Published: 2025-12-05

Table of Contents

Table of Contents

I to V

ಬುದ್ಧ ಮತ್ತು ಬಸವಣ್ಣನ ದೃಷ್ಟಿಕೋನ: ಮಹಿಳೆ

ಅರುಣ್ ಕುಮಾರ್ ಎ.ವೈ., ಶಿವಕುಮಾರ ಡಿ.ಸಿ.

01 to 06

ಭಾರತೀಯ ದಾರ್ಶನೀಕ ಪರಂಪರೆಯಲ್ಲಿ ಬುದ್ಧ ಮತ್ತು ಬಸವಣ್ಣ ಈ ಇಬ್ಬರನ್ನು ಮಹಾನ್ ಸಮಾಜವಾದಿಗಳನ್ನಾಗಿ ಗುರುತಿಸಲಾಗಿದೆ. ಈ ಇಬ್ಬರಲ್ಲೂ ಕೂಡ ಹಳೆಯ ಮೌಢ್ಯಗಳ, ಆಚರಣೆಗಳ ವಿರುದ್ಧ ಧ್ವನಿ ಎತ್ತುವ ಗುಣವಿತ್ತು. ವಿಶಿಷ್ಟವಾಗಿ ಕಾಣುವುದಾದರೆ ಈ ಇಬ್ಬರಲ್ಲೂ ಸಮಾನತೆಯ ಕುರಿತಾದ ದೃಷ್ಟಿಯೂ ಹೆಚ್ಚು ಪ್ರಗತಿಪರವಾಗಿದ್ದವೂ. ಈ ಹಿನ್ನೆಲೆಯಲ್ಲಿ ಮಹಿಳೆಯ ಕುರಿತಾದ ದೃಷ್ಟಿಕೋನವು ಹೆಚ್ಚು ಮಹತ್ವ ಉಳ್ಳದ್ದಾಗಿದೆ. ಈ ಮೂಲಕ ಮಹಿಳೆಯ ಕುರಿತಾದ ಹಳೆಯ ಆಲೋಚನೆಗಳನ್ನು ದಿಕ್ಕರಿಸುವ ಮುಖೇನ ಸ್ತ್ರೀಗೆ ಸಾಮಾಜಿಕ, ರಾಜಕೀಯ, ಧಾರ್ಮಿಕ ಭಾಗವಾಗಿಯೂ ಆಕೆಯನ್ನು ಸಮಾನವಾಗಿ ಕಾಣುವ ದೃಷ್ಟಿಯನ್ನು ಬುದ್ಧ ಮತ್ತು ಬಸವಣ್ಣನ ತಾತ್ವಿಕತೆಯ ಮೂಲಕ ಅರಿಯಬಹುದಾಗಿದೆ.
ಪ್ರಸ್ತುತ ಈ ಲೇಖನದಲ್ಲಿ ಬುದ್ಧ ಮತ್ತು ಬಸವಣ್ಣನ ವಿಚಾರಧಾರೆಗಳನ್ನು ಅವಲೋಕಿಸುವ ಮೂಲಕ ಬುದ್ಧ ಮತ್ತು ಬಸವಣ್ಣನ ದೃಷ್ಟಿಕೋನದಲ್ಲಿ ಮಹಿಳೆಯ ಕುರಿತಾದ ಪ್ರಗತಿಪರ ವಿಚಾರಗಳನ್ನು ಕನ್ನಡ ಸಾಹಿತ್ಯದಲ್ಲಿ ಒಳಗೊಂಡಿರುವುದನ್ನು ತಿಳಿಸುವುದಾಗಿದೆ. ಹಾಗಾಗಿ ಬುದ್ಧನ ಮತ್ತು ಬಸವಣ್ಣನ ಸ್ತ್ರೀ ಕುರಿತ ಆಲೋಚನೆಗಳು ಪ್ರಸ್ತುತಕ್ಕೂ ಅವು ಸ್ಪಂದಿಸುವ ಮತ್ತು ಪ್ರಗತಿಪರವಾದ ಆಶಯಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ.

Read More »

ಮುಕ್ತಾಯಕ್ಕನ ವಚನಗಳಲ್ಲಿ ದೇಹ ಮತ್ತು ಆತ್ಮ ನಿರೂಪಣೆ

ಉಮೇಶ್ ಎಂ.ಆರ್.

07 to 14

ಹನ್ನೆರಡನೆಯ ಶತಮಾನದ ವಚನ ಚಳುವಳಿಯನ್ನು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಒಂದು ಅಭೂತಪೂರ್ವ ಘಟ್ಟ ಎನ್ನಬಹುದು. ಜಡಗೊಂಡ ಸಾಮಾಜಿಕ ವ್ಯವಸ್ಥೆಯನ್ನು ಎಚ್ಚರಗೊಳಿಸುವ, ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವ ಸಾರ್ಥಕ ಕೆಲಸವನ್ನು ವಚನಕಾರರು ಮಾಡಿದರು. ಅವರ ವಚನಗಳು ಹೊಸ ಜಾಗೃತಿ ಹಾಗೂ ಜ್ಞಾನದ ಸಾಧ್ಯತೆಗಳಾಗಿ ಕೆಲಸ ಮಾಡಿದವು. ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಮೂಢನಂಬಿಕೆಗಳು, ಕಂದಾಚಾರಗಳು, ಜಾತಿ ಲಿಂಗಾಧಾರಿತ ತಾರತಮ್ಯ ಮುಂತಾವುಗಳನ್ನು ನಿವಾರಿಸಲು ಬಹು ದೊಡ್ಡ ವೈಚಾರಿಕ ಆಂದೋಲನವನ್ನು ವಚನಕಾರರು ಮಾಡಿದರು. ಎಂಟು ನೂರು ವರ್ಷಗಳ ನಂತರವೂ ಕೂಡಾ ವಚನಕಾರರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಸಮಾಜವನ್ನು ಮುನ್ನಡೆಸುವ ದಾರಿದೀಪಗಳಾಗಿ ಕೆಲಸ ಮಾಡುತ್ತಿವೆ ಎಂದರೆ ವಚನಕಾರರ ವಚನಗಳಲ್ಲಿ ಅಂತರ್ಗತವಾಗಿದ್ದ ತತ್ವ ಹಾಗೂ ಮೌಲ್ಯಗಳ ಗಟ್ಟಿತನವನ್ನು ಅರ್ಥಮಾಡಿಕೊಳ್ಳಬಹುದು.

Read More »

ಬಸವಣ್ಣನವರ ಪರಿವರ್ತನಾತ್ಮಕ ಮನೋಧರ್ಮ: ಅಂದು-ಇಂದು-ಮುಂದು

ಚಂದ್ರಶೇಖರ ಎನ್.ಪಿ.

15 to 24

ಬಸವಣ್ಣನವರ ಪರಿವರ್ತನಾತ್ಮಕ ಮನೋಧರ್ಮ ಮತ್ತು 12ನೇ ಶತಮಾನದಲ್ಲಿ ಅವರು ಮಾಡಿದ ಸಾಮಾಜಿಕ ಸುಧಾರಣೆಗಳ ಪ್ರಸ್ತುತತೆಯನ್ನು ಈ ಲೇಖನವು ವಿಶ್ಲೇಷಿಸುತ್ತದೆ. ಬಸವಣ್ಣನವರು ವೇದ, ಶಾಸ್ತ್ರಾಧಾರಿತ ವೈದಿಕ ಪುರೋಹಿತಶಾಹಿಯ ದಬ್ಬಾಳಿಕೆ, ಜಾತಿ ಮತ್ತು ಲಿಂಗ ತಾರತಮ್ಯವನ್ನು ದಿಕ್ಕರಿಸಿ ಅನುಭವ ಮಂಟಪ ಎಂಬ ಪ್ರಜಾಸತ್ತಾತ್ಮಕ ವೇದಿಕೆಯನ್ನು ಸ್ಥಾಪಿಸಿದರು. ಇದು ಶೋಷಿತ ಸಮುದಾಯ ಮತ್ತು ಮಹಿಳೆಯರಿಗೆ ಆತ್ಮಗೌರವ, ಸಮಾನ ಹಕ್ಕು, ಲಿಂಗ ಸಮಾನತೆ ಮತ್ತು ಮುಕ್ತ ಅಭಿವ್ಯಕ್ತಿ ಒದಗಿಸಿತು. ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವಗಳನ್ನು ಪ್ರತಿಪಾದಿಸುವ ಮೂಲಕ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಗಾಗಿ ಶ್ರಮಿಸಿದರು. ಬಸವಣ್ಣನವರ ತತ್ವಗಳು ಮತ್ತು ವಚನ ಸಾಹಿತ್ಯದ ಮುಕ್ತ ಚಿಂತನೆಗಳು ಇಂದಿನ ಮಹಿಳಾ ಅಸಮಾನತೆ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯಂತಹ ಜಾಗತಿಕ ಸವಾಲುಗಳಿಗೆ ಪರಿಹಾರ ಒದಗಿಸುವಲ್ಲಿ ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿವೆ ಎಂದು ಲೇಖನವು ಪ್ರತಿಪಾದಿಸುತ್ತದೆ.

Read More »

