿ ಇಂದಿಗೂ ಸಹ ಪ್ರಚಲಿತವಾಗಿರುವುದನ್ನು ಕಾಣುತ್ತೇವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅರ್ಜುನ ಗೊಳಸಂಗಿ, (2000), ದಲಿತರ ಬದುಕು ಮತ್ತು ಸಂಸ್ಕೃತಿ: ಜಾನಪದೀಯ ಅಧ್ಯಯನ, ದಲಿತ ಸಾಹಿತ್ಯ ಪರಿಷತ್ತು, ಗದಗ.
ವೃಷಭೇಂದ್ರಸ್ವಾಮಿ (ಸಂ), (1982), ಜಾನಪದ ಸಾಹಿತ್ಯ ದರ್ಶನ-7, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.