Published: 2025-09-05

Table of Contents

Table of Contents

I to V

ಡಿ.ವಿ.ಜಿ. ಅವರ ಚಿಂತನಾ ಸಾಹಿತ್ಯ: ಸಂಸ್ಕೃತಿ

ಬಸವರಾಜ ಜಿ.

01 to 09

ಡಿ.ವಿ.ಜಿ. ಅವರು ಸಂಸ್ಕೃತಿ ಬಗೆಗೆ ಮೌಲಿಕವಾಗಿ ಚರ್ಚಿಸಿರುವುದು ಕಂಡುಬರುತ್ತದೆ. ಸಂಸ್ಕೃತಿಯು ಮಾನವನ ಆಚಾರ-ವಿಚಾರಗಳ ಮೊತ್ತ ಎಂಬುದು ಸಾಮಾನ್ಯವಾದ ಅರ್ಥವಾಗಿದೆ. ಆದರೆ ಸಂಸ್ಕೃತಿ ಎಂದರೆ ಮನುಷ್ಯರ ಅನ್ಯೋನ್ಯ ಸಂಬಂಧಗಳಲ್ಲಿ ನಯವಿನಯಗಳ ಸೊಬಗು. ಸ್ವಗುಣ ಪರಗುಣಗಳ ಸಂಮಿಶ್ರಿತ ಕಾಂತಿ. ‘ಈ ಸಂಸ್ಕೃತಿಯ ಮೂಲಸೆಲೆ ನಮ್ಮ ಅಂತರಂಗದ ಜೀವನಾಡಿ. ಅದು ಅಂತರಂಗದ ಸಂಪತ್ತು. ಅದರ ಸ್ಥಳ, ಮನಸ್ಸು ಮತ್ತು ಹೃದಯವಾಗಿದೆ’ ಎಂಬುದು ಡಿ.ವಿ.ಜಿ.ಯವರ ತಾತ್ವಿಕ ನೆಲೆಯಿಂದ ಬಂದುದಾಗಿದೆ. 

Read More »

ರಾಷ್ಟ್ರ ನಿರ್ಮಾಣದಲ್ಲಿ ತ್ರಿಭಾಷಾ ಸೂತ್ರದ ಪಾತ್ರ

ಚಂದ್ರಶೇಖರ ಎನ್.ಪಿ.

10 to 21

ಡಾ. ರಾಧಾಕೃಷ್ಣನ್ ಸಮಿತಿಯ 1948ರ ಶಿಫಾರಸು: ಹೈಯರ್ ಸೆಕೆಂಡರಿ ಮತ್ತು ವಿಶ್ವವಿದ್ಯಾನಿಲಯ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆ, ಫೆಡರಲ್ ಭಾಷೆ ಮತ್ತು ಇಂಗ್ಲಿಷ್ ಒಳಗೊಂಡ ತ್ರಿಭಾಷೆಗಳಲ್ಲಿ ಪರಿಣತರನ್ನಾಗಿ ಮಾಡಬೇಕು. ಸ್ವಾತಂತ್ರ್ಯಾನಂತರ 1952ರಲ್ಲಿ ಮೊದಲಿಯಾರ್ ಶಿಕ್ಷಣ ಆಯೋಗವು ಪ್ರಥಮ ಬಾರಿಗೆ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತ್ತು. ಅದನ್ನು ದಕ್ಷಿಣದ ರಾಜ್ಯಗಳು ವಿರೋಧಿಸಿದ್ದವು. ಭಾಷಾ ನೀತಿ ಕುರಿತು ದೇಶಾದ್ಯಂತ ಅಧಿಕೃತ ಭಾಷೆಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದವು. ಹಿಂದಿ ಭಾಷೆಯ ಪರವಾಗಿದ್ದ ಸದಸ್ಯರು ಡಾ. ರಾಮ್ ಮನೋಹರ್ ಅವರ ಘೋಷಣೆಯೊಂದಿಗೆ ಹಿಂದಿಯನ್ನು ಅಧಿಕೃತ ಭಾಷೆ ಎಂದು ಪ್ರಚಾರ ಮಾಡುತ್ತಿದ್ದರು. ಲೋಹಿಯಾ ಜಿ “ಇಂಗ್ಲಿಷ್ ಅನ್ನು ಬಹಿಷ್ಕರಿಸಿ (ಅಂಗ್ರೇಜಿ ಹಟಾವೋ)” ಎಂದು ಹೇಳಿದರೆ, ಇಂಗ್ಲಿಷ್ ಪರವಾಗಿದ್ದ ಗುಂಪು “ಇಂಗ್ಲಿಷ್ ಫಾರ್ ಎವರ್, ಹಿಂದಿ ನೆವರ್” ಎಂಬ ಘೋಷಣೆಯೊಂದಿಗೆ ಆಂದೋಲನ ನಡೆಸಿದವು. ಸಂಸತ್ತಿನ ಒಳಗೂ ಇದೇ ಪರಿಸ್ಥಿತಿ ಇತ್ತು.
5ನೇ ಸೆಪ್ಟೆಂಬರ್-1959 ರಂದು ಲೋಕಸಭೆಯಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭರವಸೆ: ಇಂತಹ ಪರಿಸ್ಥಿತಿಯಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂಸತ್ತಿನಲ್ಲಿ ಹಿಂದಿಯೇತರ ರಾಜ್ಯಕ್ಕೆ ನೀಡಿದ ಭರವಸೆಯನ್ನು ಗಮನಿಸುವುದು ಯೋಗ್ಯವಾಗಿದೆ: “ಇಂಗ್ಲಿಷ್ ಅಧಿಕೃತ ಭಾಷೆ ಹಿಂದಿಗೆ ಸಹವರ್ತಿ ಭಾಷೆಯಾಗಿ ಮುಂದುವರಿಯುತ್ತದೆ. ಎಷ್ಟು ಕಾಲ ಇಂಗ್ಲಿಷ್ ಸಹವರ್ತಿ ಭಾಷೆಯಾಗಿ ಮುಂದುವರಿಯಬೇಕು ಎಂಬ ಪ್ರಶ್ನೆಯನ್ನು ಹಿಂದಿಯೇತರ ಜನರು ಮಾತ್ರ ನಿರ್ಧರಿಸುತ್ತಾರೆ... ಹಿಂದಿಯೇತರ ಜನರ ಮೇಲೆ ಯಾವುದೇ ನಿರ್ಬಂಧ ಹೇರಲಾಗುವುದಿಲ್ಲ... ನಾನು ಖಂಡಿತವಾಗಿಯೂ ಸ್ವಾಗತಿಸುತ್ತೇನೆ... ಹಿಂದಿಯನ್ನು ಬೇಡದ ಯಾವುದೇ ರಾಜ್ಯದ ಮೇಲೆ ಕಡ್ಡಾಯವಾಗಿ ಹೇರಲು ನಾನು ಬಯಸುವುದಿಲ್ಲ.” ಏತನ್ಮಧ್ಯೆ, ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯು ಭಾರತೀಯ ಶಿಕ್ಷಣದಲ್ಲಿ “ತ್ರಿಭಾಷಾ ಸೂತ್ರ”ವನ್ನು ಪ್ರಸ್ತಾಪಿಸಿತು. 1961ರ ಆಗಸ್ಟ್ 10, 11 ಮತ್ತು 12ರಂದು ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮಂತ್ರಿಗಳ ಸಭೆಯಲ್ಲಿ ಇದನ್ನು ಅನುಮೋದಿಸಲಾಯಿತು.

Read More »

ಗಂಡಿಲ ಓಬವ್ವ ನಾಗತಿ: ಸಾಹಿತ್ಯ ಮತ್ತು ಚರಿತ್ರೆಯ ಹಿನ್ನೆಲೆಯಲ್ಲಿ ಒಂದು ಅಧ್ಯಯನ

ದೇವೇಂದ್ರಪ್ಪ ಕೆ.

