ಜನಪದ ಹಾಡ್ಗತೆ: ಸಂಘರ್ಷ ಮತ್ತು ಮಹಿಳಾ ಸಂವೇದನೆ
Main Article Content
Abstract
ಜನಪದ ಹಾಡ್ಗತೆಗಳಲ್ಲಿ ಸಂಘರ್ಷ ಮತ್ತು ಮಹಿಳಾ ಸಂವೇದನೆ ಎಂಬುದು ಜನಪದ ನೈಜ ಬದುಕಿನ ಸಹಜ ಸ್ವಾಭಾವಿಕತೆಯನ್ನು ತೆರೆದಿಡುವಂತಹ ಲೇಖನ. ಹಾಡ್ಗತೆಗಳನ್ನು ಕೂಲಂಕಷವಾಗಿ ಅಧ್ಯಯನಕ್ಕೆ ತೊಡಗಿಸುತ್ತಾ ಹೋದಂತೆ ಸಮಾಜದ ಬದುಕಿನ ಜನರ ನೈಜ ಚಿತ್ರಣವು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಅಂತಹ ನೈಜ ಚಿತ್ರಣಗಳಲ್ಲಿ ಒಂದಾದಂತಹ ‘ಮರೆಯಾದ ಮಲಕವ್ವ’ ಕಥನ ಕಾವ್ಯ, ‘ಯಲುರಾಜನ ಮಡದಿ’ ಕಥನ ಕಾವ್ಯ ಹಾಗೂ ‘ಒಡ್ಡರಬೊಯಿ’ ಮತ್ತು ‘ಕೆರೆಗೆ ಹಾರ’ದಂತಹ ಕಥನ ಕಾವ್ಯಗಳನ್ನು ಪುರೋಹಿತಶಾಹಿ ಹಾಗೂ ಊಳಿಗಮಾನ್ಯ ವ್ಯವಸ್ಥೆ, ಸ್ತ್ರೀವಾದದ ನೆಲೆಯನ್ನು ಈ ಲೇಖನದ ಮೂಲಕ ವಿಮರ್ಶಿಸಲಾಗಿದೆ.
ಸಮಾಜದಲ್ಲಿ ಹೆಣ್ಣಿನ ಸಂವೇದನೆ ಹಾಗೂ ಬದುಕಿನ ಸಂಘರ್ಷವನ್ನು ಕುರಿತಂತಹ ಆಲೋಚನೆಗಳು ಇಲ್ಲಿ ಅಡಕವಾಗಿವೆ. ಜೊತೆಗೆ ಧರ್ಮ ಸಂಘರ್ಷ, ಜಾತಿ ಸಂಘರ್ಷ ಹಾಗೂ ಸಾಮಾಜಿಕವಾಗಿ ಹೆಣ್ಣು ಅನುಭವಿಸಿದಂತಹ ಶೋಚನೀಯ ಬದುಕಿನ ಚಿತ್ರಣಗಳು ಈ ಕಾವ್ಯದ ಮೂಲಕ ವಿಶ್ಲೇಷಣೆಗೆ ಒಳಪಟ್ಟಿವೆ.
ಧರ್ಮ ಸಂಘರ್ಷ ಹಾಗೂ ಜಾತಿ ಸಂಘರ್ಷದ ನೆಲೆಯಲ್ಲಿ ನಡೆಸುವ ಹುಡುಕಾಟವು ಧರ್ಮಾತೀತವಾದ ಆಲೋಚನೆಗೆ ಸಂಬಂಧಿಸಿದೆ, ಆದರೂ ಅವುಗಳನ್ನು ಹತ್ತಿಕ್ಕಿದ ಸಮಾಜದ ಸೂಕ್ಷ್ಮ ಚಿತ್ರಣಗಳು ನಮ್ಮ ಜನಪದರ ಚಿಂತನೆಯಲ್ಲಿ ಇರುವುದನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿಸಿವೆ. ಊಳಿಗಮಾನ್ಯ ವ್ಯವಸ್ಥೆಯ ಅಡಿಯಲ್ಲಿ ಶೋಷಿತರಾಗುವ ತಳ ಸಮುದಾಯದ ಹೆಣ್ಣಿನ ಆಂತರಿಕ ತಲ್ಲಣಗಳು ಇಲ್ಲಿ ವಿಶ್ಲೇಷಣೆಗೆ ಒಳಗಾಗಿವೆ.
