Published: 2025-11-05

Table of Contents

Table of Contents

I to V

ಎಸ್. ಎಲ್. ಭೈರಪ್ಪನವರ ʼಭಿತ್ತಿʼ ಆತ್ಮಕಥೆ: ಸಾಮಾಜಿಕ, ಸಾಂಸ್ಕೃತಿಕ ವಿಶ್ಲೇಷಣೆ

ಉಮೇಶ

01 to 08

ಆಧುನಿಕ ಕಾಲಘಟ್ಟದ ಪ್ರಮುಖ ಕಾದಂಬರಿಕಾರರಲ್ಲಿ ಎಸ್. ಎಲ್. ಭೈರಪ್ಪನವರು ಒಬ್ಬರಾಗಿದ್ದಾರೆ. ಇವರ ಕೃತಿಗಳು ಇಂಗ್ಲಿಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ʼಭಿತ್ತಿʼ ಎಸ್. ಎಲ್. ಭೈರಪ್ಪನವರ ಆತ್ಮಕಥನ. ಯಾವುದೇ ಆತ್ಮಕಥನಗಳು ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗಳಾಗಿರುವುದಿಲ್ಲ. ಬದಲಾಗಿ ಆ ಕೃತಿಯಲ್ಲಿ ಅವರು ಬದುಕಿದ್ದ ತಮ್ಮ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಚಿತ್ರಣಗಳು ಬಿತ್ತರಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನಾ ಲೇಖನದಲ್ಲಿ ಎಸ್.ಎಲ್. ಭೈರಪ್ಪ ಅವರ ಆತ್ಮಕಥೆಯಲ್ಲಿ ಅನಾವರಣಗೊಂಡಿರುವ ಜಾತೀಯತೆ, ಸಾಮಾಜಿಕ ಅಸಮಾನತೆ, ಅವರ ಶೈಕ್ಷಣಿಕ ವಿಚಾರಗಳ ವಿಶಿಷ್ಟ ಅನುಭವಗಳು ಮತ್ತು ರಾಷ್ಟ್ರಾಭಿಮಾನ ಕುರಿತಂತೆ ವಿಸ್ತೃತವಾಗಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

Read More »

From Cantonment to Commercial Hub: Colonial Policies and Trade in Bangalore

Prameela S.

01 to 06

This paper analyzes how colonial-era policies transformed Bangalore from a military cantonment into a commercial hub between ca. 1800 and 1920. The cantonment initially served as a concentrated demand node, but sustained commercialization was driven by targeted infrastructural investments. Specific policies—urban planning, rail transport development, and municipal/land regulations—reoriented pre-existing trade patterns, facilitated commercial aggregation, and enabled the emergence of hybrid merchant networks. The study concludes that while these institutional and spatial choices were foundational to Bangalore's economic prominence, they also embedded the socio-spatial inequalities visible in its modern urban form.

Read More »

ಗರ್ದಿ-ಗಮ್ಮತ್ತಿನ ಕೊನೆಯ ಕುಡಿ- ತಿಮ್ಮಣ್ಣ ರಾಮವಾಡಗಿ

ಎಂ.ಡಿ.ಚಿತ್ತರಗಿ

09 to 19

ಪ್ರಸ್ತುತ ಲೇಖನವು ಕೋಟೆನಾಡಿನ ಅಪರೂಪದ ಜನಪದ ಕಲಾವಿದ ತಿಮ್ಮಣ್ಣ ರಾಮವಾಡಗಿ ಅವರ ಬದುಕು ಮತ್ತು ಗರ್ದಿಗಮ್ಮತ್ತು (ವಡ್ಡರ ನಾಗವ್ವ/ಬಾಂಬೆ ಡಬ್ಬಾ ಟಾಕೀಸ್) ಎಂಬ ವಿಶಿಷ್ಟ ಕಲಾ ಪ್ರಕಾರದ ಬಗ್ಗೆ ಪಕ್ಷಿನೋಟ ಬೀರುತ್ತದೆ. ಇಳಕಲ್ ಮೂಲದ ಅನಕ್ಷರಸ್ಥರಾದ ಎಂಬತ್ತೈದರ ಇಳಿವಯಸ್ಸಿನ ತಿಮ್ಮಣ್ಣನವರು ಐದಾರು ದಶಕಗಳಿಂದ ಗರ್ದಿಗಮ್ಮತ್ತನ್ನೇ ತಮ್ಮ ಬದುಕಾಗಿಸಿಕೊಂಡು ಹಳ್ಳಿ-ಪಟ್ಟಣಗಳಲ್ಲಿ ಅದನ್ನು ಜೀವಂತವಾಗಿಟ್ಟಿದ್ದಾರೆ. ಈ ಸಂಚಾರಿ ಮಾಯಾಪೆಟ್ಟಿಗೆಯು ಐತಿಹಾಸಿಕ, ಧಾರ್ಮಿಕ ಮತ್ತು ಸಾಮಾಜಿಕ ಸಂಗತಿಗಳನ್ನು ಹಾಡು-ತಾಳಗಳೊಂದಿಗೆ ಪ್ರದರ್ಶಿಸುವ ಮೂಲಕ ಮನರಂಜನೆ ಹಾಗೂ ಶಿಕ್ಷಣ ನೀಡುತ್ತಾ ಬಂದಿದೆ. ಆಧುನಿಕ ಯುಗದ ಸವಾಲುಗಳ ನಡುವೆಯೂ ಕಲೆ ಮತ್ತು ಜೀವನೋಪಾಯಕ್ಕಾಗಿ ಹೆಣಗುತ್ತಿರುವ, ಈ ಪರಂಪರೆಯ ಕೊನೆಯ ಕೊಂಡಿಯಂತಿರುವ ತಿಮ್ಮಣ್ಣನವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯವನ್ನು ಲೇಖನ ಒತ್ತಿ ಹೇಳುತ್ತದೆ.

Read More »

ಬೇಲೂರು ರಘುನಂದನ್‌ ಅವರ ಏಕವ್ಯಕ್ತಿ ಅಭಿನಯನದ ರಂಗಪ್ರಯೋಗಗಳು: ಒಂದು ವಿಶ್ಲೇಷಣೆ

ಕೃಷ್ಣಮೂರ್ತಿ ಜಿ.