22 to 31

ಭಾರತದ ಚರಿತ್ರೆಯನ್ನು ಅಧ್ಯಯನದ ದೃಷ್ಟಿಯಲ್ಲಿ ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಿ ನೋಡಬಹುದು. ಒಂದು ಉತ್ತರ ಭಾರತದ ಚರಿತ್ರೆ, ಮತ್ತೊಂದು ದಕ್ಷಿಣ ಭಾರತದ ಚರಿತ್ರೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಅನೇಕ ಅರಸುಮನೆತನಗಳು, ಸಾಮಂತರಾಜರುಗಳು, ಸಣ್ಣಪುಟ್ಟ ಪಾಳೆಯಗಾರರು ಆಳ್ವಿಕೆ ಮಾಡಿರುವುದು ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ಅರಸುಮನೆತನಗಳಲ್ಲಿ ವಿಜಯನಗರ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯವು 1565 ರಲ್ಲಿ ನಡೆದ ತಾಳಿಕೋಟೆ ಯುದ್ಧದಲ್ಲಿ ಸೋಲನ್ನು ಕಂಡು ಪತನವಾಗುತ್ತದೆ. ಆನಂತರ ಅನೇಕ ಸಣ್ಣ ರಾಜ್ಯಗಳು ಉದಯಿಸಿದವು. ಅವುಗಳಲ್ಲಿ ಮೈಸೂರು ಸಂಸ್ಥಾನ, ಕೆಳದಿ ನಾಯಕರು, ಚಿತ್ರದುರ್ಗದ ಪಾಳೆಯಗಾರರು ಹಾಗೂ ಮುಂತಾದವರು ಕಂಡುಬರುತ್ತಾರೆ. ಹೀಗೆ ಕನ್ನಡ ನಾಡಿನಲ್ಲಿ ಅನೇಕ ರಾಜಮನೆತನಗಳು, ಸಾಮಂತರಾಜರುಗಳು ಹಾಗೂ ಪಾಳೆಯಗಾರರು ಆಳ್ವಿಕೆ ನಡೆಸಿದ್ದಾರೆ. ಈ ಆಳ್ವಿಕೆಯಲ್ಲಿ ರಾಜರುಗಳ ಪಾರುಪತ್ಯ ಹೆಚ್ಚಿರುವುದನ್ನು ಗುರುತಿಸಬಹುದು. ರಾಜನೇ ಸರ್ವಾಧಿಕಾರಿಯಾಗಿರುತ್ತಾನೆ. ರಾಜರು ಗತಿಸಿದಾಗ ಮತ್ತೊಬ್ಬರು ಪಟ್ಟಕ್ಕೆ ಬರುವವರೆಗೂ, ಮತ್ತು ಪಟ್ಟಾಭಿಷಕ್ತನಾಗಿರುವ ವ್ಯಕ್ತಿ ಚಿಕ್ಕವನಾಗಿದ್ದರೆ, ಆ ಸಂದರ್ಭದಲ್ಲಿ ರಾಣಿಯರು ಅಧಿಕಾರ ವಹಿಸಿಕೊಂಡ ನಿದರ್ಶನಗಳು, ಆಳ್ವಿಕೆಗೈದ ವಿವರಗಳು ಚರಿತ್ರೆಯಿಂದ ಕಂಡುಬರುತ್ತವೆ.
ಕರ್ನಾಟಕದ ಚರಿತ್ರೆಯನ್ನು ಅಧ್ಯಯನ ಮಾಡಿದಾಗ ಅನೇಕ ವೀರ ಪುರುಷರು ಕಾಣಸಿಗುತ್ತಾರೆ. ಅಂತೆಯೇ ಕೆಲವು ವೀರ ಮಹಿಳೆಯರೂ ಕಂಡುಬರುತ್ತಾರೆ. ಅವರುಗಳಲ್ಲಿ ಪ್ರಮುಖರೆನಿಸಿದ ಪೋರ್ಚುಗೀಸರ ಸದ್ದಡಗಿಸಿದ ‘ರಾಣಿ ಅಬ್ಬಕ್ಕ’, ಬ್ರಿಟಿಷರನ್ನ ನಡುಗಿಸಿ ಅವರ ವಿರುದ್ಧ ಹೋರಾಡಿದ ‘ಕಿತ್ತೂರು ರಾಣಿ ಚೆನ್ನಮ್ಮ’, ಕ್ರಿ.ಶ 1664 ರಿಂದ 1679 ರವರೆಗೆ ಕೆಳದಿಯ ಸಂಸ್ಥಾನವನ್ನು ಆಳಿದ ‘ಕೆಳದಿ ಚೆನ್ನಮ್ಮ’, 17 ನೇ ಶತಮಾನದಲ್ಲಿ ಶಿವಾಜಿ ಸೈನ್ಯವನ್ನು ಹಿಮ್ಮೆಟ್ಟಿಸಿದ ‘ಬೆಳವಾಡಿ ಮಲ್ಲಮ್ಮ’, ಹಾಗೂ 18 ನೇ ಶತಮಾನದಲ್ಲಿನ ಚಿತ್ರದುರ್ಗದ ಓನಕೆ ಓಬವ್ವ, ಈ ವೀರ ಮಹಿಳೆಯರಂತೆಯೇ ಚಿತ್ರದುರ್ಗದ ಮತ್ತೊರ್ವ ವೀರ ನಾಗತಿಯಾದ ಓಬವ್ವನಾಗತಿಯನ್ನು ಕಾಣಬಹುದು. ಇವರ ಕಾಲದಲ್ಲಿನ ಆಡಳಿತ, ವೀರತ್ವ, ರಾಜಕೀಯದಲ್ಲಿನ ಚತುರತೆ ಅಥವಾ ನಿಪುಣತೆ ಮತ್ತು ಮುತ್ಸದ್ದಿತನ ಇವುಗಳಿಂದ ಓಬವ್ವನಾಗತಿಯು ವೀರ ಮಹಿಳೆಯಾಗಿ ಕಂಡುಬರುತ್ತಾಳೆ.

Read More »

ಲಿಂಗ ಸಮಾನತೆಗಾಗಿ ವಚನಕಾರರ ನಿಲುವು

ಕುಮಾರಯ್ಯ ಡಿ.ಎಸ್.

32 to 40

ಭಾರತೀಯ ಭಕ್ತಿ ಚಳುವಳಿಯಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ವಚನ ಚಳುವಳಿ ಪಡೆದಿದೆ ಎಂದು ಹೇಳಬಹುದು. ಕನ್ನಡ ನಾಡಿನ ಚರಿತ್ರೆಯಲ್ಲಿ 12ನೇ ಶತಮಾನ ಮಹತ್ವವನ್ನು ಪಡೆದಿದೆ. ಅಂದಿನ ಸಮಾಜದಲ್ಲಿದ್ದಂತಹ ಅನೇಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದಂತವರು ವಚನಕಾರರು. ತಮ್ಮ ವಿಚಾರಧಾರೆಗಳ ಮೂಲಕ ಸಮಾಜವನ್ನು ವೈಚಾರಿಕ ನೆಲೆಗೆ ಕೊಂಡೊಯ್ಯಲು ಪ್ರಯತ್ನಿಸಿದರು. ಬಸವಣ್ಣನ ನಾಯಕತ್ವದಲ್ಲಿ ಇಡೀ ಶರಣ ಶರಣೆಯರು ನವ ಸಮಾಜವನ್ನು ಕಟ್ಟಲು ಪ್ರಯತ್ನಿಸಿದಂತವರು. ಅಂದಿನ ಸಮಾಜದಲ್ಲಿ ಹೆಣ್ಣನ್ನು ಕೀಳು ಎಂಬ ಭಾವನೆ ಮನೆ ಮಾಡಿತ್ತು. ಇಂತಹ ಭಾವನೆಯನ್ನು ತೊಡೆದು ಹಾಕಲು ವಚನಕಾರರಂತೆ ವಚನಕಾರ್ತಿಯರು ಸಹ ತಮ್ಮ ವಚನಗಳ ಮೂಲಕ ಸಮಾಜವನ್ನು ಪ್ರಶ್ನಿಸಿದರು. ಪುರುಷ ಸಮಾಜದಲ್ಲಿ ಸ್ತ್ರೀಯು ಸಹ ಸರಿಸಮಾನವಾಗಿ ಬೆಳೆಯುವಂತೆ ಪ್ರೇರೇಪಿಸಿದರು. ಈ ವಚನ ಚಳುವಳಿ ಸ್ತ್ರೀಗೆ ಕೇವಲ ಗೃಹಿಣಿಯಾಗುವ ಅಥವಾ ಪತಿಗೆ ಆಧ್ಯಾತ್ಮಿಕ ಸಾಧನೆಯ ಸಹಾಯಕವಾಗುವ ಸ್ಥಾನವನ್ನು ಅಷ್ಟೇ ನೀಡದೆ ಅವಳ ಆತ್ಮವನ್ನು ಪೂರ್ಣ ಮೌಲ್ಯಮಾಪನ ಮಾಡಿದ ಮೊದಲ ಧಾರ್ಮಿಕ-ಸಾಮಾಜಿಕ ಚಳುವಳಿಯಾಗಿದೆ.

