ಗಂಡಿಲ ಓಬವ್ವ ನಾಗತಿ: ಸಾಹಿತ್ಯ ಮತ್ತು ಚರಿತ್ರೆಯ ಹಿನ್ನೆಲೆಯಲ್ಲಿ ಒಂದು ಅಧ್ಯಯನ

Main Article Content

ದೇವೇಂದ್ರಪ್ಪ ಕೆ.

Abstract

ಭಾರತದ ಚರಿತ್ರೆಯನ್ನು ಅಧ್ಯಯನದ ದೃಷ್ಟಿಯಲ್ಲಿ ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಿ ನೋಡಬಹುದು. ಒಂದು ಉತ್ತರ ಭಾರತದ ಚರಿತ್ರೆ, ಮತ್ತೊಂದು ದಕ್ಷಿಣ ಭಾರತದ ಚರಿತ್ರೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಅನೇಕ ಅರಸುಮನೆತನಗಳು, ಸಾಮಂತರಾಜರುಗಳು, ಸಣ್ಣಪುಟ್ಟ ಪಾಳೆಯಗಾರರು ಆಳ್ವಿಕೆ ಮಾಡಿರುವುದು ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ಅರಸುಮನೆತನಗಳಲ್ಲಿ ವಿಜಯನಗರ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯವು 1565 ರಲ್ಲಿ ನಡೆದ ತಾಳಿಕೋಟೆ ಯುದ್ಧದಲ್ಲಿ ಸೋಲನ್ನು ಕಂಡು ಪತನವಾಗುತ್ತದೆ. ಆನಂತರ ಅನೇಕ ಸಣ್ಣ ರಾಜ್ಯಗಳು ಉದಯಿಸಿದವು. ಅವುಗಳಲ್ಲಿ ಮೈಸೂರು ಸಂಸ್ಥಾನ, ಕೆಳದಿ ನಾಯಕರು, ಚಿತ್ರದುರ್ಗದ ಪಾಳೆಯಗಾರರು ಹಾಗೂ ಮುಂತಾದವರು ಕಂಡುಬರುತ್ತಾರೆ. ಹೀಗೆ ಕನ್ನಡ ನಾಡಿನಲ್ಲಿ ಅನೇಕ ರಾಜಮನೆತನಗಳು, ಸಾಮಂತರಾಜರುಗಳು ಹಾಗೂ ಪಾಳೆಯಗಾರರು ಆಳ್ವಿಕೆ ನಡೆಸಿದ್ದಾರೆ. ಈ ಆಳ್ವಿಕೆಯಲ್ಲಿ ರಾಜರುಗಳ ಪಾರುಪತ್ಯ ಹೆಚ್ಚಿರುವುದನ್ನು ಗುರುತಿಸಬಹುದು. ರಾಜನೇ ಸರ್ವಾಧಿಕಾರಿಯಾಗಿರುತ್ತಾನೆ. ರಾಜರು ಗತಿಸಿದಾಗ ಮತ್ತೊಬ್ಬರು ಪಟ್ಟಕ್ಕೆ ಬರುವವರೆಗೂ, ಮತ್ತು ಪಟ್ಟಾಭಿಷಕ್ತನಾಗಿರುವ ವ್ಯಕ್ತಿ ಚಿಕ್ಕವನಾಗಿದ್ದರೆ, ಆ ಸಂದರ್ಭದಲ್ಲಿ ರಾಣಿಯರು ಅಧಿಕಾರ ವಹಿಸಿಕೊಂಡ ನಿದರ್ಶನಗಳು, ಆಳ್ವಿಕೆಗೈದ ವಿವರಗಳು ಚರಿತ್ರೆಯಿಂದ ಕಂಡುಬರುತ್ತವೆ.
ಕರ್ನಾಟಕದ ಚರಿತ್ರೆಯನ್ನು ಅಧ್ಯಯನ ಮಾಡಿದಾಗ ಅನೇಕ ವೀರ ಪುರುಷರು ಕಾಣಸಿಗುತ್ತಾರೆ. ಅಂತೆಯೇ ಕೆಲವು ವೀರ ಮಹಿಳೆಯರೂ ಕಂಡುಬರುತ್ತಾರೆ. ಅವರುಗಳಲ್ಲಿ ಪ್ರಮುಖರೆನಿಸಿದ ಪೋರ್ಚುಗೀಸರ ಸದ್ದಡಗಿಸಿದ ‘ರಾಣಿ ಅಬ್ಬಕ್ಕ’, ಬ್ರಿಟಿಷರನ್ನ ನಡುಗಿಸಿ ಅವರ ವಿರುದ್ಧ ಹೋರಾಡಿದ ‘ಕಿತ್ತೂರು ರಾಣಿ ಚೆನ್ನಮ್ಮ’, ಕ್ರಿ.ಶ 1664 ರಿಂದ 1679 ರವರೆಗೆ ಕೆಳದಿಯ ಸಂಸ್ಥಾನವನ್ನು ಆಳಿದ ‘ಕೆಳದಿ ಚೆನ್ನಮ್ಮ’, 17 ನೇ ಶತಮಾನದಲ್ಲಿ ಶಿವಾಜಿ ಸೈನ್ಯವನ್ನು ಹಿಮ್ಮೆಟ್ಟಿಸಿದ ‘ಬೆಳವಾಡಿ ಮಲ್ಲಮ್ಮ’, ಹಾಗೂ 18 ನೇ ಶತಮಾನದಲ್ಲಿನ ಚಿತ್ರದುರ್ಗದ ಓನಕೆ ಓಬವ್ವ, ಈ ವೀರ ಮಹಿಳೆಯರಂತೆಯೇ ಚಿತ್ರದುರ್ಗದ ಮತ್ತೊರ್ವ ವೀರ ನಾಗತಿಯಾದ ಓಬವ್ವನಾಗತಿಯನ್ನು ಕಾಣಬಹುದು. ಇವರ ಕಾಲದಲ್ಲಿನ ಆಡಳಿತ, ವೀರತ್ವ, ರಾಜಕೀಯದಲ್ಲಿನ ಚತುರತೆ ಅಥವಾ ನಿಪುಣತೆ ಮತ್ತು ಮುತ್ಸದ್ದಿತನ ಇವುಗಳಿಂದ ಓಬವ್ವನಾಗತಿಯು ವೀರ ಮಹಿಳೆಯಾಗಿ ಕಂಡುಬರುತ್ತಾಳೆ.