ಪ್ರಸ್ತುತ ಶಿಕ್ಷಣದಲ್ಲಿ ʼಗುರುಕುಲʼ ಶಿಕ್ಷಣ ಪದ್ಧತಿಯ ಅವಶ್ಯಕತೆ

ನವೀನ್ ಕುಮಾರ್ ಆರ್.ಎ., ಮಂಜುನಾಥ

25 to 33

ಭಾರತದ ಪುರಾತನ ಗುರುಕುಲ ಶಿಕ್ಷಣ ಪದ್ಧತಿಯು ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲ ವಿದ್ಯಾರ್ಥಿಗಳಿಗೆ ಗುರುಗಳ ಆಶ್ರಮದಲ್ಲಿ ವಾಸಿಸಿ, ಸಮಗ್ರ ಶಿಕ್ಷಣವನ್ನು ನೀಡುವ ಒಂದು ಅನನ್ಯ ವ್ಯವಸ್ಥೆಯಾಗಿತ್ತು. ಇದು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದ್ದು, ಗುರುಗಳ ನಿರ್ಧಾರವೇ ಅಂತಿಮವಾಗಿತ್ತು. ಗುರುಕುಲವು ವಿದ್ಯಾರ್ಥಿಗಳಿಗೆ ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ, ನೈತಿಕ, ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆಯನ್ನು ಒದಗಿಸುವ ಸಮಗ್ರ ಶಿಕ್ಷಣವನ್ನು ನೀಡುತ್ತಿತ್ತು. ಇಲ್ಲಿ ಶಿಕ್ಷಣವು ಸಂಪೂರ್ಣ ಉಚಿತವಾಗಿದ್ದು, ವಿದ್ಯೆ ಮುಗಿದ ನಂತರ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗುರುದಕ್ಷಿಣೆಯನ್ನು (ಧಾನ್ಯ, ವಸ್ತು, ಅಥವಾ ಚಿನ್ನ) ನೀಡುತ್ತಿದ್ದರು. ಗುರು-ಶಿಷ್ಯರ ಸಂಬಂಧವು ಕೇವಲ ಬೋಧನೆಗೆ ಸೀಮಿತವಾಗಿರದೆ, ಆಧ್ಯಾತ್ಮಿಕ ಮತ್ತು ನೈತಿಕ ಮಾರ್ಗದರ್ಶನವನ್ನು ಒಳಗೊಂಡಿದ್ದು, ಗುರುಗಳನ್ನು ದೇವರ ಪ್ರತಿನಿಧಿಗಳೆಂದು ಗೌರವಿಸಲಾಗುತ್ತಿತ್ತು. ದ್ರೋಣಾಚಾರ್ಯ-ಅರ್ಜುನ, ಸಾಂದೀಪನಿ-ಶ್ರೀಕೃಷ್ಣ ಮುಂತಾದವರ ಉದಾಹರಣೆಗಳು ಈ ಪರಂಪರೆಯ ಮಹತ್ವವನ್ನು ಎತ್ತಿ ತೋರಿಸುತ್ತವೆ. ಆದರೆ, ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯು ಹೆಚ್ಚಾಗಿ ಉದ್ಯೋಗ ಕೇಂದ್ರಿತವಾಗಿ, ಪ್ರವೇಶ ಶುಲ್ಕ, ಪರೀಕ್ಷಾ ಒತ್ತಡ ಮತ್ತು ತೀವ್ರ ಸ್ಪರ್ಧೆಗೆ ಒತ್ತು ನೀಡುತ್ತಿದೆ. ಇದು ಮಕ್ಕಳಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಸೃಷ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಜೀವನ ಮೌಲ್ಯಗಳು, ನೈತಿಕತೆ, ಧ್ಯಾನ, ಮತ್ತು ಪ್ರಕೃತಿಯೊಂದಿಗೆ ಕಲಿಕೆಯಂತಹ ಗುರುಕುಲ ಪದ್ಧತಿಯ ಅಂಶಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಇದು ಮಕ್ಕಳನ್ನು ಮಾನಸಿಕ ಒತ್ತಡದಿಂದ ಹೊರತಂದು, ಅವರನ್ನು ಸಂತೋಷ ಮತ್ತು ಜ್ಞಾನಯುತವಾದ ಸಮಗ್ರ ವ್ಯಕ್ತಿತ್ವಗಳನ್ನಾಗಿ ರೂಪಿಸಲು ನೆರವಾಗುತ್ತದೆ.

Read More »

ವಿಜಯಶ್ರೀಯವರ ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆ

ಮಹಾಲಿಂಗಪ್ರಭು

34 to 44

ಸಮಾಜ ಎಂಬ ಪರಿಕಲ್ಪನೆ ಮಾನವ ಪ್ರಾರಂಭ ಹಂತದಿಂದ ನಾಗರೀಕನಾಗುತ್ತಾ ಬೆಳೆದುಬಂದಂತೆ ಒಂದೆಡೆ ನೆಲೆಸುವ, ಕೂಡಿ ಬಾಳುವ ಹಂತದಲ್ಲಿ ಸಮಾಜ ಸಮುದಾಯ ಪರಿಕಲ್ಪನೆಗಳು ಬೆಳೆಯಲಾರಂಭಿಸಿದವು. ಧರ್ಮ, ಜಾತಿಗಳು ಹುಟ್ಟಿಕೊಂಡವು. ಸಾಮಾಜಿಕ ಸಂವೇದನೆ ಮತ್ತು ಸಾಹಿತ್ಯ ಸಂವೇದನೆಗಳೆರಡೂ ಬೇರೆ ಬೇರೆಯಲ್ಲ, ಅವು ಪರಸ್ಪರ ಸಾಹಚರ್ಯಭಾವ ಹೊಂದಿದೆಯೆಂಬ ಅಭಿಪ್ರಾಯ ಪಡುತ್ತಾರೆ.
ʼರವಿ ಕಾಣದ್ದನ್ನು ಕವಿ ಕಂಡʼ ಎಂಬಂತೆ ಸಮಾಜದ ಆಗುಹೋಗುಗಳನ್ನು ಲೇಖಕಿ ತಮ್ಮ ಲೇಖನಿಯಲ್ಲಿ ಮೂಡಿಸಿದ್ದಾರೆ. "ಮನುಷ್ಯ ಮನುಷ್ಯ ಸಂಬಂಧಗಳು ಅವು ಏಕಕಾಲಕ್ಕೆ ಕುಟುಂಬ ಸಂಬಂಧಗಳು ಹೌದು, ಸಾಮಾಜಿಕ ಸಂಬಂಧಗಳು ಹೌದು" ಎಂಬಂತೆ ಮಾನವ ಕುಟುಂಬ ಜೀವಿಯೂ ಹೌದು, ಸಾಮಾಜಿಕ ಜೀವಿಯೂ ಹೌದು. ಈ ಹಿನ್ನೆಲೆಯಲ್ಲಿ ಸಾಮರಸ್ಯ ಬಾಂಧವ್ಯಗಳು ಸಮಾಜದಲ್ಲಿ ಬಹಳ ಮಹತ್ವವೆನಿಸುತ್ತದೆ.
"ಪಡುವ ಕಡಲ ಹೊನ್ನಹೆಣ್ಣು
ನನ್ನ ಜೀವದುಸಿರು ಕಣ್ಣು
ನಲಿಸಿ ಕಲಿಸಿ ಮನವನೊಲಿಸಿ
ಕುಣಿಸಿರುವಳು"
ಎಂದು ಬಿ.ಎಂ.ಶ್ರೀ.ಯವರ ʼಇಂಗ್ಲೀಷ್ ಗೀತೆಗಳುʼ ಸಂಕಲನದಲ್ಲಿ ಕಾಣಿಕೆ ಕವನದಲ್ಲಿ ಹೇಳುವ ಮಾತು ಪಾಶ್ಚಿಮಾತ್ಯ ಸಮಾಜವನ್ನು ಕೂಡಾ ತನ್ನದಾಗಿಸಿಕೊಂಡ ಹೃದಯ ವೈಶಾಲ್ಯತೆಯನ್ನು ಕಾಣಬಹುದಾಗಿದೆ.
ವಿಜಯಶ್ರೀಯವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡವರು. ಇವರ ಕಾದಂಬರಿಗಳಲ್ಲಿ ಸಮಾಜದ ವಿವಿಧ ಮುಖಗಳನ್ನು ಅತ್ಯಂತ ನೈಜವಾಗಿ ಬಿಂಬಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಸಮಾಜದ ಮೌಢ್ಯ, ಮೂಢನಂಬಿಕೆಗಳು, ನಿಮ್ನ-ಮೇಲ್ವರ್ಗದ ಸಮಸ್ಯೆಗಳ ಚಿತ್ರಣ, ಬಡತನ, ನಿರುದ್ಯೋಗದ ಪರಿಕಲ್ಪನೆ, ವೇಶ್ಯಾ ಸಮಸ್ಯೆ, ಮಹಿಳೆ ಮೇಲಿನ ಅತ್ಯಾಚಾರ, ಬಾಲ್ಯವಿವಾಹ, ವಿಧವಾ ವಿವಾಹಗಳ ಬಗೆಗಿನ ಪರಿಕಲ್ಪನೆಗಳ ಬಗ್ಗೆ ಬೆಳಕು ಚೆಲ್ಲಲಾಗಿವೆ. ಸಾಮಾಜಿಕ ಪ್ರಜ್ಞೆಯುಳ್ಳ ಹಲವು ಕಾದಂಬರಿಗಳು ಸಾಮಾಜಿಕ ನೆಲೆಯಲ್ಲಿ ಅಧ್ಯಯನಕ್ಕೆ ಯೋಗ್ಯವಾಗಿವೆ.
ಈ ರೀತಿಯ ಸರಳತೆ, ನೈಜ ಸನ್ನಿವೇಶಗಳ ಚಿತ್ರಣ ವಿಜಯಶ್ರೀಯವರ ಕಾದಂಬರಿಗಳು ಓದುಗನನ್ನು ತಲುಪಲು ಕಾರಣವಾಗಿದೆ.

Read More »

ಜಿ.ಎಸ್ ಶಿವರುದ್ರಪ್ಪರವರ ʼತಾಯಿ ತನ್ನ ಮಗುವಿಗೆʼ ಕಾವ್ಯದ ಭಾವನಾತ್ಮಕ ಸಂಬಂಧದ ನೆಲೆಗಳು

ಮೀನಾಕ್ಷಿ ಎನ್.ಪಿ.

45 to 50

ತಾಯಿ ಎಂದರೆ ಮಮತೆಯ ಮಡಿಲು, ತಾಯಿ ಎಂದರೆ ಪ್ರೀತಿಯ ಭಾವನೆ, ತಾಯಿ ಎಂದರೆ ಜೀವನ ಸಾಗಿಸುವ ತೇರು, ತಾಯಿ ಎಂದರೆ ಬದುಕಿನ ಬವಣೆ, ತಾಯಿ ಎಂದರೆ ಕಷ್ಟ ನಿಭಾಯಿಸುವ ಒಡಲು, ತಾಯಿ ಎಂದರೆ ಬದುಕಿನ ಸರ್ವಸ್ವವನ್ನು ತ್ಯಾಗ ಮಾಡುವ ಕರುಣಾಮಯಿ. ಇವಳ ಬಗ್ಗೆ ಹೇಳಲು ಪದಗಳೇ ಸಾಲದು, ದೇವತಾ ಮೂರ್ತಿ ಅವಳು. ತಾಯಿ ಜೀವನದ ಅಮೂಲ್ಯ ಹಾಗು ಅನಂತವಾದ ಆಸರೆ/ಬೆಳಕು. ತಾಯಿಯೇ ಮಗುವಿನ ಮೊದಲ ಗುರು, ನಮ್ಮ ಮೊಟ್ಟ ಮೊದಲ ಪ್ರೇಮ ಹಾಗೂ ಹಾರೈಕೆಯಾಗಿದ್ದಾಳೆ. ಇಂತಹ ತಾಯಿ ತನ್ನ ಮಗುವಿನ ಬಗ್ಗೆ ಇಟ್ಟಿರುವ ಅವಳ ಕಾಳಜಿಯ ಬಗ್ಗೆ ಹಾಗೂ ಬಾಂಧವ್ಯದ ಬಗ್ಗೆ ತಿಳಿದುಕೊಳ್ಳೋಣ. ಕುಟುಂಬದಲ್ಲಿ ತಾಯಿಯ ಪಾತ್ರ ಬಹುಮುಖಿ ಮತ್ತು ಆಳವಾಗಿ ಪ್ರಭಾವಶಾಲಿಯಾಗಿದ್ದು ಕುಟುಂಬ ಜೀವನದ ಲೆಕ್ಕವಿಲ್ಲದಷ್ಟು ಅಂಶಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಪಾತ್ರವಾಗಿದ್ದಾಳೆ. ತಾಯಿ ತನ್ನ ಮಗುವಿಗೆ ನಿಶ್ಚಲವಾದ ಪ್ರೀತಿಯನ್ನು ನೀಡುತ್ತಾಳೆ. ಅವಳು ಯಾವುದೇ ಕಾರಣವಿರಲಿ, ಯಾವುದೇ ಪರಿಸ್ಥಿತಿಯಿರಲಿ ತನ್ನ ಮಗುವನ್ನು ರಕ್ಷಿಸುವುದನ್ನ, ಬೆಳೆಸುವುದನ್ನ, ಪ್ರೋತ್ಸಾಹಿಸುವುದನ್ನ ಬಿಡುವುದಿಲ್ಲ. ಅವಳ ಆ ತ್ಯಾಗ ಆದ್ಯ ಕರ್ತವ್ಯದಂತೆ ನಿರ್ವಹಿಸಲ್ಪಡುತ್ತದೆ/ನಿರ್ವಹಿಸುತ್ತಾಳೆ. ಅಂತಹ ತಾಯಿಯ ಹಲವು ರೀತಿಯ ಮಜಲುಗಳನ್ನು ನಮ್ಮ ನಾಡಿನಲ್ಲಿ, ನಮ್ಮ ಭಾರತದಲ್ಲಿ ನೋಡಿದ್ದೇವೆ. ಹಾಗೂ ನೋಡುತ್ತಿದ್ದೇವೆ. ಅದರಲ್ಲಿ ಒಂದು ನಿದರ್ಶನವಾಗಿ ಜಿ.ಎಸ್ ಶಿವರುದ್ರಪ್ಪರವರ ತಾಯಿ ತನ್ನ ಮಗುವಿಗೆ ಕಾವ್ಯದ ಭಾವನಾತ್ಮಕ ಸಂಬಂಧದ ನೆಲೆಗಳನ್ನು ನೋಡಬಹುದಾಗಿದೆ. ಅದರಲ್ಲೂ ಒಂದು ಹೆಣ್ಣು ತಾಯಿಯಾಗುವಾಗ ಅವಳು ಕಾಣುವ ಬಯಕೆ, ಕನಸು, ಬಾಂಧವ್ಯ, ಪ್ರೀತಿ, ಮಮತೆಯನ್ನು ತಿಳಿಯಬಹುದಾಗಿದೆ. ಅದರ ಒಂದೊಂದು ರೀತಿಯ ಮಜಲಗಳನ್ನು ಗಮನಿಸಬಹುದು.

