Published: 2026-05-10

Table of Contents

Table of Contents

I to IV

ಬನ್ನಂಜೆಯವರ ಬದುಕು-ಬರವಣಿಗೆ

ಅಕ್ಷತಾ

01 to 04

ಬನ್ನಂಜೆ ಗೋವಿಂದಾಚಾರ್ಯರು ಭಾರತೀಯ ಸಂಸ್ಕೃತಿ, ವೇದಾಂತದ ಪ್ರಖರ ಚಿಂತಕರು, ಅಪ್ರತಿಮ ವಾಗ್ಮಿಗಳು ಹಾಗೂ ಶ್ರೇಷ್ಠ ಸಂಸ್ಕೃತ-ಕನ್ನಡ ವಿದ್ವಾಂಸರು. ಬಾಲ್ಯದಿಂದಲೇ ಅಸಾಧಾರಣ ಸ್ಮರಣಶಕ್ತಿ ಮತ್ತು ಜ್ಞಾನದಾಹ ಹೊಂದಿದ್ದ ಇವರು, ಬಹುಪಾಲು ಸ್ವಾಧ್ಯಾಯದ (ಸ್ವಯಂ-ಅಧ್ಯಯನ) ಮೂಲಕವೇ ಅಗಾಧ ಪಾಂಡಿತ್ಯವನ್ನು ಒಲಿಸಿಕೊಂಡರು. ಕೇವಲ ಶಾಸ್ತ್ರಾಧ್ಯಯನಕ್ಕೆ ಸೀಮಿತವಾಗದೆ, ಕನ್ನಡದಲ್ಲಿ ಸುಮಾರು ೯೪ ಮತ್ತು ಸಂಸ್ಕೃತದಲ್ಲಿ ೩೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕಾಳಿದಾಸ, ಶೂದ್ರಕ, ಭವಭೂತಿಯಂತಹ ಮಹಾಕವಿಗಳ ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅತ್ಯಂತ ಸೃಜನಶೀಲವಾಗಿ ತಂದ ಕೀರ್ತಿ ಇವರದು. ‘ಆವೆಯ ಮಣ್ಣಿನ ಆಟದ ಬಂಡಿ’, ‘ನೆನಪಾದಳು ಶಕುಂತಲೆ’ ಮುಂತಾದ ಕೃತಿಗಳು ಅನುವಾದದ ಗಡಿಯನ್ನು ದಾಟಿ ಸ್ವತಂತ್ರ ಸೃಷ್ಟಿಗಳಂತೆ ಹೊಮ್ಮಿವೆ. ಪದ್ಮಶ್ರೀ ಪುರಸ್ಕೃತರಾದ ಆಚಾರ್ಯರ ಅಪರೂಪದ ಬದುಕು, ಅಗಾಧ ವಿದ್ವತ್ತು ಮತ್ತು ಬಹುಮುಖಿ ಬರವಣಿಗೆಯ ವಿಸ್ತಾರವನ್ನು ಇಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ.

Read More »

ಕುಮಾರವ್ಯಾಸನ ವ್ಯಾಕರಣ: ಕೆ. ವೆಂಕಟರಾಮಪ್ಪನವರ ತಾತ್ವಿಕ ನಿಲುವುಗಳು

ಅಶ್ವಿನಿ ಎ.

05 to 20

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದೇ ಪ್ರಸಿದ್ಧನಾದ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯು ಕೇವಲ ಭಾಷಾ ಸೌಂದರ್ಯಕ್ಕಷ್ಟೇ ಅಲ್ಲದೆ, ನಡುಗನ್ನಡ ಭಾಷಿಕ ಅಧ್ಯಯನದ ಅಪೂರ್ವ ಕಣಜವೂ ಆಗಿದೆ. ಕೆ. ವೆಂಕಟರಾಮಪ್ಪನವರ ಅಪ್ರಕಟಿತ ಪಿಎಚ್.ಡಿ. ಪ್ರಬಂಧವಾದ ‘ಕುಮಾರವ್ಯಾಸನ ವ್ಯಾಕರಣ’ವನ್ನು ಆಧರಿಸಿದ ತಾತ್ವಿಕ ನಿಲುವುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೇಶಿರಾಜನ ‘ಶಬ್ದಮಣಿದರ್ಪಣ’ದ ಮಾದರಿಯಲ್ಲಿಯೇ ಕುಮಾರವ್ಯಾಸನ ಕಾವ್ಯದ ವ್ಯಾಕರಣಾಂಶಗಳನ್ನು ಅಕ್ಷರ, ಸಂಧಿ, ನಾಮಪದ, ಸಮಾಸ, ತದ್ಭವ, ಕ್ರಿಯಾಪದ ಸೇರಿದಂತೆ ಒಂಬತ್ತು ಪ್ರಕರಣಗಳಲ್ಲಿ ಅವರು ವರ್ಗೀಕರಿಸಿದ್ದಾರೆ. ಹಳಗನ್ನಡದಿಂದ ನಡುಗನ್ನಡಕ್ಕೆ ಭಾಷೆ ಹೊರಳುವಾಗ ಆಗುವ ಧ್ವನಿಮಾ ಪಲ್ಲಟಗಳು, ಅಕ್ಷರ ಲೋಪ, ಯಕಾರ-ವಕಾರಾಗಮಗಳು, ತದ್ಭವಗಳ ಬಳಕೆ ಹಾಗೂ ಅನ್ಯದೇಶೀಯ (ಮರಾಠಿ) ಶಬ್ದಗಳ ಪ್ರಭಾವವನ್ನು ಅವರು ಸೋದಾಹರಣವಾಗಿ ನಿರೂಪಿಸಿದ್ದಾರೆ. ಕಾವ್ಯವೊಂದರ ವ್ಯಾಕರಣವನ್ನು ಪ್ರತ್ಯೇಕವಾಗಿ ರಚಿಸಿದ ಈ ವಿನೂತನ ಹಾಗೂ ವಿಶಿಷ್ಟ ಪ್ರಯೋಗವು ಕನ್ನಡ ಭಾಷೆಯ ಐತಿಹಾಸಿಕ ಮತ್ತು ತೌಲನಿಕ ಭಾಷಾವಿಜ್ಞಾನದ ಅಧ್ಯಯನಕ್ಕೆ ಅತ್ಯಂತ ಭದ್ರವಾದ ನೆಲೆಯನ್ನು ಒದಗಿಸಿಕೊಡುತ್ತದೆ.

