ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯಲ್ಲಿ ಶೋಷಣೆಯ ವಿವಿಧ ಮುಖಗಳು
Main Article Content
Abstract
ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರ ‘ಚೋಮನದುಡಿ’ ಕಾದಂಬರಿಯು ಸ್ವಾತಂತ್ರ್ಯಪೂರ್ವ ಭಾರತದ ಅಸ್ಪೃಶ್ಯತೆ, ಬಡತನ ಹಾಗೂ ಊಳಿಗಮಾನ್ಯ ವ್ಯವಸ್ಥೆಯ ಕ್ರೂರ ಮುಖಗಳನ್ನು ಅನಾವರಣಗೊಳಿಸುತ್ತದೆ. ಸ್ವಂತ ಭೂಮಿಯಲ್ಲಿ ಕೃಷಿ ಮಾಡಬೇಕೆಂಬ ಕನಿಷ್ಠ ಆಸೆಯೂ ಜಾತೀಯತೆಯ ಕಟ್ಟುಪಾಡುಗಳಿಂದ ಭಗ್ನಗೊಳ್ಳುವ ಬಗೆಯನ್ನು ಕಥಾನಾಯಕ ಚೋಮನ ಮೂಲಕ ಇಲ್ಲಿ ಚಿತ್ರಿಸಲಾಗಿದೆ. ಮೇಲ್ವರ್ಗದ ಶೋಷಣೆಗೆ ಸಿಲುಕಿ ಭೂಮಿಯ ಹಕ್ಕಿನಿಂದ ವಂಚಿತನಾಗುವ ಆತ, ತನ್ನ ಮಕ್ಕಳ ಸಾವು, ಸಾಲದ ಸುಳಿಗೆ ಸಿಲುಕಿ ಮಗಳಾದ ಬೆಳ್ಳಿಯ ಮೇಲಾಗುವ ಆರ್ಥಿಕ ಮತ್ತು ಲೈಂಗಿಕ ದೌರ್ಜನ್ಯ ಹಾಗೂ ಮತಾಂತರದ ಗೊಂದಲಗಳಿಂದ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ಕಡೆಗೆ ದುಃಖ, ಅಸಹಾಯಕತೆ ಮತ್ತು ಆಕ್ರೋಶದ ಸಂಕೇತವಾದ ‘ದುಡಿ’ಯನ್ನು ಬಾರಿಸುತ್ತಲೇ ಪ್ರಾಣ ಬಿಡುವ ಚೋಮನ ಯಾತನಾಮಯ ಬದುಕಿನ ಚಿತ್ರಣ ಹಾಗೂ ದಲಿತ ಸಂವೇದನೆಯ ವಿವಿಧ ಆಯಾಮಗಳನ್ನು ಇಲ್ಲಿ ಮಾರ್ಮಿಕವಾಗಿ ವಿಶ್ಲೇಷಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶಿವರಾಮ ಕಾರಂತ ಕೆ., (2024), ಚೋಮನದುಡಿ, ಬೆಂಗಳೂರು: ಸ್ವಪ್ನ ಬುಕ್ ಹೌಸ್.
ರಾಘವೇಂದ್ರರಾವ್ ಎಚ್.ಎಸ್., (2001), ಶತಮಾನದ ಸಾಹಿತ್ಯ ವಿಮರ್ಶೆ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.
ಮಾಲಿನಿ ಬಿ. ಮಲ್ಯ (ಸಂಪಾದಕರು), (1992), ಶಿವರಾಮ ಕಾರಂತ ವಾಙ್ಮಯ ವೃತ್ತಾಂತ, ಬೆಂಗಳೂರು: ಎಸ್. ಬಿ. ಎಸ್. ಪ್ರಕಾಶನ.
ಅಶೋಕ ಟಿ.ಪಿ., (2010), ಶಿವರಾಮ ಕಾರಂತ ಎರಡು ಅಧ್ಯಯನಗಳು, ಹೆಗ್ಗೋಡು: ಅಕ್ಷರ ಪ್ರಕಾಶನ.
ಕುವೆಂಪು, (2012), ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ, ಮೈಸೂರು: ಉದಯರವಿ ಪ್ರಕಾಶನ.