20 to 29

ಕನ್ನಡ ರಂಗಭೂಮಿಯ ಇತ್ತೀಚಿನ ಬೆಳವಣಿಗೆಗಳಲ್ಲಿ ಏಕವ್ಯಕ್ತಿ ನಾಟಕವು ವಿಶಿಷ್ಟ ಸ್ಥಾನ ಪಡೆದಿದೆ. ಇದು ಕೇವಲ ಕಲಾತ್ಮಕ ಅಭಿವ್ಯಕ್ತಿಯ ಸಾಧನವಲ್ಲದೆ, ಸಾಮಾಜಿಕ–ಸಾಂಸ್ಕೃತಿಕ ಚಿಂತನೆಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಸಾಧನವಾಗಿದೆ. ಈ ಲೇಖನವು ಡಾ. ಬೇಲೂರು ರಘುನಂದನ್‌ ಅವರ ಏಕವ್ಯಕ್ತಿ ನಾಟಕಗಳನ್ನು ಕೇಂದ್ರೀಕರಿಸಿ ಅವುಗಳ ವಸ್ತು, ವಿನ್ಯಾಸ ಮತ್ತು ಅಭಿವ್ಯಕ್ತಿಯ ವೈಶಿಷ್ಟ್ಯಗಳನ್ನು ಪರಿಶೀಲಿಸುತ್ತದೆ. ಜೊತೆಗೆ, ಆಯ್ದ ನಾಟಕಗಳ ವಿಶ್ಲೇಷಣೆ ಮತ್ತು ಅವುಗಳ ಸಾಮಾಜಿಕ–ಸಾಂಸ್ಕೃತಿಕ ಮಹತ್ವವನ್ನು ಸಂಶೋಧನಾ ದೃಷ್ಟಿಯಿಂದ ಅಧ್ಯಯನ ಮಾಡುತ್ತದೆ.

Read More »

ಸಮ್ಮೇಳನಾಧ್ಯಕ್ಷರ ಭಾಷಣಗಳ ತಾತ್ವಿಕ ಸ್ವರೂಪ

ನಾಗಪ್ಪ

30 to 37

ಕನ್ನಡ ಸಾಹಿತ್ಯ ಪರಿಷತ್ತು ಈ ನಾಡಿನ ಸರ್ಕಾರೇತರ, ಸಾರ್ವಜನಿಕ ಹಿತದ ಹಿರಿಯ ಸಂಸ್ಥೆ. ನಮ್ಮ ಪ್ರಾತಿನಿಧಿಕ ಸಂಸ್ಥೆಯೂ ಹೌದು. ಕನ್ನಡದ ಕೆಲಸಗಳನ್ನು ಮಾಡಬೇಕೆಂಬ ಒತ್ತಾಸೆಯಿಂದ ಆರಂಭವಾಗಿದೆ. 1915 ರಲ್ಲಿ ಆರಂಭಗೊಂಡಂತಹ ಕನ್ನಡ ಸಾಹಿತ್ಯ ಪರಿಷತ್ತು ಭಾಷೆ, ನಾಡು, ನುಡಿ ಅಭಿವೃದ್ಧಿಯ ಬಗ್ಗೆ ಹಲವಾರು ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದೆ. ಯಾವ ವಿಶ್ವವಿದ್ಯಾಲಯವು ಮಾಡದ ಬೃಹತ್ ಪ್ರಮಾಣದ ನಿಘಂಟನ್ನು ಒಂಬತ್ತು ಸಂಪುಟಗಳಲ್ಲಿ ಹೊರ ತಂದಿದೆ. ಕನ್ನಡ ನಾಡು ನುಡಿಗೆ ಪೂರಕವಾದ ಗ್ರಂಥಗಳನ್ನು ಪ್ರಕಟಿಸಿದೆ. ಜೊತೆಗೆ ಅಖಿಲ ಭಾರತ ಸಮ್ಮೇಳನಗಳನ್ನು ಹಮ್ಮಿಕೊಂಡು ಬಂದಿದೆ. ಪ್ರಮುಖವಾದವು ಕನ್ನಡ ಸಾಹಿತ್ಯ ಸಮ್ಮೇಳನಗಳು. ಇಂದಿಗೂ ಸಾರ್ವಜನಿಕ ಜೀವನದಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ. ನಾಡು ನುಡಿಯ ಬಗ್ಗೆ ಅವುಗಳ ಅಭಿವೃದ್ಧಿಯ ಬಗ್ಗೆ ಹಲವಾರು ವಿಷಯಗಳನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚಿತವಾಗಿವೆ ಮತ್ತು ಚರ್ಚಿತವಾಗುತ್ತಿವೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಐತಿಹಾಸಿಕ ಚರ್ಚೆಗಳು ನಡೆಯುತ್ತವೆ. ಅದರಲ್ಲೂ ಮುಖ್ಯವಾಗಿ ಅಧ್ಯಕ್ಷೀಯ ಭಾಷಣ ಪ್ರಮುಖವಾಗಿರುತ್ತದೆ. ಈ ಅಧ್ಯಕ್ಷೀಯ ಭಾಷಣಗಳನ್ನು ಅವುಗಳ ಕಾಲದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಒತ್ತಡಗಳ ಹಿನ್ನೆಲೆಯಲ್ಲಿಯೂ ಗಮನಿಸಬೇಕಾಗಿದೆ. ಏಕೆಂದರೆ ಅಂದಿನ ಒತ್ತಡಗಳು ಸಹ ಈ ಭಾಷಣಗಳ ಮೂಲಕ ವ್ಯಕ್ತಗೊಂಡಿವೆ. ಇಲ್ಲಿ ಶಿಕ್ಷಣ ಮಾಧ್ಯಮ, ಕನ್ನಡ ಮಾಧ್ಯಮದ ಸವಾಲುಗಳು, ಕನ್ನಡ ಉಳಿಯುವ, ಬೆಳಯುವ ಚಿಂತನೆಗಳು, ಕನ್ನಡ ಭಾಷೆಯ ಸವಾಲುಗಳು, ಗಡಿ ಸಮಸ್ಯೆಗಳು, ಕನ್ನಡ ಪರ ಚಿಂತನೆಗಳು, ಹಿಂದಿ ಹೇರಿಕೆ, ಭಾಷಾ ಅಭಿವೃದ್ಧಿ, ಕನ್ನಡ ಭಾಷಾ ಬಳಕೆ, ಭಾಷಾ ರಚನೆ, ಸಾರ್ವಜನಿಕ ಜೀವನದಲ್ಲಿ ಭಾಷೆ, ಆಡಳಿತದಲ್ಲಿ ಭಾಷೆ, ಕನ್ನಡ ನಿಘಂಟುಗಳ ರಚನೆ, ಭಾಷಿಕ ಅಂಶಗಳನ್ನು ಕುರಿತು ಅಧ್ಯಕ್ಷೀಯ ಭಾಷಣಗಳಲ್ಲಿ ಚರ್ಚೆ ಮಾಡಲಾಗಿದೆ.