Read More »

ವೈಚಾರಿಕ ಸಂಸ್ಕೃತಿಯ ನಿರ್ಮಾಣ ಮತ್ತು ಎಚ್.ಜಿ. ಸಣ್ಣಗುಡ್ಡಯ್ಯ

ಪದ್ಮಜಾ ವೈ.ಎಂ.

41 to 47

ಸಣ್ಣಗುಡ್ಡಯ್ಯನವರು ಕನ್ನಡ ನಾಡಿನ ತುಮಕೂರು ಸ್ಥಳೀಯ ಭಾಗದ ಗ್ರಾಮೀಣ ಪ್ರತಿಭೆ. ಇವರು ಕವಿಯಾಗಿ, ಉತ್ತಮ ಅನುವಾದಕರಾಗಿ, ಶ್ರೇಷ್ಠ ಪ್ರಬಂಧಕಾರರಷ್ಟೇ ಅಲ್ಲದೆ, ಉತ್ತಮ ಅಧ್ಯಾಪಕರಾಗಿ ತಮ್ಮದೇ ಸೃಜನಶೀಲ ವ್ಯಕ್ತಿತ್ವವನ್ನು ಗಳಿಸಿಕೊಂಡಿದ್ದರು. ಇವರು ಬೆರಳೆಣಿಕೆಯಷ್ಟು ಸೃಜನಶೀಲ, ಸೃಜನೇತರ ಕೃತಿಗಳನ್ನು ರಚಿಸಿದ್ದು ಗಾತ್ರದಲ್ಲಿ ಕಿರಿದಾಗಿದ್ದರೂ ಸತ್ವದಲ್ಲಿ ಉತ್ಕೃಷ್ಟ ರಚನೆ ಎನಿಸಿವೆ.
ಸಣ್ಣಗುಡ್ಡಯ್ಯನವರು ತಮ್ಮ ಸ್ಥಳೀಯ ವಲಯದಲ್ಲಿ (ತುಮಕೂರು) ಆರೋಗ್ಯಕರ ಪರಿಸರವನ್ನು ನಿರ್ಮಾಣ ಮಾಡಲು ಅವಿರತವಾಗಿ ಶ್ರಮಿಸಿದ್ದಾರೆ. ತಮ್ಮದೇ ಎಡಪಂಥೀಯ ಚಿಂತನ ಗ್ರಹಿಕೆಗಳಿಂದ ಮಾರ್ಕ್ಸ್ವಾದ ತುಮಕೂರಿನ ಸ್ಥಳೀಯ ಮಟ್ಟದಲ್ಲಿ ನೆಲೆಯೂರಲು ಅವರು ತೋರಿದ ಶ್ರದ್ಧೆ ಅನನ್ಯವಾದುದು. ಇದು ಸ್ಥಳೀಯ ಭಾಗದ ಕಿರಿಯ ತಲೆಮಾರಿನ ಸಾಹಿತಿಗಳಿಗೆ ಸ್ಪೂರ್ತಿದಾಯಕವಾಗಿದೆ. ಇವರ ಎಡಪಂಥೀಯ ಚಿಂತನೆಗಳಿಗೆ, ಮಾರ್ಕ್ಸ್‌ವಾದಿ ವಿಚಾರಗಳಿಗೆ ಹಲವಾರು ಸಹೃದಯ ವಿಚಾರವಂತರು ತುಮಕೂರಿನ ಕೇಂದ್ರಸ್ಥಾನವಾದ ಒಕ್ಕಲಿಗರ ಹಾಸ್ಟೆಲ್‌ನ ಪಕ್ಕದಲ್ಲಿದ್ದ ಟೈಲರಿಂಗ್ ಹಾಲ್‌ನಲ್ಲಿ ಸೇರಿಕೊಂಡು ನಾಡು-ನುಡಿಗೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಿದ್ದು, ಇದೆಲ್ಲವೂ ಜಿಲ್ಲೆಯಲ್ಲಿ ಸಾಹಿತ್ಯಿಕ ಪರಿಸರ ಬೆಳೆಯಲು ಕಾರಣವಾಗಿದ್ದನ್ನು ಸ್ಮರಿಸಬಹುದು. ಜೊತೆಗೆ ಸಮಕಾಲೀನ ಬರಹಗಾರರಿಗೆ ಮಾರ್ಗದರ್ಶಕರಾಗಿದ್ದ ಬಗೆಯನ್ನು ತಿಳಿಯುವುದು ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ.

Read More »

ಛಲಗಾರ ನಾರಾಯಣರೆಡ್ಡಿ

ರವಿ ಹಾದಿಮನಿ

48 to 63

ನಾರಾಯಣರೆಡ್ಡಿ ಅವರು 1935ರಲ್ಲಿ ಬೆಂಗಳೂರು ಜಿಲ್ಲೆಯ ಹತ್ತಿರವಿರುವ ವರ್ತೂರಿನ ಸೋರಹುಣಸೆ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ಕುಟುಂಬ ಕೃಷಿಯನ್ನೇ ಉಸಿರಾಗಿಸಿಕೊಂಡಿತ್ತು. ಅವರು ಬಹಳ ಸಾಮಾನ್ಯ ಮತ್ತು ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಬೆಳೆಯಬೇಕಾಯಿತು. ಈ ಕಾರಣದಿಂದ ನಾರಾಯಣರೆಡ್ಡಿ ಅವರು ತೀವ್ರ ಮಾನಸಿಕ ತೊಂದರೆಗಳು ಮತ್ತು ಒತ್ತಡಗಳಿಗೆ ಒಳಗಾಗಬೇಕಾಯಿತು. ಆದರೆ ಈ ಸವಾಲುಗಳು ಅವರನ್ನು ಕುಗ್ಗಿಸಲೇ ಇಲ್ಲ; ಬದಲಿಗೆ, ಅವರು ಬಲವಾಗಿ ಎದುರಿಸಿದರು.
ಅಧ್ಯಯನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ, ಪುಸ್ತಕಗಳಿಲ್ಲದೆ, ಪೆನ್ಸಿಲ್ ಇಲ್ಲದೆ, ಕಾಲಿನಲ್ಲಿ ಚಪ್ಪಲಿ ಇಲ್ಲದ ಪರಿಸ್ಥಿತಿಗಳಲ್ಲಿಯೂ ಅವರು ಶಿಕ್ಷಣದ ಮಹತ್ವವನ್ನು ಅರಿತುಕೊಂಡಿದ್ದರು. ಅವರು ಬಡತನದಿಂದ ಹೋಟೆಲ್ ಕ್ಲೀನರ್ ಆಗಿ ಕೆಲಸ ಮಾಡಲು ಆರಂಭಿಸಿದರು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನೂ ತಾವು ಸ್ವಯಂ ಅಧ್ಯಯನದ ಮೂಲಕ ಕಲಿತರು. ಇತರ ಮಕ್ಕಳಿಗೆ ಉಚಿತವಾಗಿ ಪಾಠ ಹೇಳುತ್ತಿದ್ದ ಅವರು ಶಿಕ್ಷಣವನ್ನು ಜನಸಾಮಾನ್ಯರ ಹಕ್ಕಾಗಿ ಪರಿಗಣಿಸುತ್ತಿದ್ದರು. ಅವರು ಬದ್ಧತೆ, ಶಿಸ್ತು, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಮೇಲಕ್ಕೇರಲು ಶ್ರಮಿಸಿದರು. ಸ್ವಂತ ಉದ್ಯಮ ಆರಂಭಿಸುವ ಕನಸುಳ್ಳ ನಾರಾಯಣರೆಡ್ಡಿ ಅವರು ಎಷ್ಟೇ ಕಠಿಣ ಸಂದರ್ಭ ಎದುರಾದರೂ ಹಿಂದೆ ಸರಿಯಲಿಲ್ಲ.
ಅವರ ಬದುಕು ನಮಗೆ ಒಂದು ಮಹತ್ತರ ಪಾಠ ಕಲಿಸುತ್ತದೆ—ಸಾಧನೆಯ ಮುನ್ನೆಲೆಯು ಹಣವಲ್ಲ, ಜನ್ಮವಲ್ಲ, ಆದರೆ ಛಲ, ಶ್ರದ್ಧೆ ಮತ್ತು ಪರಿಶ್ರಮ. ಅವರು ತಮ್ಮ ಜೀವನದಲ್ಲಿ ಪ್ರತಿಯೊಂದು ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡಿದರು. ಜೀವನದಲ್ಲಿ ಏನೇ ಕಷ್ಟ ಬಂದರೂ ನೈತಿಕತೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು ಎಂಬುದನ್ನು ತಮ್ಮ ನಡೆನುಡಿಗಳಿಂದ ನಿರಂತರವಾಗಿ ತೋರಿಸಿದ್ದಾರೆ.
ನಾರಾಯಣರೆಡ್ಡಿ ಅವರು ಕೇವಲ ವ್ಯಕ್ತಿಯಲ್ಲ, ಹೋರಾಟದ ಪ್ರತೀಕ. ಅವರು ನಿರಾಶೆಗೊಳಗಾದವರಿಗೆ, ದುಡಿದು ಬದುಕು ಕಟ್ಟಿಕೊಳ್ಳುವ ಆಶಯವಿರುವವರಿಗೆ ಪ್ರೇರಣೆಯಾಗಿದೆ. ಅವರ ಬದುಕು ಇಂದು ಸಾವಿರಾರು ಯುವಕರಿಗೆ ಮಾರ್ಗದರ್ಶಿಯಾಗಿದೆ. ಹೀಗೆ ಕುರಿ ಕಾಯಲು ಹೋಗಿ ತಡವಾಗಿ ಬಂದಿದ್ದರಿಂದ ಅಪ್ಪನ ಏಟಿನಿಂದ ಅವಮಾನಿತನಾಗಿ, ದಾಯಾದಿಗಳ ಚುಚ್ಚು ಮಾತುಗಳಿಂದ ಬೇಸರಗೊಂಡ ಬುದ್ಧನಂತೆ ಮಧ್ಯರಾತ್ರಿ ಮನೆಬಿಟ್ಟು ಹೋಗಿ ಸಾಧಕನಾಗಿ ಅಣ್ಣ ರಾಮಯ್ಯನ ಮೂಲಕ ಮೂಲ ಗೂಡು ಸೇರಿದ ಒಂಟಿ ಹಕ್ಕಿಗೆ ಜೋಡಿಯಾಗಿ ಸರೋಜಮ್ಮನವರೊಂದಿಗೆ ವಿವಾಹ ಮಾಡಿಕೊಟ್ಟರು. ತಂದೆಯವರ ಆಸೆಯಂತೆ ಕಂಪನಿಯ ಕೆಲಸ ಬಿಟ್ಟು ತಮ್ಮ ಮನೆತನದ ಉಸಿರಾದ ಕೃಷಿಯಲ್ಲಿ ನಂಬಿಕೆಯಿರಿಸಿ ಬದುಕಿನ ಪಯಣ ಸಾಗಿಸಿದರು.

