ಮುಕ್ತಾಯಕ್ಕನ ವಚನಗಳಲ್ಲಿ ದೇಹ ಮತ್ತು ಆತ್ಮ ನಿರೂಪಣೆ

Main Article Content

ಉಮೇಶ್ ಎಂ.ಆರ್.

Abstract

ಹನ್ನೆರಡನೆಯ ಶತಮಾನದ ವಚನ ಚಳುವಳಿಯನ್ನು ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಒಂದು ಅಭೂತಪೂರ್ವ ಘಟ್ಟ ಎನ್ನಬಹುದು. ಜಡಗೊಂಡ ಸಾಮಾಜಿಕ ವ್ಯವಸ್ಥೆಯನ್ನು ಎಚ್ಚರಗೊಳಿಸುವ, ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವ ಸಾರ್ಥಕ ಕೆಲಸವನ್ನು ವಚನಕಾರರು ಮಾಡಿದರು. ಅವರ ವಚನಗಳು ಹೊಸ ಜಾಗೃತಿ ಹಾಗೂ ಜ್ಞಾನದ ಸಾಧ್ಯತೆಗಳಾಗಿ ಕೆಲಸ ಮಾಡಿದವು. ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿದ್ದ ಮೂಢನಂಬಿಕೆಗಳು, ಕಂದಾಚಾರಗಳು, ಜಾತಿ ಲಿಂಗಾಧಾರಿತ ತಾರತಮ್ಯ ಮುಂತಾವುಗಳನ್ನು ನಿವಾರಿಸಲು ಬಹು ದೊಡ್ಡ ವೈಚಾರಿಕ ಆಂದೋಲನವನ್ನು ವಚನಕಾರರು ಮಾಡಿದರು. ಎಂಟು ನೂರು ವರ್ಷಗಳ ನಂತರವೂ ಕೂಡಾ ವಚನಕಾರರು ಪ್ರತಿಪಾದಿಸಿದ ಜೀವನ ಮೌಲ್ಯಗಳು ಸಮಾಜವನ್ನು ಮುನ್ನಡೆಸುವ ದಾರಿದೀಪಗಳಾಗಿ ಕೆಲಸ ಮಾಡುತ್ತಿವೆ ಎಂದರೆ ವಚನಕಾರರ ವಚನಗಳಲ್ಲಿ ಅಂತರ್ಗತವಾಗಿದ್ದ ತತ್ವ ಹಾಗೂ ಮೌಲ್ಯಗಳ ಗಟ್ಟಿತನವನ್ನು ಅರ್ಥಮಾಡಿಕೊಳ್ಳಬಹುದು.

Article Details

Section

Research Articles

Author Biography

ಉಮೇಶ್ ಎಂ.ಆರ್.

ಕನ್ನಡ ಸಹಾಯಕ ಪ್ರಾಧ್ಯಾಪಕ, ದಯಾನಂದ ಸಾಗರ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು.

How to Cite

ಉಮೇಶ್ ಎಂ.ಆರ್. (2025). ಮುಕ್ತಾಯಕ್ಕನ ವಚನಗಳಲ್ಲಿ ದೇಹ ಮತ್ತು ಆತ್ಮ ನಿರೂಪಣೆ. ಅಕ್ಷರಸೂರ್ಯ (AKSHARASURYA), 10(03), 07 to 14. https://aksharasurya.com/index.php/latest/article/view/1769

References

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, (2012), ವಚನ ವೈಭವ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಚಿದಾನಂದ ಮೂರ್ತಿ ಎಂ., (2015), ವಚನ ಸಾಹಿತ್ಯ, ಸಪ್ನ ಬುಕ್ ಹೌಸ್, ಬೆಂಗಳೂರು.

ನಾಗಭೂಷಣಸ್ವಾಮಿ ಓ.ಎಲ್., (2015), ವಚನ ಸಾವಿರ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.