Read More »

ಮುಳಬಾಗಿಲಿನ ಕೃಷಿ ಸಂಸ್ಕೃತಿ ಮತ್ತು ನಂಬಿಕೆಗಳು

ಸಿ. ನಾಗರಾಜ

38 to 49

ಕೃಷಿ ಸಂಸ್ಕೃತಿ ಎನ್ನುವುದು ವ್ಯಾಪಕಾರ್ಥವುಳ್ಳಂಥದ್ದು. ಮಾನವ ತನ್ನ ಜೀವನ ನಿರ್ವಹಣೆಗಾಗಿ ಮಾಡುವ ಪ್ರತಿಯೊಂದು ಕೆಲಸವೂ ಕೃಷಿಯೇ. ಪಶುಪಾಲನೆ, ಮೀನುಗಾರಿಕೆ ಹಾಗೂ ಸಮುದ್ರೋತ್ಪನ್ನಗಳು, ಅರಣ್ಯೋತ್ಪನ್ನಗಳು, ಭೂ ಉತ್ಪನ್ನಗಳು ಇದರಲ್ಲಿ ಸೇರಿವೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ ಭೂಮಿಯನ್ನು ಸಾಗುವಳಿ ಮಾಡಿ ಪಡೆಯುವ ಫಲವನ್ನು ಕೃಷಿ ಎನ್ನಬಹುದು. ಇದಕ್ಕೆ ಬೇಸಾಯ, ವ್ಯವಸಾಯ, ಆರಂಬ, ಸಾಗುವಳಿ ಮುಂತಾದವು ಸಮಾನಾರ್ಥ ಪದಗಳಿವೆ. ಕೃಷಿಯಿಂದಲೇ ಜೀವನ ಮಾಡುವ ರೈತ ಕಡಿಮೆ ಭೂಮಿಯಲ್ಲಿ ಪ್ರಮುಖ ಹಾಗೂ ಮಿಶ್ರ ಬೆಳೆ ತೆಗೆದು, ಜಾನುವಾರುಗಳ ಅಭಿವೃದ್ಧಿ, ತೋಟಗಾರಿಕೆ, ದ್ವಿದಳ ಧಾನ್ಯ, ಎಣ್ಣೆಬೀಜಗಳ ಕೃಷಿ ಹಾಗೂ ಹುಲ್ಲುಗಾವಲಿನಲ್ಲಿ ತನಗೆ ಬೇಕಾದ ರೀತಿಯಲ್ಲಿ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಮಾಡುವ ಉಪಕಸುಬೇ ಕೃಷಿ. ಕೃಷಿ ಸಂಸ್ಕೃತಿ ಎನ್ನುವುದು ವ್ಯವಸಾಯದ ಜೊತೆ ಜೊತೆಗೆ ಪ್ರಾರಂಭವಾಯಿತು. ಆದಿಮಾನವ ಹಿಂದೆ ಗುಹೆ, ಪೊಟರೆಗಳಲ್ಲಿ ವಾಸ ಮಾಡಿಕೊಂಡು ಬೇಟೆಯಾಡಿ ಜೀವಿಸುತ್ತಿದ್ದ. ತಮ್ಮ ಆಹಾರಕ್ಕೆ ಪ್ರಾಣಿ-ಪಕ್ಷಿಗಳು ಸಿಗದಿದ್ದಾಗ ಗೆಡ್ಡೆಗೆಣಸು, ಸೊಪ್ಪುಗಳನ್ನು ತಿನ್ನಲಾರಂಭಿಸಿದ. ತದನಂತರ ಅವುಗಳನ್ನು ತಾವೇ ಬೆಳೆಯಲಾರಂಭಿಸಿದರು. ಇದರಿಂದ ಸಂಸ್ಕೃತಿಯ ಉಗಮ ಕೃಷಿಯಿಂದ ಪ್ರಾರಂಭವಾಯಿತು ಎಂದು ಹೇಳಬಹುದು.

Read More »

ಎ.ಪಿ. ಮಾಲತಿ ಅವರ ಕಾದಂಬರಿಗಳಲ್ಲಿ ಅವ್ಯಕ್ತ ಪಾತ್ರಗಳು

ಪುಟ್ಟಸ್ವಾಮಿ ಎನ್‌.ಎನ್‌.

50 to 57

ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವುದು ವಿಶಿಷ್ಟ ಮನೋಭಾವದ, ವಿಭಿನ್ನ ಶೈಲಿಯ ಬರಹಗಾರರ ಬರವಣಿಗೆಯಿಂದ ಎಂದರೆ ತಪ್ಪಾಗಲಾರದು. ಇಂಥಾ ಕನ್ನಡ ಸಾಹಿತ್ಯದ ಕಾದಂಬರಿ ಪ್ರಕಾರದ ಪ್ರವರ್ತಕರಂತೆ ಕಾಣಸಿಗುವ ನೂರಾರು ಕವಯಿತ್ರಿಯರಲ್ಲಿ ಎ.ಪಿ. ಮಾಲತಿಯವರ ಬರವಣಿಗೆಯೂ ಸಹ ಪರಿಗಣನೀಯ. ಬಹುಜ್ಞಾನ ಶಾಖೆಗಳಿಂದ ಕೂಡಿದ ಇವರ ಬರಹ ಕಥೆ, ಕಾದಂಬರಿ, ವ್ಯಕ್ತಿ ಚರಿತ್ರೆ, ಆತ್ಮಕಥೆ ಮುಂತಾದ ಪ್ರಕಾರಗಳ ಮುಖಮ್ಹೊತ್ತಿದೆ. ವಿದ್ಯಾರ್ಥಿ ದೆಸೆಯಿಂದಲೇ ಬರೆಯಲಾರಂಭಿಸಿದ ಎ. ಪಿ. ಮಾಲತಿಯವರು 1950ರ ದಶಕದಿಂದ ಹೆಚ್ಚಾಗಿ ಗುರುತಿಸಿಕೊಂಡಿದ್ದು, ಇತ್ತೀಚಿನವರೆಗೂ ಹಾಗೂ ಈಗಲೂ ಸಹ ಸಾಮಾಜಿಕರ ಬದುಕು ಬವಣೆಗಳನ್ನು ತಮ್ಮ ಲೇಖನಿ ಮುಖೇನ ಹಿಡಿದಿಡುತ್ತಿದ್ದಾರೆ. ಬಾಲ್ಯದ ಬಡತನ, ಶೈಕ್ಷಣಿಕ ಬದುಕು, ವೈವಾಹಿಕ ಬದುಕು, ವಿಭಕ್ತ- ಅವಿಭಕ್ತ ಕುಟುಂಬಗಳ ಅಸ್ತಿತ್ವ-ಅಳಿವು, ವರ್ಗ ಸಂಘರ್ಷದ ಛಾಯೆ, ಜೀವಿತದ ಸವಾಲುಗಳು, ಸಾಧನೆಗಳು, ಹೀಗೇ ದೈನಂದಿನ ಜೀವನದ ಏರುಪೇರು, ಓರೆಕೋರೆಗಳೇ ಇವರ ಲೇಖನಿಯ ಜೀವದ್ರವ್ಯ. ಸ್ತ್ರೀ ಪಾತ್ರಗಳ ಮೂಲಕ ತಮ್ಮೆಲ್ಲಾ ಸಾಮಾಜಿಕ ಸಂವೇದನೆಗಳನ್ನು ಬಿಂಬಿಸುವ ಇವರು ಮಹಾನ್ ವ್ಯಕ್ತಿಗಳಾಗಲು ಅಡ್ಡದಾರಿ, ಕಾಲುದಾರಿಗಳಿಲ್ಲ ಸತತ ಪರಿಶ್ರಮ ಹಾಗೂ ಪ್ರಾಮಾಣಿಕತೆ, ಸಾಮಾಜಿಕ ಸಮಾನ ಮನೋಭಾವ ಬಹಳ ಮುಖ್ಯ ಎಂಬುದನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಸಾಹಿತ್ಯದ ಜ್ಯೋತಿ ಬೆಳಗಿಸುವ ಹಂಬಲವುಳ್ಳ ಇವರು ತಮ್ಮ ಕ್ರಿಯಾಶೀಲ ಬರಹ, ವಿಶಿಷ್ಟ ಪಾತ್ರ ರಚನೆಯ ಮೂಲಕ ಇಂದಿಗೂ ಸಹ ನಾಡಿನಾದ್ಯಂತ ಓದುಗ ವಲಯವನ್ನು ಸೆಳೆಯುತ್ತಿದ್ದಾರೆ.