Read More »

ಯಂತ್ರ ನಾಗರೀಕತೆ ಕುರಿತು ಶಿಶುನಾಳ ಶರೀಫರ ಚಿಂತನೆಗಳು

ರವಿಶಂಕರ್ ಎ.ಕೆ.

51 to 59

ಕನ್ನಡ ಸಾಹಿತ್ಯದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿರುವ ತತ್ವಪದಗಳ ಮರು ಓದು, ಚಿಂತನೆ ಹಾಗೂ ತೌಲನಿಕ ಹೊಸ ನೋಟಗಳು ಈ ಕಾಲದ ಅಧ್ಯಯನವಾಗಿದೆ. ತತ್ವಪದಕ್ಕೆ ಹೊಸ ವ್ಯಾಖ್ಯಾನಗಳನ್ನು ಸೃಷ್ಟಿಸಿಕೊಳ್ಳುತ್ತಾ ನೂರಾರು ತತ್ವಪದಕಾರರ ಒಳನೋಟಗಳ ದರ್ಶನ ಪಡೆಯುವುದು ಭಾರತೀಯ ಸಾಹಿತ್ಯ ಹಾಗೂ ಪಾಶ್ಚಾತ್ಯ ಸಾಹಿತ್ಯಗಳ ಕರ್ತವ್ಯವಾಗಿದೆ. ಈ ಸಾಹಿತ್ಯವು ಆಯಾ ಕಾಲದ ಆಧುನಿಕ ಪ್ರವೇಶಗಳಿಗೂ ಮುಖಾಮುಖಿಯಾಗಿರುವುದನ್ನು ಗಮನಿಸಬಹುದು. ʼಕಾಲʼ ಹಾಗೂ ʼಮನಸ್ಸುʼಗಳ ಕುರಿತು ಜೀವ-ನಿರ್ಜಿವಗಳ ಒಡನಾಟವು ಕಾಲಾತೀತವಾಗಿ ಲೋಕಜ್ಞಾನವಾದ ಚಿಂತನೆಗಳು ತತ್ವಪದಗಳಲ್ಲಿ ಮೂಡಿಬಂದವು. ಯಂತ್ರ ನಾಗರೀಕತೆಯನ್ನು ಶಿಶುನಾಳ ಶರೀಫರ ತತ್ವ ಚಿಂತನೆಯು ಹೇಗೆ ಗ್ರಹಿಸಬಲ್ಲದು ಎಂಬುದೇ ಇಲ್ಲಿಯ ಅಧ್ಯಯನ. ಈ ದೃಷ್ಟಿಕೋನದ ಹಿನ್ನಲೆಯಲ್ಲಿ ಶಿಶುನಾಳ ಶರೀಫರ ತತ್ವಪದಗಳ ಒಳನೋಟಗಳನ್ನು ವರ್ತಮಾನದ ಕಾಲಪ್ರಜ್ಞೆಗಳೊಂದಿಗೆ ಅಧ್ಯಯನಮಾಡಬಹುದು.

Read More »

ತಿಪಟೂರು ಪರಿಸರದ ಆಧುನಿಕ ಪೂರ್ವ ಕನ್ನಡ ಕವಿಗಳು

ರಾಧಾ ಕೆ.ಎಂ.

60 to 75

ಪ್ರಸ್ತುತ ಲೇಖನವು ತಿಪಟೂರು ಪರಿಸರದ ನಾಲ್ವರು ಆಧುನಿಕಪೂರ್ವ ಕನ್ನಡ ಕವಿಗಳಾದ ಗೌರವಾಂಕ (ಕ್ರಿ.ಶ. 1525), ಕರಿಸಿದ್ಧೇಶ್ವರ ಸ್ವಾಮಿ (ಕ್ರಿ.ಶ. 1560), ಪ್ರಸನ್ನದೇಶಿಕ (ಕ್ರಿ.ಶ. 1610) ಮತ್ತು ಕರಿವೃಷಭ ದೇಶೀಕೇಂದ್ರ ಸ್ವಾಮಿ (ಕ್ರಿ.ಶ. 1808) ಇವರನ್ನು ಸಮೀಕ್ಷಿಸುತ್ತದೆ. ಈ ಕವಿಗಳ ಮೇಲೆ ವೀರಶೈವ ಧರ್ಮದ ಪ್ರಬಲ ಪ್ರಭಾವವಿದ್ದು, ಅವರು ತಮ್ಮ ಧಾರ್ಮಿಕ ಶ್ರದ್ಧೆಯನ್ನು ದೇಸೀ ಸಾಹಿತ್ಯ ಪ್ರಕಾರಗಳಾದ ಸಾಂಗತ್ಯ, ಭೋಗಷಟ್ಪದಿ, ತಾರಾವಳಿ ಮತ್ತು ಕೈವಲ್ಯಪದಗಳಲ್ಲಿ ವಿಪುಲವಾಗಿ ನಿರೂಪಿಸಿದ್ದಾರೆ. ಇವರ ಕೃತಿಗಳಲ್ಲಿ ಕಥಾ ಕಥನ ನೈಪುಣ್ಯ ಮತ್ತು ಸಾಹಿತ್ಯಕ ಸೊಗಸು ಕಂಡುಬಂದರೂ, ಸರಿಯಾದ ಅಧ್ಯಯನದ ಕೊರತೆಯಿಂದಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸೂಕ್ತ ಸ್ಥಾನ ಪಡೆಯುವಲ್ಲಿ ಹಿಂದುಳಿದಿವೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಈ ಸಮೀಕ್ಷೆಯು ಈ ಕವಿಗಳ ಹಿರಿಮೆಯನ್ನು ದಾಖಲಿಸುವ ಪ್ರಯತ್ನವಾಗಿದೆ.

Read More »

ಜಾಗತೀಕರಣದ ಫಲಶ್ರುತಿಯಾಗಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ದೈನಂದಿನ ಬದುಕಿನಲ್ಲಿ ಉಂಟಾಗುತ್ತಿರುವ ಪಲ್ಲಟಗಳು

ಶ್ರೀಮತಿ ರೇಣುತಾಕ್ಷಿ

76 to 81

ಜಾಗತೀಕರಣವು ಕನ್ನಡ ಭಾಷೆ, ಸಂಸ್ಕೃತಿ ಮತ್ತು ದಿನನಿತ್ಯದ ಬದುಕಿನ ಮೇಲೆ ವ್ಯಾಪಕ ಮತ್ತು ಬಹುಮುಖ ಪರಿಣಾಮಗಳನ್ನು ಉಂಟುಮಾಡಿದೆ. ಆರ್ಥಿಕ ಕ್ಷೇತ್ರದ ವಿಸ್ತರಣೆ, ಐಟಿ ಉದ್ಯಮದ ಪ್ರಭಾವ ಮತ್ತು ಮಲ್ಟಿನ್ಯಾಷನಲ್ ಕಂಪನಿಗಳ ಸೃಷ್ಟಿ ಕನ್ನಡಿಗರ ಜೀವನಶೈಲಿಯನ್ನು ಬದಲಾಯಿಸಿ, ದ್ವಂದ್ವ ಭಾಷಾ ಪರಿಸರವನ್ನು ರೂಪಿಸಿವೆ. ಉದ್ಯೋಗ ಸಂವಹನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಂಗ್ಲ ಭಾಷೆಯ ಪ್ರಾಬಲ್ಯ ಹೆಚ್ಚಾದಂತೆ ಕನ್ನಡದ ಪದಸಂಪತ್ತು, ಲಿಪಿಬಳಕೆ ಮತ್ತು ನೈಜ ಭಾಷಾಭ್ಯಾಸ ಹಿಂಜರಿಕೆಯ ಸೂಚನೆಗಳು ಎದ್ದು ತೋರುತ್ತಿವೆ.
ಶಿಕ್ಷಣ ವಲಯದಲ್ಲಿಯೂ ಆಂಗ್ಲ ಮಾಧ್ಯಮ ಶಾಲೆಗಳ ಏರಿಕೆಯಿಂದ ಕನ್ನಡದ ಸ್ಥಾನಮಾನ ಕ್ರಮೇಣ ಹಿಮ್ಮೆಟ್ಟುತ್ತಿದ್ದು, ವಿದ್ಯಾರ್ಥಿಗಳ ಸಾಹಿತ್ಯ-ಸಂಸ್ಕೃತಿಯ ಸಂಪರ್ಕ ಕಡಿಮೆಯಾಗುತ್ತಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳು ಕನ್ನಡಕ್ಕೆ ಹೊಸ ಅವಕಾಶಗಳನ್ನು ತೆರೆಯುತ್ತಿವೆ. ಯೂಟ್ಯೂಬ್, ಒಟಿಟಿ, ಸಾಮಾಜಿಕ ಜಾಲತಾಣಗಳು ಕನ್ನಡ ಅಭಿವ್ಯಕ್ತಿಗೆ ಹೊಸದಿಕ್ಕು ತೋರಿಸುತ್ತಿವೆ.
ಸಂಸ್ಕೃತಿಯ ಹೈಬ್ರಿಡೀಕರಣದಿಂದ ಪಾಶ್ಚಾತ್ಯ ಆಚರಣೆಗಳು, ಉಡುಪು, ಜೀವನಶೈಲಿ ಮೊದಲಾದವು ಕನ್ನಡಿಗರ ದೈನಂದಿನ ಬದುಕಿನ ಭಾಗವಾಗುತ್ತಿದ್ದರೂ, ಪರಂಪರೆ ಹೊಸ ರೂಪಗಳಲ್ಲಿ ಉಳಿಯಲು ಪ್ರಯತ್ನಿಸುತ್ತಿದೆ. ಕುಟುಂಬ ವ್ಯವಸ್ಥೆ, ಮೌಲ್ಯಗಳು, ಜೀವನವಿಧಾನದಲ್ಲಿ ಬದಲಾವಣೆ ಕಂಡರೂ, ಕನ್ನಡ ಗುರುತನ್ನು ಬಲಪಡಿಸುವ ಚಟುವಟಿಕೆಗಳು ಮುಂದುವರಿಯುತ್ತಿವೆ. ಒಟ್ಟಿನಲ್ಲಿ ಜಾಗತೀಕರಣವು ಕನ್ನಡಕ್ಕೆ ಸವಾಲುಗಳನ್ನಷ್ಟೇ ಅಲ್ಲ, ಹೊಸ ಅವಕಾಶಗಳನ್ನೂ ನೀಡಿದ ಯುಗವಾಗಿದೆ. ಈ ಬದಲಾವಣೆಗಳ ನಡುವೆ ಭಾಷೆಯನ್ನು ಉಳಿಸಿ ಬೆಳೆಸುವುದು ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಯಾಗಿದೆ.