Read More »

ರಾಮಸತ್ವದ ಶೋಧವಾಗಿ ಡಿ.ವಿ.ಜಿ.ರವರ ‘ಶ್ರೀರಾಮ ಪರೀಕ್ಷಣಂ’

ಕುಸುಮ ಬಿ.ಎಂ.

21 to 25

ಕನ್ನಡ ಕಾವ್ಯಪರಂಪರೆಯ ಬಹುಮುಖ್ಯ ಗುಣವಾದ ‘ಪ್ರಶ್ನಿಸುವ’ ಎದೆಗಾರಿಕೆಯನ್ನು ಡಿ.ವಿ.ಜಿ. ಅವರ ‘ಶ್ರೀರಾಮ ಪರೀಕ್ಷಣಂ’ ಕಾವ್ಯವು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡಿದೆ. ವಾಲ್ಮೀಕಿ ಹಾಗೂ ಕುವೆಂಪು ಅವರ ಕೃತಿಗಳ ಹಿನ್ನೆಲೆಯಲ್ಲಿ ಇದನ್ನು ಅವಲೋಕಿಸುತ್ತಾ, ರಾಮನ ಧರ್ಮರಕ್ಷಣೆಯ ಭರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಘಾಸಿಗೊಂಡ ಸ್ತ್ರೀಪಾತ್ರಗಳ ಆಂತರಿಕ ತಲ್ಲಣಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಅಹಲ್ಯೆ, ತಾರೆ, ಮಂಡೋದರಿ ಮತ್ತು ಸೀತೆಯರು ರಾಮನ ಆದರ್ಶ, ನ್ಯಾಯನಿರ್ಣಯ ಹಾಗೂ ಮೌಲ್ಯಗಳನ್ನು ಎದುರುಗೊಳ್ಳುವ ಬಗೆ ಅನನ್ಯವಾಗಿದೆ. ಪ್ರಕೃತಿ-ಸಂಸ್ಕೃತಿಯ ನಡುವಣ ಸಂಘರ್ಷ, ದಾಂಪತ್ಯದ ನೈತಿಕತೆ, ಹಾಗೂ ತಪ್ಪು-ಶಿಕ್ಷೆಗಳ ತಾರತಮ್ಯದ ಕುರಿತು ಈ ಮಹಿಳೆಯರು ಎತ್ತುವ ಪ್ರಶ್ನೆಗಳು ರಾಮನ ಉತ್ತರಗಳಿಗಿಂತಲೂ ಹೆಚ್ಚು ಪ್ರಖರವಾಗಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ಸತ್ಯವನ್ನು ಶೋಧಿಸಲು, ಮೌಲ್ಯಗಳನ್ನು ಮರುಪರಿಶೀಲಿಸಲು ಮೌನಕ್ಕಿಂತ ದಿಟ್ಟ ಪ್ರಶ್ನೆಗಳೇ ಹೆಚ್ಚು ಸೂಕ್ತ ಮಾರ್ಗ ಎಂಬುದನ್ನು ಈ ವಿಶ್ಲೇಷಣೆ ಸ್ಪಷ್ಟಪಡಿಸುತ್ತದೆ.

Read More »

ಅನುಪಮಾ ನಿರಂಜನ ಅವರ ಕಾದಂಬರಿ ‘ಎಳೆ’: ಒಂದು ಪರಿಶೀಲನೆ

ಡಾ. ಗೋಪಿ ಎಸ್.ಎಂ.

26 to 32

ಅನುಪಮಾ ನಿರಂಜನ ಅವರ ‘ಎಳೆ’ ಕಾದಂಬರಿಯು ನೇಕಾರರ ಬದುಕು, ವರ್ಗಸಂಘರ್ಷ ಮತ್ತು ಶೋಷಣೆಯ ವಿರುದ್ಧದ ಕಾರ್ಮಿಕ ಜಾಗೃತಿಯನ್ನು ನೈಜವಾಗಿ ಕಟ್ಟಿಕೊಡುತ್ತದೆ. ಶಿವನೂರು ಎಂಬ ಪ್ರಾದೇಶಿಕ ಹಿನ್ನೆಲೆಯಲ್ಲಿ ನಡೆಯುವ ಕಥೆಯು, ಬಂಡವಾಳಶಾಹಿ ಉಗ್ರಪ್ಪನ ದಬ್ಬಾಳಿಕೆ ಹಾಗೂ ಬಡ ನೇಕಾರರ ದಯನೀಯ ಸ್ಥಿತಿಯನ್ನು ಚಿತ್ರಿಸುತ್ತದೆ. ವಿದ್ಯಾವಂತ ಯುವಕ ರಂಗದಾಸನ ನೇತೃತ್ವದಲ್ಲಿ ಒಗ್ಗೂಡುವ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪರಿಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಇದರೊಟ್ಟಿಗೆ, ಇಷ್ಟವಿಲ್ಲದ ಮದುವೆಯಾಗಿ, ವೈಧವ್ಯ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೊಳಗಾಗುವ ಗಿರಿಜೆಯು ರಂಗದಾಸನ ಬೆಂಬಲದಿಂದ ಹೊಸ ಬದುಕಿಗೆ (ವಿಧವಾ ವಿವಾಹ) ತೆರೆದುಕೊಳ್ಳುವ ಪ್ರಸಂಗವು ಗಮನಾರ್ಹವಾಗಿದೆ. ಸಮಾಜದ ಮೌಢ್ಯ, ಜಡತ್ವ ಮತ್ತು ಶೋಷಣೆಯನ್ನು ಧಿಕ್ಕರಿಸಿ ವೈಚಾರಿಕತೆಯೆಡೆಗೆ ಹಾಗೂ ಸಮಾನತೆಯೆಡೆಗೆ ಸಾಗುವ ಆಶಯವನ್ನು ಇದು ಸ್ಪಷ್ಟಪಡಿಸುತ್ತದೆ.

