ಹಲಸಂಗಿ ಗೆಳೆಯರ ಬಳಗದ ಮದುವಣಿಗ (ಧೂಲಾ)
Main Article Content
Abstract
ಹೊಸಗನ್ನಡ ಸಾಹಿತ್ಯದ ಮೊದಲ ಘಟ್ಟ ನವೋದಯ ಸಾಹಿತ್ಯ. ಈ ಸಾಹಿತ್ಯ ಘಟ್ಟದಲ್ಲಿ ಒಟ್ಟು ನಾಲ್ಕು ಗೆಳೆಯರ ಬಳಗಗಳನ್ನು ಕಾಣುತ್ತೇವೆ. ಬಿ. ಎಂ. ಶ್ರೀ ಗೆಳೆಯರ ಬಳಗ, ಬೇಂದ್ರೆ ಗೆಳೆಯರ ಬಳಗ, ಮಂಗಳೂರು ಗೆಳೆಯರ ಬಳಗ ಮತ್ತು ಹಲಸಂಗಿ ಗೆಳೆಯರ ಬಳಗ. ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಹಲಸಂಗಿ ಎಂಬ ಗ್ರಾಮದಲ್ಲಿ ಹುಟ್ಟಿದ ‘ಹಲಸಂಗಿ ಗೆಳೆಯರ ಬಳಗ’ದ ಮೇಲೆ ಗಾಢ ಪರಿಣಾಮ ಬೀರಿದ್ದು ಜನಪದ ಸಾಹಿತ್ಯ. 1922 ರಲ್ಲಿ ಸ್ಥಾಪಿತವಾದ ಗೆಳೆಯರ ಬಳಗ, 1943 ರ ವರೆಗೆ ಈ ಗೆಳೆಯರು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿದ್ದರು. 1943ರ ನಂತರ ಈ ಗೆಳೆಯರ ಬಳಗ ‘ಶ್ರೀ ಅರವಿಂದ ಮಂಡಳ’ವಾಗಿ ಪರಿವರ್ತನೆಗೊಂಡಿತು. ಹಲಸಂಗಿ ಗೆಳೆಯರ ಗುಂಪಿನ ಪ್ರಮುಖ ಸದಸ್ಯರೆಂದರೆ- ಮಧುರಚೆನ್ನ(ಚೆನ್ನಮಲ್ಲಪ್ಪ), ಸಿಂಪಿ ಲಿಂಗಣ್ಣ, ಪಿ. ಧೂಲಾಸಾಹೇಬ(ಪಟೇಲ್ ಕಾಸೀಮಸಾಬ), ಕಾಪಸೆ ರೇವಪ್ಪ, ಓಲೇಕಾರ ಮಾದಣ್ಣ, ಚೆನ್ನಪ್ಪ ಸರಸಂಬಿ, ಆದಮ ಮಸಳಿ, ಶಿವಲಿಂಗಪ್ಪ ಸರಸಂಬಿ, ಗುರುಬಸಪ್ಪ ಗಲಗಲಿ ಮತ್ತು ರಾಘವೇಂದ್ರ ಸುರಪುರ(ರಾಘಣ್ಣ). ಈ ಗುಂಪಿನ ಎಲ್ಲ ಸದಸ್ಯರು ಕರ್ನಾಟಕದ ಬೇರೆ ಬೇರೆ ಭಾಗದಲ್ಲಿ ಇರತಕ್ಕಂತಹ ಸಾಹಿತಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು. ವರಕವಿ ಬೇಂದ್ರೆ, ಡಾ. ಶಿವರಾಮ ಕಾರಂತ, ರಂ. ಶ್ರೀ ಮುಗಳಿ, ವಿ. ಕೃ. ಗೋಕಾಕ ಮತ್ತು ಸ. ಸ. ಮಾಳವಾಡ ಇವರೆಲ್ಲ ಹಲಸಂಗಿಗೆ ಬಂದು ಹಲಸಂಗಿ ಗೆಳೆಯರ ಬಳಗದೊಂದಿಗೆ ನವೀನ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವೀರಪಥಿಕ, (2015), ಪಿ. ಧೂಲಾ, ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನ.
ಮಧುರಚೆನ್ನ, (2019), ಡಾ. ಜಿ.ಎಸ್. ಕಾಪಸೆ, ವಿಜಯಪುರ: ಹಲಸಂಗಿ ಗೆಳೆಯರ ಪ್ರತಿಷ್ಠಾನ.
ಸಿಂಪಿ ಲಿಂಗಣ್ಣ, (2013), ಶ್ರೀ ಮಧುರಚೆನ್ನರ ಸ್ಮೃತಿಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಧೂಲಾ ಸಾಹೇಬ ಪಿ., (2008), ಕಾ. ಹು. ಬಿಜಾಪುರ, ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು.
ಶಿವರಾಮ ಕಾರ0ತ, (2011), ಸ್ಮೃತಿ ಪಟಲದಿಂದ: ಭಾಗ-3, ಬೆಂಗಳೂರು: ಐಬಿಎಚ್ ಪ್ರಕಾಶನ.
ಗುರುಲಿಂಗ ಕಾಪಸೆ, ಹಲಸಂಗಿ ಗೆಳೆಯರು-ಕಿರು ಪರಿಚಯ, ವಿಜಯಪುರ: ಹಲಸಂಗಿ ಪ್ರತಿಷ್ಠಾನ ಮತ್ತು ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.