Read More »

ಬಾಸವೂರು ಕಂಪಣದ ಶೈವ ಪುರುಷ ಶಿಲ್ಪಗಳು

ಶಿವಯೋಗಿ ಕೋರಿಶೆಟ್ಟರ

82 to 91

ಪ್ರಸ್ತುತ ಲೇಖನವು ಪ್ರಾಚೀನ ಬಾಸವೂರು ಕಂಪಣದ (ಇಂದಿನ ಹಾವೇರಿ, ಹಾನಗಲ್, ಬ್ಯಾಡಗಿ ತಾಲ್ಲೂಕುಗಳ ಪ್ರದೇಶ) ಶೈವ ಪುರುಷ ಶಿಲ್ಪಗಳ ಸಮೀಕ್ಷೆ ನಡೆಸುತ್ತದೆ. ಕ್ರಿ.ಶ. 8 ರಿಂದ 13ನೇ ಶತಮಾನದ ಅಂತ್ಯದವರೆಗೆ ಅಸ್ತಿತ್ವದಲ್ಲಿದ್ದ ಈ ಆಡಳಿತ ಕೇಂದ್ರವು ಧಾರ್ಮಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿತ್ತು. ಕ್ಷೇತ್ರಕಾರ್ಯದಲ್ಲಿ ದೊರೆತ ಶಿಲ್ಪಗಳನ್ನು ಪರಿಚಯಿಸುವುದು ಲೇಖನದ ಮುಖ್ಯ ಉದ್ದೇಶವಾಗಿದೆ. ಇಲ್ಲಿ ಶೈವಧರ್ಮವು ಪ್ರಬಲವಾಗಿತ್ತು ಎಂಬುದನ್ನು ಶಿವಲಿಂಗ, ಗಣಪತಿ, ಭೈರವ, ವೀರಭದ್ರ, ಕಾರ್ತಿಕೇಯ, ಹರಿಹರ, ಉಮಾಮಹೇಶ್ವರ, ರತಿ-ಮನ್ಮಥ ಹಾಗೂ ನಂದಿ ಶಿಲ್ಪಗಳ ಸಮೃದ್ಧಿ ಮತ್ತು ಮನೋಜ್ಞ ಕೆತ್ತನೆಗಳು ಸ್ಪಷ್ಟಪಡಿಸುತ್ತವೆ. ಈ ಶಿಲ್ಪಗಳು ಕಂಪಣದ ಪ್ರಬಲ ಶೈವ ಪರಂಪರೆ ಮತ್ತು ಕಲಾತ್ಮಕ ಅಭಿವ್ಯಕ್ತಿಯನ್ನು ಬಿಂಬಿಸುತ್ತವೆ. ವಿಶೇಷವಾಗಿ, ಕುಳೇನೂರಿನ ಏಕೈಕ ರತಿ-ಮನ್ಮಥ ಶಿಲ್ಪವು ವಿಶಿಷ್ಟವಾಗಿದೆ.

Read More »

ಮಹಿಳಾ ಸಣ್ಣಕತೆಗಳಲ್ಲಿ ಉದ್ಯೋಗಸ್ಥ ಹೆಣ್ಣಿನ ಅಭಿವ್ಯಕ್ತಿಯ ಸ್ವರೂಪ: ಒಂದು ಅಧ್ಯಯನ

ಸವಿತಾ ಬಿ.

92 to 102

ಇಂದು ಹೆಣ್ಣಿನ ಉತ್ಪಾದನಾ ದುಡಿಮೆ, ಆರ್ಥಿಕತೆ ಮತ್ತು ಆರ್ಥಿಕ ಸ್ವಾವಲಂಬನೆಯ ಬಗೆಗೆ ಆಧುನಿಕ ಲೇಖಕಿಯರು ತಮ್ಮ ಕಥನಗಳಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಜಾಗತೀಕರಣದ ಸಮಾಜದಲ್ಲಿ ಪ್ರತಿಯೊಂದು ವಸ್ತು, ವಿಷಯಗಳು ವಿನಿಮಯ ಮೌಲ್ಯವನ್ನು ಪಡೆಯುತ್ತಿರುವಾಗ ಹೆಣ್ಣಿನ ದುಡಿಮೆ ಎನ್ನುವಂತದ್ದು ಅಗತ್ಯವೂ ಅನಿವಾರ್ಯವೂ ಆಗಿದೆ ಎನ್ನುವಲ್ಲಿಗೆ ತಲಪಿದೆ. ವ್ಯವಸ್ಥೆಯಲ್ಲಿ ಬಲವಾಗಿ ಬೇರೂರಿದ್ದ ʻಉದ್ಯೋಗಂ ಪುರುಷ ಲಕ್ಷಣಂʼ ಎನ್ನುವ ಮೌಲ್ಯ ಬದಲಾವಣೆಯನ್ನು ಕಾಣುತ್ತಿದೆ. ಆಧುನಿಕ ಮಾದರಿಯ ಹೆಣ್ಣು ಉದ್ಯೋಗದ ಮೂಲಕ ಇಂದು ಸಮಾಜದ ಜೊತೆಗೆ ಸಂಪರ್ಕವನ್ನು ಸಾಧಿಸಿದ್ದಾಳೆ. ವಿಸ್ತರಿಸಿಕೊಂಡ ಅನುಭವದ ಮೂಲಕ ಸಮಾಜವನ್ನು ಕುತೂಹಲದಿಂದ ನೋಡುತ್ತಿದ್ದಾಳೆ. ದುಡಿಮೆಯ ಭಾರದಿಂದ ನಲುಗಿಹೋಗುತ್ತಿರುವ ಅವಳನ್ನು ಸಮಾಜ ಮರುಕ ಮತ್ತು ಅನುಕಂಪದಿಂದ ನೋಡುತ್ತಿದೆ. ಆದರೂ ತನ್ನೊಳಗಿನ ಜೀವ ಚೈತನ್ಯವನ್ನು ಕಳೆದುಕೊಳ್ಳದೆ ಇಂದು ಮಹಿಳೆ ಹಲವು ಕ್ಷೇತ್ರಗಳಲ್ಲಿ ಬೆಳೆದು ನಿಂತು ಹೆಣ್ತನದ ಛಾಪನ್ನು ದಿಗಂತದೆತ್ತರಕ್ಕೆ ಏರಿಸಿಬಿಟ್ಟಿದ್ದಾಳೆ. ಅವಳು ಹೆಜ್ಜೆಯಿಡುವ ಹಾದಿ ಕಲ್ಲು, ಮುಳ್ಳುಗಳಿಂದ ಕೂಡಿದ್ದರೂ ಅದನ್ನೆಲ್ಲ ಮೆಟ್ಟಿನಿಂತು ತನ್ನ ಕೇಂದ್ರದಲ್ಲಿ ತಾನು ಕಾಣಿಸಿಕೊಳ್ಳುತ್ತಿದ್ದಾಳೆ. ಅವಳು ಮನೆಯೊಳಗಿನ ಸಾಂಸ್ಕೃತಿಕ ನೆಲೆಯಿಂದ ಹೊರಬಂದು ತನ್ನನ್ನು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರೆಗಿನ ಔದ್ಯೋಗಿಕ ಮಜಲುಗಳನ್ನು ಮತ್ತು ಎದುರಿಸಿದ ಸಮಸ್ಯೆಗಳ ಸ್ವರೂಪವನ್ನು ಈ ಲೇಖನದಲ್ಲಿ ಚರ್ಚೆಗೊಳಪಡಿಸಲಾಗಿದೆ.

Read More »

ಕರಗುತ್ತಿರುವ ಹೆಣ್ಣಿನ ಅಸ್ತಿತ್ವದ ರೂಪಕವಾಗಿ ಬಾನು ಮುಷ್ತಾಕ್ ಅವರ ʼಲವ್ ಬರ್ಡ್ಸ್ʼ

ಸುಧಾ ಬಿ.ಎಸ್‌.

103 to 108

ಕನ್ನಡ ಮಹಿಳಾ ಸಾಹಿತ್ಯ ಹೊಸ ಹೊರಳುದಾರಿಯತ್ತ ಹೆಜ್ಜೆ ಹಾಕುತ್ತಿರುವುದು ಸಾಹಿತ್ಯಿಕವಾಗಿ ಅಷ್ಟೇ ಅಲ್ಲದೆ ಸಾಂಸ್ಕೃತಿಕವಾಗಿಯೂ ಕೂಡ ಮಹತ್ವದ ಸಂಗತಿ. ಕನ್ನಡಕ್ಕೆ ಬೂಕರ್ ಗರಿಮೆಯನ್ನು ತಂದು ಕೊಟ್ಟ ಬಾನು ಮುಷ್ತಾಕ್ ಅವರ ಕತೆಗಳಲ್ಲಿ ವ್ಯಕ್ತವಾಗುವ ಸ್ತ್ರೀ ಪರವಾದ ಆಲೋಚನೆಗಳು, ಸ್ತ್ರೀವಾದಿ ದೃಷ್ಟಿಕೋನ ಹಾಗೂ ಮಾನವ ಪರ ಕಾಳಜಿಗಳ ದೃಷ್ಟಿಯಿಂದ ಪ್ರಮುಖವಾದದ್ದು. ಪ್ರಸ್ತುತ ಲೇಖನದಲ್ಲಿ ಬಾನು ಮುಷ್ತಾಕ್ ಕತೆಗಳಲ್ಲಿ ಅಸ್ತಿತ್ವವಾದದ ಅಂಶಗಳು ಚರ್ಚೆಗೆ ಒಳಪಟ್ಟಿರುವ ಬಗೆಯನ್ನು ವಿವರಿಸಲಾಗಿದೆ. ʼಲವ್ ಬರ್ಡ್ಸ್ʼ ಕತೆಯಲ್ಲಿ ಹೆಣ್ಣಿನ ಅಸ್ತಿತ್ವ ಹಂತ ಹಂತವಾಗಿ ನಾಶವಾಗುತ್ತಿರುವ ಬಗೆಯನ್ನೂ, ಒಂದು ಹಂತದಲ್ಲಿ ಅದು ವೈಯಕ್ತಿಕತೆಯನ್ನು ಮೀರಿ ಹೆಣ್ಣಿನ ಸಾಮಾನ್ಯ ಸಮಸ್ಯೆಯಾಗಿರುವುದರ ಬಗೆಗೆ ಗಮನ ಹರಿಸಲಾಗಿದೆ.