Read More »

ಡಿಜಿಟಲ್ ಹೊಕ್ಕುಳಬಳ್ಳಿ: ಭಾರತದ ‘ಜೆನ್ ಜಿ’ (Generation Z) ಯುವಜನತೆಯಲ್ಲಿ ಮೊಬೈಲ್ ಅವಲಂಬನೆಯ ಒಂದು ಬಹುಆಯಾಮದ ವಿಶ್ಲೇಷಣೆ

ಸುಚಿತ್ರಾ ಎಸ್., ಶ್ರೀನಿವಾಸನ್, ಗೌರಮ್ಮ ಟಿ., ಸೌಂದರ್ಯ ಎಂ.ಎನ್.

33 to 38

ಈ ಸಂಶೋಧನಾ ಪ್ರಬಂಧವು ಭಾರತದ ಸಾಮಾಜಿಕ-ತಾಂತ್ರಿಕ ಪರಿಸರದಲ್ಲಿ ಸಂಭವಿಸುತ್ತಿರುವ ಆಮೂಲಾಗ್ರ ಬದಲಾವಣೆಯನ್ನು ವಿಶ್ಲೇಷಿಸುತ್ತದೆ.ಭಾರತದ ‘ಜೆನ್ ಜಿ’ (Generation Z) ತಲೆಮಾರಿಗೆ ಮೊಬೈಲ್ ಫೋನ್ ಕೇವಲ ಒಂದು ಉಪಕರಣವಾಗಿ ಉಳಿಯದೆ, ಅದು ಅವರ ಶಾರೀರಿಕ ಅಸ್ತಿತ್ವದ ವಿಸ್ತರಣೆಯಾದ “ಡಿಜಿಟಲ್ ಹೊಕ್ಕುಳಬಳ್ಳಿ”ಯಾಗಿ (Digital Umbilicus) ಪರಿವರ್ತಿತವಾಗಿದೆ. ಈ ತಲೆಮಾರಿಗೆ ಡಿಜಿಟಲ್ ಸಂಪರ್ಕವು ಕೇವಲ ಮನರಂಜನೆಯಲ್ಲ, ಬದಲಿಗೆ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ನಾಗರಿಕ ಅಸ್ತಿತ್ವಕ್ಕೆ ಅನಿವಾರ್ಯವಾದ ಜೀವನಾಧಾರವಾಗಿದೆ. ಆದಾಗ್ಯೂ, ಪ್ರಸ್ತುತ ನರವಿಜ್ಞಾನದ ದತ್ತಾಂಶಗಳು ಈ ತೀವ್ರ ಅವಲಂಬನೆಯು ‘ಡೋಪಮೈನ್-ಚಾಲಿತ ವ್ಯಸನ’ದ ಚಕ್ರವನ್ನು ಪ್ರಚೋದಿಸುತ್ತಿದೆ ಎಂದು ಎಚ್ಚರಿಸಿವೆ. ಭಾರತವು ತನ್ನ ‘ಜನಸಂಖ್ಯಾ ಲಾಭಾಂಶ’ದ (Demographic Dividend) ಪ್ರಯೋಜನವನ್ನು ಪಡೆಯಬೇಕಾದರೆ, ಯುವಜನತೆಯನ್ನು ಕೇವಲ “ಮೇಲ್ಪದರದ ಬಳಕೆ ಆಧಾರಿತ ಅವಲಂಬನೆ”ಯಿಂದ “ನಾವೀನ್ಯತೆ ಆಧಾರಿತ ಪ್ರೌಢಿಮೆ”ಯತ್ತ ಕೊಂಡೊಯ್ಯುವುದು ಒಂದು ಕಾರ್ಯತಂತ್ರದ ತುರ್ತು ಅಗತ್ಯವಾಗಿದೆ.

Read More »

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿವಾರಣಾ ಕಾಯ್ದೆಗಳು: ಒಂದು ಪುನರಾವಲೋಕನ