Read More »

ಜಂಬಣ್ಣ ಅಮರಚಿಂತರ ಪೆಟ್ರೋಮ್ಯಾಕ್ಸ್ ಹೊತ್ತವರು ಕಾವ್ಯದಲ್ಲಿ ಹಸಿವು

ಪ್ರಕಾಶ

58 to 63

ಜಂಬಣ್ಣ ಅಮರಚಿಂತರು ದಲಿತ / ಬಂಡಾಯ ಸಾಹಿತ್ಯ ಪ್ರಕಾರದಲ್ಲಿ ಕಂಡು ಬಂದಂತಹ ಅದ್ಭುತ ಪ್ರತಿಭೆ. ಶತಶತಮಾನಗಳಿಂದ ತುಳಿತಕ್ಕೆ ಒಳಗಾದವರ ಕೆಳವರ್ಗದ ಜನಾಂಗದವರು ಅನುಭವಿಸುವ ನೋವನ್ನು ತಮ್ಮ ಕಾವ್ಯಗಳಲ್ಲಿ ಪ್ರತಿಬಿಂಬಿಸುವ ಕಾರ್ಯವನ್ನು ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿದ್ದುಕೊಂಡು ಎಂ ಎ ಪದವೀಧರರಾಗಿ ನಂತರ ಪ್ರವೃತ್ತಿಯಿಂದ ಚಿಂತನಶೀಲ ಬರಹಗಾರರಾದರು. ಶೋಷಿತರ ಧ್ವನಿಯಾಗಿ ನಿಂತ ಪ್ರಮುಖ ಬರಹಗಾರರು. ಸಮಾನತೆಯನ್ನು ಸಾರಲು ಹೊರಟ ಭಗವಾನ್ ಬುದ್ಧ ನಂತರ ಬಸವಣ್ಣ ಹಾಗೆಯೇ ಡಾ. ಬಿ.ಆರ್. ಅಂಬೇಡ್ಕರ್ ಆಯಾ ಶತಮಾನದಲ್ಲಿ ಶೋಷಣೆಯನ್ನು ಧಿಕ್ಕರಿಸಿ ನಿಂತರು. 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಅಂತರ್ಜಾತಿ ವಿವಾಹಗಳನ್ನು ಮಾಡಿಸುವುದರ ಮೂಲಕ ಈ ನೆಲದಲ್ಲಿ ನೆಲೆಯೂರಿದ್ದ ಜಾತಿ ಮತ್ತು ಶೋಷಣೆಯನ್ನು ಹೋಗಲಾಡಿಸಲು ಪ್ರಯತ್ನಪಟ್ಟರು.

Read More »

ಸಾಮರಸ್ಯದ ಸಂಕೇತ ಎರಡನೆಯ ಇಬ್ರಾಹಿಮ ಆದಿಲ್‌ಶಾಹಿ ವಿರಚಿತ: `ಕಿತಾಬ-ಇ-ನವರಸʼ

ಬಸೀರಾಬಾನು ನಿಡಗುಂದಿ

64 to 70

ಭಾರತದ ಮಧ್ಯಯುಗದ ಇತಿಹಾಸದಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ಮರಾಠಾ ಚಕ್ರವರ್ತಿ ಶಿವಾಜಿ ಅವರಂತೆ ಧಾರ್ಮಿಕ ಸಹಿಷ್ಣುತೆ ಮೆರೆದ ವಿಜಯಪುರದ ಆದಿಲ್‌ಶಾಹಿ ಅರಸ ಎರಡನೆಯ ಇಬ್ರಾಹಿಮ ಆದಿಲ್‌ಶಾಹಿಯ ಬಗ್ಗೆ ಈ ಲೇಖನವು ವಿಶ್ಲೇಷಿಸುತ್ತದೆ. ಇಸ್ಲಾಮ್ ಧರ್ಮದ ರಾಜನಾಗಿದ್ದರೂ, ಹಿಂದೂ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆತನಿಗೆ ಅಪಾರ ಗೌರವವಿತ್ತು. ಆತನು ಕವಿ, ಸಂಗೀತಗಾರ ಮತ್ತು ಚಿತ್ರಕಲಾವಿದನಾಗಿದ್ದು, ತನ್ನ ಆಸ್ಥಾನದಲ್ಲಿ ಎಲ್ಲ ಧರ್ಮದವರಿಗೂ ಸ್ಥಾನ ನೀಡಿದ್ದನು. ಎರಡನೆಯ ಇಬ್ರಾಹಿಮನು ದಖಣಿ ಉರ್ದುವಿನಲ್ಲಿ ರಚಿಸಿದ ʼಕಿತಾಬ-ಇ-ನವರಸʼ ಎಂಬ ಸಂಗೀತ ಗ್ರಂಥದಲ್ಲಿ ಅಲ್ಲಾ ಮತ್ತು ಪೈಗಂಬರರ ಜೊತೆಗೆ ಶಿವ, ಗಣಪತಿ ಮತ್ತು ಸರಸ್ವತಿಯರನ್ನೂ ಸ್ತುತಿಸಿದ್ದಾನೆ. ಇದು ಇಬ್ರಾಹಿಮನ ಧಾರ್ಮಿಕ ಸಾಮರಸ್ಯ ಮತ್ತು ಸಂಗೀತ ಪ್ರೇಮದ ಸಂಕೇತವಾಗಿದೆ. ಇವನಿಗೆ ʼಜಗದ್ಗುರುʼ ಎಂಬ ಬಿರುದು ಇತ್ತು.

Read More »

ನೆಲಮಂಗಲ ತಾಲ್ಲೂಕಿನ ಪ್ರಾಗೈತಿಹಾಸ

ಭಾಗ್ಯಲಕ್ಷ್ಮಿ ಪಿ., ಶ್ವೇತಾರಾಣಿ ಹೆಚ್.