Read More »

ಎಂ.ಕೆ. ಇಂದಿರಾ ಅವರ ಕೃತಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಚಿತ್ರಣ

ಸಂಧ್ಯಾರಾಣಿ ಎಂ.ಎಸ್.

64 to 70

ಕನ್ನಡ ಸಾಹಿತ್ಯ ಲೋಕದಲ್ಲಿ ಎಂ.ಕೆ. ಇಂದಿರಾ(1917-1994) ಅವರು ತಮ್ಮ ವಿಶಿಷ್ಟ ಕಾದಂಬರಿಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಶಿಕ್ಷಣವು ಕೇವಲ ಏಳು ವರ್ಷಗಳಿಗೆ ಸೀಮಿತವಾಗಿದ್ದರೂ, ಅವರ ತೀಕ್ಷ್ಣ ಅವಲೋಕನ, ಸ್ಥಳೀಯ ಪರಿಸರದ ಆಳವಾದ ಜ್ಞಾನ, ಸಹಜ ಹಾಸ್ಯ ಪ್ರಜ್ಞೆ ಮತ್ತು ಮಾನವೀಯ ವಿಧಾನವು ಅವರನ್ನು ಜನಪ್ರಿಯ ಲೇಖಕಿಯನ್ನಾಗಿ ರೂಪಿಸಿತು. ಅವರ ಕೃತಿಗಳು ವಿಶೇಷವಾಗಿ ‘ಫಣಿಯಮ್ಮ’, ‘ಗೆಜ್ಜೆಪೂಜೆ’ ಮತ್ತು ‘ತುಂಗಭದ್ರ’ ಕಾದಂಬರಿಗಳು ಆಗಿನ ಕಾಲದ ಕರ್ನಾಟಕದ ಸಾಮಾಜಿಕ ವಾಸ್ತವಗಳನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರು, ಜಾತಿ ವ್ಯವಸ್ಥೆ ಮತ್ತು ಗ್ರಾಮೀಣ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತವೆ. ಈ ಸಂಶೋಧನಾ ಲೇಖನವು ಎಂ.ಕೆ. ಇಂದಿರಾ ಅವರ ಆಯ್ದ ಕೃತಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಚಿತ್ರಣವನ್ನು ವಿಶ್ಲೇಷಿಸುವ ಗುರಿಯನ್ನು ಹೊಂದಿದೆ.

Read More »

ಬನಹಟ್ಟಿ ನೇಕಾರಿಕೆ: ಒಂದು ಅವಲೋಕನ

ಸಂಗಮೇಶ ಕಚ್ಚು, ಎಂ.ಎನ್. ಬೆನ್ನೂರ

71 to 79

ಬನಹಟ್ಟಿ ನೇಕಾರಿಕೆಯ ತವರೂರು ಆಗಿದೆ. ‘ಬನ’ ಎಂದರೆ ಬಣ್ಣ, ‘ಹಟ್ಟಿ’ ಎಂದರೆ ವಾಸಿಸುವ ಸ್ಥಳ. ಹೀಗಾಗಿ, ಬನಹಟ್ಟಿಯನ್ನು ಬಣ್ಣಗಳ ತವರೂರು ಎಂದು ಕರೆಯಲಾಗಿದೆ. ಇಲ್ಲಿ ಕೈಮಗ್ಗಗಳು ಮತ್ತು ಪವರ್‌ ಲೂಮ್ ಸಹ ಇವೆ. ಜೊತೆಗೆ ನೂಲಿನ ಗಿರಣಿ ಸಹ ಇದೆ. ಬನಹಟ್ಟಿಯಲ್ಲಿ 4500 ನೇಕಾರ ಕುಟುಂಬಗಳಿವೆ. 21 ನೇಕಾರ ಸಹಕಾರಿ ಸಂಘಗಳಿವೆ. ಬನಹಟ್ಟಿಯಲ್ಲಿ ಅಂಚಿನ ವಿನ್ಯಾಸ ಸೀರೆ, ನಕ್ಷತ್ರ ಚಿತ್ರ ಸೀರೆ, ಚೆಸ್ (ಚದುರಂಗ) ವಿನ್ಯಾಸ ಸೀರೆ ಅಲ್ಲದೆ, 200ಕ್ಕೂ ಅಧಿಕ ವಿನ್ಯಾಸದ ಕಾಟನ್ ಸೀರೆ ತಯಾರಾಗುತ್ತವೆ. ಬನಹಟ್ಟಿಯಲ್ಲಿ ದೇವಾಂಗ, ಕುರುಹಿನಶೆಟ್ಟಿ, ಸ್ವಕುಳಸಾಲಿ, ಪದ್ಮಸಾಲಿ, ಶಿವಸಾಮಾಸಾಲಿ, ಪಟ್ಟಸಾಲಿ, ಪಟ್ಟೇಗಾರ, ತೊಗಟವೀರ ಹೀಗೆ ಹಲವಾರು ಪಂಗಡಗಳಿವೆ. ಬನಹಟ್ಟಿಯಲ್ಲಿ ತಯಾರಾಗುವ ಸೀರೆಗಳು ಕರ್ನಾಟಕದ ಮೈಸೂರು, ದಕ್ಷಿಣಕನ್ನಡ, ಬೆಂಗಳೂರು, ರಾಯಚೂರು, ಮಂಗಳೂರು ಈ ಸ್ಥಳಗಳಲ್ಲಿ ವ್ಯಾಪಾರ ಹೊಂದಿವೆ. ನಂತರದಲ್ಲಿ, ಮಹಾರಾಷ್ಟ್ರದ ಸಾಂಗ್ಲಿ, ಮಿರಜ್, ಪುಣೆ, ಮುಂಬೈ ಈ ಸ್ಥಳಗಳಲ್ಲಿ ಸಹ ವ್ಯಾಪಾರ ವಹಿವಾಟು ಇದೆ. ಬನಹಟ್ಟಿಯಲ್ಲಿ ನೇಕಾರ ಸಹಕಾರಿ ಸಂಘಗಳಿವೆ. ಇವುಗಳು ನೇಕಾರರಿಗೆ ಹಲವಾರು ಸೌಲಭ್ಯಗಳನ್ನು ನೀಡಿವೆ. ಅಂದರೆ, ಆರೋಗ್ಯ ವಿಮೆ, ಮಗ್ಗಗಳನ್ನು ಕೊಂಡುಕೊಳ್ಳಲು ಸಾಲದ ರೂಪದಲ್ಲಿ ಹಣ ನೀಡುತ್ತವೆ, ನೇಕಾರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಾಲವನ್ನು ನೀಡುತ್ತವೆ. ಅಲ್ಲದೆ, ಬ್ರಿಟಿಷ್ ಕಾಲದಿಂದಲೂ ಮತ್ತು ಜಮಖಂಡಿ ಪಟ್ಟವರ್ಧನ್ ಆಳ್ವಿಕೆ ಕಾಲದಿಂದಲೂ ನೇಕಾರಿಕೆ ಇತಿಹಾಸ ಒಳಗೊಂಡಿದೆ.