Read More »

ಮಹಾಶ್ವೇತಾ ದೇವಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು

ಸುನಿತಾ ಜೆ.ಕೆ., ರೂತಾ ಪಿ. ತಾಳಮಡಗಿ

109 to 114

ಮಹಾಶ್ವೇತಾ ದೇವಿಯವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿದರೆ ನಮಗೆ ಕಂಡು ಬಂದಿರುವಂತಹ ಅಂಶವೆಂದರೆ ಅದು ಸ್ತ್ರೀವಾದ. ಸ್ತ್ರೀವಾದ, ಬುಡಕಟ್ಟು ಜನರ ಜೀವನ ಮತ್ತು ಹೋರಾಟದ ಬದುಕಿನ ಕರಾಳ ಮುಖವನ್ನು ಸಮಾಜಕ್ಕೆ ಪರಿಚಯಿಸುವುದೇ ಲೇಖಕರ ಆಶಯವಾಗಿತ್ತು. ಮಹಾಶ್ವೇತಾ ದೇವಿಯವರ ಪ್ರತಿಯೊಂದು ಕಾದಂಬರಿಯ ಸ್ತ್ರೀಪಾತ್ರಗಳು ವಿವಿಧ ಬಗೆಯ ಶೋಷಣೆಗೆ ಒಳಗಾಗಿರುವುದನ್ನು ನೋಡಬಹುದು.

Read More »

ಲಿಪಿಯ ಹುಡುಕಾಟದಲ್ಲಿ

ಶ್ರೀಮತಿ ಹುದಾಹುಸನಾ ಇಸಾಮದಿ

115 to 121

ಭಾಷೆಯೆಂಬುದು ಸಾಮಾಜಿಕ ಸಂಪನ್ಮೂಲ. ಒಂದು ನಾಗರಿಕತೆಯ ಸಂಸ್ಕೃತಿಯ, ಜೀವಾಳ. ಆದರೆ ಇದು ಅಮೂರ್ತ ಸ್ವರೂಪದ್ದು. ಇದರ ಅಮೂರ್ತ ಸ್ವರೂಪಕ್ಕೆ ರೂಪ ರೂಪಿಸುವ ಸಾಧನವೇ ʼಲಿಪಿʼ. ಲಿಪಿಯ ಉಗಮ, ವಿಕಾಸವು ಭಾಷೆಯಷ್ಟೇ ಹಳೆಯದು. ಇದು ಆದಿಮಾನವನ ಕಾಲದ ಚಿತ್ರಲಿಪಿ ಹಾಗೂ ಗುಹಾಲಿಪಿಯಿಂದ ಹಿಡಿದು ಇಂದಿನ ಆಧುನಿಕ ಲಿಪಿಯವರೆಗೆ, ನಡೆದು ಬಂದ ಹಾದಿ ಅತಿ ಸುದೀರ್ಘವಾದುದು. ಹಲವು ಎಡರು ತೊಡರುಗಳ ನಂತರವೂ ಸಾಹಿತ್ಯದ ಬೆಳಗುವಿಕೆಗೆ ಬೆಳಕಾಗಿದೆ. ಇದರ (ಲಿಪಿಯ) ಹುಡುಕಾಟವು ನಮ್ಮನ್ನು ಪೂರ್ವ ಇತಿಹಾಸದಿಂದ ಸಿಂಧೂ ಲಿಪಿ, ಖರೋಷ್ಕಿ ಲಿಪಿ, ಬ್ರಾಹ್ಮಿ ಲಿಪಿ, ದೇವನಾಗರಿ, ಕ್ಯೂನಿಫಾರಂ, ಹೈರೋಗ್ಲಿಫಿಕ್, ಕ್ರೀಟ್ ಲಿಪಿ, ಹಿಟ್ನೈಟ್ ಲಿಪಿ ಇನ್ನೂ ಮುಂತಾದವುಗಳ ಪರಿಚಯ ನಮ್ಮ ಭಾರತೀಯ ಇತಿಹಾಸದಲ್ಲಿ ಕಾಣಸಿಗುತ್ತದೆ. ಸಾಹಿತ್ಯವನ್ನು ಭಾಷೆಯು ಯಾವ ರೀತಿ ಪೋಷಕವಾಗಿ ಮಹತ್ವ ಪಡೆದಿದೆಯೋ, ಅದೇ ರೀತಿ ಭಾಷೆಗೆ ಪೋಷಕವಾಗಿ ಲಿಪಿಯು ಕೂಡ ಮಹತ್ವ ಪಡೆದಿದೆ ಎಂಬುದನ್ನು ನಾವು ಈ ಲೇಖನದಲ್ಲಿ ಕಾಣುತ್ತೇವೆ.

Read More »

The Science of Flourishing: Integrating Positive Psychology into Contemporary Mental Health Care

Deepa S.V.

122 to 134

The field of mental health care is undergoing a paradigm shift, moving beyond the traditional disease model—focused solely on pathology and symptom reduction—to one actively promoting human flourishing and optimal functioning. This transition is driven by the emergence of Positive Psychology (PP), the scientific study of what makes life most worth living. Since its formalization by Martin Seligman, PP has evolved into the "Science of Flourishing," providing an evidence-based framework that complements conventional treatments.
This article reviews the foundations of flourishing, from Aristotle’s Eudaimonia to Maslow’s self-actualization, culminating in modern, measurable constructs like the PERMA Model (Positive Emotion, Engagement, Relationships, Meaning, and Accomplishment). It details the development of the VIA Classification of Character Strengths as a common vocabulary for human goodness. Furthermore, the paper examines the integration of Positive Psychology Interventions (PPIs) into clinical settings, forming the basis of Positive Clinical Psychology. This dual-focus approach aims not just to alleviate deficits but to actively build psychological resources, redefining treatment success as the presence of vitality and well-being. Ultimately, the full integration of this science is critical for a more holistic, effective, and enduring path to mental wellness.

Read More »

Contemporary challenges to Indian federalism

Dinesha A.V.

135 to 142

Federalism in India exemplifies a distinctive endeavour in political architecture, meticulously crafted to reconcile the nation’s extensive diversity with the imperative for national cohesion. The architects of the Constitution conceived a Union of States wherein powers and obligations would be apportioned between the Centre and the states in a manner that upholds both the integrity of the nation and the autonomy of its constituent entities. Dr. B.R. Ambedkar famously characterized Indian federalism as a system characterized by a “strong Centre” that possesses the capacity to address national exigencies while simultaneously accommodating the pluralistic nature of Indian society.
Over the span of seven decades since Independence, India’s federal structure has undergone significant evolution through political praxis, judicial interpretation, and socio-economic metamorphosis. Nonetheless, in contemporary contexts, Indian federalism encounters novel and intricate challenges. The ascendance of centralized political authority, the financial subservience of states, inter-state conflicts, asymmetrical federal configurations, and the burgeoning issues of regionalism and identity politics have fundamentally reshaped Centre–State dynamics. These challenges bear profound implications for democratic governance and the principles of cooperative federalism.
This article scrutinizes the nature, origins, and ramifications of the challenges besieging Indian federalism in present-day India, while concurrently illuminating the mechanisms available to fortify federal harmony.

Read More »

A Study on Financial Flow Towards Agricultural Development in Hassan District

Girisha M.C.

143 to 151

Agriculture continues to be the backbone of rural livelihoods in Hassan district, Karnataka, contributing significantly to food security, employment, and regional economic stability. The present study examines the financial flow towards agricultural development in the district with a focus on institutional credit, government subsidies, and private investments between 2005 and 2024. Using both secondary data from government reports, district statistical handbooks, NABARD credit flow statements, and primary insights from farmer surveys, the study analyzes the trends, accessibility, and impact of financial resources on agricultural productivity and sustainability. The findings indicate a steady rise in institutional credit disbursement through cooperative and commercial banks, particularly after the implementation of agricultural loan waiver schemes and the Kisan Credit Card program. However, disparities persist across small and marginal farmers, who continue to face constraints in collateral requirements and high dependence on informal credit. Subsidy-driven investments in irrigation, mechanization, and crop insurance have improved resilience, yet the effectiveness of fund utilization is uneven due to administrative delays and limited financial literacy. The study concludes that targeted financial inclusion, better credit delivery mechanisms, and monitoring of subsidy utilization are essential to ensure equitable and sustainable agricultural development in Hassan district.

Read More »

An Economic Analysis of Green Environment and Sustainable Development in India

Rathna Y.D.

152 to 162

The economic analysis of the green environment and sustainable development in India explores the balance between economic growth and ecological preservation. India’s approach to sustainable development involves integrating environmental policies with economic planning to ensure long-term prosperity without resource depletion. Rapid GDP growth, while uplifting millions from poverty, has intensified environmental pressures—manifested in pollution, deforestation, and high carbon emissions. Reports by the World Bank and The Energy and Resources Institute highlight that green growth models can lessen these challenges through efficient resource use, renewable energy adoption, and ecosystem service valuation. India’s transition toward a green economy is driven by commitments to the Paris Agreement and national programs such as renewable energy expansion, waste management, and carbon intensity reduction. Estimates suggest that by implementing green strategies, India can sustain its growth at a marginal economic cost of just 0.02–0.04% of annual GDP while achieving significant environmental and social benefits. However, fiscal constraints, technological adaptation, and inequality remain major policy hurdles. 
An integrated green economy framework—using tools like computable general equilibrium models—demonstrates that green investments can improve employment, health, and productivity while safeguarding natural capital. Consequently, the pursuit of sustainable development in India signifies not a trade-off but an opportunity to modernize its economic structure and align growth with environmental equity, securing intergenerational welfare and resilience to climate risks.

Read More »

A Comprehensive Evaluation of India's 2020 Agricultural Laws and Their Effects on Farming Policy

Shivaray Sindagi

163 to 175

Both domestically and internationally, the three agricultural reform laws passed by the Indian government in 2020 are widely regarded as important and long-overdue initiatives. Nonetheless, several stakeholders have voiced significant criticism and called for its repeal, including farmers, state governments, and policy analysts. This essay examines the justification for these legislative modifications and situates them within the broader context of reforming agricultural policy. It describes the continuous attempts over the past two decades by various central governments to persuade states to implement market-oriented agriculture reforms. The study assesses the potential impacts of the three acts on Agricultural Produce Market Committees (APMCs), the Minimum Support Price (MSP) system, farmer livelihoods, and the rural economy as a whole, by closely examining their key provisions and objectives. It also addresses the objections and concerns expressed by agricultural associations and other groups. According to the report, these laws are the result of a reform effort that began in 1991, aiming to integrate and finalize the fragmented and inconsistent policy changes that had been attempted in many states in the past. The article also aims to clarify misconceptions about the law and provide guidance to help states effectively implement it. It concludes by emphasizing how these reforms could enhance Indian agriculture, promote modernization, and initiate a more comprehensive transformation in the country's rural economy.