71 to 77

ಪ್ರಸ್ತುತ ಲೇಖನವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಪ್ರಾಗೈತಿಹಾಸಿಕ ನೆಲೆಗಳ ಸಮಗ್ರ ಅಧ್ಯಯನವನ್ನು ಪ್ರಸ್ತುತಪಡಿಸುತ್ತದೆ. ಮಾನವನ ನೆಲೆಸುವಿಕೆಯ ಇತಿಹಾಸವನ್ನು ಪ್ರಾಚೀನ ಶಿಲಾಯುಗದಿಂದ ಹಿಡಿದು ಬೃಹತ್ ಶಿಲಾಯುಗದವರೆಗೆ (ಕಬ್ಬಿಣ ಯುಗ) ವಿಂಗಡಿಸಲಾಗಿದೆ. ನೆಲಮಂಗಲವು ಬೃಹತ್ ಶಿಲಾಯುಗದ ಪ್ರಮುಖ ಜನವಸತಿ ಕೇಂದ್ರವಾಗಿತ್ತು ಎಂಬುದಕ್ಕೆ ಹಲವಾರು ಪುರಾತತ್ವ ಸಾಕ್ಷಿಗಳು ದೊರಕಿವೆ. ಮೈಲನಹಳ್ಳಿಯ ಬೂದಿಗುಡ್ಡಗಳು (ನವ ಶಿಲಾಯುಗ), ಬಂಡೆಚಿಕ್ಕನಹಳ್ಳಿ ಮತ್ತು ಶ್ರೀನಿವಾಸಪುರದ ವೃತ್ತಾಕಾರದ ಸಮಾಧಿಗಳು, ಮಾದೀಪುರದ ನಿಲಸುಗಲ್ಲುಗಳು, ಹಾಗೂ ಬಿಲ್ಲನಕೋಟೆ, ಮಹದೇವಪುರ, ಮೈಲನಹಳ್ಳಿಗಳಲ್ಲಿನ ಹಾದಿ ಕೋಣೆ ಗೋರಿಗಳು ಮತ್ತು ರಂಧ್ರ ಕೋಣೆ ಗೋರಿಗಳು ಇಲ್ಲಿನ ಪ್ರಮುಖ ನೆಲೆಗಳಾಗಿವೆ. ಈ ಅವಶೇಷಗಳು ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿ ಮೃತರ ಸಂಸ್ಕಾರ ಪದ್ಧತಿ, ಸಾಮಾಜಿಕ ರಚನೆ ಮತ್ತು ಕಬ್ಬಿಣದ ಬಳಕೆ ಹೊಂದಿದ್ದ ಪ್ರಗತಿಪರ ಜೀವನವಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ.

Read More »

ಕುಮಾರವ್ಯಾಸ ಭಾರತದ ಕರ್ಣನ ಮಾನವೀಯ ಮೌಲ್ಯಗಳು

ಮಹಾಲಿಂಗಪ್ರಭು

78 to 84

ಕುಮಾರವ್ಯಾಸ ಭಾರತದಲ್ಲಿ ಅನೇಕ ಮಹಾಪುರುಷರು ತಮ್ಮದೇ ಆದ ತೇಜಸ್ಸಿನಿಂದ ಕಂಗೊಳಿಸಿದ್ದರೂ ಬೇರೆಯವರಲ್ಲಿ ಕಾಣಲಾಗದ ವಿಶಿಷ್ಟವಾದ ಜ್ಞಾನ, ಮಾನವೀಯತೆ ಮತ್ತು ಕರುಣೆ ಹಾಗೂ ಸ್ನೇಹ ಹಾಗೂ ಸ್ವಾಮಿಭಕ್ತಿ ಎಲ್ಲಿಯೂ ಕೂಡ ದಕ್ಕೆ ಬರದ ಹಾಗೆ ನಡೆದುಕೊಳ್ಳುತ್ತಾನೆ. ಕುಮಾರವ್ಯಾಸನ ದೃಷ್ಟಿಯಲ್ಲಿ ಕರ್ಣನೂ ಕೂಡ ಮಹಾಪುರುಷರಲ್ಲಿ ಒಬ್ಬನಾಗಿ ಕಾಣುವ ರೀತಿಯಲ್ಲಿ ಕರ್ಣ ಎದುರಿಸುವ ಧರ್ಮ ಸಂಕಟಗಳು ಬೇರೆಲ್ಲಾ ಮಹಾಪುರುಷರಿಗಿಂತ ವಿಭಿನ್ನವಾಗಿ ಕಾಣುವ ಅವನ ಮಾನವೀಯತೆ ಆತನ ವ್ಯಕ್ತಿತ್ವವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರೆ ಅತಿಶಯೋಕ್ತಿ ಇಲ್ಲ.
ಕುಮಾರವ್ಯಾಸನ ದೃಷ್ಟಿಯಲ್ಲಿ ಕರ್ಣನ ಪಾತ್ರವನ್ನು ಹಾಗೂ ಮಾನವೀಯ ಮೌಲ್ಯವನ್ನ ಚರ್ಚಿಸುವುದಾದರೆ ಮೊದಲಿಗೆ ಕರ್ಣನ ಜನನದ ಸನ್ನಿವೇಶವನ್ನು ಈ ಸಂದರ್ಭದಲ್ಲಿ ಮೊದಲಿಗೆ ಚರ್ಚಿಸಬೇಕಾಗುತ್ತದೆ.

Read More »

ನಿರಂಜನರ ʼವಿಮೋಚನೆʼ ಕಾದಂಬರಿಯಲ್ಲಿ ಹೋರಾಟದ ಚಿತ್ರಣಗಳು

ಎ.ಆರ್. ಮಹೇಂದ್ರ

85 to 92

ಪ್ರಸ್ತುತ ಲೇಖನವು ನಿರಂಜನರ ʼವಿಮೋಚನೆʼ (1953) ಕಾದಂಬರಿಯಲ್ಲಿನ ಹೋರಾಟದ ಚಿತ್ರಣಗಳನ್ನು ವಿಶ್ಲೇಷಿಸುತ್ತದೆ. ನಿರಂಜನರು ಪ್ರಗತಿಪರ ಚಿಂತಕರು ಮತ್ತು ಗಾಂಧಿ, ಮಾರ್ಕ್ಸ್, ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ಅವರ ಆರಂಭಿಕ ಕಾದಂಬರಿಯಾದ ʼವಿಮೋಚನೆʼ ಯು ವರ್ಗ ಸಂಘರ್ಷ, ಸಾಮಾಜಿಕ ವಿಷಮತೆ, ಮತ್ತು ಶೋಷಿತ ವರ್ಗದ ನೋವುಗಳನ್ನು ಚಿತ್ರಿಸುತ್ತದೆ. ಇದು ನೇರವಾದ ಸ್ವಾತಂತ್ರ್ಯ ಹೋರಾಟದ ಕಾದಂಬರಿಯಲ್ಲವಾದರೂ, ಬಡ ಕಾರ್ಮಿಕ ವರ್ಗವು ಬ್ರಿಟಿಷರಿಂದ ಬಳುವಳಿಯಾಗಿ ದರ್ಪ ಪಡೆದ ಭಾರತೀಯ ಶ್ರೀಮಂತರಿಂದ ಮುಕ್ತಿ ಪಡೆಯಲು ನಡೆಸುವ ಹೋರಾಟವನ್ನು ಎತ್ತಿ ತೋರಿಸುತ್ತದೆ. ಕಥಾನಾಯಕ ಚಂದ್ರು ಅಸಮಾನತೆ ಮತ್ತು ಬಡತನದಿಂದ ಸ್ವಾತಂತ್ರ್ಯಕ್ಕಾಗಿ ನಡೆಸುವ ಹೋರಾಟವು, ದೇಶದ ಸ್ವಾತಂತ್ರ್ಯದ ನಂತರವೂ ಶೋಷಣೆ ಮುಂದುವರಿದಿರುವ ವಾಸ್ತವವನ್ನು ಪ್ರತಿಬಿಂಬಿಸುತ್ತದೆ. ಈ ಹೋರಾಟವು ಸೈದ್ಧಾಂತಿಕ ಶಿಸ್ತು ಇಲ್ಲದಿದ್ದರೂ, ಶೋಷಕ ಮಾಲೀಕರ ವಿರುದ್ಧ ಕೂಲಿ ಕಾರ್ಮಿಕರ ಮಾನವೀಯ ತುಡಿತವನ್ನು, ಅದರ ವೈಫಲ್ಯದ ದುರಂತದ ಮೂಲಕ, ಪ್ರಬಲವಾಗಿ ಬಿಂಬಿಸುತ್ತದೆ.