Read More »

ಜನಪದ ಹಾಡ್ಗತೆ: ಸಂಘರ್ಷ ಮತ್ತು ಮಹಿಳಾ ಸಂವೇದನೆ

ಶಾಲಿನಿ ಎಂ.ಸಿ.

80 to 89

ಜನಪದ ಹಾಡ್ಗತೆಗಳಲ್ಲಿ ಸಂಘರ್ಷ ಮತ್ತು ಮಹಿಳಾ ಸಂವೇದನೆ ಎಂಬುದು ಜನಪದ ನೈಜ ಬದುಕಿನ ಸಹಜ ಸ್ವಾಭಾವಿಕತೆಯನ್ನು ತೆರೆದಿಡುವಂತಹ ಲೇಖನ. ಹಾಡ್ಗತೆಗಳನ್ನು ಕೂಲಂಕಷವಾಗಿ ಅಧ್ಯಯನಕ್ಕೆ ತೊಡಗಿಸುತ್ತಾ ಹೋದಂತೆ ಸಮಾಜದ ಬದುಕಿನ ಜನರ ನೈಜ ಚಿತ್ರಣವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅಂತಹ ನೈಜ ಚಿತ್ರಣಗಳಲ್ಲಿ ಒಂದಾದಂತಹ ‘ಮರೆಯಾದ ಮಲಕವ್ವ’ ಕಥನ ಕಾವ್ಯ, ‘ಯಲುರಾಜನ ಮಡದಿ’ ಕಥನ ಕಾವ್ಯ ಹಾಗೂ ‘ಒಡ್ಡರಬೊಯಿ’ ಮತ್ತು ‘ಕೆರೆಗೆ ಹಾರ’ದಂತಹ ಕಥನ ಕಾವ್ಯಗಳನ್ನು ಪುರೋಹಿತಶಾಹಿ ಹಾಗೂ ಊಳಿಗಮಾನ್ಯ ವ್ಯವಸ್ಥೆ, ಸ್ತ್ರೀವಾದದ ನೆಲೆಯನ್ನು ಈ ಲೇಖನದ ಮೂಲಕ ವಿಮರ್ಶಿಸಲಾಗಿದೆ.
ಸಮಾಜದಲ್ಲಿ ಹೆಣ್ಣಿನ ಸಂವೇದನೆ ಹಾಗೂ ಬದುಕಿನ ಸಂಘರ್ಷವನ್ನು ಕುರಿತಂತಹ ಆಲೋಚನೆಗಳು ಇಲ್ಲಿ ಅಡಕವಾಗಿವೆ. ಜೊತೆಗೆ ಧರ್ಮ ಸಂಘರ್ಷ, ಜಾತಿ ಸಂಘರ್ಷ ಹಾಗೂ ಸಾಮಾಜಿಕವಾಗಿ ಹೆಣ್ಣು ಅನುಭವಿಸಿದಂತಹ ಶೋಚನೀಯ ಬದುಕಿನ ಚಿತ್ರಣಗಳು ಈ ಕಾವ್ಯದ ಮೂಲಕ ವಿಶ್ಲೇಷಣೆಗೆ ಒಳಪಟ್ಟಿವೆ.
ಧರ್ಮ ಸಂಘರ್ಷ ಹಾಗೂ ಜಾತಿ ಸಂಘರ್ಷದ ನೆಲೆಯಲ್ಲಿ ನಡೆಸುವ ಹುಡುಕಾಟವು ಧರ್ಮಾತೀತವಾದ ಆಲೋಚನೆಗೆ ಸಂಬಂಧಿಸಿದೆ, ಆದರೂ ಅವುಗಳನ್ನು ಹತ್ತಿಕ್ಕಿದ ಸಮಾಜದ ಸೂಕ್ಷ್ಮ ಚಿತ್ರಣಗಳು ನಮ್ಮ ಜನಪದರ ಚಿಂತನೆಯಲ್ಲಿ ಇರುವುದನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿಸಿವೆ. ಊಳಿಗಮಾನ್ಯ ವ್ಯವಸ್ಥೆಯ ಅಡಿಯಲ್ಲಿ ಶೋಷಿತರಾಗುವ ತಳ ಸಮುದಾಯದ ಹೆಣ್ಣಿನ ಆಂತರಿಕ ತಲ್ಲಣಗಳು ಇಲ್ಲಿ ವಿಶ್ಲೇಷಣೆಗೆ ಒಳಗಾಗಿವೆ.
ಸಾಂಸ್ಕೃತಿಕವಾಗಿ ಹೆಣ್ಣನ್ನು ಬಲಿಯಾಗಿಸಿದ ಸಮಾಜದ ವಿರುದ್ಧ ಸ್ತ್ರೀ ತನ್ನ ಸಂವೇದನೆಯನ್ನು ಮೌನವಾಗಿ ಪ್ರತಿರೋಧಿಸಿದ ನೆಲೆಯನ್ನು ಗುರುತಿಸಲಾಗಿದೆ. ಇವು ಪುರುಷಾಧಿಕಾರದ ನೆಲೆ ಹಾಗೂ ಪುರೋಹಿತಶಾಹಿ ಅಧಿಕಾರದ ನೆಲೆಯೊಳಗೆ ಹೆಣೆಯಲ್ಪಟ್ಟಿದ್ದು, ಸಮಾಜಕ್ಕೆ ಹೆಣ್ಣು ನೀಡಿದ ಪ್ರತಿಕ್ರಿಯೆಯಾಗಿವೆ. ಕಾವ್ಯವನ್ನು ಕಟ್ಟುವುದರ ಮೂಲಕ ಹಾಡ್ಗತೆಗಳಾಗಿ, ಬದುಕಿನ ಬವಣೆಗಳಾಗಿ ಅಭಿವ್ಯಕ್ತಗೊಂಡಿವೆ. ಹಾಗಾಗಿ ಜನಪದ ಕಥನ ಕಾವ್ಯಗಳಲ್ಲಿ ಹೆಣ್ಣಿನ ಸೂಕ್ಷ್ಮ ಸಂವೇದನೆಯ ಆಲೋಚನೆಗಳಿವೆ.

Read More »

ಕುವೆಂಪು ಅವರ ಕಥೆಗಳ ವೈಶಿಷ್ಟ್ಯತೆ

ಶ್ವೇತಾರಾಣಿ ಹೆಚ್.