ಡಾ. ಮಾಧುರಿ ಚೌಗುಲೆ, ಡಾ. ಜಗದೀಶ ಅಸೋದೆ

39 to 47

ಡಾ. ಬಾಬಾಸಾಹೇಬರ ಮೂಕನಾಯಕ ಪತ್ರಿಕೆಯಲ್ಲಿ ಉಲ್ಲೇಖಿಸಿರುವಂತೆ ವಿಶ್ವದ ಎಲ್ಲಾ ದೇಶಗಳ ಸಾಮಾಜಿಕ ವ್ಯವಸ್ಥೆಯ ಕುರಿತು ಅಧ್ಯಯನ ಮಾಡಿದರೆ, ಭಾರತ ದೇಶವು ಮಾತ್ರ ಜಾತಿ ವ್ಯವಸ್ಥೆಯಿಂದ ಮುಕ್ತವಾಗಿರಲಿಲ್ಲ. ಭಾರತದಲ್ಲಿ ವರ್ಣ, ಜಾತಿ ಮತ್ತು ಅಸ್ಪೃಶ್ಯತೆಯ ಕಾರಣದಿಂದಾಗಿ ಮೇಲ್ವರ್ಗದವರಿಂದ ಕೆಳವರ್ಗದವರನ್ನು ಹೀನಾಯವಾಗಿ ಕಾಣುವುದು ಮತ್ತು ಅವರ ಮೇಲೆ ಜಾತಿಯ ಕಾರಣಕ್ಕಾಗಿ ಕ್ಷುಲ್ಲಕ ಕಾರಣಗಳಿಂದ ದೌರ್ಜನ್ಯಗಳನ್ನು ನಡೆಸುತ್ತಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ನಿವಾರಣೆ ಮಾಡಲು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಂವಿಧಾನ ಮೂಲಕ ರಕ್ಷಣೆ ನೀಡಿದ್ದರು. ಭಾರತೀಯ ನಾಗರಿಕ ಕಾನೂನು 1955 ರ ಅಡಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಸಲುವಾಗಿ ಕಾನೂನು ಮಾಡಿದ್ದರು.
ಸಮಕಾಲೀನ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯನ್ನು ಮುಕ್ತಮಾಡಲು ಇಲ್ಲಿಯವರೆಗೆ ಯಾವ ಸರ್ಕಾರಗಳು ಮುಂದಾಗಿಲ್ಲ ಅಂದರೆ ಜಾತಿಯನ್ನು ಮುಂದುವರೆಸುವುದರಿಂದ ಜಾತಿ ಗಲಭೆಗಳು ಇದ್ದಾಗ ಮಾತ್ರ ರಾಜಕೀಯವು ಸುರಕ್ಷೆಯಾಗಿರುತ್ತದೆ ಹಾಗೂ ಮತ ಬ್ಯಾಂಕ್ ನೀತಿಯಾಗಿದೆ. ಭಾರತೀಯ ಇತಿಹಾಸವನ್ನು ಅವಲೋಕನ ಮಾಡಿದಾಗ ನಮಗೆ ತಿಳಿಯುವುದೇನೆಂದರೆ ದೌರ್ಜನ್ಯಗಳು ಇತ್ತೀಚಿನಿಂದ ಅಲ್ಲ, ಇವು ಪ್ರಾಚೀನ ಕಾಲದಿಂದಲೂ ಜಾತಿ ತಾರತಮ್ಯದ ಕಾರಣದಿಂದಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ಅವರನ್ನು ಊರ ಹೊರಗೆ ಇರುವಂತೆ ಮಾಡಿ ಅವರಿಗೆ ಯಾವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇರಲಿಲ್ಲ. ಒಂದು ವೇಳೆ ಅವರು ಏನಾದರೂ ಅವರ ವಿರುದ್ಧ ಹೋದರೆ ಕಠಿಣವಾದ ಶಿಕ್ಷೆಯನ್ನು ನೀಡುತ್ತಿದ್ದರು. ಮಹಾತ್ಮ ಫುಲೆ, ಶಾಹೂ ಮಹಾರಾಜ, ನಾರಾಯಣ ಗುರು, ಪೆರಿಯಾರ್ ರಾಮಸ್ವಾಮಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತಹ ಮಹನೀಯರ ಹೋರಾಟದ ಫಲದಿಂದ ಹಾಗೂ ಡಾ. ಬಿ. ಆರ್. ಅಂಬೇಡ್ಕರ ಅವರು ನಿಜವಾದ ಸಾಮಾಜಿಕ ಸ್ವಾತಂತ್ರ್ಯ ನೀಡಲು ಹೋರಾಡಿದ್ದ ಮಹಾ ಪುರುಷ ಅವರು ರಚಿಸಿದಂತಹ ಸಂವಿಧಾನದಿಂದ ಇಂದು ಶೋಷಿತ ಸಮುದಾಯಗಳು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ನೆಮ್ಮದಿ ಜೀವನ ಸಾಧಿಸಲು ಕಾರಣವಾಗಿದೆ.

Read More »

ಕನ್ನಡ ಕಥಾ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಮತ್ತು ಸಾಮಾಜಿಕ ಪರಿವರ್ತನೆಯ ಅಭಿವ್ಯಕ್ತಿ

ನಂದಿನಿ ಎಸ್., ಡಾ. ಶಿವಕುಮಾರ ಡಿ.ಸಿ.