Read More »

ಕೊಡಗಿನ ಗೌರಮ್ಮನವರ ಕತೆಗಳಲ್ಲಿ ಪ್ರತಿಭಟನೆ

ರಾಘವೇಂದ್ರ ಎಸ್.

93 to 99

ಪ್ರಸ್ತುತ ಲೇಖನವು ನವೋದಯ ಕಾಲದ ಪ್ರಖ್ಯಾತ ಕತೆಗಾರ್ತಿ ಕೊಡಗಿನ ಗೌರಮ್ಮನವರ ಕತೆಗಳಲ್ಲಿನ ʼಪ್ರತಿಭಟನೆಯʼ ಸ್ವರೂಪವನ್ನು ವಿಶ್ಲೇಷಿಸುತ್ತದೆ. ಸ್ತ್ರೀಯರ ಅಭಿವ್ಯಕ್ತಿಗೆ ಅವಕಾಶವಿಲ್ಲದ ಕಾಲದಲ್ಲಿ, ಅವರು ವಿಧವಾ ಸಮಸ್ಯೆ, ವರದಕ್ಷಿಣೆ ಮತ್ತು ಸ್ತ್ರೀ ಶೋಷಣೆಯಂತಹ ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದರು. ಪ್ರತಿಭಟನೆಯು ತೀಕ್ಷ್ಣ ಮತ್ತು ಮಂದ ಸ್ವರೂಪದಲ್ಲಿ ಕಾಣಿಸಿಕೊಂಡಿದೆ. ಈ ಅಧ್ಯಯನಕ್ಕಾಗಿ ʼಒಂದು ಪುಟ್ಟಚಿತ್ರʼದಲ್ಲಿನ ಬಾಲವಿಧವೆಯ ಆತ್ಮಹತ್ಯೆಯ ಪರೋಕ್ಷ ಪ್ರತಿಭಟನೆ, ʼಪುನರ್ವಿವಾಹʼದಲ್ಲಿನ ವಿಧುರನ ಕಾಮಕ್ಕೆ ರಾಜಿಯ ಪ್ರತಿರೋಧ ಹಾಗೂ ʼಆಹುತಿʼಯಲ್ಲಿ ವರದಕ್ಷಿಣೆ ವಿರುದ್ಧದ ಸಿಟ್ಟಿನ ಪ್ರತಿಭಟನೆಯನ್ನು ಆಯ್ದುಕೊಳ್ಳಲಾಗಿದೆ. ಗೌರಮ್ಮನವರ ಪಾತ್ರಗಳು, ಸಾಮಾಜಿಕ ಕಟ್ಟುಪಾಡುಗಳು ಮತ್ತು ದಬ್ಬಾಳಿಕೆಯನ್ನು ಪ್ರಶ್ನಿಸಿ, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತವೆ ಎಂಬುದನ್ನು ಈ ಲೇಖನವು ಕಂಡುಕೊಳ್ಳುತ್ತದೆ.

Read More »

ಬಿ.ಟಿ. ಲಲಿತಾನಾಯಕ್ ಅವರ ಕಾದಂಬರಿಗಳಲ್ಲಿ ಸ್ತ್ರೀ ಶಿಕ್ಷಣ

ರಾಜಾ ಎ.

100 to 105

ಬಿ.ಟಿ. ಲಲಿತಾನಾಯಕ್ ಅವರ ಕಾದಂಬರಿಗಳಲ್ಲಿ ಸ್ತ್ರೀ ಶಿಕ್ಷಣ ಮತ್ತು ಮಹಿಳೆಯರ ಸಾಮಾಜಿಕ ಸ್ಥಿತಿಗತಿಯನ್ನು ಈ ಲೇಖನವು ವಿಶ್ಲೇಷಿಸುತ್ತದೆ. ʼನೆಲೆ-ಬೆಲೆʼ ಕಾದಂಬರಿಯಲ್ಲಿ, ಜಯಾ ಮತ್ತು ರೇಖಾ ಅವರ ಪಾತ್ರಗಳು ಸ್ತ್ರೀ ಪ್ರಗತಿಗೆ ಸಮಾಜ ಹೇರುವ ಅಡೆತಡೆಗಳು, ಶೋಷಣೆ ಮತ್ತು ಚಾರಿತ್ರಹರಣದಂತಹ ಸಮಸ್ಯೆಗಳನ್ನು ಎತ್ತಿ ತೋರಿಸುತ್ತವೆ. ವಿದ್ಯೆ ಮತ್ತು ಓದಿನಿಂದ ಜಯಾ ಜಾಗೃತ ಪ್ರಜ್ಞೆ ಗಳಿಸಿದರೂ, ಅನಾಗರಿಕ ಸಮಾಜದಲ್ಲಿ ಸೋಲುತ್ತಾಳೆ. ʼಗತಿʼ ಕಾದಂಬರಿಯಲ್ಲಿ ಲಂಬಾಣಿ ಸಮುದಾಯದ ಸೋನಿ ಪಾತ್ರವು ಶಿಕ್ಷಣದ ಪರಿವರ್ತನಾತ್ಮಕ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅಕ್ಷರ ಕಲಿತ ನಂತರ ಸೋನಿ, ಗಂಡನ ಕ್ರೌರ್ಯ ಮತ್ತು ಮೂಢನಂಬಿಕೆಯ ಪಂಚಾಯಿತಿಯ ವಿರುದ್ಧ ಸಿಡಿದೇಳುತ್ತಾಳೆ. ಶಿಕ್ಷಣದಿಂದ ಸ್ತ್ರೀ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ಲಲಿತಾನಾಯಕ್ ಅವರು ವಾಸ್ತವ ನೆಲಗಟ್ಟಿನಲ್ಲಿ ಚಿತ್ರಿಸಿದ್ದಾರೆ.