ಸಾಂಸ್ಕೃತಿಕವಾಗಿ ಹೆಣ್ಣನ್ನು ಬಲಿಯಾಗಿಸಿದ ಸಮಾಜದ ವಿರುದ್ಧ ಸ್ತ್ರೀ ತನ್ನ ಸಂವೇದನೆಯನ್ನು ಮೌನವಾಗಿ ಪ್ರತಿರೋಧಿಸಿದ ನೆಲೆಯನ್ನು ಗುರುತಿಸಲಾಗಿದೆ. ಇವು ಪುರುಷಾಧಿಕಾರದ ನೆಲೆ ಹಾಗೂ ಪುರೋಹಿತಶಾಹಿ ಅಧಿಕಾರದ ನೆಲೆಯೊಳಗೆ ಹೆಣೆಯಲ್ಪಟ್ಟಿದ್ದು, ಸಮಾಜಕ್ಕೆ ಹೆಣ್ಣು ನೀಡಿದ ಪ್ರತಿಕ್ರಿಯೆಯಾಗಿವೆ. ಕಾವ್ಯವನ್ನು ಕಟ್ಟುವುದರ ಮೂಲಕ ಹಾಡ್ಗತೆಗಳಾಗಿ, ಬದುಕಿನ ಬವಣೆಗಳಾಗಿ ಅಭಿವ್ಯಕ್ತಗೊಂಡಿವೆ. ಹಾಗಾಗಿ ಜನಪದ ಕಥನ ಕಾವ್ಯಗಳಲ್ಲಿ ಹೆಣ್ಣಿನ ಸೂಕ್ಷ್ಮ ಸಂವೇದನೆಯ ಆಲೋಚನೆಗಳಿವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಹಲಸಂಗಿ ಗೆಳೆಯರು (ಸಂ), (2018), ಗರತಿಯ ಹಾಡು, ಸಮಾಜ ಪುಸ್ತಕಾಲಯ, ಧಾರವಾಡ.
ಸುಂಕಾಪುರ ಎಂ.ಎಸ್. (ಸಂ), (2018), ಗರತಿಯ ಗರಿಮೆ, ಪೊಡವಿ ಪ್ರಕಾಶನ, ಮೈಸೂರು.
ರಾಮಚಂದ್ರೇ ಗೌಡ ಹಿ.ಶಿ., (2008), ಜಾನಪದ ದೇಶಿ: ಸಿದ್ಧಾಂತ ಮತ್ತು ಪ್ರಯೋಗ, ವಿಜಯಲಕ್ಷ್ಮಿ ಪ್ರಕಾಶನ, ಮೈಸೂರು.
ವಸುಂಧರಾ ಭೂಪತಿ, (2017), ಮಹಿಳೆ ಮತ್ತು ಮೌಢ್ಯ, ನವಕರ್ನಾಟಕ ಪ್ರಕಾಶನ, ಬೆಂಗಳೂರು.
ಹೆಗಡೆ ಎಲ್.ಆರ್., (1979), ಯಲುರಾಜನ ಮಡದಿ, ಮುಕುರಿ ಮತ್ತು ಹೊಲೆಯರ ಪದಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ಕೃಷ್ಣಮೂರ್ತಿ ಕ.ರಾ., (1962), ಮರೆಯಾದ ಮಲಕವ್ವ, ಅಂಬಿಗರ ಗಂಗ ಮತ್ತು ಇತರ ಹಾಡುಗಳು, ಜಾನಪದ ಸಾಹಿತ್ಯ ಅಕಾಡೆಮಿ, ಮೈಸೂರು.