Read More »

ಸತಿ-ಸಹಗಮನ ಪದ್ಧತಿಯ ಉಗಮ ಮತ್ತು ಬೆಳವಣಿಗೆ

ವೈ. ಮದ್ದಾನಸ್ವಾಮಿ

176 to 188

ದೇವರ ಹೆಸರಿನಲ್ಲಿ ಪ್ರಾಣೋತ್ಕ್ರಮಣ ಮಾಡಿಕೊಳ್ಳುವ ಧಾರ್ಮಿಕ ಬಲಿದಾನ ಕಾಲಾಂತರದಲ್ಲಿ ಪ್ರಿಯವ್ಯಕ್ತಿಯ ಹೆಸರಿನಲ್ಲಿ ಪ್ರಾಣೋತ್ಕ್ರಮಣ ಮಾಡಿಕೊಳ್ಳುವ ಲೌಕಿಕ ಬಲಿದಾನಕ್ಕೆ ದಾರಿಮಾಡಿಕೊಟ್ಟಂತೆ ತೋರುತ್ತದೆ. ಈ ಲೌಕಿಕ ಬಲಿದಾದಲ್ಲಿ ಪತಿಗಾಗಿ ಪ್ರಿಯಸತಿಯ ಪ್ರಾಣೋತ್ಕ್ರಮಣ ಮತ್ತು ಒಡೆಯನಿಗಾಗಿ ಪ್ರಿಯವ್ಯಕ್ತಿಯ (ಸೇವಕನ) ಪ್ರಾಣೋತ್ಕ್ರಮಣ ಎಂದು ಎರಡು ವಿಧಗಳಿದ್ದು, ಅವುಗಳಿಗೆ ಕ್ರಮವಾಗಿ ಸಹಗಮನ (ಮಹಾಸತಿ), ವೇಳವಾಳಿ (ಲೆಂಕವಾಳಿ) ಎಂದು ಹೆಸರು. ಧಾರ್ಮಿಕ ಬಲಿದಾನ ಪುರೋಹಿತ ವರ್ಗ ಯೋಚಿಸಿದ ಶೋಷಣೆಯಾದರೆ, ವೇಳವಾಳಿಯು ಪ್ರಭುವರ್ಗ ಯೋಚಿಸಿದ ಶೋಷಣೆ. ಹಾಗೆಯೇ ಇಲ್ಲಿ ಹೇಳಿದ ಸಹಗಮನವು ಪುರುಷವರ್ಗ ಯೋಚಿಸಿದ ಶೋಷಣೆ ಎಂದು ಹೇಳಬಹುದು. ಸತ್ತ ವ್ಯಕ್ತಿಯೊಂದಿಗೆ ಅವನ ಪ್ರಿಯವಸ್ತುಗಳನ್ನು ಹೂಳಬೇಕು. ಇಲ್ಲವೆ ಸುಡಬೇಕು ಎಂಬ ಭಾವನೆ ಈ ಸಂಪ್ರದಾಯಕ್ಕೆ ದಾರಿಮಾಡಿಕೊಟ್ಟಿರಬಹುದು. ಕರ್ನಾಟಕದಲ್ಲಿ ಈ ಪರಂಪರೆಯನ್ನು ಅರಿಯಲು ನಮಗೆ ಶಾಸನಸಾಹಿತ್ಯ, ಗ್ರಂಥಸಾಹಿತ್ಯ, ದಿನಚರಿ ಸಾಹಿತ್ಯ, ಜನಪದ ಸಾಹಿತ್ಯ, ಶಿಲಾಸಾಮಗ್ರಿಗಳು, ಅವಶೇಷಗಳು ಮತ್ತು ವದಂತಿಗಳು ನೆರವಾಗುತ್ತವೆ. ಇವುಗಳಲ್ಲಿ ಸತಿಘಟನೆಯನ್ನು ತಿಳಿದುಕೊಳ್ಳಲು ತುಂಬ ವಿಶ್ವಾಸನೀಯ ಆಧಾರಗಳೆಂದರೆ ಮಹಾಸತಿ ಕಲ್ಲುಗಳು. 
‘ಸತಿ’ ಶಬ್ದ ಪರಿಮಿತ ಅರ್ಥದಲ್ಲಿ ಗಂಡನ ಮರಣದ ನಂತರ ಪತ್ನಿಯು ಸ್ವ-ಇಚ್ಛೆಯಿಂದ ಮರಣ ಹೊಂದುವುದನ್ನು ಸೂಚಿಸುತ್ತದೆ. ಅತ್ಯಂತ ಕ್ರೂರವೆನಿಸುವುದರ ಜೊತೆಗೆ ಸೋಜಿಗವೂ, ಪೂಜ್ಯನೀಯವೂ, ವೈಭವಪೂರ್ಣವೂ ಎನಿಸಿರುವ ಇದು ಒಂದು ಪದ್ಧತಿಯಾಗಿ ರೂಪುಗೊಂಡು ಇತಿಹಾಸದ ಬಹುಮುಖ್ಯ ಭಾಗವಾಗಿ ಪರಿಣಮಿಸಿದೆ. ಶಾಸನಗಳಲ್ಲಿ ಸಾಮಾನ್ಯವಾಗಿ ಈ ಪದ್ಧತಿಯನ್ನು ತಿಳಿಸುವ ಅಂಶಗಳಿದ್ದರೆ ಅವುಗಳನ್ನು ‘ಮಾಸ್ತಿಕಲ್ಲು’ಗಳು ಎಂದು ಕರೆಯಲಾಗಿದೆ. ಕೆಲವು ಶಾಸನಗಳು ಮಾಸ್ತಿಕಲ್ಲನ್ನು ‘ಮದವಳಿಗೆ ಕಲ್ಲು’, ‘ಶಿಲಾಶಾಸನ’, ‘ಮಾಸ್ತಿಕಳು’, ‘ಶಿಲಾಸ್ತಂಭಶಾಸನ’, ‘ಕಂಬ’ ಎಂದು ಉಲ್ಲೇಖಿಸಿವೆ. 
‘ಮಾಸ್ತಿ’ ಎಂಬುದು ಸಂಸ್ಕೃತದ ‘ಮಹಾಸತಿ’ ಎಂಬುದರ ಸಂಕ್ಷಿಪ್ತ ರೂಪ. ಗಂಡ ಸತ್ತ ಮೇಲೆ ಅವನ ಜೊತೆ ಪ್ರಾಣತ್ಯಾಗ ಮಾಡುವ ಸ್ತ್ರೀಯನ್ನು ಮಹಾಸತಿ ಅಥವಾ ಮಾಸ್ತಿ ಎಂದು ಕರೆಯುತ್ತಿದ್ದರು. ದೇವರಿಗಾಗಿ ಕೈಕೊಳ್ಳುವ ಆತ್ಮಬಲಿದಾನ, ಪ್ರಿಯವ್ಯಕ್ತಿಗಳಿಗೆ ಸಂಬಂಧಪಟ್ಟಂತೆ ಪತಿಯ ಸಲುವಾಗಿ ಸತಿ ಕೈಕೊಂಡರೆ ‘ಸಹಗಮನ ಮರಣ’. ಪತಿಯ ಯಾವುದೇ ರೀತಿಯ ಮರಣಾನಂತರ ಮಡದಿ ಪ್ರಮುಖವಾಗಿ ಅಗ್ನಿಪ್ರವೇಶದ ಮೂಲಕ, ಗೌಣವಾಗಿ ಇತರ ವಿಧಾನಗಳ ಮೂಲಕ ತನ್ನ ಪ್ರಾಣವನ್ನು ಬಲಿ ಕೊಡುತ್ತಿದ್ದಳು. ಹೀಗೆ ಪ್ರಾಣವನ್ನು ಅರ್ಪಿಸುವವಳೇ ಮಹಾಸತಿ. ಮಾಸ್ತಿ ಎಂಬುದು ಇದರ ತದ್ಭವ ರೂಪ. ಪ್ರಾಚೀನ ಕಾಲದಲ್ಲಿ ಗಂಡ ಸತ್ತ ನಂತರ ಅನೇಕ ಸ್ತ್ರೀಯರು ಪತಿಯ ಚಿತೆಯಲ್ಲಿ ಹಾರಿ ಅಥವಾ ಆತನ ಸಮಾಧಿಯಲ್ಲಿ ತಮ್ಮನ್ನು ಜೀವಂತವಾಗಿ ಹುಗಿಸಿಕೊಳ್ಳುವ ಮೂಲಕ ಪ್ರಾಣಾರ್ಪಣೆ ಗೈಯುವುದನ್ನು ಒಂದು ‘ಮೌಲ್ಯ’ ಎಂದು ಭಾವಿಸಿದ್ದರು. ಇಂಥ ಮೌಲ್ಯ ಮೆರೆದ ಸ್ತ್ರೀಯರನ್ನು ಮಹಾಸತಿಯರೆಂದು ಕರೆದು, ಅವರ ಸ್ಮರಣಾರ್ಥವಾಗಿ ಸ್ಥಾಪಿಸಿದ ಸ್ಮಾರಕಗಳನ್ನು ‘ಮಾಸ್ತಿಕಲ್ಲು’ ಎಂದು ಕರೆಯುತ್ತಾರೆ. 
ನಮ್ಮ ಪುರಾಣಗಳಲ್ಲಿ, ದಂತಕಥೆಗಳಲ್ಲಿ ಅತಿಯಾಗಿ ವೈಭವೀಕರಿಸಲಾಗಿರುವ ಪಾತಿವ್ರತ್ಯದ ವೈಭವೀಕರಣದ ಪರ್ಯಾಯ ರಕ್ಷಣೆಯೇ ಈ ಸತಿಪದ್ಧತಿ, ಸತಿ-ಪತಿಯರ ಸಂಬಂಧವನ್ನು ಭಾವನಾತ್ಮಕವಾಗಿ ಹೆಣೆದು ಪ್ರತ್ಯಕ್ಷವಾಗಿ ಅವರಿಬ್ಬರಲ್ಲಿ ಯಾವುದೇ ಅಂತರವಿಲ್ಲವೆಂಬುದನ್ನು ಸಾಕ್ಷೀಕರಿಸಲು ತಂದಂತಹ ಮಾರ್ಗವನ್ನು ಸತಿಪದ್ಧತಿ ಎಂದು ಕರೆದಿದ್ದಾರೆ. ಇದನ್ನು ನಿರಂತರವಾಗಿ ಗಂಡನ ಸೇವೆ ಮಾಡುವ ಇನ್ನೊಂದು ಮಾರ್ಗ ಎಂದಿದ್ದಾರೆ. ಮಧ್ಯಯುಗದಲ್ಲಿ ಉಂಟಾದ ರಾಜಕೀಯ ವೈರುಧ್ಯಗಳು ಮತ್ತು ಸಾಮಾಜಿಕ ಕಟ್ಟುಪಾಡುಗಳಲ್ಲಿ ಆದ ಬದಲಾವಣೆಗಳಿಂದಾಗಿ ಈ ಪದ್ಧತಿ ತನ್ನ ಅರ್ಥ ಮತ್ತು ಹೊಸ ಜೀವಂತಿಕೆಯನ್ನು ಪಡೆದುಕೊಂಡಿತು. ಮುಸ್ಲಿಂ ಆಕ್ರಮಣಕಾರರಿಂದ ಹಿಂದೂ ಸ್ತ್ರೀಯರು ತಮ್ಮ ಶೀಲವನ್ನು ಕಾಪಾಡಿಕೊಳ್ಳಲು ತಮಗೆ ತಾವೇ ರೂಪಿಸಿಕೊಂಡ ಒಂದು ಪದ್ಧತಿ ಅಥವಾ ಮುಸ್ಲಿಂ ಆಕ್ರಮಣಕಾರರಿಗೆ ಸೋತು ಶರಣಾಗಿ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗುವ ಮುಂಚೆಯೇ ಪತಿವ್ರತೆಯರಾಗಿ ಸಾಯುವುದು ಮೇಲೆಂದು ದೊಡ್ಡ ಚಿತೆಯನ್ನು ನಿರ್ಮಿಸಿ ಸಾಮೂಹಿಕವಾಗಿ ಚಿತೆಯೇರುವ ಮೂಲಕ ತಮ್ಮನ್ನು ತಾವು ಬಲಿದಾನ ಮಾಡಿಕೊಳ್ಳುವ ಪದ್ಧತಿಯೇ ಈ ಸತಿಪದ್ಧತಿಯಾಗಿದೆ. ಇದಕ್ಕೆ ಇನ್ನೊಂದು ಮಾದರಿ ಎಂದರೆ ‘ಜೋಹಾರ್,’ ಇದು ಕೂಡಾ ಅಂದು ಉತ್ತರ ಭಾರತದಲ್ಲಿ ಜಾರಿಯಲ್ಲಿತ್ತು ಎಂದು ಹೇಳಲಾಗುತ್ತದೆ. 
ಶಾಸನಗಳಲ್ಲಿ ಈ ಬಗೆಯ ಬಲಿದಾನಕ್ಕೆ ಸತಿ, ಮಹಾಸತಿ, ಮಾಸ್ತಿ, ಸಹಗಮನ, ಅನುಗಮನ, ಸಹಮರಣ, ಅನುಮರಣ, ತೋಳುಗೆಯ್ ಕೊಡು, ಪುರುಷವ್ರತ, ಸಹಾನುಭೂತಿ ಹೊಂದು, ಸಹಸಂಗತಿ ಬಿಡು, ಅಗ್ನಿಪ್ರವೇಶ ಮಾಡು ಮತ್ತು ಮದುವಳಿಗೆ ಕಲ್ಲು ಎಂಬ ಪದಗಳನ್ನು ಬಳಸಲಾಗಿದೆ. ಶಾಸನವೊಂದು ಇದನ್ನು ಮಾಸ್ತಿಕಲ್ಲು ಎಂಬುದಕ್ಕೆ ಬದಲಾಗಿ ವೀರಗಲ್ಲು ಎಂದು ಕರೆದಿದೆ. ಅಲ್ಲದೆ ‘ವೀರಮಾಸ್ತಿ’ ಎಂದು ಉಲ್ಲೇಖಿಸುವ ಒಂದು ಶಾಸನವನ್ನೂ ಕಾಣಬಹುದು. ಶಾಸನಗಳಲ್ಲಿ ಕಂಡುಬರುವ ‘ಕೈಕೊಟ್ಟಳ್’ ಮತ್ತು ‘ತೋಳು ಕೈಕೊಟ್ಟಳ್’ ಎಂಬ ಉಲ್ಲೇಖಗಳು ಮಾಸ್ತಿ ಆಚರಣೆಯ ಹಿಂದಿರುವ ಮನೋಭಾವವನ್ನು ಸೂಕ್ಷ್ಮವಾಗಿ ತಿಳಿಸುವಂತಿವೆ. ಇವುಗಳಲ್ಲದೆ ಮಸತಿ, ಸತಿಗಮನವಂ ಮಾಡಿದ, ತೋಳು ಕಯೆಗೊಟ್ಟು ಎಂಬ ಶಬ್ದಗಳೂ ಸಹ ಕ್ವಚಿತ್ತಾಗಿ ಶಾಸನಗಳಲ್ಲಿ ಬಳಕೆಯಾಗಿದ್ದು, ಅವುಗಳೆಲ್ಲ ಪತಿಯ ಮರಣಾನಂತರ ಪತ್ನಿಯು ಪ್ರಾಣತ್ಯಾಗ ಮಾಡಿದ್ದನ್ನು ಬೇರೆಬೇರೆ ಶಬ್ದಗಳಿಂದ ಹೇಳುತ್ತವೆ. 

