ಸಾಮರಸ್ಯದ ಸಂಕೇತ ಎರಡನೆಯ ಇಬ್ರಾಹಿಮ ಆದಿಲ್‌ಶಾಹಿ ವಿರಚಿತ: `ಕಿತಾಬ-ಇ-ನವರಸʼ

Main Article Content

ಬಸೀರಾಬಾನು ನಿಡಗುಂದಿ

Abstract

ಭಾರತದ ಮಧ್ಯಯುಗದ ಇತಿಹಾಸದಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ಮರಾಠಾ ಚಕ್ರವರ್ತಿ ಶಿವಾಜಿ ಅವರಂತೆ ಧಾರ್ಮಿಕ ಸಹಿಷ್ಣುತೆ ಮೆರೆದ ವಿಜಯಪುರದ ಆದಿಲ್‌ಶಾಹಿ ಅರಸ ಎರಡನೆಯ ಇಬ್ರಾಹಿಮ ಆದಿಲ್‌ಶಾಹಿಯ ಬಗ್ಗೆ ಈ ಲೇಖನವು ವಿಶ್ಲೇಷಿಸುತ್ತದೆ. ಇಸ್ಲಾಮ್ ಧರ್ಮದ ರಾಜನಾಗಿದ್ದರೂ, ಹಿಂದೂ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆತನಿಗೆ ಅಪಾರ ಗೌರವವಿತ್ತು. ಆತನು ಕವಿ, ಸಂಗೀತಗಾರ ಮತ್ತು ಚಿತ್ರಕಲಾವಿದನಾಗಿದ್ದು, ತನ್ನ ಆಸ್ಥಾನದಲ್ಲಿ ಎಲ್ಲ ಧರ್ಮದವರಿಗೂ ಸ್ಥಾನ ನೀಡಿದ್ದನು. ಎರಡನೆಯ ಇಬ್ರಾಹಿಮನು ದಖಣಿ ಉರ್ದುವಿನಲ್ಲಿ ರಚಿಸಿದ ʼಕಿತಾಬ-ಇ-ನವರಸʼ ಎಂಬ ಸಂಗೀತ ಗ್ರಂಥದಲ್ಲಿ ಅಲ್ಲಾ ಮತ್ತು ಪೈಗಂಬರರ ಜೊತೆಗೆ ಶಿವ, ಗಣಪತಿ ಮತ್ತು ಸರಸ್ವತಿಯರನ್ನೂ ಸ್ತುತಿಸಿದ್ದಾನೆ. ಇದು ಇಬ್ರಾಹಿಮನ ಧಾರ್ಮಿಕ ಸಾಮರಸ್ಯ ಮತ್ತು ಸಂಗೀತ ಪ್ರೇಮದ ಸಂಕೇತವಾಗಿದೆ. ಇವನಿಗೆ ʼಜಗದ್ಗುರುʼ ಎಂಬ ಬಿರುದು ಇತ್ತು.

Article Details

Section

Research Articles

Author Biography

ಬಸೀರಾಬಾನು ನಿಡಗುಂದಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ವಿಜಯಪುರ.

How to Cite

ಬಸೀರಾಬಾನು ನಿಡಗುಂದಿ. (2025). ಸಾಮರಸ್ಯದ ಸಂಕೇತ ಎರಡನೆಯ ಇಬ್ರಾಹಿಮ ಆದಿಲ್‌ಶಾಹಿ ವಿರಚಿತ: `ಕಿತಾಬ-ಇ-ನವರಸʼ. ಅಕ್ಷರಸೂರ್ಯ (AKSHARASURYA), 10(01), 64 to 70. https://aksharasurya.com/index.php/latest/article/view/1725

References

ಕೃಷ್ಣ ಕೊಲ್ಹಾರ ಕುಲಕರ್ಣಿ, (2001), ವಿಸ್ಮಯ! ಇದು ವಿಜಾಪುರ, ವಿಜಯಪುರ ಜಿಲ್ಲಾ ಆಡಳಿತ, ವಿಜಯಪುರ.

ಕೃಷ್ಣ ಕೊಲ್ಹಾರ ಕುಲಕರ್ಣಿ, (2002), ಬಿಜಾಪುರ ಆದಿಲಶಾಹಿ, ಸಿಕ್ಯಾಬ, ಆದಿಲಶಾಹಿ ಅಧ್ಯಯನ ಸಂಸ್ಥೆ, ಬಿಜಾಪುರ.

ಕೃಷ್ಣ ಕೋಲಾರ ಕುಲಕರ್ಣಿ(ಅನುವಾದಕರು), (2016), ಕರ್ನಾಟಕದಲ್ಲಿಯ ಅರೇಬಿಕ್, `ಕಿತಾಬ-ಇ-ನವರಸʼ ಆದಿಲ್‌ಶಾಹಿ ಸಾಹಿತ್ಯ ಸಂಪುಟ-13, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ಬಿ.ಎಲ್.ಡಿ.ಇ. ಸಂಸ್ಥೆ, ವಿಜಯಪುರ.

ಚಂದ್ರಕಾಂತ ಪೋಕಳೆ (ಅನುವಾದಕರು), (2016), ಫರ್ಮಾನುಗಳು/ಸನದುಗಳು/ಕೈಫಿಯತ್ತುಗಳು, ಆದಿಲ್‌ಶಾಹಿ ಸಾಹಿತ್ಯ ಸಂಪುಟ-15, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ಬಿ.ಎಲ್.ಡಿ.ಇ. ಸಂಸ್ಥೆ, ವಿಜಯಪುರ.

Most read articles by the same author(s)