ರಾಷ್ಟ್ರ ನಿರ್ಮಾಣದಲ್ಲಿ ತ್ರಿಭಾಷಾ ಸೂತ್ರದ ಪಾತ್ರ

Main Article Content

ಚಂದ್ರಶೇಖರ ಎನ್.ಪಿ.

Abstract

ಡಾ. ರಾಧಾಕೃಷ್ಣನ್ ಸಮಿತಿಯ 1948ರ ಶಿಫಾರಸು: ಹೈಯರ್ ಸೆಕೆಂಡರಿ ಮತ್ತು ವಿಶ್ವವಿದ್ಯಾನಿಲಯ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆ, ಫೆಡರಲ್ ಭಾಷೆ ಮತ್ತು ಇಂಗ್ಲಿಷ್ ಒಳಗೊಂಡ ತ್ರಿಭಾಷೆಗಳಲ್ಲಿ ಪರಿಣತರನ್ನಾಗಿ ಮಾಡಬೇಕು. ಸ್ವಾತಂತ್ರ್ಯಾನಂತರ 1952ರಲ್ಲಿ ಮೊದಲಿಯಾರ್ ಶಿಕ್ಷಣ ಆಯೋಗವು ಪ್ರಥಮ ಬಾರಿಗೆ ತ್ರಿಭಾಷಾ ಸೂತ್ರವನ್ನು ಶಿಫಾರಸು ಮಾಡಿತ್ತು. ಅದನ್ನು ದಕ್ಷಿಣದ ರಾಜ್ಯಗಳು ವಿರೋಧಿಸಿದ್ದವು. ಭಾಷಾ ನೀತಿ ಕುರಿತು ದೇಶಾದ್ಯಂತ ಅಧಿಕೃತ ಭಾಷೆಗಳ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದವು. ಹಿಂದಿ ಭಾಷೆಯ ಪರವಾಗಿದ್ದ ಸದಸ್ಯರು ಡಾ. ರಾಮ್ ಮನೋಹರ್ ಅವರ ಘೋಷಣೆಯೊಂದಿಗೆ ಹಿಂದಿಯನ್ನು ಅಧಿಕೃತ ಭಾಷೆ ಎಂದು ಪ್ರಚಾರ ಮಾಡುತ್ತಿದ್ದರು. ಲೋಹಿಯಾ ಜಿ “ಇಂಗ್ಲಿಷ್ ಅನ್ನು ಬಹಿಷ್ಕರಿಸಿ (ಅಂಗ್ರೇಜಿ ಹಟಾವೋ)” ಎಂದು ಹೇಳಿದರೆ, ಇಂಗ್ಲಿಷ್ ಪರವಾಗಿದ್ದ ಗುಂಪು “ಇಂಗ್ಲಿಷ್ ಫಾರ್ ಎವರ್, ಹಿಂದಿ ನೆವರ್” ಎಂಬ ಘೋಷಣೆಯೊಂದಿಗೆ ಆಂದೋಲನ ನಡೆಸಿದವು. ಸಂಸತ್ತಿನ ಒಳಗೂ ಇದೇ ಪರಿಸ್ಥಿತಿ ಇತ್ತು.
5ನೇ ಸೆಪ್ಟೆಂಬರ್-1959 ರಂದು ಲೋಕಸಭೆಯಲ್ಲಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭರವಸೆ: ಇಂತಹ ಪರಿಸ್ಥಿತಿಯಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂಸತ್ತಿನಲ್ಲಿ ಹಿಂದಿಯೇತರ ರಾಜ್ಯಕ್ಕೆ ನೀಡಿದ ಭರವಸೆಯನ್ನು ಗಮನಿಸುವುದು ಯೋಗ್ಯವಾಗಿದೆ: “ಇಂಗ್ಲಿಷ್ ಅಧಿಕೃತ ಭಾಷೆ ಹಿಂದಿಗೆ ಸಹವರ್ತಿ ಭಾಷೆಯಾಗಿ ಮುಂದುವರಿಯುತ್ತದೆ. ಎಷ್ಟು ಕಾಲ ಇಂಗ್ಲಿಷ್ ಸಹವರ್ತಿ ಭಾಷೆಯಾಗಿ ಮುಂದುವರಿಯಬೇಕು ಎಂಬ ಪ್ರಶ್ನೆಯನ್ನು ಹಿಂದಿಯೇತರ ಜನರು ಮಾತ್ರ ನಿರ್ಧರಿಸುತ್ತಾರೆ... ಹಿಂದಿಯೇತರ ಜನರ ಮೇಲೆ ಯಾವುದೇ ನಿರ್ಬಂಧ ಹೇರಲಾಗುವುದಿಲ್ಲ... ನಾನು ಖಂಡಿತವಾಗಿಯೂ ಸ್ವಾಗತಿಸುತ್ತೇನೆ... ಹಿಂದಿಯನ್ನು ಬೇಡದ ಯಾವುದೇ ರಾಜ್ಯದ ಮೇಲೆ ಕಡ್ಡಾಯವಾಗಿ ಹೇರಲು ನಾನು ಬಯಸುವುದಿಲ್ಲ.” ಏತನ್ಮಧ್ಯೆ, ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿಯು ಭಾರತೀಯ ಶಿಕ್ಷಣದಲ್ಲಿ “ತ್ರಿಭಾಷಾ ಸೂತ್ರ”ವನ್ನು ಪ್ರಸ್ತಾಪಿಸಿತು. 1961ರ ಆಗಸ್ಟ್ 10, 11 ಮತ್ತು 12ರಂದು ನಡೆದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮಂತ್ರಿಗಳ ಸಭೆಯಲ್ಲಿ ಇದನ್ನು ಅನುಮೋದಿಸಲಾಯಿತು.

