ಬುದ್ಧ ಮತ್ತು ಬಸವಣ್ಣನ ದೃಷ್ಟಿಕೋನ: ಮಹಿಳೆ
Main Article Content
Abstract
ಭಾರತೀಯ ದಾರ್ಶನೀಕ ಪರಂಪರೆಯಲ್ಲಿ ಬುದ್ಧ ಮತ್ತು ಬಸವಣ್ಣ ಈ ಇಬ್ಬರನ್ನು ಮಹಾನ್ ಸಮಾಜವಾದಿಗಳನ್ನಾಗಿ ಗುರುತಿಸಲಾಗಿದೆ. ಈ ಇಬ್ಬರಲ್ಲೂ ಕೂಡ ಹಳೆಯ ಮೌಢ್ಯಗಳ, ಆಚರಣೆಗಳ ವಿರುದ್ಧ ಧ್ವನಿ ಎತ್ತುವ ಗುಣವಿತ್ತು. ವಿಶಿಷ್ಟವಾಗಿ ಕಾಣುವುದಾದರೆ ಈ ಇಬ್ಬರಲ್ಲೂ ಸಮಾನತೆಯ ಕುರಿತಾದ ದೃಷ್ಟಿಯೂ ಹೆಚ್ಚು ಪ್ರಗತಿಪರವಾಗಿದ್ದವೂ. ಈ ಹಿನ್ನೆಲೆಯಲ್ಲಿ ಮಹಿಳೆಯ ಕುರಿತಾದ ದೃಷ್ಟಿಕೋನವು ಹೆಚ್ಚು ಮಹತ್ವ ಉಳ್ಳದ್ದಾಗಿದೆ. ಈ ಮೂಲಕ ಮಹಿಳೆಯ ಕುರಿತಾದ ಹಳೆಯ ಆಲೋಚನೆಗಳನ್ನು ದಿಕ್ಕರಿಸುವ ಮುಖೇನ ಸ್ತ್ರೀಗೆ ಸಾಮಾಜಿಕ, ರಾಜಕೀಯ, ಧಾರ್ಮಿಕ ಭಾಗವಾಗಿಯೂ ಆಕೆಯನ್ನು ಸಮಾನವಾಗಿ ಕಾಣುವ ದೃಷ್ಟಿಯನ್ನು ಬುದ್ಧ ಮತ್ತು ಬಸವಣ್ಣನ ತಾತ್ವಿಕತೆಯ ಮೂಲಕ ಅರಿಯಬಹುದಾಗಿದೆ.
ಪ್ರಸ್ತುತ ಈ ಲೇಖನದಲ್ಲಿ ಬುದ್ಧ ಮತ್ತು ಬಸವಣ್ಣನ ವಿಚಾರಧಾರೆಗಳನ್ನು ಅವಲೋಕಿಸುವ ಮೂಲಕ ಬುದ್ಧ ಮತ್ತು ಬಸವಣ್ಣನ ದೃಷ್ಟಿಕೋನದಲ್ಲಿ ಮಹಿಳೆಯ ಕುರಿತಾದ ಪ್ರಗತಿಪರ ವಿಚಾರಗಳನ್ನು ಕನ್ನಡ ಸಾಹಿತ್ಯದಲ್ಲಿ ಒಳಗೊಂಡಿರುವುದನ್ನು ತಿಳಿಸುವುದಾಗಿದೆ. ಹಾಗಾಗಿ ಬುದ್ಧನ ಮತ್ತು ಬಸವಣ್ಣನ ಸ್ತ್ರೀ ಕುರಿತ ಆಲೋಚನೆಗಳು ಪ್ರಸ್ತುತಕ್ಕೂ ಅವು ಸ್ಪಂದಿಸುವ ಮತ್ತು ಪ್ರಗತಿಪರವಾದ ಆಶಯಗಳನ್ನು ಹೊಂದಿರುವುದನ್ನು ಕಾಣಬಹುದಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎ.ಎಂ. (ಸಂ), (2001), ಬಸವಣ್ಣನವರ ಸಮಗ್ರ ವಚನಸಂಪುಟ, ಕನ್ನಡ ಪುಸ್ತಕಪ್ರಾಧಿಕಾರ, ಬೆಂಗಳೂರು.
ಜಗದೀಶ್ ಕೊಪ್ಪ ಎನ್., (2022), ಬುದ್ಧ ಚರಿತೆ, ಸ್ವಪ್ನ ಬುಕ್ ಹೌಸ್, ಬೆಂಗಳೂರು.
ಜಗದೀಶ್ ಕೊಪ್ಪ ಎನ್. (ಸಂ), (2019), ಬುದ್ಧ ಮತ್ತು ಆತನ ಧಮ್ಮ, ಪಾಲಿ ಇನ್ಸ್ ಟ್ಯೂಟ್, ಕಲಬುರಗಿ.
ಸೊಂದಲಗೆರೆ ಲಕ್ಷ್ಮೀಪತಿ, (2019), ಬೌದ್ಧ ಧರ್ಮದ ಅನನ್ಯತೆ, ಕಾವ್ಯಕಲಾ ಪ್ರಕಾಶನ, ಬೆಂಗಳೂರು.
ಶಿವನಕೆರೆ ಬಸವಲಿಂಗಪ್ಪ, (2024), ಬುದ್ಧನ ಧಮ್ಮಪದ: ಸಂಚಿಕೆ-1, ಅಭಿರುಚಿ ಪ್ರಕಾಶನ, ಮೈಸೂರು.