48 to 58

ಕನ್ನಡ ಕಥಾ ಸಾಹಿತ್ಯವು ಕಾಲದ ಕನ್ನಡಿಯಂತೆ ಸಮಾಜದ ವಿವಿಧ ಮುಖಗಳನ್ನು ಪ್ರತಿಬಿಂಬಿಸುತ್ತದೆ, ವಿಶೇಷವಾಗಿ ಸ್ತ್ರೀ ಸಂವೇದನೆ, ಮಹಿಳೆಯ ಅನುಭವಗಳು, ಭಾವನೆಗಳು, ಹಕ್ಕುಗಳು ಮತ್ತು ಸಾಮಾಜಿಕ ಪರಿವರ್ತನೆಯ ಅಭಿವ್ಯಕ್ತಿ ಕಥೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಕನ್ನಡ ಕಥಾ ಸಾಹಿತ್ಯದಲ್ಲಿ ಮಹಿಳೆಯರ ಜೀವನ ಹೋರಾಟ, ಅವರ ಅಂತರಂಗದ ಭಾವನೆಗಳು ಮತ್ತು ಸಮಾಜದಲ್ಲಿ ಅವರಿಗೆ ದೊರಕುವ ಸ್ಥಾನ ಮುಖ್ಯ ವಿಷಯಗಳಾಗಿವೆ. ಹಳೆಯ ಕಥೆಗಳಲ್ಲಿ ಮಹಿಳೆಯರನ್ನು ಹೆಚ್ಚು ಮಿತಿಯೊಳಗಿನ ಪಾತ್ರಗಳಲ್ಲಿ ಚಿತ್ರಿಸಲಾಗಿದೆ. ಆದರೆ ನಂತರದ ಕಾಲದಲ್ಲಿ ಲೇಖಕರು ಮಹಿಳೆಯ ಸ್ವಾತಂತ್ರ್ಯ, ಆತ್ಮಗೌರವ ಮತ್ತು ಸ್ವಯಂ ನಿರ್ಧಾರ ಸಾಮರ್ಥ್ಯವನ್ನು ಒತ್ತಿ ಹೇಳಲು ಪ್ರಾರಂಭಿಸಿದರು. ಮಹಿಳೆಯರು ಕೇವಲ ಕುಟುಂಬದ ಪಾತ್ರಗಳಿಗೆ ಸೀಮಿತವಾಗದೆ ಸಮಾಜದಲ್ಲಿ ಸಮಾನ ಹಕ್ಕುಗಳಿಗಾಗಿ ಹೋರಾಡುವ ವ್ಯಕ್ತಿಗಳಾಗಿ ಚಿತ್ರಿಸಲ್ಪಟ್ಟರು.
ಕಥಾ ಸಾಹಿತ್ಯವು ಸಮಾಜದಲ್ಲಿ ನಡೆಯುವ ಬದಲಾವಣೆಗಳನ್ನು ಪ್ರತಿಬಿಂಬಿಸುವ ಪ್ರಮುಖ ಮಾಧ್ಯಮವಾಗಿ ಜಾತಿ ವ್ಯವಸ್ಥೆ, ಲಿಂಗ ಅಸಮಾನತೆ, ದಾರಿದ್ರ್ಯ, ಶಿಕ್ಷಣದ ಕೊರತೆ ಇತ್ಯಾದಿ ಸಮಸ್ಯೆಗಳ ವಿರುದ್ಧ ಲೇಖಕರು ತಮ್ಮ ಕಥೆಗಳ ಮೂಲಕ ಪ್ರಶ್ನೆ ಎತ್ತಿದ್ದಾರೆ. ಹೊಸ ಯುಗದ ಕಥೆಗಳು ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುತ್ತವೆ.
ಪರಂಪರೆಯಿಂದಲೂ ಸಮಾಜ ಹೆಣ್ಣನ್ನು ಶೋಷಿಸುತ್ತಾ ಬಂದಿದೆ. ಆದರೆ ಇದಕ್ಕೆ ಒಂದು ಆಂದೋಲನದ ಆಯಾಮ ಸಿಕ್ಕಿದ್ದು ಮಾತ್ರ 19ನೇ ಶತಮಾನದಿಂದೀಚೆಗೆ. ಹೆಣ್ಣಿನ ಆಂತರ್ಯದ ಬದುಕನ್ನು ಕಟ್ಟಿಕೊಡುವಲ್ಲಿ ಸಿಮೋನ್ ದ ಬೋವಾ, ಕೇಟ್ ಮಿಲ್ಲೆಟ್‌, ಡೇನಿಯಲ್ ಡಿಫೋ ಇತ್ಯಾದಿ ಪಾಶ್ಚಿಮಾತ್ಯ ಮಹಿಳಾ ಚಿಂತಕರು ಸ್ತ್ರೀ ಸಂವೇದನೆಗೆ ತಾತ್ವಿಕ ರೂಪವನ್ನು ನೀಡಿದರು. ಸ್ತ್ರೀಯರನ್ನು ಸಮಾಜವು ದ್ವಿತೀಯ ದರ್ಜೆಯ ಪ್ರಜೆಯೆಂದು ನೋಡುತ್ತಿರುವುದನ್ನು ಬಹಳ ಸೂಕ್ಷ್ಮವಾಗಿ ಗುರುತಿಸಿದರು. ಹೆಣ್ಣಿನ ಅಂತರಾಳದ ಬಯಕೆ ಮತ್ತು ನೋವು-ನಲಿವು, ಸಂಕಟ-ಯಾತನೆಗಳನ್ನು ಸಾಹಿತ್ಯದಲ್ಲಿ ಅಭಿವ್ಯಕ್ತಿಸಿದ್ದನ್ನು ನೋಡಬಹುದಾಗಿದೆ.
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ತ್ರೀಪರ ಚಿಂತಕಿಯರಾದ ಡಾ. ವಿಜಯಾ ದಬ್ಬೆ, ಬಿ.ಟಿ. ಲಲಿತಾ ನಾಯಕ್, ಅನುಪಮಾ ನಿರಂಜನ, ನೇಮಿಚಂದ್ರ, ಹೆಚ್. ಎಸ್. ಶ್ರೀಮತಿ, ಕೆ. ಶರೀಫಾ, ಸಾರಾ ಅಬೂಬಕರ್, ಬಿ. ಟಿ. ಜಾಹ್ನವಿ, ಎಮ್. ಎಸ್. ವೇದಾ ಮತ್ತು ಸುಕನ್ಯಾ ಮಾರುತಿ ಮುಂತಾದ ಅನೇಕರು ಸ್ತ್ರೀ ಸಂವೇದನೆಗಳನ್ನೂ ಹಾಗೂ ತಾನು ಬದುಕಿನುದ್ದಕ್ಕೂ ವಿವಿಧ ರೀತಿಯಲ್ಲಿ ಅನುಭವಿಸಿದಂತಹ ಸಮಸ್ಯೆಗಳನ್ನು ಸಾಹಿತ್ಯದಲ್ಲಿ ಅಳವಡಿಸಿಕೊಂಡು ಚರ್ಚಿಸಿರುವುದನ್ನು ನೋಡಬಹುದು.

Read More »

ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯಲ್ಲಿ ಶೋಷಣೆಯ ವಿವಿಧ ಮುಖಗಳು

ಡಾ. ನರೇಂದ್ರ ಬಾಬು ಸಿ.ಆರ್.

59 to 66

ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರ ‘ಚೋಮನದುಡಿ’ ಕಾದಂಬರಿಯು ಸ್ವಾತಂತ್ರ್ಯಪೂರ್ವ ಭಾರತದ ಅಸ್ಪೃಶ್ಯತೆ, ಬಡತನ ಹಾಗೂ ಊಳಿಗಮಾನ್ಯ ವ್ಯವಸ್ಥೆಯ ಕ್ರೂರ ಮುಖಗಳನ್ನು ಅನಾವರಣಗೊಳಿಸುತ್ತದೆ. ಸ್ವಂತ ಭೂಮಿಯಲ್ಲಿ ಕೃಷಿ ಮಾಡಬೇಕೆಂಬ ಕನಿಷ್ಠ ಆಸೆಯೂ ಜಾತೀಯತೆಯ ಕಟ್ಟುಪಾಡುಗಳಿಂದ ಭಗ್ನಗೊಳ್ಳುವ ಬಗೆಯನ್ನು ಕಥಾನಾಯಕ ಚೋಮನ ಮೂಲಕ ಇಲ್ಲಿ ಚಿತ್ರಿಸಲಾಗಿದೆ. ಮೇಲ್ವರ್ಗದ ಶೋಷಣೆಗೆ ಸಿಲುಕಿ ಭೂಮಿಯ ಹಕ್ಕಿನಿಂದ ವಂಚಿತನಾಗುವ ಆತ, ತನ್ನ ಮಕ್ಕಳ ಸಾವು, ಸಾಲದ ಸುಳಿಗೆ ಸಿಲುಕಿ ಮಗಳಾದ ಬೆಳ್ಳಿಯ ಮೇಲಾಗುವ ಆರ್ಥಿಕ ಮತ್ತು ಲೈಂಗಿಕ ದೌರ್ಜನ್ಯ ಹಾಗೂ ಮತಾಂತರದ ಗೊಂದಲಗಳಿಂದ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ಕಡೆಗೆ ದುಃಖ, ಅಸಹಾಯಕತೆ ಮತ್ತು ಆಕ್ರೋಶದ ಸಂಕೇತವಾದ ‘ದುಡಿ’ಯನ್ನು ಬಾರಿಸುತ್ತಲೇ ಪ್ರಾಣ ಬಿಡುವ ಚೋಮನ ಯಾತನಾಮಯ ಬದುಕಿನ ಚಿತ್ರಣ ಹಾಗೂ ದಲಿತ ಸಂವೇದನೆಯ ವಿವಿಧ ಆಯಾಮಗಳನ್ನು ಇಲ್ಲಿ ಮಾರ್ಮಿಕವಾಗಿ ವಿಶ್ಲೇಷಿಸಲಾಗಿದೆ.