Article Details

Section

Research Articles

Author Biography

ಚಂದ್ರಶೇಖರ ಎನ್.ಪಿ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

How to Cite

ಚಂದ್ರಶೇಖರ ಎನ್.ಪಿ. (2025). ರಾಷ್ಟ್ರ ನಿರ್ಮಾಣದಲ್ಲಿ ತ್ರಿಭಾಷಾ ಸೂತ್ರದ ಪಾತ್ರ. ಅಕ್ಷರಸೂರ್ಯ (AKSHARASURYA), 7(05), 10 to 21. https://aksharasurya.com/index.php/latest/article/view/1315

References

ಕೃಷ್ಣಯ್ಯ ಎಂ.ಎಚ್., (1999), ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಅಂಕಿತ ಪುಸ್ತಕ, ಬೆಂಗಳೂರು.

ಶಂಕರ ಭಟ್ ಡಿ.ಎನ್., (1995), ಭಾಷೆಯ ಕಲ್ಪಿತ ಚರಿತ್ರೆ, ಹಂಪಿ ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ.

ತಿಪ್ಪೆರುದ್ರಸ್ವಾಮಿ ಎಚ್., (1968), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಶಾರದಾ ಪ್ರಕಾಶನ, ಬೆಂಗಳೂರು.

ಕರೀಗೌಡ ಬೀಚನಹಳ್ಳಿ, (1999), ಭಾಷಾಂತರದ ಸಾಂಸ್ಕೃತಿಕ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಮಹದೇವಯ್ಯ ಪಿ., (2009), ಆಡಳಿತ ಕನ್ನಡ, ಪ್ರಕಾಶನ, ದೂರ ಶಿಕ್ಷಣ ಕೇಂದ್ರ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕಾಮತ್ ಎಂ.ವಿ. (ಮೂಲ), ರಂಗನಾಥ್ (ಅನುವಾದ), (1985), ಚೆಲುವ ಕನ್ನಡ ನಾಡು, ವಿಕಾಸ್ ಪಬ್ಲಿಷಿಂಗ್ ಹೌಸ್ ಪ್ರೈ.ಲಿ., ಹೊಸ ದೆಹಲಿ.

ಕೃಷ್ಣರಾಯ ಅ.ನ., (1946), ಅಖಂಡ ಕರ್ನಾಟಕ, ಪ್ರಗತಿಶೀಲ ಲೇಖಕರ ಸಂಘ, ಬೆಂಗಳೂರು ನಗರ.

ಗಳಗನಾಥ, (2011), ಕನ್ನಡಿಗರ ಕರ್ಮಕಥೆ ಅಥವಾ ವಿಜಯನಗರ ರಾಜ್ಯದ ನಾಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ.

ಸಂಸತ್ತಿನ ಅಧಿವೇಶನದಲ್ಲಿ ಚರ್ಚೆಯಾದ ಮಸೂದೆಗಳು, 1963 ರ ಅಧಿಕೃತ ಭಾಷಾ ಕಾಯ್ದೆ.

ಸಂವಿಧಾನ ರಚನಾ ಸಭೆಯ ಭಾಷಣಗಳು (1946-1949)

ಕೇಂದ್ರ ಸರ್ಕಾರದ ಸುತ್ತೋಲೆಗಳು (1976)

Santosh Aggarwal, (1991), The Three Language Formula: An Educational Problem, Gian Publishing House.

The Karnataka Official Language Act, 1963 (Karnataka Act 26 of 1963)

Most read articles by the same author(s)