ಮಹಿಳಾ ಸಣ್ಣಕತೆಗಳಲ್ಲಿ ಉದ್ಯೋಗಸ್ಥ ಹೆಣ್ಣಿನ ಅಭಿವ್ಯಕ್ತಿಯ ಸ್ವರೂಪ: ಒಂದು ಅಧ್ಯಯನ
Main Article Content
Abstract
ಇಂದು ಹೆಣ್ಣಿನ ಉತ್ಪಾದನಾ ದುಡಿಮೆ, ಆರ್ಥಿಕತೆ ಮತ್ತು ಆರ್ಥಿಕ ಸ್ವಾವಲಂಬನೆಯ ಬಗೆಗೆ ಆಧುನಿಕ ಲೇಖಕಿಯರು ತಮ್ಮ ಕಥನಗಳಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಜಾಗತೀಕರಣದ ಸಮಾಜದಲ್ಲಿ ಪ್ರತಿಯೊಂದು ವಸ್ತು, ವಿಷಯಗಳು ವಿನಿಮಯ ಮೌಲ್ಯವನ್ನು ಪಡೆಯುತ್ತಿರುವಾಗ ಹೆಣ್ಣಿನ ದುಡಿಮೆ ಎನ್ನುವಂತದ್ದು ಅಗತ್ಯವೂ ಅನಿವಾರ್ಯವೂ ಆಗಿದೆ ಎನ್ನುವಲ್ಲಿಗೆ ತಲಪಿದೆ. ವ್ಯವಸ್ಥೆಯಲ್ಲಿ ಬಲವಾಗಿ ಬೇರೂರಿದ್ದ ʻಉದ್ಯೋಗಂ ಪುರುಷ ಲಕ್ಷಣಂʼ ಎನ್ನುವ ಮೌಲ್ಯ ಬದಲಾವಣೆಯನ್ನು ಕಾಣುತ್ತಿದೆ. ಆಧುನಿಕ ಮಾದರಿಯ ಹೆಣ್ಣು ಉದ್ಯೋಗದ ಮೂಲಕ ಇಂದು ಸಮಾಜದ ಜೊತೆಗೆ ಸಂಪರ್ಕವನ್ನು ಸಾಧಿಸಿದ್ದಾಳೆ. ವಿಸ್ತರಿಸಿಕೊಂಡ ಅನುಭವದ ಮೂಲಕ ಸಮಾಜವನ್ನು ಕುತೂಹಲದಿಂದ ನೋಡುತ್ತಿದ್ದಾಳೆ. ದುಡಿಮೆಯ ಭಾರದಿಂದ ನಲುಗಿಹೋಗುತ್ತಿರುವ ಅವಳನ್ನು ಸಮಾಜ ಮರುಕ ಮತ್ತು ಅನುಕಂಪದಿಂದ ನೋಡುತ್ತಿದೆ. ಆದರೂ ತನ್ನೊಳಗಿನ ಜೀವ ಚೈತನ್ಯವನ್ನು ಕಳೆದುಕೊಳ್ಳದೆ ಇಂದು ಮಹಿಳೆ ಹಲವು ಕ್ಷೇತ್ರಗಳಲ್ಲಿ ಬೆಳೆದು ನಿಂತು ಹೆಣ್ತನದ ಛಾಪನ್ನು ದಿಗಂತದೆತ್ತರಕ್ಕೆ ಏರಿಸಿಬಿಟ್ಟಿದ್ದಾಳೆ. ಅವಳು ಹೆಜ್ಜೆಯಿಡುವ ಹಾದಿ ಕಲ್ಲು, ಮುಳ್ಳುಗಳಿಂದ ಕೂಡಿದ್ದರೂ ಅದನ್ನೆಲ್ಲ ಮೆಟ್ಟಿನಿಂತು ತನ್ನ ಕೇಂದ್ರದಲ್ಲಿ ತಾನು ಕಾಣಿಸಿಕೊಳ್ಳುತ್ತಿದ್ದಾಳೆ. ಅವಳು ಮನೆಯೊಳಗಿನ ಸಾಂಸ್ಕೃತಿಕ ನೆಲೆಯಿಂದ ಹೊರಬಂದು ತನ್ನನ್ನು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರೆಗಿನ ಔದ್ಯೋಗಿಕ ಮಜಲುಗಳನ್ನು ಮತ್ತು ಎದುರಿಸಿದ ಸಮಸ್ಯೆಗಳ ಸ್ವರೂಪವನ್ನು ಈ ಲೇಖನದಲ್ಲಿ ಚರ್ಚೆಗೊಳಪಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನೇಮಿಚಂದ್ರ, (2001), ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು, ಅಂಕಿತ ಪುಸ್ತಕ, ಬೆಂಗಳೂರು.
ವೈದೇಹಿ, (2006), ಅಲೆಗಳಲ್ಲಿ ಅಂತರಂಗ, ಅಕ್ಷರ ಪ್ರಕಾಶನ, ಸಾಗರ.
ಮುರಳೀಧರ ಉಪಾಧ್ಯ ಹಿರಿಯಡಕ, (2018), ವೈದೇಹಿ ಜೀವನ ಮತ್ತು ಕೃತಿಗಳ ಸಮೂಹ ಶೋಧ, ಅಭಿನವ ಪ್ರಕಾಶನ, ಬೆಂಗಳೂರು.
ಶ್ರೀಮತಿ ಎಚ್.ಎಸ್., ಶಿವಾನಂದ ಎಸ್. ವಿರಕ್ತಮಠ, ಕೃಷ್ಣ ಜೆ. (ಸಂ), (2007), ಮಹಿಳಾ ಆರ್ಥಿಕತೆ, ಮಹಿಳಾ ಅಧ್ಯಯನ ಕೇಂದ್ರ, ಕನ್ನಡ ವಿ.ವಿ., ಹಂಪಿ.
ಶ್ರೀಮತಿ ಎಚ್.ಎಸ್. (ಅನುವಾದ), (2007), ದ ಸೆಕೆಂಡ್ ಸೆಕ್ಸ್, ಅಧ್ಯಯನ ಮಂಡಲ, ಬೆಂಗಳೂರು.