90 to 98

ರಾಷ್ಟ್ರಕವಿ ಕುವೆಂಪು ಅವರು ನಾಲ್ಕು ಸಣ್ಣಕಥಾ ಸಂಕಲನಗಳನ್ನು ರಚಿಸಿದ್ದಾರೆ. ನನ್ನ ದೇವರು ಮತ್ತು ಇತರ ಕಥೆಗಳು, ಕಥೆಗಳೊಡನೆ ಆರಂಭದಲ್ಲಿ, ನರಿಗಳಿಗೇಕೆ ಕೋಡಿಲ್ಲ, ಸಂನ್ಯಾಸಿ ಮತ್ತು ಇತರ ಕಥೆಗಳು. ಇವರ ಕಾವ್ಯ, ಕಾದಂಬರಿ, ವೈಚಾರಿಕ ಲೇಖನಗಳು, ನಾಟಕಗಳು ಸಾಕಷ್ಟು ವಿಮರ್ಶೆಗೆ ಒಳಪಟ್ಟಿವೆ. ಕುವೆಂಪು ಅವರ ಸಣ್ಣಕಥೆಗಳು ಅತ್ಯಂತ ಸೂಕ್ಷ್ಮ ಸಂವೇದನಾಶೀಲ ಕಥೆಗಳಾಗಿವೆ. ಯಾರೂ ಅರಿಯದ ವೀರನಂತಹ ಕಥೆಯ ಪಾತ್ರಗಳು ಓದುಗರ ಮನದಲ್ಲಿ ಉಳಿದುಬಿಡುತ್ತವೆ. ಪ್ರಸ್ತುತ ನನ್ನ ಈ ಲೇಖನದಲ್ಲಿ ಕುವೆಂಪು ಅವರ ಸಣ್ಣಕಥೆಗಳಲ್ಲಿರುವ ವೈಶಿಷ್ಠ್ಯತೆಯನ್ನು ಪಾತ್ರಗಳ ಮೂಲಕ ಚರ್ಚಿಸಲಾಗಿದೆ.
“ನನ್ನ ದೇವರು” ಎನ್ನುವ ಕಥೆಯಲ್ಲಿ ಮದುವೆಯಾಗಿ ಒಂದೇ ವರುಷದಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಬಾಲಕಿ ಯೌವ್ವನಕ್ಕೆ ಕಾಲಿರಿಸಿದಾಗ ಆ ಯುವತಿಯ ಮನದಲ್ಲಿ ಉಂಟಾಗುವ ತುಮುಲಗಳ ಚಿತ್ರಣವಿದು. ತಾಕಲಾಟಗಳನ್ನು ಸಮರ್ಥವಾಗಿ ಚಿತ್ರಿಸಿರುವ ಕತೆ ಇದು. ಅವಳ ಸಂಕಟಕ್ಕೆ ಹತ್ತಿರವಿರುವ ಬಾವನ ಬಗೆಗೆ ಅವಳಿಗೆ ಆರಾಧನಾ ಭಾವವಿದೆ. ಅವಳ ಸುಪ್ತಮನಸ್ಸಿನಲ್ಲಿ ವಯೋಸಹಜ ಬಯಕೆಗಳು ಬುಗಿಲೇಳುವವು, ಆಕೆ ಅದನ್ನು ಶಮನಗೊಳಿಸಲೆಳಸುವ ಮನೋವ್ಯಾಘ್ರಾಟ ಈ ಕಥೆಯಲ್ಲಿ ಕಾಣಬಹುದು. ಅವಳ ಜೀವನದಲ್ಲಿ ಹತ್ತಿರವಿರುವ ಗಂಡು ಎಂದರೆ ಅದು ಭಾವ ಮಾತ್ರ. ತಂದೆ ಮನೆಯಿಂದ ಬಂದಮೇಲೆ ಪತಿಯ ನಿಧನದ ಬಳಿಕ ಅವಳು ಯೌವ್ವನಕ್ಕೆ ಕಾಲಿರಿಸುವ ಸಮಯದಲ್ಲಿ ಬೇರೆ ಪುರುಷರು ಅವಳಿಗೆ ಆತ್ಮೀಯರು ಆಗಿಲ್ಲ. ಸದಾ ಗಂಭೀರವಾಗಿರುವ, ತಿಳುವಳಿಕೆ ಇರುವ ಭಾವನ ಮೇಲೆ ಅವಳಿಗಿರುವ ಗೌರವವೂ ಕೂಡ ಅವಳ ತಾಕಲಾಟಗಳಿಗೆ ಕಾರಣವಾಗಿರಬಹುದು.
“ಸಾಲದ ಮಗು” ಕಥೆಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿರುವ ಅನಾಥ ಮಗು ತಂದೆ ಮಾಡಿದ ಸಾಲಕ್ಕೆ ಜೀತ ಮಾಡಬೇಕಾಗಿರುವ ಪರಿಸ್ಥಿತಿಯಲ್ಲಿ ಕರುಣೆ ಇಲ್ಲದೆ ನಡೆಸಿಕೊಳ್ಳುವುದು, ಜ್ವರದ ತಾಪದಲ್ಲಿ ನರಳುವ ಎಂಟು ವರ್ಷದ ಬಾಲಕ ಮಳೆಯಲ್ಲಿ ಮೀನು ಕುಕ್ಕೆಯನ್ನು ಗೌಡನ ಆದೇಶದ ಮೇಲೆ ತರಲು ಹೋಗಿ ಹಾವು ಕಚ್ಚಿ ಸಾಯುವುದು, ಆ ಸಾವಿಗೂ ಮರುಗದ ಗೌಡನ ದುರ್ಗುಣ, ದುರಾಸೆ ಇವುಗಳ ಅನಾವರಣವಿಲ್ಲಿದೆ.

Read More »

ಸಮಸ್ಯೆಗಳ ಸುಳಿಯಲ್ಲಿ ಮಹಿಳೆ ಮತ್ತು ಮಹಿಳಾ ಲೈಂಗಿಕ ದೌರ್ಜನ್ಯ

ತಾರಾ ಬಿ.ಎನ್.

99 to 107

ಅನಾದಿ ಕಾಲದಿಂದಲೂ ಮಹಿಳೆಯರ ಸ್ಥಾನಮಾನಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೆಸರಿಗೆ ಮಾತ್ರ, ಅದು ಕೇವಲ ಕೆಲವೇ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ. ಇಂದು ಮಹಿಳೆ ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಹಾರಿರಬಹುದು. ಆದರೆ ಪರ್ವಗ್ರಹ ಪೀಡಿತರ ಮಧ್ಯೆ ಈಗಲೂ ಮಹಿಳಾ ಅತ್ಯಾಚಾರ, ಶೋಷಣೆಗಳು ನಿಂತಿಲ್ಲ. ವೇದಗಳ ಕಾಲದಲ್ಲೂ ಸ್ತ್ರೀಯರಿಗೆ ಉನ್ನತ ಸ್ಥಾನ ಇತ್ತು ಎಂದು ಕೇವಲ ಬೆರಳೆಣಿಕೆಯ ಉದಾಹರಣೆಗಳು ಸಿಗುತ್ತವೆ.
ಐತಿಹಾಸಿಕ ಕಾಲಘಟ್ಟಗಳಲ್ಲಿಯೂ ಸಾಧನೆ ಮಾಡಿದ ಮಹಿಳೆಯರಿಗೇನೂ ಕೊರತೆ ಇಲ್ಲ. ಅವರು ತಮಗೆ ಲಭ್ಯವಾದ ಅಲ್ಪ ಅವಕಾಶಗಳನ್ನು ಬಳಸಿ ಅಗಾಧ ಸಾಧನೆ ಮಾಡಿರುವುದು ಸತ್ಯ.
ಸತಿ ಪದ್ಧತಿ 1826ರಲ್ಲೂ ನಿಷೇಧಗೊಂಡಿದ್ದರೂ ಇನ್ನೂ ನಿಂತಿಲ್ಲ. ಹಾಗಾಗಿ ಮಹಿಳಾ ಸ್ಥಾನಮಾನಗಳಲ್ಲಿ ಇನ್ನೂ ಬದಲಾವಣೆಯ ಅವಶ್ಯಕತೆ ಇದೆ. ದಿನಬೆಳಗಾದರೆ ನಿತ್ಯ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುವ ಸಾವಿರಾರು ಉದಾಹರಣೆಗಳು ಸಿಗುತ್ತವೆ. ಆದ್ದರಿಂದ ಮಹಿಳಾ ಸ್ಥಾನಮಾನಗಳಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

Read More »