Read More »

ದಂಡಿಕೆರೆ ಒಂದು ಸಾಂಸ್ಕೃತಿಕ ಅಧ್ಯಯನ

ವರ್ಷಿತ

106 to 114

ದಂಡಿಕೆರೆ ಗ್ರಾಮದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭೌಗೋಳಿಕ ಅಂಶಗಳ ಅಧ್ಯಯನವನ್ನು ಈ ಲೇಖನವು ಪ್ರಸ್ತುತಪಡಿಸುತ್ತದೆ. ಬೆಂಗಳೂರು-ಪುಣೆ ಹೆದ್ದಾರಿಯಲ್ಲಿರುವ ಸಿರಾ ಬಳಿ ಇರುವ ಈ ಪುಟ್ಟ ಹಳ್ಳಿಯು ಚಾರಿತ್ರಿಕವಾಗಿ ಕಸ್ತೂರಿರಂಗಪ್ಪನಾಯಕನ ಆಳ್ವಿಕೆಗೆ ಒಳಪಟ್ಟಿತ್ತು. ʼದಂಡುʼ (ಸೈನ್ಯ) ಮತ್ತು ʼಕೆರೆʼ ಯಿಂದಾಗಿ ಇದಕ್ಕೆ ದಂಡಿಕೆರೆ ಎಂಬ ಹೆಸರು ಬಂದಿದೆ ಎಂದು ಸ್ಥಳನಾಮ ಅಧ್ಯಯನ ಹೇಳುತ್ತದೆ. ಈ ಗ್ರಾಮದಲ್ಲಿರುವ ವೀರಗಲ್ಲುಗಳು ಮತ್ತು ಮಾಸ್ತಿಗಲ್ಲುಗಳು ಐತಿಹಾಸಿಕ ಹೋರಾಟಗಳಿಗೆ ಸಾಕ್ಷಿಯಾಗಿವೆ. ಇಲ್ಲಿನ ಶ್ರೀ ಪಾರ್ಥಲಿಂಗೇಶ್ವರ ಸ್ವಾಮಿ ದೇಗುಲದ ಹಿನ್ನೆಲೆ, ವಿಶಿಷ್ಟ ಆಚರಣೆಗಳು (ಗಣೇಶ ಚತುರ್ಥಿ ನಿಷಿದ್ಧ), ಕೃಷಿ ಪ್ರಧಾನ ಜೀವನ ಮತ್ತು ಇನ್ಫೋಸಿಸ್‌ನ ಸೋಲಾರ್ ಪ್ಲಾಂಟ್ ನಿಂದ ಉದ್ಯೋಗಾವಕಾಶ ಪಡೆದಿರುವ ಬಗ್ಗೆ ಲೇಖನವು ವಿವರಿಸುತ್ತದೆ. ಒಟ್ಟಾರೆಯಾಗಿ, ಈ ಅಧ್ಯಯನವು ದಂಡಿಕೆರೆ ಗ್ರಾಮದ ಸಮಗ್ರ ಚಿತ್ರಣವನ್ನು ನೀಡುತ್ತದೆ.

Read More »

ಬುಡಕಟ್ಟು ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳು

ಶ್ರೀನಿವಾಸ ಬಿ.ಎಸ್.

115 to 126

ಭಾರತದ ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಅರಣ್ಯ ಮತ್ತು ಪ್ರಕೃತಿಯೊಂದಿಗೆ ಅನನ್ಯ ಸಂಬಂಧವನ್ನು ಸಂಬಂಧವನ್ನು ಹೊಂದಿರುವ ಇವರು ತಮ್ಮದೇ ಆದಂತಹ ಸಂಸ್ಕೃತಿ, ಭಾಷೆ, ಶಾಸ್ತ್ರ-ಸಂಪ್ರದಾಯಗಳನ್ನು, ಶಾಸ್ತ್ರ-ಸಂಪ್ರದಾಯಗಳನ್ನು, ಆಚಾರ-ವಿಚಾರಗಳನ್ನು, ಹಬ್ಬ-ಹರಿದಿನಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಬುಡಕಟ್ಟು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು, ಅವರ ಸಬಲೀಕರಣಕ್ಕೆ ಒತ್ತು ನೀಡುವುದು ಮತ್ತು ಅವರ ಸಾಂಪ್ರದಾಯಿಕ ಜೀವನಶೈಲಿಯನ್ನು ಗೌರವಿಸುವುದು ಅತ್ಯಂತ ಮುಖ್ಯವಾಗಿದೆ. ಹಾಗೂ ಬುಡಕಟ್ಟು ಮಹಿಳೆಯರು ಮತ್ತು ಮಕ್ಕಳು ಹಲವಾರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೊಳಿಸಿವೆ.

Read More »

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ ಸಿನೇಮಾಗಳಲ್ಲಿ ಜನಪದ ಕಲೆಗಳ ಬಳಕೆ: ಒಂದು ವಿಶ್ಲೇಷಣಾತ್ಮಕ ಅಧ್ಯಯನ

