ಗರ್ದಿ-ಗಮ್ಮತ್ತಿನ ಕೊನೆಯ ಕುಡಿ- ತಿಮ್ಮಣ್ಣ ರಾಮವಾಡಗಿ

Main Article Content

ಎಂ.ಡಿ.ಚಿತ್ತರಗಿ

Abstract

ಪ್ರಸ್ತುತ ಲೇಖನವು ಕೋಟೆನಾಡಿನ ಅಪರೂಪದ ಜನಪದ ಕಲಾವಿದ ತಿಮ್ಮಣ್ಣ ರಾಮವಾಡಗಿ ಅವರ ಬದುಕು ಮತ್ತು ಗರ್ದಿಗಮ್ಮತ್ತು (ವಡ್ಡರ ನಾಗವ್ವ/ಬಾಂಬೆ ಡಬ್ಬಾ ಟಾಕೀಸ್) ಎಂಬ ವಿಶಿಷ್ಟ ಕಲಾ ಪ್ರಕಾರದ ಬಗ್ಗೆ ಪಕ್ಷಿನೋಟ ಬೀರುತ್ತದೆ. ಇಳಕಲ್ ಮೂಲದ ಅನಕ್ಷರಸ್ಥರಾದ ಎಂಬತ್ತೈದರ ಇಳಿವಯಸ್ಸಿನ ತಿಮ್ಮಣ್ಣನವರು ಐದಾರು ದಶಕಗಳಿಂದ ಗರ್ದಿಗಮ್ಮತ್ತನ್ನೇ ತಮ್ಮ ಬದುಕಾಗಿಸಿಕೊಂಡು ಹಳ್ಳಿ-ಪಟ್ಟಣಗಳಲ್ಲಿ ಅದನ್ನು ಜೀವಂತವಾಗಿಟ್ಟಿದ್ದಾರೆ. ಈ ಸಂಚಾರಿ ಮಾಯಾಪೆಟ್ಟಿಗೆಯು ಐತಿಹಾಸಿಕ, ಧಾರ್ಮಿಕ ಮತ್ತು ಸಾಮಾಜಿಕ ಸಂಗತಿಗಳನ್ನು ಹಾಡು-ತಾಳಗಳೊಂದಿಗೆ ಪ್ರದರ್ಶಿಸುವ ಮೂಲಕ ಮನರಂಜನೆ ಹಾಗೂ ಶಿಕ್ಷಣ ನೀಡುತ್ತಾ ಬಂದಿದೆ. ಆಧುನಿಕ ಯುಗದ ಸವಾಲುಗಳ ನಡುವೆಯೂ ಕಲೆ ಮತ್ತು ಜೀವನೋಪಾಯಕ್ಕಾಗಿ ಹೆಣಗುತ್ತಿರುವ, ಈ ಪರಂಪರೆಯ ಕೊನೆಯ ಕೊಂಡಿಯಂತಿರುವ ತಿಮ್ಮಣ್ಣನವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲದ ಅಗತ್ಯವನ್ನು ಲೇಖನ ಒತ್ತಿ ಹೇಳುತ್ತದೆ.

Article Details

Section

Research Articles

Author Biography

ಎಂ.ಡಿ.ಚಿತ್ತರಗಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮುದಗಲ್, ರಾಯಚೂರು.

How to Cite

ಎಂ.ಡಿ.ಚಿತ್ತರಗಿ. (2025). ಗರ್ದಿ-ಗಮ್ಮತ್ತಿನ ಕೊನೆಯ ಕುಡಿ- ತಿಮ್ಮಣ್ಣ ರಾಮವಾಡಗಿ. ಅಕ್ಷರಸೂರ್ಯ (AKSHARASURYA), 10(01), 09 to 19. https://aksharasurya.com/index.php/latest/article/view/1718

References

ತಿಮ್ಮಣ್ಣ ರಾಮವಾಡಗಿಯವರೊಂದಿಗಿನ ಮಾತುಕತೆ

ಗರ್ದಿಗಮ್ಮತ್ತು ಕಲಾ ವೀಕ್ಷಣಾ ಅನುಭವಗಳು