Read More »

ಪಾಂಚಜನ್ಯ

ಕವಿತಾ ಎಂ.ಎನ್.

189 to 195

ಆಧುನಿಕ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ, ಜಗದಕವಿ, ರಸಋಷಿ ಮೊದಲಾದ ಹತ್ತಾರು ಅಭಿದಾನಗಳಿಗೆ ಪಾತ್ರರಾದವರು ರಾಷ್ಟ್ರಕವಿ ಕುವೆಂಪು. ಅವರಲ್ಲಿದ್ದ ಜಾಗೃತ ಪ್ರಜ್ಞೆ, ದರ್ಶನ ಶಕ್ತಿ, ಸಮ ಸಮಾಜ ಕಟ್ಟುವ ಹಂಬಲ, ಯುವಕರ ಬಗೆಗಿದ್ದ ಅದಮ್ಯ ಪ್ರೀತಿ ಮೊದಲಾದವು ಅವರು ಶತಮಾನದ ಕವಿಯಾಗಲು ಪ್ರೇರಣೆಯಾದ ಸಂಗತಿ. 
ಇವರು ಬರೆದ ಅನೇಕ ಕವನ ಸಂಕಲನಗಳಲ್ಲಿ ಅತ್ಯಂತ ಪ್ರಮುಖವಾದುದು ಪಾಂಚಜನ್ಯ. ಇದು ವೈಚಾರಿಕ ಸಂಕಲನ ಎಂದೇ ಪ್ರಸಿದ್ಧವಾಗಿದೆ. ಇದನ್ನು ಕುವೆಂಪು ಅವರು ಬರೆದದ್ದು ತಾರುಣ್ಯದ ಆರಂಭಿಕ ಹಂತದಲ್ಲಿ. ಆ ಹೊತ್ತಿನ ಸಾಮಾಜಿಕ, ಆರ್ಥಿಕ, ರಾಜಕೀಯ ಸನ್ನಿವೇಶಗಳಿಗೆ ಕವಿಯಾಗಿ ಕುವೆಂಪು ಅವರ ಒಟ್ಟಾರೆ ಸ್ಪಂದನೆ ಏನು ಎಂಬುದನ್ನು ಪಾಂಚಜನ್ಯ ಕವನ ಸಂಕಲನ ಕಟ್ಟಿಕೊಡುವಲ್ಲಿ ಅತ್ಯಂತ ಯಶಸ್ವಿಯಾಗಿದೆ ಮತ್ತು ಮಾದರಿಯಾದ ಸಂಗತಿಗಳನ್ನು ಒಳಗೊಂಡಿದೆ. ಇಂತಹ ಅಮೂಲ್ಯ ಕವನ ಸಂಕಲನದ ಪರಿಚಯಾತ್ಮಕ ನೋಟ ಮತ್ತು ವಿಶ್ಲೇಷಣೆಯನ್ನು ಕಟ್ಟಿಕೊಡುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. 

Read More »

ಭಾರತೀಯ ಸಂಸ್ಕೃತಿಯಲ್ಲಿ ಸಾಹಿತ್ಯ ಮತ್ತು ರಂಗಭೂಮಿ

ವಿಜಯೇಂದ್ರ ಕುಮಾರ್ ಜಿ.ಎಲ್.

196 to 204

ಸಾಹಿತ್ಯ ಮತ್ತು ರಂಗಭೂಮಿಯ ಪರಂಪರೆಗಳನ್ನು ಈ ಲೇಖನವು ತೌಲನಿಕವಾಗಿ ವಿಶ್ಲೇಷಿಸುತ್ತದೆ; ಚರ್ಚಿಸುತ್ತದೆ. ಸಂಸ್ಕೃತ ಸಾಹಿತ್ಯದಲ್ಲಿನ ಶ್ರವ್ಯಕಾವ್ಯ ಮತ್ತು ದೃಶ್ಯಕಾವ್ಯ ವರ್ಗೀಕರಣ, ಭರತಮುನಿಯ ನಾಟ್ಯಶಾಸ್ತ್ರ, ಧನಂಜಯನ ದಶರೂಪಕ ಹಾಗೂ ಅಶ್ವಘೋಷ, ಭಾಸ, ಕಾಳಿದಾಸ, ಶೂದ್ರಕ ಮೊದಲಾದ ನಾಟಕಕಾರರ ಕೃತಿಗಳ ಹಿನ್ನೆಲೆಯಲ್ಲಿ ಸಂಸ್ಕೃತ ರಂಗಪರಂಪರೆಯ ಸ್ವರೂಪವನ್ನು ಪ್ರಸ್ತುತ ಲೇಖನದಲ್ಲಿ ಸ್ಪಷ್ಟಪಡಿಸಿಕೊಳ್ಳಲಾಗಿದೆ. ನಾಟ್ಯಶಾಸ್ತ್ರಕ್ಕೂ ಪೂರ್ವದ ಗ್ರಾಮ್ಯ ರಂಗಪರಂಪರೆ ಮತ್ತು ನಂತರದ ಶಾಸ್ತ್ರೀಯ ಸಂಸ್ಕೃತ ರಂಗಭೂಮಿಯ ವಿಕಾಸವನ್ನು ಇಲ್ಲಿ ಚರ್ಚಿಸಲಾಗಿದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ವಾಚನ ಮತ್ತು ಪ್ರದರ್ಶನ ಪರಂಪರೆಗಳು ಭಾರತೀಯ ರಂಗಭೂಮಿಯ ಮೂಲಬೇರುಗಳಾಗಿದ್ದವು ಎಂಬ ಸಂಗತಿಯನ್ನು ಶೋಧಿಸಿಕೊಳ್ಳಲಾಗಿದೆ. ಗ್ರೀಕ್ ಮತ್ತು ಸಂಸ್ಕೃತ ನಾಟಕಗಳ ಸಾಮ್ಯ–ವೈಶಿಷ್ಟ್ಯಗಳನ್ನು ವಿಶ್ಲೇಷಿಸಿ, ಕನ್ನಡ ರಂಗಭೂಮಿಯ ಮೇಲಿನ ಅವುಗಳ ಪ್ರಭಾವವನ್ನು ಗುರುತಿಸಿಕೊಳ್ಳಲಾಗಿದೆ. ಗ್ರೀಕ್ ಮತ್ತು ಸಂಸ್ಕೃತ ಪರಂಪರೆಗಳಲ್ಲಿ ಮಹಾಕಾವ್ಯಗಳು ಮತ್ತು ಪುರಾಣಗಳು ನಾಟಕಗಳ ಕಥಾವಸ್ತುವಿಗೆ ಮೂಲವಾಗಿದ್ದರೂ, ಅವುಗಳನ್ನು ರಂಗರೂಪಕ್ಕೆ ಅಳವಡಿಸಿದ ವಿಧಾನಗಳು ಭಿನ್ನವಾಗಿರುವ ಕ್ರಮವನ್ನು ಇಲ್ಲಿ ಕಂಡುಕೊಳ್ಳಲಾಗಿದೆ. ಇದರೊಂದಿಗೆ ಸಾಹಿತ್ಯ ಮತ್ತು ನಾಟಕಗಳ ನಡುವಿನ ಅಂತರ್‌ ಸಂಬಂಧಗಳನ್ನು ತೌಲನಿಕ ಅಧ್ಯಯನದ ಮೂಲಕ ವಿವೇಚಿಸಲಾಗಿದೆ. 

Read More »

ಚದುರಂಗರ ಮೂರು ಕಥೆಗಳ ವಿಶ್ಲೇಷಣೆ

ಜಯಶಂಕರ ಎಂ.