ಪ್ರೇಮ್‌ಚಂದ್‌ ಅವರ ‘ಗೋದಾನ್’ ಕಾದಂಬರಿಯಲ್ಲಿ ಭಾರತೀಯ ರೈತರ ಸಮಕಾಲೀನ ಸಮಸ್ಯೆಗಳ ಚಿತ್ರಣ

ಉಮೇಶ

108 to 114

ಗೋದಾನ ಕಾದಂಬರಿಯಲ್ಲಿ ಪ್ರೇಮ್‌ಚಂದ್ ಅವರು ರೈತರು, ಕಾರ್ಮಿಕರು ಮತ್ತು ಮಹಿಳೆಯರನ್ನು ಚಿತ್ರಿಸಿರುವ ರೀತಿ ಆ ಕಾಲಘಟ್ಟದ ಸಮಾಜದ ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಪ್ರತಿಬಿಂಬ ಮಾತ್ರವಲ್ಲದೆ ಸಮಕಾಲೀನ ಸಮಾಜದಲ್ಲಿ ಇಂದಿಗೂ ಪ್ರಸ್ತುತವಾಗಿದೆ. ಪ್ರಸ್ತುತ ಕಾಲಮಾನದಲ್ಲಿಟ್ಟು ಕಾದಂಬರಿಯನ್ನು ಅವಲೋಕಿಸಿದಾಗ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ರೈತರ, ಮಹಿಳೆಯರ, ಕಾರ್ಮಿಕರ ಸ್ಥಿತಿಗತಿಗಳು ನಿರೀಕ್ಷಿತ ಪ್ರಮಾಣದಲ್ಲಿ ಬದಲಾವಣೆ ಆಗದೆ ಇರುವುದು ಸ್ಪಷ್ಟ. ರೈತರ ಜೀವನವು ಮುಖ್ಯವಾಗಿ ಆರ್ಥಿಕ ಮತ್ತು ನೈಸರ್ಗಿಕ ಸಮಸ್ಯೆಗಳಿಂದ ಆವರಿಸಲ್ಪಟ್ಟಿದೆ. ಪ್ರತಿದಿನ ನಾವು ರೈತರ ಮತ್ತು ಮಹಿಳೆಯರ ದಯನೀಯ ಸ್ಥಿತಿಯನ್ನು ಕಣ್ಣಾರೆ ಕಾಣುತ್ತೇವೆ. ಆದ್ದರಿಂದ ಪ್ರಸ್ತುತ ಲೇಖನದಲ್ಲಿ ವಿಸ್ತೃತವಾಗಿ ಇದರ ಬಗ್ಗೆ ಚರ್ಚಿಸಿ, ವಿಶ್ಲೇಷಿಸಲಾಗಿದೆ.

Read More »

ಪರಿಶಿಷ್ಟ ಜಾತಿಯ ಕೃಷಿ ಕಾರ್ಮಿಕ ಮಹಿಳೆಯರ ಮಾಧ್ಯಮ ಬಳಕೆ ಕುರಿತು ಒಂದು ಅಧ್ಯಯನ

ವರ್ಣಶ್ರೀ ಆರ್., ವರ್ಗೀಸ್ ಪಿ.ಎ.

115 to 126

ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಗಮನಾರ್ಹವಾಗಿದೆ. ಆದರೂ ಆಕೆ ವೇತನ ತಾರತಮ್ಯ ಎದುರಿಸುತ್ತಿದ್ದಾಳೆ. ಎರಡನೇ ದರ್ಜೆ ಎಂದು ಕರೆಯಲ್ಪಡುವ ಮಹಿಳೆಯರು ಅನೇಕ ಕಾರಣಗಳಿಂದ ಅವಕಾಶ ವಂಚಿತರಾಗಿದ್ದಾರೆ, ಅದರಲ್ಲಿ ಜಾತಿ ಹಿನ್ನೆಲೆಯೂ ಒಂದು. ಇವುಗಳ ನಿರ್ಮೂಲನೆಗಾಗಿ ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಕೃಷಿ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಇಂತಹ ವಿಷಯಗಳನ್ನು ತಿಳಿಸಲು ಮತ್ತು ತಿಳಿಯಲು ಮಾಧ್ಯಮ ಪೂರಕವಾಗಿ ಕಾರ್ಯನಿರ್ವಹಿಸಬಹುದು. ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎನಿಸಿಕೊಂಡಿರುವ ಮಾಧ್ಯಮದ ಮುಖ್ಯ ಉದ್ದೇಶ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ. ಇವುಗಳನ್ನು ಮುದ್ರಣ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಾದ ರೇಡಿಯೋ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡುತ್ತಿದೆ. ಮಹಿಳೆಯರಿಗಾಗಿ ಮುದ್ರಣ ಮಾಧ್ಯಮದಲ್ಲಿ ಪುರವಣಿಗಳು, ರೇಡಿಯೋ ಮತ್ತು ಟೆಲಿವಿಷನ್‌ನಲ್ಲಿ ಮಹಿಳೆಯರಿಗಾಗಿ ಆರೋಗ್ಯ, ಅಡುಗೆ, ಕಸೂತಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಮಹಿಳೆಯರಲ್ಲಿ ಅವುಗಳ ಬಳಕೆ ತಿಳಿಯುವುದು ಅಗತ್ಯವಾಗಿದೆ. ಮಾಧ್ಯಮಗಳ ಬಳಕೆ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರ ಮೇಲೆ ಮಾಧ್ಯಮ ಬೀರಿರಬಹುದಾದ ಪ್ರಭಾವಗಳನ್ನು ಅರಿಯುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿಯ ಕೃಷಿ ಕೂಲಿ ಕಾರ್ಮಿಕ ಮಹಿಳೆಯರ ಆರ್ಥಿಕ ಒಡೆತನ, ರೈತ ಸಂಘಟನೆಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಮಾಧ್ಯಮ ಬಳಕೆಯ ಉದ್ದೇಶವನ್ನು ತಿಳಿಯುವುದು ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಶ್ನಾವಳಿಯ ಸಹಾಯದಿಂದ ದತ್ತಾಂಶ ಸಂಗ್ರಹಿಸಿ ಪರಿಮಾಣಾತ್ಮಕ ವಿಷಯ ವಿಶ್ಲೇಷಣಾ ವಿಧಾನವನ್ನು ಬಳಸಿಕೊಂಡು ಅಧ್ಯಯನ ಮಾಡಲಾಗಿದೆ. ದತ್ತಾಂಶಗಳ ಮೂಲಕ ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರು ಪುರುಷರಷ್ಟು ಮನೆ ಮತ್ತು ಜಮೀನಿನ ಯಜಮಾನಿಕೆಯನ್ನು ಪಡೆದಿಲ್ಲ ಹಾಗೂ ಇವರು ಅಸಂಘಟಿತರಾಗಿರುವುದು, ಸರ್ಕಾರದ ಕೃಷಿ ಯೋಜನೆಗಳ ಅರಿವು ತಲುಪದೆ ಇರುವುದು ತಿಳಿದುಬಂದಿದೆ. ಹಾಗೆಯೇ, ಮಾಧ್ಯಮಗಳನ್ನು ಹೆಚ್ಚಾಗಿ ಮನರಂಜನೆಯ ಮೂಲವಾಗಿ ಬಳಸುತ್ತಿರುವುದು ಕಂಡುಬಂದಿದೆ.

Read More »

ವಿಜಯನಗರದ ಅಪ್ರಕಟಿತ ಶಾಸನ ಹಾಗೂ ನೊಳಂಬರ ತುರುಗೊಳ್ ಗೋಗ್ರಹಣ ವೀರಗಲ್ಲು

ವಿಜಯಕುಮಾರ ಎಸ್.

