ಮಧುರಚೆನ್ನರ ‘ನನ್ನ ನಲ್ಲʼ

Main Article Content

ಬಸೀರಾಬಾನು ನಿಡಗುಂದಿ

Abstract

ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ಹಲಸಂಗಿ ಎಂಬ ಗ್ರಾಮದಲ್ಲಿ ಹುಟ್ಟಿದ ʻಹಲಸಂಗಿ ಗೆಳೆಯರ ಬಳಗʼದ ಮೇಲೆ ಗಾಢ ಪರಿಣಾಮ ಬೀರಿದ್ದು ಜನಪದ ಸಾಹಿತ್ಯ. ೧೯೨೨ ರಲ್ಲಿ ಸ್ಥಾಪಿತವಾದ ಗೆಳೆಯರ ಬಳಗ, ೧೯೪೩ ರ ವರೆಗೆ ಈ ಗೆಳೆಯರು ಸಾಹಿತ್ಯಿಕ ಚಟುವಟಿಕೆಯಲ್ಲಿ ತೊಡಗಿದ್ದರು. ೧೯೪೩ರ ನಂತರ ʻಹಲಸಂಗಿ ಗೆಳೆಯರ ಬಳಗʼ, ʻಶ್ರೀ ಅರವಿಂದ ಮಂಡಳʼವಾಗಿ ಪರಿವರ್ತನೆಗೊಂಡಿತು. ಹಲಸಂಗಿ ಗೆಳೆಯರ ಗುಂಪಿನ ಪ್ರಮುಖ ಸದಸ್ಯರೆಂದರೆ- ಮಧುರಚೆನ್ನ(ಚೆನ್ನಮಲ್ಲಪ್ಪ), ಸಿಂಪಿ ಲಿಂಗಣ್ಣ, ಪಿ. ಧೂಲಾಸಾಹೇಬ(ಪಟೇಲ್‌ ಕಾಸೀಮಸಾಬ), ಕಾಪಸೆ ರೇವಪ್ಪ, ಓಲೇಕಾರ ಮಾದಣ್ಣ, ಚೆನ್ನಪ್ಪ ಸರಸಂಬಿ, ಆದಮ ಮಸಳಿ, ಶಿವಲಿಂಗಪ್ಪ ಸರಸಂಬಿ, ಗುರುಬಸಪ್ಪ ಗಲಗಲಿ ಮತ್ತು ರಾಘವೇಂದ್ರ ಸುರಪುರ(ರಾಘಣ್ಣ). ಈ ಗುಂಪಿನ ಎಲ್ಲ ಸದಸ್ಯರು ಕರ್ನಾಟಕದ ಬೇರೆ ಬೇರೆ ಭಾಗದಲ್ಲಿ ಇರತಕ್ಕಂತಹ ಸಾಹಿತಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು. ವರಕವಿ ಬೇಂದ್ರೆ, ಡಾ. ಶಿವರಾಮ ಕಾರಂತ, ರಂ. ಶ್ರೀ ಮುಗಳಿ, ವಿ. ಕೃ. ಗೋಕಾಕ ಮತ್ತು ಸ. ಸ. ಮಾಳವಾಡ ಇವರೆಲ್ಲ ಹಲಸಂಗಿಗೆ ಬಂದು ಹಲಸಂಗಿ ಗೆಳೆಯರ ಬಳಗದೊಂದಿಗೆ ನವೀನ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದರು.

Article Details

Section

Research Articles

Author Biography

ಬಸೀರಾಬಾನು ನಿಡಗುಂದಿ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವನ ಬಾಗೇವಾಡಿ.

How to Cite

ಬಸೀರಾಬಾನು ನಿಡಗುಂದಿ. (2025). ಮಧುರಚೆನ್ನರ ‘ನನ್ನ ನಲ್ಲʼ. ಅಕ್ಷರಸೂರ್ಯ (AKSHARASURYA), 7(04), 37 to 47. https://aksharasurya.com/index.php/latest/article/view/1298

References

ಗುರುಲಿಂಗ ಕಾಪಸೆ, (೧೯೭೬), ಮಧುರಚೆನ್ನ, ಹಲಸಂಗಿ ಗೆಳೆಯರ ಪ್ರತಿಷ್ಠಾನ, ವಿಜಯಪುರ.

ಮಧುರಚೆನ್ನ, (1933), ನನ್ನ ನಲ್ಲ, ಹಲಸಂಗಿ ಗೆಳೆಯರ ಪ್ರತಿಷ್ಠಾನ, ವಿಜಯಪುರ.

Most read articles by the same author(s)