Read More »

ಕುವೆಂಪುರವರ ‘ಜಲಗಾರ’ ನಾಟಕದಲ್ಲಿ ಕಾಯಕದ ತತ್ವ ಮತ್ತು ಸಾಮಾಜಿಕ ಸಂದೇಶ

ಡಾ. ಪ್ರಭುದೇವ ಸಿ.

67 to 78

ಕನ್ನಡ ಸಾಹಿತ್ಯದ ಮಹಾನ್ ಚಿಂತಕ ಕುವೆಂಪು ಅವರ “ಜಲಗಾರ” ನಾಟಕವು ಕಾಯಕದ ತತ್ವ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯನ್ನು ಬಲವಾಗಿ ಪ್ರತಿಪಾದಿಸುವ ಪ್ರಮುಖ ಸಾಮಾಜಿಕ ಕೃತಿ ಆಗಿದೆ. ಈ ನಾಟಕವು ಶ್ರಮದ ಗೌರವವನ್ನು ಎತ್ತಿಹಿಡಿದು, ದೇವರ ಅಸ್ತಿತ್ವವನ್ನು ದೇವಸ್ಥಾನಗಳಲ್ಲಲ್ಲದೆ ಸಾಮಾನ್ಯ ಮನುಷ್ಯನ ದೈನಂದಿನ ಕಾಯಕದಲ್ಲಿ ಕಾಣಬೇಕೆಂಬ ನೂತನ ಚಿಂತನೆಗೆ ದಾರಿತೋರುತ್ತದೆ. ಜಲಗಾರ ಎಂಬ ಶ್ರಮಿಕನ ಪಾತ್ರದ ಮೂಲಕ ಜಾತಿ ವ್ಯವಸ್ಥೆಯ ಅನ್ಯಾಯ, ಧಾರ್ಮಿಕ ಮೌಢ್ಯತೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ತೀವ್ರವಾಗಿ ಪ್ರಶ್ನಿಸಲಾಗಿದೆ. ನಾಟಕದಲ್ಲಿ ಕಾಣುವ ವಿವಿಧ ಪಾತ್ರಗಳು ಸಮಾಜದ ವಿಭಿನ್ನ ಮನೋಭಾವಗಳನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ, ದೇವರ ನಿಜಸ್ವರೂಪವನ್ನು ಶ್ರಮ ಮತ್ತು ಸೇವೆಯಲ್ಲಿ ಕಾಣುವ ಸಂದೇಶವು ಮಾನವತಾವಾದದ ಮೌಲ್ಯಗಳನ್ನು ಬಲಪಡಿಸುತ್ತದೆ. ಈ ಅಧ್ಯಯನವು ನಾಟಕದ ವಿಷಯವಸ್ತು, ತಾತ್ವಿಕ ಹಿನ್ನೆಲೆ ಮತ್ತು ಸಾಮಾಜಿಕ ಸಂದೇಶಗಳನ್ನು ವಿಶ್ಲೇಷಿಸಿ, ಇಂದಿನ ಸಮಾಜದಲ್ಲಿಯೂ ಅದರ ಪ್ರಸ್ತುತತೆಯನ್ನು ಸ್ಪಷ್ಟಪಡಿಸುತ್ತದೆ.

Read More »

ಕನ್ನಡ ಸಾಹಿತ್ಯದಲ್ಲಿ ಬುದ್ಧನ ಮರು ನಿರೂಪಣೆ

ಮಲ್ಲಿಕಾರ್ಜುನ ಎನ್.

79 to 92

ಸಮಾಜದ ನಿರಂತರ ಬದಲಾವಣೆಗಳು ಮತ್ತು ವಿಘಟನೆಗಳಿಗೆ ಬುದ್ಧನ ಸಮಾನತೆ, ಕರುಣೆ ಹಾಗೂ ಸರಳತೆಯ ತತ್ವಗಳು ಶಾಶ್ವತ ಪರಿಹಾರವನ್ನು ಒದಗಿಸುತ್ತವೆ. ಪ್ರಾಚೀನ ಭಾರತದಲ್ಲಿ ಅಶೋಕನಂತಹ ದೊರೆಗಳ ಬೆಂಬಲದಿಂದ ಬೌದ್ಧಧರ್ಮವು ಜಾಗತಿಕವಾಗಿ ಬೆಳೆಯಿತು. ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು (ಬ್ರಾಹ್ಮಿ ಲಿಪಿ) ಹಾಗೂ ಸನ್ನತಿಯಂತಹ ನೆಲೆಗಳು ಇಲ್ಲಿನ ಬೌದ್ಧ ಪ್ರಭಾವವನ್ನು ಸಾಬೀತುಪಡಿಸುತ್ತವೆ. ಟಿ.ಎಸ್. ವೆಂಕಣ್ಣಯ್ಯನವರಂತಹ ವಿದ್ವಾಂಸರ ತರ್ಕದಂತೆ, ಬೌದ್ಧರೇ ಕನ್ನಡದ ಆದಿಕವಿಗಳಾಗಿದ್ದರೂ, ವೈದಿಕ ಧರ್ಮದ ಪುನರುತ್ಥಾನ, ಪುಷ್ಯಮಿತ್ರ ಶುಂಗನ ಆಕ್ರಮಣ ಹಾಗೂ ಇತರ ಧಾರ್ಮಿಕ ಸಂಘರ್ಷಗಳಿಂದಾಗಿ ಪ್ರಾಚೀನ ಕನ್ನಡ ಬೌದ್ಧ ಸಾಹಿತ್ಯವು ಸಂಪೂರ್ಣವಾಗಿ ನಾಶವಾಯಿತು. ಪ್ರಾಚೀನ ಕೃತಿಗಳು ನಷ್ಟವಾದರೂ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಜಿ.ಪಿ. ರಾಜರತ್ನಂ, ಕಾರಂತರಂತಹ ಅನೇಕ ಸೃಜನಶೀಲ ಲೇಖಕರು ಬುದ್ಧನ ತತ್ವಗಳನ್ನು ಮರುನಿರೂಪಿಸುವ ಮೂಲಕ ಆ ಸಾಹಿತ್ಯವನ್ನು ಮತ್ತೆ ಶ್ರೀಮಂತಗೊಳಿಸಿದ್ದಾರೆಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

Read More »

ಸ್ತ್ರೀವಾದಿ ಹಿನ್ನೆಲೆಯಲ್ಲಿ ‘ಭೂಮಿಯಲ್ಲ ಇವಳು’

ವಾಣಿ ಬಿ.ಎನ್.

