ಬಿ.ಟಿ. ಲಲಿತಾನಾಯಕ್ ಅವರ ಕಾದಂಬರಿಗಳಲ್ಲಿ ಸ್ತ್ರೀ ಶಿಕ್ಷಣ

Main Article Content

ರಾಜಾ ಎ.

Abstract

ಬಿ.ಟಿ. ಲಲಿತಾನಾಯಕ್ ಅವರ ಕಾದಂಬರಿಗಳಲ್ಲಿ ಸ್ತ್ರೀ ಶಿಕ್ಷಣ ಮತ್ತು ಮಹಿಳೆಯರ ಸಾಮಾಜಿಕ ಸ್ಥಿತಿಗತಿಯನ್ನು ಈ ಲೇಖನವು ವಿಶ್ಲೇಷಿಸುತ್ತದೆ. ʼನೆಲೆ-ಬೆಲೆʼ ಕಾದಂಬರಿಯಲ್ಲಿ, ಜಯಾ ಮತ್ತು ರೇಖಾ ಅವರ ಪಾತ್ರಗಳು ಸ್ತ್ರೀ ಪ್ರಗತಿಗೆ ಸಮಾಜ ಹೇರುವ ಅಡೆತಡೆಗಳು, ಶೋಷಣೆ ಮತ್ತು ಚಾರಿತ್ರಹರಣದಂತಹ ಸಮಸ್ಯೆಗಳನ್ನು ಎತ್ತಿ ತೋರಿಸುತ್ತವೆ. ವಿದ್ಯೆ ಮತ್ತು ಓದಿನಿಂದ ಜಯಾ ಜಾಗೃತ ಪ್ರಜ್ಞೆ ಗಳಿಸಿದರೂ, ಅನಾಗರಿಕ ಸಮಾಜದಲ್ಲಿ ಸೋಲುತ್ತಾಳೆ. ʼಗತಿʼ ಕಾದಂಬರಿಯಲ್ಲಿ ಲಂಬಾಣಿ ಸಮುದಾಯದ ಸೋನಿ ಪಾತ್ರವು ಶಿಕ್ಷಣದ ಪರಿವರ್ತನಾತ್ಮಕ ಶಕ್ತಿಯನ್ನು ಪ್ರದರ್ಶಿಸುತ್ತದೆ. ಅಕ್ಷರ ಕಲಿತ ನಂತರ ಸೋನಿ, ಗಂಡನ ಕ್ರೌರ್ಯ ಮತ್ತು ಮೂಢನಂಬಿಕೆಯ ಪಂಚಾಯಿತಿಯ ವಿರುದ್ಧ ಸಿಡಿದೇಳುತ್ತಾಳೆ. ಶಿಕ್ಷಣದಿಂದ ಸ್ತ್ರೀ ಸಬಲೀಕರಣ ಮತ್ತು ಸಾಮಾಜಿಕ ಬದಲಾವಣೆ ಸಾಧ್ಯ ಎಂಬುದನ್ನು ಲಲಿತಾನಾಯಕ್ ಅವರು ವಾಸ್ತವ ನೆಲಗಟ್ಟಿನಲ್ಲಿ ಚಿತ್ರಿಸಿದ್ದಾರೆ.

Article Details

Section

Research Articles

Author Biography

ರಾಜಾ ಎ.

ಕನ್ನಡ ಸಹಾಯಕ ಪ್ರಾಧ್ಯಾಪಕರು, ಭಾಷಾ ವಿಭಾಗ, ಟಿ. ಜಾನ್ ಕಾಲೇಜು (ಸ್ವಾಯತ್ತ), ಬೆಂಗಳೂರು.

How to Cite

ರಾಜಾ ಎ. (2025). ಬಿ.ಟಿ. ಲಲಿತಾನಾಯಕ್ ಅವರ ಕಾದಂಬರಿಗಳಲ್ಲಿ ಸ್ತ್ರೀ ಶಿಕ್ಷಣ. ಅಕ್ಷರಸೂರ್ಯ (AKSHARASURYA), 10(01), 100 to 105. https://aksharasurya.com/index.php/latest/article/view/1730

References

ಲಲಿತಾನಾಯಕ್ ಬಿ.ಟಿ., (1982), ನೆಲೆ-ಬೆಲೆ, ಭಾಗ್ಯಲಕ್ಷ್ಮೀ ಪ್ರಕಾಶನ, ಬೆಂಗಳೂರು.

ಲಲಿತಾನಾಯಕ್ ಬಿ.ಟಿ., (2014), ಗತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ರವಿನಾಯ್ಕ ಎಂ., (2013), ಡಾ. ಬಿ.ಟಿ. ಲಲಿತಾನಾಯಕ್, ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಬೆಂಗಳೂರು.

ಹೊನ್ನುಸಿದ್ದಾರ್ಥ ಸಿ.ಬಿ. (ಸಂ), (2013), ಆಧುನಿಕ ಕನ್ನಡ ಸಮಗ್ರ ಸಾಹಿತ್ಯ ಚರಿತ್ರೆ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಶ್ರೀಮತಿ ಎಚ್.ಎಸ್., (2006), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.