127 to 133

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಾರಡಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯಾಧಿಪತಿಯಾದ ಶ್ರೀಕೃಷ್ಣದೇವರಾಯನ ಅಪ್ರಕಟಿತ ಶಾಸನ, ನೊಳಂಬ-ಗಂಗರ ಕಾಲಕ್ಕೆ ಸಂಬಂಧಿಸಿದ ತುರುಗೋಳ್ ವೀರಗಲ್ಲನ್ನು ಪತ್ತೆ ಹಚ್ಚಲಾಗಿದೆ. ಹಾರಡಿ ಎಂಬ ಗ್ರಾಮವು ಶಾಸನೋಕ್ತವಾಗಿ ‘ಹಾಲಡಿ/ಹಲಡಿ’ ಎಂದು ಉಲ್ಲೇಖಿಸಲ್ಪಟ್ಟಿದೆ. ಹಲ+ಇಡಿ ಅಥವಾ ಹಲ+ಅಡಿ ಎಂಬ ಪದಗಳಿಂದ ಹಾಲಡಿ ಅಥವಾ ಹಲಡಿ ಎಂಬ ಪದ ನಿಷ್ಪನ್ನವಾಗಿದೆ ಎಂದು ೂಹಿಸಬಹುದು. ‘ಹಲ’ ಎಂಬುದು ನಾಮಪದವಾಗಿರುವ ಸಾಧ್ಯತೆಗಳೂ ಇದೆ. ಹಾಗೆಯೇ ಹಲ ಎಂಬುದು ಕೃಷಿಯ ಉಪಕರಣವೂ ಹೌದು. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಈ ಕೃಷಿ ಬಳಕೆಯ ಉಪಕರಣವನ್ನು ತಯಾರಿಸುತ್ತಿರಬಹುದು ಅಥವಾ ‘ಹಲ’ನೆಂಬ ವ್ಯಕ್ತಿಯ ಅಡಿ(ಪಾದ)ಯಿಂದಾಗಿ ಈ ಗ್ರಾಮಕ್ಕೆ ಈ ಹೆಸರು ಬಂದಿರಲೂಬಹುದು ಎಂದು ಊಹಿಸಬಹುದಾಗಿದೆ.
ಶಾಸನವು ಮುಂಭಾಗ 10 ಸಾಲು ಹಿಂಭಾಗ 13 ಸಾಲು ಹೊಂದಿದೆ. ವಿಜಯನಗರದ ಕೃಷ್ಣರಾಯರ ಕಾಲಕ್ಕೆ ಸೇರಿದ್ದು “ನೆಲುವಾಗಿಲ ಸೀಮೆಯನ್ನು ನರಸನಾಯಕ ಅಯ್ಯನವರಿಗೆ ಗವುರೆನಾಯಕರು ಹಾಲಡಿಯ ಅಮರ ನಾಯಕತನವನು, ಸೀತಪ್ಪನ ಮಗ ಬಯಿರಪಗಳು ಬಸವಯ್ಯಗೆ ಗೊಡಗು ಮಾನ್ಯವಾಗಿ ವಿಶು ಸಂವತ್ಸರದಲ್ಲಿ” ದಾನ ನೀಡಿದ ಮಾಹಿತಿ ನೀಡುತ್ತದೆ. ಈ ಮಾನ್ಯಕ್ಕೆ ತಪ್ಪಿದವರು ವಾರಣಾಸಿಯಲ್ಲಿ ಹಸುವನ್ನು ಕೊಂದ ಪಾಪದಲ್ಲಿ ಹೋಗುವರು ಎಂಬ ಶಾಪಾಶಯವನ್ನು ಹೊಂದಿದೆ.
ನೊಳಂಬರ ಶಾಸನಗಳು ಅತಿಹೆಚ್ಚು ವೀರಗಲ್ಲುಗಳೇ ಇದ್ದು ಶಾಸನಗಳನ್ನು ಒಳಗೊಂಡ ಶಾಸನೋಕ್ತ ವೀರಗಲ್ಲುಗಳೇ ಆಗಿವೆ. ದೇವಾಲಯಗಳಿಗೆ ದಾನ ನೀಡಿದ ಶಾಸನಗಳನ್ನು ಸಹ ಗುರುತಿಸಬಹುದು. ಸುಮಾರು 1000 ವರ್ಷಗಳಿಗೂ ಮಿಗಿಲು ಕನ್ನಡ ನಾಡನ್ನು ಆಳಿದ ಕೀರ್ತಿ ಈ ವಂಶಕ್ಕೆ ಸಲ್ಲುತ್ತದೆ. ಸಾಮ್ರಾಟರಾಗಿ, ರಾಜರಾಗಿ, ಸಾಮಂತರಾಗಿ, ಮಾಂಡಲೀಕರಾಗಿ, ಸ್ವತಂತ್ರ ಪಾಳೇಗಾರರಾಗಿ ಕನ್ನಡ ನಾಡಿನಾದ್ಯಂತ ತಮ್ಮ ಚಹರೆಗಳನ್ನು ಉಳಿಸಿದ್ದಾರೆ. ಮೂಲ ಶೈವರಾದರೂ ಎಲ್ಲಾ ಧರ್ಮಗಳ ಸಮನ್ವಯಕಾರರಾಗಿರುವುದು ಕಾಣಬಹುದು. ಇವರ ರಾಜ ಲಾಂಛನ ನಂದಿ ಎನಿಸಿದರೂ ಇವರ ಎಲ್ಲಾ ವೀರಗಲ್ಲುಗಳಲ್ಲಿ ‘ಕುಂಭ ಮತ್ತು ಕಂಭ’ವನ್ನು ಕಾಣಬಹುದಾಗಿದೆ.

Read More »

ಬಸವನ ಬಾಗೇವಾಡಿ ತಾಲ್ಲೂಕಿನ ದಲಿತ ಚಳುವಳಿ: ಒಂದು ಅವಲೋಕನ.

ಯಮನಪ್ಪ ಹುಸನಪ್ಪ ಅಂಗಡಗೇರಿ, ಎಂ.ಎನ್.‌ ಬೆನ್ನೂರ

134 to 140

ಚಳುವಳಿಗಳು ನೊಂದವರ ಬದುಕನ್ನು ಕಟ್ಟಿಕೊಡುವ ಸಾಧನಗಳಾಗಿವೆ, ಶೋಷಣೆ, ದಬ್ಬಾಳಿಕೆ, ಭೂ ಒಡೆತನ ಹಾಗೂ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಮತ್ತು ಸಂವಿಧಾನದ ಆಶಯದಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಅವಕಾಶಗಳ ಸಮಾನತೆಗಾಗಿ, ಮೂಢನಂಬಿಕೆ, ಕಂದಾಚಾರ, ಅನಿಷ್ಟ ಪದ್ಧತಿ ಆಚರಣೆಯ ವಿರುದ್ಧವಾಗಿ ದಮನಿತರು ತಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ, ದಲಿತ ಸಂಘಟನೆಗಳು ನೊಂದವರ, ನಿರಾಶ್ರಿತರ, ನಿರ್ಗತಿಕರ ಏಳಿಗೆಗಾಗಿ ನಡೆದ ಹೋರಾಟಗಳನ್ನು ನಾವು ನೆನೆಯಲೇಬೇಕು.

Read More »

Exploring the Theatrical Legacy of Adya Rangacharya: A Comprehensive Overview

Prabhuraja

141 to 147

Adya Rangacharya, known by his pen name Sriranga, was a seminal figure in Kannada theatre whose works span across full-length dramas, one-act plays, novels, and critical essays. His journey from village aatas to the heights of professional theatre reflects his profound influence on the cultural and artistic landscape of Karnataka. This article explores Sriranga’s contributions to Kannada theatre, emphasizing his innovative approach to dramaturgy, his integration of traditional and modern elements, and his lasting legacy in the performing arts.

Read More »

The Role of Swadhar Greh Centers of Karnataka in Protecting Women

Srinivasa B.S.

148 to 160

The status of women in India is highly influenced by the patriarchal society. Women in general are the easy victims of domestic violence, discrimination, caste based atrocities in many situations across communities in India. As repercussions to family/ individual /societal conflicts Women are subjected to heinous crimes such as violence, murder, eve teasing, Kidnapping, rape etc. According to National Crime Records Bureau 2020; -A total of 3,71,503 cases of crime against women were registered during 2020. The crime rate recorded per lakh women population is 56.5 in 2020 compared to 62.3 in 2019.
Considering the crime rates against women in India, the Government of India has taken up measures to reduce and prevent atrocities against women through strict judiciary measures. Further by considering the effect of crime on the victim, the central government has taken up remedial and protective measures towards women who are in distress. One such measures include the Swadhar Greh Scheme. This yojana/scheme addresses to those women in distress especially due to marital violence, societal crimes, etc. by providing immediate psychological and social support through short stay shelter homes that includes free medical and judicial support along with rehabilitative measures in order to bring them back to the mainstream society.

Read More »