93 to 99

ಹೆಚ್.ಎಲ್. ಪುಷ್ಪ ಅವರು ರಚಿಸಿದ ‘ಭೂಮಿಯಲ್ಲ ಇವಳು’ ನಾಟಕವು ಜನ್ನನ ‘ಯಶೋಧರ ಚರಿತೆ’ಯ ಅಮೃತಮತಿಯ ಪಾತ್ರವನ್ನು ಆಧುನಿಕ ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಮರುಸೃಷ್ಟಿಸಿದೆ. ಪುರುಷಪ್ರಧಾನ ಸಮಾಜದ ಕಟ್ಟುಪಾಡುಗಳನ್ನು ಧಿಕ್ಕರಿಸಿ, ತನ್ನ ಆಸೆ-ಆಕಾಂಕ್ಷೆಗಳ ಈಡೇರಿಕೆಗಾಗಿ ಹಾಗೂ ಆಂತರಿಕ ನೆಮ್ಮದಿಗಾಗಿ ಹಾತೊರೆಯುವ ದಿಟ್ಟ ಮಹಿಳೆಯಾಗಿ ಅಮೃತಮತಿ ಇಲ್ಲಿ ಮೂಡಿಬಂದಿದ್ದಾಳೆ. ಯಾಂತ್ರಿಕವಾದ ರಾಜವೈಭೋಗವನ್ನು ತಿರಸ್ಕರಿಸಿ, ತನ್ನಿಚ್ಛೆಯ ಬದುಕನ್ನು ಅರಸುವ ಅವಳ ತುಡಿತವನ್ನು ಕೃತಿಯು ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಇದರೊಟ್ಟಿಗೆ, ರಾಣಿ, ಸೇವಕಿ ಮಾದೇವಿ ಮತ್ತು ವೇಶ್ಯೆ ತಿಮ್ಮಕ್ಕನ ಪಾತ್ರಗಳ ಮೂಲಕ ವಿಭಿನ್ನ ವರ್ಗದ ಮಹಿಳೆಯರ ಬದುಕಿನ ಬವಣೆ, ಅಸಹಾಯಕತೆ ಮತ್ತು ಅವರ ಬಂಡಾಯದ ಮನಸ್ಥಿತಿಯನ್ನು ವಿಶ್ಲೇಷಿಸಲಾಗಿದೆ. ಪೌರಾಣಿಕ ಕಥಾವಸ್ತುವಿನ ಮೂಲಕ ವರ್ತಮಾನದ ಸ್ತ್ರೀ ಸಂವೇದನೆ, ಅವಳ ಬಿಡುಗಡೆಯ ಹಂಬಲ ಹಾಗೂ ಬದಲಾದ ಆಲೋಚನಾ ಕ್ರಮಗಳನ್ನು ಈ ವಿಶ್ಲೇಷಣೆಯು ಅತ್ಯಂತ ಮಾರ್ಮಿಕವಾಗಿ ತೆರೆದಿಡುತ್ತದೆ.

Read More »

ನಂದನ್‌ಕುಪ್ಪಳಿಯವರ ಭಾವರೇಖೆ: ಸ್ವಚ್ಛಂದ ಪ್ರೀತಿಗಾಗಿ ತುಡಿವ ಪರಿಶುದ್ಧ ಹೃದಯದ ಪಿಸುಮಾತು

ಡಾ. ಶಿವಲಿಂಗೇಗೌಡ ಡಿ.

100 to 104

ನಂದನ್ ಕುಪ್ಪಳಿಯವರ ‘ಭಾವರೇಖೆ’ ಕವನ ಸಂಕಲನವು ಪ್ರೀತಿ, ಪ್ರೇಮ ಮತ್ತು ವಿರಹಗಳ ಧ್ಯಾನದಲ್ಲಿ ಅರಳಿದ ಆಳವಾದ ಅರ್ಥವುಳ್ಳ ಹನಿಕವಿತೆಗಳ ಗುಚ್ಛವಾಗಿದೆ. ಕವಿಯ ಪ್ರೇಮವು ಕೇವಲ ಸ್ತ್ರೀ-ಪುರುಷರ ನಡುವಿನ ವ್ಯಕ್ತಿಗತ ನೆಲೆಯಲ್ಲಿ ನಿಲ್ಲದೆ, ತಾಯಿಪ್ರೀತಿ, ನಿಸರ್ಗಪ್ರೀತಿ ಹಾಗೂ ಬುದ್ಧನ ಜೀವಕಾರುಣ್ಯದಂತಹ ವಿಶ್ವಪ್ರೀತಿಯಾಗಿ ವಿಸ್ತಾರಗೊಳ್ಳುತ್ತದೆ. ಕವಿತೆಗಳಲ್ಲಿ ಪ್ರೀತಿಯನ್ನು ‘ಬೆಳಕು’ ಎಂಬ ಪರಿಣಾಮಕಾರಿ ಪ್ರತಿಮೆಯ ಮೂಲಕ ನಿರೂಪಿಸಲಾಗಿದ್ದು, ಅದು ಮನಸ್ಸಿನ ಕತ್ತಲನ್ನು ದೂರಮಾಡಿ, ಜಗತ್ತನ್ನು ಬೆಳಗುವ ಶಕ್ತಿಯಾಗಿ ಚಿತ್ರಿತವಾಗಿದೆ. ದ್ವೇಷ, ನೋವು, ವಿರಹ, ಹತಾಶೆಗಳನ್ನೂ ಪ್ರೀತಿಯಿಂದಲೇ ಸ್ವೀಕರಿಸುವ ಪರಿಶುದ್ಧ ಹೃದಯದ ಪಿಸುಮಾತುಗಳು ಇಲ್ಲಿವೆ. ಸರಳ ರಚನೆಯ ಈ ಹನಿಕವಿತೆಗಳು, ಮನುಷ್ಯನು ನಿಸರ್ಗದ ನಿರಂತರ ಚಲನೆಯ ಭಾಗವಾಗಿ ವಿಶ್ವಪ್ರೇಮವನ್ನು ಮೈಗೂಡಿಸಿಕೊಂಡು ಬದುಕುವ ಸಾರ್ಥಕತೆಯನ್ನು ಅತ್ಯಂತ ಮಾರ್ಮಿಕವಾಗಿ ಅಭಿವ್ಯಕ್ತಿಸುತ್ತವೆ.

