ಅನುಪಮಾ ನಿರಂಜನ ಅವರ ಕಾದಂಬರಿ ‘ಎಳೆ’: ಒಂದು ಪರಿಶೀಲನೆ
Main Article Content
Abstract
ಅನುಪಮಾ ನಿರಂಜನ ಅವರ ‘ಎಳೆ’ ಕಾದಂಬರಿಯು ನೇಕಾರರ ಬದುಕು, ವರ್ಗಸಂಘರ್ಷ ಮತ್ತು ಶೋಷಣೆಯ ವಿರುದ್ಧದ ಕಾರ್ಮಿಕ ಜಾಗೃತಿಯನ್ನು ನೈಜವಾಗಿ ಕಟ್ಟಿಕೊಡುತ್ತದೆ. ಶಿವನೂರು ಎಂಬ ಪ್ರಾದೇಶಿಕ ಹಿನ್ನೆಲೆಯಲ್ಲಿ ನಡೆಯುವ ಕಥೆಯು, ಬಂಡವಾಳಶಾಹಿ ಉಗ್ರಪ್ಪನ ದಬ್ಬಾಳಿಕೆ ಹಾಗೂ ಬಡ ನೇಕಾರರ ದಯನೀಯ ಸ್ಥಿತಿಯನ್ನು ಚಿತ್ರಿಸುತ್ತದೆ. ವಿದ್ಯಾವಂತ ಯುವಕ ರಂಗದಾಸನ ನೇತೃತ್ವದಲ್ಲಿ ಒಗ್ಗೂಡುವ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪರಿಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಇದರೊಟ್ಟಿಗೆ, ಇಷ್ಟವಿಲ್ಲದ ಮದುವೆಯಾಗಿ, ವೈಧವ್ಯ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೊಳಗಾಗುವ ಗಿರಿಜೆಯು ರಂಗದಾಸನ ಬೆಂಬಲದಿಂದ ಹೊಸ ಬದುಕಿಗೆ (ವಿಧವಾ ವಿವಾಹ) ತೆರೆದುಕೊಳ್ಳುವ ಪ್ರಸಂಗವು ಗಮನಾರ್ಹವಾಗಿದೆ. ಸಮಾಜದ ಮೌಢ್ಯ, ಜಡತ್ವ ಮತ್ತು ಶೋಷಣೆಯನ್ನು ಧಿಕ್ಕರಿಸಿ ವೈಚಾರಿಕತೆಯೆಡೆಗೆ ಹಾಗೂ ಸಮಾನತೆಯೆಡೆಗೆ ಸಾಗುವ ಆಶಯವನ್ನು ಇದು ಸ್ಪಷ್ಟಪಡಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅನುಪಮಾ ನಿರಂಜನ, (1982), ಎಳೆ, ಬೆಂಗಳೂರು: ಹೇಮಂತ ಸಾಹಿತ್ಯ.
ವಿಜಯಾ ದಬ್ಬೆ, (1999), ಮಹಿಳಾ ಸಾಹಿತ್ಯ ಮತ್ತು ಸಮಾಜ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಬರಗೂರು ರಾಮಚಂದ್ರಪ್ಪ, (1995), ಬಂಡಾಯ ಸಾಹಿತ್ಯ ಮೀಮಾಂಸೆ, ಬೆಂಗಳೂರು: ಸಪ್ನ ಬುಕ್ ಹೌಸ್.
ಆಮೂರ ಜಿ.ಎಸ್., (1990), ಕನ್ನಡ ಕಾದಂಬರಿಯ ಬೆಳವಣಿಗೆ, ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ.
ರಾಘವೇಂದ್ರರಾವ್ ಎಚ್.ಎಸ್., (2005), ಕಥನ ಮತ್ತು ಮೌಲ್ಯ, ಬೆಂಗಳೂರು: ಅಭಿನವ.