ಜಿ.ಎಸ್ ಶಿವರುದ್ರಪ್ಪರವರ ʼತಾಯಿ ತನ್ನ ಮಗುವಿಗೆʼ ಕಾವ್ಯದ ಭಾವನಾತ್ಮಕ ಸಂಬಂಧದ ನೆಲೆಗಳು

Main Article Content

ಮೀನಾಕ್ಷಿ ಎನ್.ಪಿ.

Abstract

ತಾಯಿ ಎಂದರೆ ಮಮತೆಯ ಮಡಿಲು, ತಾಯಿ ಎಂದರೆ ಪ್ರೀತಿಯ ಭಾವನೆ, ತಾಯಿ ಎಂದರೆ ಜೀವನ ಸಾಗಿಸುವ ತೇರು, ತಾಯಿ ಎಂದರೆ ಬದುಕಿನ ಬವಣೆ, ತಾಯಿ ಎಂದರೆ ಕಷ್ಟ ನಿಭಾಯಿಸುವ ಒಡಲು, ತಾಯಿ ಎಂದರೆ ಬದುಕಿನ ಸರ್ವಸ್ವವನ್ನು ತ್ಯಾಗ ಮಾಡುವ ಕರುಣಾಮಯಿ. ಇವಳ ಬಗ್ಗೆ ಹೇಳಲು ಪದಗಳೇ ಸಾಲದು, ದೇವತಾ ಮೂರ್ತಿ ಅವಳು. ತಾಯಿ ಜೀವನದ ಅಮೂಲ್ಯ ಹಾಗು ಅನಂತವಾದ ಆಸರೆ/ಬೆಳಕು. ತಾಯಿಯೇ ಮಗುವಿನ ಮೊದಲ ಗುರು, ನಮ್ಮ ಮೊಟ್ಟ ಮೊದಲ ಪ್ರೇಮ ಹಾಗೂ ಹಾರೈಕೆಯಾಗಿದ್ದಾಳೆ. ಇಂತಹ ತಾಯಿ ತನ್ನ ಮಗುವಿನ ಬಗ್ಗೆ ಇಟ್ಟಿರುವ ಅವಳ ಕಾಳಜಿಯ ಬಗ್ಗೆ ಹಾಗೂ ಬಾಂಧವ್ಯದ ಬಗ್ಗೆ ತಿಳಿದುಕೊಳ್ಳೋಣ. ಕುಟುಂಬದಲ್ಲಿ ತಾಯಿಯ ಪಾತ್ರ ಬಹುಮುಖಿ ಮತ್ತು ಆಳವಾಗಿ ಪ್ರಭಾವಶಾಲಿಯಾಗಿದ್ದು ಕುಟುಂಬ ಜೀವನದ ಲೆಕ್ಕವಿಲ್ಲದಷ್ಟು ಅಂಶಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುವ ಪಾತ್ರವಾಗಿದ್ದಾಳೆ. ತಾಯಿ ತನ್ನ ಮಗುವಿಗೆ ನಿಶ್ಚಲವಾದ ಪ್ರೀತಿಯನ್ನು ನೀಡುತ್ತಾಳೆ. ಅವಳು ಯಾವುದೇ ಕಾರಣವಿರಲಿ, ಯಾವುದೇ ಪರಿಸ್ಥಿತಿಯಿರಲಿ ತನ್ನ ಮಗುವನ್ನು ರಕ್ಷಿಸುವುದನ್ನ, ಬೆಳೆಸುವುದನ್ನ, ಪ್ರೋತ್ಸಾಹಿಸುವುದನ್ನ ಬಿಡುವುದಿಲ್ಲ. ಅವಳ ಆ ತ್ಯಾಗ ಆದ್ಯ ಕರ್ತವ್ಯದಂತೆ ನಿರ್ವಹಿಸಲ್ಪಡುತ್ತದೆ/ನಿರ್ವಹಿಸುತ್ತಾಳೆ. ಅಂತಹ ತಾಯಿಯ ಹಲವು ರೀತಿಯ ಮಜಲುಗಳನ್ನು ನಮ್ಮ ನಾಡಿನಲ್ಲಿ, ನಮ್ಮ ಭಾರತದಲ್ಲಿ ನೋಡಿದ್ದೇವೆ. ಹಾಗೂ ನೋಡುತ್ತಿದ್ದೇವೆ. ಅದರಲ್ಲಿ ಒಂದು ನಿದರ್ಶನವಾಗಿ ಜಿ.ಎಸ್ ಶಿವರುದ್ರಪ್ಪರವರ ತಾಯಿ ತನ್ನ ಮಗುವಿಗೆ ಕಾವ್ಯದ ಭಾವನಾತ್ಮಕ ಸಂಬಂಧದ ನೆಲೆಗಳನ್ನು ನೋಡಬಹುದಾಗಿದೆ. ಅದರಲ್ಲೂ ಒಂದು ಹೆಣ್ಣು ತಾಯಿಯಾಗುವಾಗ ಅವಳು ಕಾಣುವ ಬಯಕೆ, ಕನಸು, ಬಾಂಧವ್ಯ, ಪ್ರೀತಿ, ಮಮತೆಯನ್ನು ತಿಳಿಯಬಹುದಾಗಿದೆ. ಅದರ ಒಂದೊಂದು ರೀತಿಯ ಮಜಲಗಳನ್ನು ಗಮನಿಸಬಹುದು.

Article Details

Section

Research Articles

Author Biography

ಮೀನಾಕ್ಷಿ ಎನ್.ಪಿ.

ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ದಯಾನಂದ ಸಾಗರ್ ಕಾಲೇಜು ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು.

How to Cite

ಮೀನಾಕ್ಷಿ ಎನ್.ಪಿ. (2025). ಜಿ.ಎಸ್ ಶಿವರುದ್ರಪ್ಪರವರ ʼತಾಯಿ ತನ್ನ ಮಗುವಿಗೆʼ ಕಾವ್ಯದ ಭಾವನಾತ್ಮಕ ಸಂಬಂಧದ ನೆಲೆಗಳು. ಅಕ್ಷರಸೂರ್ಯ (AKSHARASURYA), 10(03), 45 to 50. https://aksharasurya.com/index.php/latest/article/view/1772

References

ಡೊಮಿನಿಕ್ ಡಿ. (ಸಂ), ಶಿವರುದ್ರಪ್ಪ ಜಿ.ಎಸ್., (2025), ವಿಜ್ಞಾನ ಕನ್ನಡ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ವತ್ಸಲ ಮೋಹನ್ (ಸಂ), ಜಾಹ್ನವಿ ಬಿ.ಟಿ., (2025), ವಿಜ್ಞಾನ ಕನ್ನಡ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

ಡೊಮಿನಿಕ್ ಡಿ. (ಸಂ), ಬೆಸಗರಹಳ್ಳರಾಮಣ್ಣ, (2025), ವಿಜ್ಞಾನ ಕನ್ನಡ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.