Read More »

ಅಸ್ಪೃಶ್ಯರು: ಆಧುನಿಕ ಸಂವೇದನೆಯಲ್ಲಿನ ಬಿಕ್ಕಟ್ಟು

ಸೌಮ್ಯ ವಿ.

105 to 109

ಕಾಲಘಟ್ಟಗಳು, ಚಿಂತನೆಗಳು, ಬದುಕಿನ ಕುರಿತಾದಂತ ಗ್ರಹಿಕೆಗಳು ಬದಲಾದಂತೆ ಜೀವನ ವಿಧಾನವೂ ಬದಲಾವಣೆಗೊಳ್ಳುತ್ತದೆ. ಭಾರತವು ಸ್ವಾತಂತ್ರ್ಯವನ್ನು ಪಡೆದಂದಿನಿಂದ ಇಂದಿನವರೆವಿಗೂ ಇಂತಹ ಹಲವು ಗ್ರಹಿಕೆಗಳಿಗೆ ಬದುಕು ಮುಖಾಮುಖಿಗೊಂಡಿದೆ. ಅನೇಕ ಚಿಂತನೆ, ಗ್ರಹಿಕೆ ಹಾಗೂ ಅನ್ವೇಷಣೆಗೆ ಒಳಗಾದ ಬದುಕಿನ ಕುರಿತಾದ ಕುತೂಹಲದೊಂದಿಗೆ ‘ವೈದೇಹಿಯವರ – ಅಸ್ಪೃಶ್ಯರು’ ಕಾದಂಬರಿಯನ್ನು ವಿಶ್ಲೇಷಿಸಲಾಗುವುದು.

Read More »

Impact Assessment of CSR Activities in India: Challenges and Opportunities

Fameeda

110 to 121

Corporate Social Responsibility (CSR) has become an important component of responsible business practices across the world. In India, CSR gained legal recognition through Section 135 of the Companies Act, 2013, which mandates certain companies to spend at least 2 percent of their average net profits on CSR activities. This legal framework has significantly increased corporate participation in social development sectors such as education, healthcare, rural development, environmental protection, and skill development. However, while CSR spending has expanded considerably, an important concern is whether these expenditures are generating meaningful and measurable social impact. Many CSR initiatives are evaluated primarily on the basis of financial spending rather than their long-term outcomes and benefits to communities. Therefore, impact assessment has become a crucial aspect of CSR governance. The present study examines the impact assessment of CSR activities in India using secondary data sources such as government reports, corporate sustainability reports, research articles, and credible institutional publications. The study analyses major CSR sectors, methods used for impact assessment, and key challenges in measuring the effectiveness of CSR programs. The paper concludes by suggesting improvements such as stronger evaluation frameworks, better transparency, long-term planning, and collaboration with stakeholders to enhance the effectiveness of CSR initiatives in India.

Read More »

Environmental Sustainability and Economic Development: A Relationship

Dr. Kempegowda P.

122 to 129

Economic development and environmental sustainability are two significant concepts that are often viewed complicated but are interconnected. An analytical discussion is made about the concepts in this paper and author attempts to discuss the relationship of the two concepts and also suggests alternative opportunities to achieve balanced growth. Economic Development refers to the process by which a nation brings reforms in the economic, political, and social status of its people. Meaning of development is defined as a long term process which needs serious efforts by any country towards improving the standards of living of people of the country. Planned and organized efforts required to achieve the economic development. Environmental Sustainability focuses on meeting the needs of the present without compromising the ability of future generations to meet their own needs. In the process of achieving economic growth it needs to be ensured that environmental conservation is taken care with proper plan of utilizing resources available to meet the human requirements of life. Globally there has been serious attempts and severe competition among all the nations towards attaining economic growth using the resources available and some countries have succeeded in achieving the development but damaged the nature to the maximum effects. But environmental degradation has been taken serious by both developed and progressing countries, serious global discussions and meets have taken place to discuss the actions and initiatives to be taken and followed to consider the concerns of environmental conservation.

Read More »

The Mid-Day Meal Scheme in Karnataka (2015-2025): A Comprehensive Evaluation of Implementation, Impact, And Challenges

Dr. Manjula R.

130 to 141

The Mid-Day Meal Scheme (MDMS), now part of the PM POSHAN initiative, has been a critical social protection and nutrition program in India since its inception. This comprehensive study evaluates the implementation and impact of the MDMS in Karnataka state over the last decade (2015-2025). Through systematic analysis of government reports, academic studies, and monitoring data, this research examines the scheme’s effectiveness in improving school enrollment, attendance, retention, and nutritional outcomes. During the study period, Karnataka served approximately 53.48 lakh (5.348 million) students across 54,839 government and aided schools, representing 92% of total student enrollment. The findings reveal that the MDMS has been highly effective in improving academic outcomes, particularly enrollment (increased consistency), attendance (92% average compliance), and retention rates. However, challenges persist in fully addressing malnutrition and ensuring consistent nutritional improvements. The state invested approximately Rs. 1,465 crores annually (2018-19), representing significant fiscal commitment. This study concludes that while the MDMS remains a cornerstone of educational equity and nutrition security in Karnataka, targeted interventions addressing quality, monitoring, and nutritional adequacy are essential for maximizing its potential benefits.

Read More »