205 to 211

ಚದುರಂಗರ ಕಥನಶೈಲಿ ಮಾನವೀಯತೆ, ಕೋಮುಸೌಹಾರ್ದ, ಬಡತನ, ಅಸಹಾಯಕತೆ, ಪ್ರೀತಿ, ಪಶ್ಚಾತ್ತಾಪ ಹಾಗೂ ಕೋಮುವಾದದಂತಹ ಸಾಮಾಜಿಕ ವಾಸ್ತವಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸುತ್ತದೆ. ಈ ಲೇಖನದಲ್ಲಿ ‘ದಿಬ್ಬ’, ‘ತುಲಸಿ’ ಮತ್ತು ‘ತಿರುವು’ ಎಂಬ ಮೂರು ಕಥೆಗಳನ್ನು ವಿಶ್ಲೇಷಿಸಲಾಗಿದೆ. ‘ದಿಬ್ಬ’ ಕಥೆಯಲ್ಲಿ ಸಲೀಮ ಸಾಬರ ಬದುಕಿನ ಮೂಲಕ ಹಸಿವು, ಸಾವು ಮತ್ತು ಪಾಪಪ್ರಜ್ಞೆಯ ನಡುವಿನ ಸಂಘರ್ಷವನ್ನು ಚಿತ್ರಿಸಲಾಗಿದೆ. ‘ತುಲಸಿ’ಯಲ್ಲಿ ಧರ್ಮದ ಗಡಿಗಳನ್ನು ಮೀರುವ ಪ್ರೀತಿ, ಬಡತನ ಮತ್ತು ಅಸಹಾಯಕತೆಯ ದುರಂತವನ್ನು ವಿಶ್ಲೇಷಿಸಲಾಗಿದೆ. ‘ತಿರುವು’ ಕಥೆ ಕೋಮು ಗಲಭೆಯ ಹಿನ್ನೆಲೆಯಲ್ಲಿಯೂ ಮಾನವೀಯತೆ ಮತ್ತು ಸಹಜೀವನದ ಮೌಲ್ಯವನ್ನು ಪ್ರತಿಪಾದಿಸುತ್ತದೆ. ಈ ಮೂರು ಕಥೆಗಳ ಮೂಲಕ ಚದುರಂಗರು ಧರ್ಮ, ಜಾತಿ, ಕೋಮುವಾದಗಳಿಗಿಂತ ಮನುಷ್ಯತ್ವವೇ ಶ್ರೇಷ್ಠ ಎಂಬ ಆಶಯವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ.

Read More »

ದೇವದಾಸಿ ಕುಟುಂಬಗಳ ಯುವಜನರ ಇಂದಿನ ಬದುಕು

ಮಂಜುಳಾ ತೆಳಗಡೆ

212 to 223

ಭಾರತೀಯ ಸಮಾಜದಲ್ಲಿ ಕೆಲವು ಸಾಂಪ್ರದಾಯಿಕ ಪದ್ಧತಿಗಳು ಕಾಲಕ್ರಮೇಣ ಸಾಮಾಜಿಕ ಅಸಮಾನತೆ ಮತ್ತು ಶೋಷಣೆಯ ರೂಪಗಳನ್ನು ಪಡೆದುಕೊಂಡಿವೆ. ದೇವದಾಸಿ ಪದ್ಧತಿಯೂ ಅಂತಹ ಒಂದು ಸಾಮಾಜಿಕ ವ್ಯವಸ್ಥೆಯಾಗಿದ್ದು, ಅದರ ಪರಿಣಾಮಗಳು ಮಹಿಳೆಯರ ಬದುಕಿನಲ್ಲಷ್ಟೇ ಅಲ್ಲದೆ ಅವರ ಮಕ್ಕಳ ಮತ್ತು ಮುಂದಿನ ಪೀಳಿಗೆಯ ಯುವಜನರ ಜೀವನದಲ್ಲಿಯೂ ಕಾಣಿಸಿಕೊಳ್ಳುತ್ತವೆ. ಕರ್ನಾಟಕದಲ್ಲಿ ದೇವದಾಸಿ ಆಚರಣೆಯನ್ನು ನಿಷೇಧಿಸುವ ಕಾನೂನು ಕ್ರಮಗಳು ಕೈಗೊಳ್ಳಲಾಗಿದ್ದರೂ, ಈ ಪದ್ಧತಿಯ ಸಾಮಾಜಿಕ ಪರಿಣಾಮಗಳು ಸಂಪೂರ್ಣವಾಗಿ ನಿರ್ಮೂಲವಾಗಿಲ್ಲ ಎಂಬುದು ಅಧ್ಯಯನದ ಹಿನ್ನೆಲೆಯಿಂದ ಸ್ಪಷ್ಟವಾಗುತ್ತದೆ. ದೇವದಾಸಿ ಕುಟುಂಬಗಳಲ್ಲಿ ಜನಿಸಿದ ಮಕ್ಕಳಿಗೆ ತಮ್ಮ ತಾಯಿಯ ಸಾಮಾಜಿಕ ಗುರುತಿನ ಕಾರಣದಿಂದ ಬಾಲ್ಯದಿಂದಲೇ ವಿಭಿನ್ನ ರೀತಿಯ ಸಾಮಾಜಿಕ ಅನುಭವಗಳು ಎದುರಾಗಬಹುದು. ವಿಶೇಷವಾಗಿ ತಂದೆಯ ಹೆಸರು, ಕುಟುಂಬದ ಗುರುತು, ಜಾತಿ ಮತ್ತು ಸಾಮಾಜಿಕ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಅವರ ಶಿಕ್ಷಣ ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಶಾಲಾ ಪರಿಸರದಲ್ಲಿಯೇ ತಂದೆಯ ಹೆಸರನ್ನು ಪ್ರಶ್ನಿಸುವಂತಹ ಅನುಭವಗಳು ಕೆಲವು ಯುವಜನರಲ್ಲಿ ಮುಜುಗರ, ಆತಂಕ ಮತ್ತು ಸಾಮಾಜಿಕ ಹಿಂಜರಿಕೆಯನ್ನು ಉಂಟುಮಾಡುತ್ತವೆ ಎಂದು ಅಧ್ಯಯನದ ಕ್ಷೇತ್ರಾನುಭವಗಳು ಸೂಚಿಸುತ್ತವೆ.
ಇಂತಹ ಅನುಭವಗಳು ಶಿಕ್ಷಣ ಮುಂದುವರಿಸುವ ಮನೋಭಾವದ ಮೇಲೂ ಪರಿಣಾಮ ಬೀರಬಹುದು. ಶಿಕ್ಷಣವು ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಆರ್ಥಿಕ ಸ್ವಾವಲಂಬನೆಯ ಪ್ರಮುಖ ಸಾಧನವಾಗಿದ್ದರೂ, ಆರ್ಥಿಕ ಬಡತನ, ಕುಟುಂಬದ ಜವಾಬ್ದಾರಿಗಳು, ಸಾಮಾಜಿಕ ಕಳಂಕ ಮತ್ತು ಮಾರ್ಗದರ್ಶನದ ಕೊರತೆಗಳಿಂದ ಕೆಲವು ಯುವಜನರು ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಿಸುತ್ತಾರೆ. ದೇವದಾಸಿ ಸಮುದಾಯದ ಯುವಜನರ ಸಮಸ್ಯೆಯನ್ನು ಕೇವಲ ವೈಯಕ್ತಿಕ ಅಥವಾ ಕುಟುಂಬದ ಸಮಸ್ಯೆಯಾಗಿ ನೋಡಲು ಸಾಧ್ಯವಿಲ್ಲ. ಅದು ಸಾಮಾಜಿಕ ರಚನೆ, ಜಾತಿ, ಲಿಂಗ, ಬಡತನ, ಶಿಕ್ಷಣದ ಅವಕಾಶಗಳು ಮತ್ತು ಸಾಮಾಜಿಕ ಕಳಂಕಗಳ ಪರಸ್ಪರ ಸಂಬಂಧದಿಂದ ರೂಪುಗೊಳ್ಳುವ ಬಹುಆಯಾಮದ ಸಮಸ್ಯೆಯಾಗಿದೆ. ಸಾಮಾಜಿಕ ಕಳಂಕವು ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ದೇವದಾಸಿ ಕುಟುಂಬದ ಹಿನ್ನೆಲೆಯನ್ನು ಸುಲಭವಾಗಿ ಗುರುತಿಸಬಹುದಾದ ಸಂದರ್ಭಗಳಲ್ಲಿ ಯುವಜನರು ತಮ್ಮ ಗುರುತನ್ನು ಬಹಿರಂಗಪಡಿಸಲು ಹಿಂಜರಿಯಬಹುದು. ಇದರಿಂದ ಸಾಮಾಜಿಕ ಸಂಬಂಧಗಳು, ಶಿಕ್ಷಣ, ಉದ್ಯೋಗ ಮತ್ತು ವಿವಾಹದಂತಹ ಜೀವನದ ಪ್ರಮುಖ ಕ್ಷೇತ್ರಗಳಲ್ಲಿ ಅಡೆತಡೆಗಳು ಉಂಟಾಗಬಹುದು.

Read More »

ಶರಣರ ಭಕ್ತ ಭವಿ ಪರಿಕಲ್ಪನೆಯ ವಿಶ್ಲೇಷಣೆ

ಮಹದೇವಪ್ರಸಾದ್‌ ಎನ್.ಎಸ್.

224 to 229

ಈ ಸಂಶೋಧನಾ ಲೇಖನವು ಶರಣರ ವಚನಗಳಲ್ಲಿ ವ್ಯಕ್ತವಾಗುವ ‘ಭವಿ–ಭಕ್ತ’ ಪರಿಕಲ್ಪನೆಯನ್ನು ತಾತ್ವಿಕ ಹಾಗೂ ಅನುಭಾವಿಕ ನೆಲೆಯಲ್ಲಿ ವಿಶ್ಲೇಷಿಸುತ್ತದೆ. ‘ಭವಿ’ ಎಂಬ ಪದಕ್ಕೆ ಕೇವಲ ಲಿಂಗಧಾರಣೆ ಇಲ್ಲದ ವ್ಯಕ್ತಿ ಎಂಬ ಸೀಮಿತ ಅರ್ಥವಲ್ಲದೆ, ಚಲನೆಯಿಲ್ಲದ ಅಸ್ತಿತ್ವ, ಆತ್ಮಸ್ವರೂಪದ ಅರಿವಿಲ್ಲದ ಸ್ಥಿತಿ ಹಾಗೂ ಕಾಮ, ಕ್ರೋಧ, ಲೋಭ, ಮೋಹಾದಿ ಮಾನವೀಯ ಗುಣಗಳ ಸಂಕೇತವೆಂಬ ವಿಸ್ತೃತ ಅರ್ಥಗಳಿರುವುದನ್ನು ಲೇಖನ ಗುರುತಿಸುತ್ತದೆ. ಭಕ್ತನ ಸಾಧನೆಯಲ್ಲಿ ಭವಿ–ಭಕ್ತರ ನಡುವಿನ ಸಂಬಂಧ, ದೇವಾರಾಧನೆ ಮತ್ತು ಲಿಂಗಾರಾಧನೆಯ ವ್ಯತ್ಯಾಸ, ಪ್ರಸಾದ ತತ್ತ್ವ ಹಾಗೂ ಸಮರಸದ ಪರಿಕಲ್ಪನೆಗಳನ್ನು ಪರಿಶೀಲಿಸಲಾಗಿದೆ. ಶರಣರ ದೃಷ್ಟಿಯಲ್ಲಿ ಭಕ್ತನು ಅಂತಿಮವಾಗಿ ಭವಿತ್ವವನ್ನು ಮೀರಿ ಲಿಂಗಚೇತನದೊಂದಿಗೆ ಏಕೀಭವಿಸುವ ಸಾಧನೆಯೇ ನಿಜವಾದ ಭಕ್ತಿಯೆಂಬ ತಾತ್ವಿಕ ಆಶಯವನ್ನು ಲೇಖನ ಪ್ರತಿಪಾದಿಸುತ್ತದೆ. 

Read More »