ರಾಬಿಯಾ ಅಲ್‌-ಅದವಿಯ: ಜಗತ್ತಿನ ಮೊದಲ ಸೂಫಿ ಮಹಿಳೆ

Main Article Content

ಬಸೀರಾಬಾನು ನಿಡಗುಂದಿ

Abstract

ಪರಮಾತ್ಮನೊಡನೆ ಸ್ನೇಹಾತ್ಮಕ ಸಂಬಂಧ ಬೆಳೆಸಿ, ಉಪಾಸನೆ ಮಾಡುವ ಮುಸ್ಲಿಂ ಅನುಭಾವಿ ಸಂತರನ್ನು ʻಸೂಫಿʼ ಎಂದು ಕರೆಯುವರು. ಈ ಪಂಥಕ್ಕೆ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಇದು ಮೂಲತಃ ಇಂದಿನ ಟರ್ಕಿ, ಇರಾನ್‌ ಮತ್ತು ಇರಾಕ್‌ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿತ್ತು. ಈ ಪಂಥದ ಮೂಲತತ್ವ “ಪ್ರೇಮ”. ದೇವರು ಒಬ್ಬನೇ, ಪ್ರೇಮದ ಮುಖಾಂತರ ಆತನೊಡನೆ ವಿಲೀನವಾಗುವುದೇ ಏಕಮಾತ್ರ ಗುರಿಯಾಗಿತ್ತು. ಆದರೆ ʻಸೂಫಿʼ ಎಂಬ ಶಬ್ದ ಇಸ್ಲಾಂ ಧರ್ಮಗ್ರಂಥ ʻಖುರಾನ್‌ʼನಲ್ಲಿ ಕಾಣಸಿಗುವುದಿಲ್ಲ. ಆದರೆ ʻಖುರಾನ್ʼನಲ್ಲಿ ಬರುವ ʻವಲಿʼ ಎಂಬ ಪದ ʻಸೂಫಿʼಯನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ʻಸೂಫಿʼ ಎಂಬ ಪದದ ವ್ಯೂತ್ಪತ್ತಿಯ ಬಗೆಗೆ ವಿದ್ವಾಂಸರಲ್ಲಿ ಬೇರೆ-ಬೇರೆ ಅಭಿಪ್ರಾಯಗಳಿವೆ. ಜಗತ್ತಿನಾದ್ಯಂತ ಸೂಫಿ ತತ್ವವನ್ನು ಸಾರುತ್ತಾ ನಡೆದ ಸೂಫಿ ಪರಂಪರೆ ಕೇವಲ ಪುರುಷ ಸೂಫಿಗಳಿಗೆ ಮಾತ್ರ ತನ್ನ ಮಡಿಲಲ್ಲಿಡದೇ, ಮಹಿಳಾ ಸೂಫಿ ಸಂತರಿಗೂ ಅವಕಾಶ ಮಾಡಿಕೊಟ್ಟಿತು. ಆದರೆ ಈ ಅವಕಾಶ ಸುಲಭವಾಗಿ ದೊರೆಯುವಂಥದ್ದಾಗಿರಲಿಲ್ಲ; ಹೋರಾಟದ ಮೂಲಕವೇ ಪಡೆಯಲಾಗುತ್ತಿತ್ತು ಎನ್ನಬಹುದು. ಇಸ್ಲಾಂ ಧರ್ಮದಲ್ಲಿ ಮಹಿಳೆಯರ ಸ್ಥಾನಮಾನಗಳ ಕುರಿತು ಚರ್ಚೆಗಳು ಇಂದಿಗೂ ನಡೆಯುತ್ತವೆ.

Article Details

Section

Research Articles

Author Biography

ಬಸೀರಾಬಾನು ನಿಡಗುಂದಿ

ಕನ್ನಡ ಸಹಾಯಕ ಪ್ರಾಧ್ಯಾಪಕಿ, ವಿಜಯಪುರ.

How to Cite

ಬಸೀರಾಬಾನು ನಿಡಗುಂದಿ. (2026). ರಾಬಿಯಾ ಅಲ್‌-ಅದವಿಯ: ಜಗತ್ತಿನ ಮೊದಲ ಸೂಫಿ ಮಹಿಳೆ. ಅಕ್ಷರಸೂರ್ಯ (AKSHARASURYA), 12(04), 89 to 103. https://aksharasurya.com/index.php/latest/article/view/386

References

ಮುರ್ತುಜಾಬೇಗಂ ಕೊಡಗಲಿ, (2022), ರಾಬಿಯಾ-ಬಿರುಗಾಳಿಯ ಹಾಡು, ವಿಜಯಪುರ: ಬೆರಗು ಪ್ರಕಾಶನ.

ಗುರುರಾಜ ಕರಜಗಿ, (2016), ಸೂಫಿ: ವಿಶ್ವ ಪ್ರೇಮದ ಮೂಲಕ ಭಗವತ್‌ ಸಾಕ್ಷಾತ್ಕಾರ, ಬೆಂಗಳೂರು: ವ್ಯಾಸ ಪ್ರಕಾಶನ.

ಫಕೀರ್‌ ಮುಹಮ್ಮದ ಕಟ್ಪಾಡಿ, (2011), ಸೂಫಿ ಮಹಿಳೆಯರು, ಬೆಂಗಳೂರು: ನವಕರ್ನಾಟಕ ಪ್ರಕಾಶನ.

Most read articles by the same author(s)