ಸಂಗೀತಂ ಬಿ.ಜಿ., ಸತೀಶ್ ಕುಮಾರ್

127 to 139

ಈ ಪ್ರಬಂಧವು ಬರಗೂರು ರಾಮಚಂದ್ರಪ್ಪ ಅವರ ʼಜನಪದʼ ಮತ್ತು ʼಹಗಲು ವೇಷʼ ಚಲನಚಿತ್ರಗಳಲ್ಲಿನ ಜನಪದ ಕಲೆಗಳ ಚಿತ್ರಣದ ಬಿಂಬಿಸುವಿಕೆಯ ಕುರಿತು ಸ್ಪಷ್ಟವಾಗಿ ಹೇಳುತ್ತದೆ. ಇದು ಕರ್ನಾಟಕದ ಗ್ರಾಮೀಣ ಜೀವನದ ಸಾಂಸ್ಕೃತಿಕ ಬೇರುಗಳು ಮತ್ತು ಸಾಂಪ್ರದಾಯಿಕ ಪ್ರದರ್ಶನಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಈ ಚಿತ್ರಗಳ ಮೂಲಕ, ರಾಮಚಂದ್ರಪ್ಪ ಅವರು ದಾಖಲೆಗಳನ್ನು ಮಾತ್ರವಲ್ಲದೆ ಮರೆಯಾಗುತ್ತಿರುವ ಜನಪದ ಸಂಪ್ರದಾಯಗಳನ್ನು ದಾಖಲಿಸಿದ್ದಾರೆ. ಪ್ರತಿರೋಧ ಮತ್ತು ಸಾಮಾಜಿಕ ಪ್ರಜ್ಞೆಯ ಸಮಸ್ಯೆಗಳನ್ನು ಎತ್ತಿ ತೋರಿಸುವ ಸಿನಿಮೀಯ ನಿರೂಪಣೆಗಳಾಗಿ ಅವುಗಳನ್ನು ತುಲನಾತ್ಮಕ ಅಧ್ಯಯನ ಮಾಡಲಾಗಿದೆ. ʼಜನಪದʼ ಸಿನೇಮಾ ಜನಪದ ಕಲೆಗಳ ಪ್ರದರ್ಶನದ ಆಯಾಮಗಳ ಮೇಲೆ ಕೇಂದ್ರೀಕರಿಸುತ್ತದೆ, ಮತ್ತೊಂದೆಡೆ, ʼಹಗಲು ವೇಷʼವು ಕಲೆಯನ್ನು ಪ್ರತಿಭಟನೆ ಮತ್ತು ಸಾಮಾಜಿಕ ವ್ಯಾಖ್ಯಾನದ ಮಾಧ್ಯಮವಾಗಿ ಬಳಸುವ ಜನಪದ ಕಲಾವಿದರ ಜೀವನವನ್ನು ಪರಿಶೀಲಿಸುತ್ತದೆ. ಸಮಕಾಲೀನ ಸಾಮಾಜಿಕ-ರಾಜಕೀಯ ವಾಸ್ತವಗಳನ್ನು ತಿಳಿಸುವಾಗ ಕರ್ನಾಟಕದ ಜನಪದ ಪರಂಪರೆಯ ಅಧಿಕೃತ ಪ್ರಾತಿನಿಧ್ಯವನ್ನು ರಚಿಸಲು ನಿರ್ದೇಶಕರು ಜನಪದ ಸಂಗೀತ, ವೇಷಭೂಷಣ ಮತ್ತು ಪ್ರದರ್ಶನವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅಧ್ಯಯನವು ವಿಶ್ಲೇಷಿಸುತ್ತದೆ. ಹಾಗೆಯೇ ಜನಪದ ಕಲೆಗಳನ್ನು ದಾಖಲಿಸಿಡುವ ಒಂದು ಒಳ್ಳೆಯ ಮಾಧ್ಯಮ ಸಿನೇಮಾ ಎಂಬುದೂ ಈ ಅಧ್ಯಯನದಿಂದ ರುಜುವಾತಾಗುತ್ತದೆ. ಅಂತಿಮವಾಗಿ, ಈ ಚಲನಚಿತ್ರಗಳು ಜನಪದ ಮತ್ತು ಆಧುನಿಕತೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಸಾಂಸ್ಕೃತಿಕ ಪಠ್ಯಗಳಾಗಿ ನಿಲ್ಲುತ್ತವೆ, ಬರಗೂರು ರಾಮಚಂದ್ರಪ್ಪ ಅವರ ʼಜನಪದʼ ಮತ್ತು ʼಹಗಲು ವೇಷʼ ಸಿನೇಮಾಗಳು ಸಾಂಸ್ಕೃತಿಕ ಗುರುತಿನ ಚರ್ಚೆಯಲ್ಲಿ ಸ್ಥಳೀಯ ಕಲಾ ಪ್ರಕಾರಗಳ ಪ್ರಸ್ತುತತೆಯನ್ನು ಪ್ರತಿಪಾದಿಸುತ್ತವೆ.

Read More »

The Transformative Role of Panchayat Raj Institutions in Grassroots Educational Development in India: A Critical Analysis

Nagendrappa K.T.

140 to 149

The 73rd Constitutional Amendment Act, 1992 is a major landmark in the democratic history of India as it has laid down a strong constitutional framework for grassroots democracy and decentralized governance through PRIs. This paper reviews the PRIs in fostering education at the grassroots in a critical perspective on their constitutional obligation, practical experiences and systemic constraints. The study indicates that, although PRIs have had transformational impacts on literacy and school attendance as well as infrastructure where effective leadership exists alongside community participation, their potential has been severely compromised by the “Three Fʼs” - inadequate financial independence, incomplete functions decentralisation and capacity deficit. Comparison of Kerala and West Bengal models underscores that officialdom do not always mean what they say, with the “Kerala model” being lip service to decentralization with restricted administrative devolution, whereas the focused approach in West Bengal had helped in delivering rapid infrastructure expansion, but has fallen short on overall literacy objectives. The paper ends by positing that hanging the constitutional vision and ground realities cannot be addressed without fiscal empowerment, real functional devolution, capacity enhancement, stronger community oversight and political interference. It is only through systemic changes like these that PRIs can potentially become catalysts of change in bottom-up educational reform in India.

Read More »

The Representation and Reservation: Ambedkar’s Political Legacy in Modern India

Ravichandra Walikar, Ravikumar Arali

150 to 156

Dr. B.R. Ambedkar’s political philosophy remains a cornerstone of India’s democratic structure, particularly in the domains of representation, reservation, and social justice. His vision for equality was not limited to constitutional ideals but extended into institutional mechanisms that ensured the participation of historically marginalized groups in political, educational, and economic spheres. Through the principles of protective discrimination and political representation, Ambedkar sought to transform a hierarchical society into one based on dignity, opportunity, and fraternity. This paper critically examines Ambedkar’s conception of representation as a tool for empowerment, analyzing how he differentiated between political and social representation. The introduction of reservation policies in legislatures, services, and education was not merely an act of redress but a radical democratization of the Indian polity. These provisions were envisioned as transitional measures to enable social mobility and moral equality, rather than permanent privileges. In the contemporary era, Ambedkar’s legacy continues to animate debates on affirmative action, identity politics, and social inclusion. It argues that the enduring relevance of Ambedkar’s legacy lies not merely in the mechanics of reservation but in the ethical and humanistic foundation of his thought - a vision that compels India to pursue substantive, not just formal, equality.

Read More »

The United Nations in the 21st Century: Problems and Reform

Roopa K.V.

157 to 165

The Organization of the United Nations (UN) founded in 1945, is the most audacious experiment in global governance idea conceived to save succeeding generations from the scourge of war, worldʼs best attempt at promoting peace and security among nations; fostering cooperation between them on matters including law, economics and social issues. This study measures the UNʼs performance in the 21st century with respect to its major pillars, highlights cases of success and failure, and works out structural and political critiques directed at the Organisation. The United Nations has had some of its greatest success in the area of socio-economic work and humanitarian efforts in categories under which agencies like UNDP, UNICEF, WHO, UNHCR and WFP have played critical roles in achieving great strides with poverty reduction health and refugee protection. But the UN is no more effective in maintaining peace and security than great power politics, (and) Security Council veto authority means it has proved a failure in preventing mass atrocities and addressing major conflicts. The major critiques of the UN include the lack of democracy in the setup and functioning of the Security Council, political and ideological bias in policy agendas among member states, and blizzards operational bureaucracy. The future of the UN to remain relevant assumes reforms, notably that the Security Council must be enlarged and its veto rights curtailed, as well as empowering its technical and humanitarian branches. And yet, for all its faults, the UN is still needed as an arena to set international norms; to make international law and facilitate dialogue between enemies. The central negotiating forum of the world as global challenges require ever greater global cooperation, the UN will continue to be relevant in the 21st century, precisely with its unique role as the worldʼs central negotiating forum.

Read More »