ನೆಲಮಂಗಲ ತಾಲ್ಲೂಕಿನ ಪ್ರಾಗೈತಿಹಾಸ
Main Article Content
Abstract
ಪ್ರಸ್ತುತ ಲೇಖನವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಪ್ರಾಗೈತಿಹಾಸಿಕ ನೆಲೆಗಳ ಸಮಗ್ರ ಅಧ್ಯಯನವನ್ನು ಪ್ರಸ್ತುತಪಡಿಸುತ್ತದೆ. ಮಾನವನ ನೆಲೆಸುವಿಕೆಯ ಇತಿಹಾಸವನ್ನು ಪ್ರಾಚೀನ ಶಿಲಾಯುಗದಿಂದ ಹಿಡಿದು ಬೃಹತ್ ಶಿಲಾಯುಗದವರೆಗೆ (ಕಬ್ಬಿಣ ಯುಗ) ವಿಂಗಡಿಸಲಾಗಿದೆ. ನೆಲಮಂಗಲವು ಬೃಹತ್ ಶಿಲಾಯುಗದ ಪ್ರಮುಖ ಜನವಸತಿ ಕೇಂದ್ರವಾಗಿತ್ತು ಎಂಬುದಕ್ಕೆ ಹಲವಾರು ಪುರಾತತ್ವ ಸಾಕ್ಷಿಗಳು ದೊರಕಿವೆ. ಮೈಲನಹಳ್ಳಿಯ ಬೂದಿಗುಡ್ಡಗಳು (ನವ ಶಿಲಾಯುಗ), ಬಂಡೆಚಿಕ್ಕನಹಳ್ಳಿ ಮತ್ತು ಶ್ರೀನಿವಾಸಪುರದ ವೃತ್ತಾಕಾರದ ಸಮಾಧಿಗಳು, ಮಾದೀಪುರದ ನಿಲಸುಗಲ್ಲುಗಳು, ಹಾಗೂ ಬಿಲ್ಲನಕೋಟೆ, ಮಹದೇವಪುರ, ಮೈಲನಹಳ್ಳಿಗಳಲ್ಲಿನ ಹಾದಿ ಕೋಣೆ ಗೋರಿಗಳು ಮತ್ತು ರಂಧ್ರ ಕೋಣೆ ಗೋರಿಗಳು ಇಲ್ಲಿನ ಪ್ರಮುಖ ನೆಲೆಗಳಾಗಿವೆ. ಈ ಅವಶೇಷಗಳು ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿ ಮೃತರ ಸಂಸ್ಕಾರ ಪದ್ಧತಿ, ಸಾಮಾಜಿಕ ರಚನೆ ಮತ್ತು ಕಬ್ಬಿಣದ ಬಳಕೆ ಹೊಂದಿದ್ದ ಪ್ರಗತಿಪರ ಜೀವನವಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗೋಪಾಲ್ ರಾವ್ ಹೆಚ್.ಎಸ್. (1997), ನೆಲದ ಸಿರಿ ನೆನಪಿನ ಸಂಚಿಕೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು, ನೆಲಮಂಗಲ.
ಗೋಪಾಲ್ ಬಾ.ರಾ., (2024), ಕರ್ನಾಟಕ ಇತಿಹಾಸ, ಅಭಿನವ ಪ್ರಕಾಶನ, ಬೆಂಗಳೂರು.
ಪ್ರದೀಪ್ ಬೆಳಗಲ್ (ಅನು), (2014), ಪೂರ್ವೇತಿಹಾಸ, ಚಿಂತನ ಪುಸ್ತಕ, ಬೆಂಗಳೂರು.
ಶ್ರೀಕಂಠಶಾಸ್ತ್ರಿ ಎಸ್. (1975), ಪುರಾತತ್ವ ಶೋಧನೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
ಉತ್ಥಾನ, (ಡಿಸೆಂಬರ್ 2024), ಪ್ರೋ|| ಎಲ್.ಎಸ್. ಶೇಷಗಿರಿರಾವ್ ಜನ್ಮಶತಾಬ್ದ ಸ್ಮರಣೆ, ಬೆಂಗಳೂರು.