Article Details

Section

Research Articles

Author Biography

ದೇವೇಂದ್ರಪ್ಪ ಕೆ.

ಸಂಶೋಧನಾ ವಿದ್ಯಾರ್ಥಿ, ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾಲಯ, ತುಮಕೂರು.

How to Cite

ದೇವೇಂದ್ರಪ್ಪ ಕೆ. (2025). ಗಂಡಿಲ ಓಬವ್ವ ನಾಗತಿ: ಸಾಹಿತ್ಯ ಮತ್ತು ಚರಿತ್ರೆಯ ಹಿನ್ನೆಲೆಯಲ್ಲಿ ಒಂದು ಅಧ್ಯಯನ. ಅಕ್ಷರಸೂರ್ಯ (AKSHARASURYA), 7(05), 22 to 31. https://aksharasurya.com/index.php/latest/article/view/1316

References

ಗಿರಿಜಾ ಟಿ., (2013), ದುರ್ಗದ ನಾಗತಿಯರು, ಲಕ್ಷ್ಮೀ ಮುದ್ರಣಾಲಯ, ದಾವಣಗೆರೆ.

ಪುಟ್ಟಣ್ಣ ಎಂ.ಎಸ್., (1997), ಚಿತ್ರದುರ್ಗದ ಪಾಳೆಯಗಾರರು, ಕಾವ್ಯಾಲಯ ಪ್ರಕಾಶ, ಜಯನಗರ.

ಮೀರಾಸಾಬಿಹಳ್ಳಿ ಶಿವಣ್ಣ (ಸಂ), (2020), ದುರುಗ ಸೀಮೆ ಜಾನಪದ, ಪಟೇಲ್ ಪ್ರತಿಷ್ಠಾನ, ಬೆಂಗಳೂರು.

ಸುಬ್ಬರಾಯ ತ.ರಾ., (1987), ದುರ್ಗಾಸ್ತಮಾನ, ಹೇಮಂತ ಪ್ರಕಾಶನ, ಬೆಂಗಳೂರು.

ರಾಜಶೇಖರಪ್ಪ ಬಿ., (2001), ಇತಿಹಾಸ ಕಥನ, ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು.

ರಾಜಶೇಖರಪ್ಪ ಬಿ., (2009), ದುರ್ಗಶೋಧನ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ರಾಜಶೇಖರಪ್ಪ ಬಿ., (2016), ಪ್ರಾಚೀನ ಚಿತ್ರದುರ್ಗ, ಶ್ರೀ ಮುರುಘರಾಜೇಂದ್ರ ಗ್ರಂಥಮಾಲೆ, ಶ್ರೀ ಮುರುಘಾಮಠ, ಚಿತ್ರದುರ್ಗ.

ಲಕ್ಷ್ಮಣ್ ತೆಲಗಾವಿ, (2022), ಸುಹೃದ ಸ್ಫುರಣ, ರವಿದಾಸ ಪ್ರಕಾಶನ, ಧಾರವಾಡ.

ಲಕ್ಷ್ಮಣ್ ತೆಲಗಾವಿ, ಶ್ರೀನಿವಾಸ ಎಂ.ವಿ., (1976), ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು, ಹುಲ್ಲೂರು ಶ್ರೀನಿವಾಸ ಜೋಯಿಸ ಗ್ರಂಥ ಪ್ರಕಟಣಾ ಸಮಿತಿ, ಚಿತ್ರದುರ್ಗ.

ಸವಿತ ಎಸ್., (2015), ತರಾಸು ಅವರ ಐತಿಹಾಸಿಕ ಕಾದಂಬರಿಗಳಲ್ಲಿ ಮಹಿಳೆ, ಯುಕ್ತ ಪ್ರಕಾಶನ, ಚಿತ್ರದುರ್ಗ.