ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿವಾರಣಾ ಕಾಯ್ದೆಗಳು: ಒಂದು ಪುನರಾವಲೋಕನ
Main Article Content
Abstract
ಡಾ. ಬಾಬಾಸಾಹೇಬರ ಮೂಕನಾಯಕ ಪತ್ರಿಕೆಯಲ್ಲಿ ಉಲ್ಲೇಖಿಸಿರುವಂತೆ ವಿಶ್ವದ ಎಲ್ಲಾ ದೇಶಗಳ ಸಾಮಾಜಿಕ ವ್ಯವಸ್ಥೆಯ ಕುರಿತು ಅಧ್ಯಯನ ಮಾಡಿದರೆ, ಭಾರತ ದೇಶವು ಮಾತ್ರ ಜಾತಿ ವ್ಯವಸ್ಥೆಯಿಂದ ಮುಕ್ತವಾಗಿರಲಿಲ್ಲ. ಭಾರತದಲ್ಲಿ ವರ್ಣ, ಜಾತಿ ಮತ್ತು ಅಸ್ಪೃಶ್ಯತೆಯ ಕಾರಣದಿಂದಾಗಿ ಮೇಲ್ವರ್ಗದವರಿಂದ ಕೆಳವರ್ಗದವರನ್ನು ಹೀನಾಯವಾಗಿ ಕಾಣುವುದು ಮತ್ತು ಅವರ ಮೇಲೆ ಜಾತಿಯ ಕಾರಣಕ್ಕಾಗಿ ಕ್ಷುಲ್ಲಕ ಕಾರಣಗಳಿಂದ ದೌರ್ಜನ್ಯಗಳನ್ನು ನಡೆಸುತ್ತಾರೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ನಿವಾರಣೆ ಮಾಡಲು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಂವಿಧಾನ ಮೂಲಕ ರಕ್ಷಣೆ ನೀಡಿದ್ದರು. ಭಾರತೀಯ ನಾಗರಿಕ ಕಾನೂನು 1955 ರ ಅಡಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಸಲುವಾಗಿ ಕಾನೂನು ಮಾಡಿದ್ದರು.
ಸಮಕಾಲೀನ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯನ್ನು ಮುಕ್ತಮಾಡಲು ಇಲ್ಲಿಯವರೆಗೆ ಯಾವ ಸರ್ಕಾರಗಳು ಮುಂದಾಗಿಲ್ಲ ಅಂದರೆ ಜಾತಿಯನ್ನು ಮುಂದುವರೆಸುವುದರಿಂದ ಜಾತಿ ಗಲಭೆಗಳು ಇದ್ದಾಗ ಮಾತ್ರ ರಾಜಕೀಯವು ಸುರಕ್ಷೆಯಾಗಿರುತ್ತದೆ ಹಾಗೂ ಮತ ಬ್ಯಾಂಕ್ ನೀತಿಯಾಗಿದೆ. ಭಾರತೀಯ ಇತಿಹಾಸವನ್ನು ಅವಲೋಕನ ಮಾಡಿದಾಗ ನಮಗೆ ತಿಳಿಯುವುದೇನೆಂದರೆ ದೌರ್ಜನ್ಯಗಳು ಇತ್ತೀಚಿನಿಂದ ಅಲ್ಲ, ಇವು ಪ್ರಾಚೀನ ಕಾಲದಿಂದಲೂ ಜಾತಿ ತಾರತಮ್ಯದ ಕಾರಣದಿಂದಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ಅವರನ್ನು ಊರ ಹೊರಗೆ ಇರುವಂತೆ ಮಾಡಿ ಅವರಿಗೆ ಯಾವುದೇ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇರಲಿಲ್ಲ. ಒಂದು ವೇಳೆ ಅವರು ಏನಾದರೂ ಅವರ ವಿರುದ್ಧ ಹೋದರೆ ಕಠಿಣವಾದ ಶಿಕ್ಷೆಯನ್ನು ನೀಡುತ್ತಿದ್ದರು. ಮಹಾತ್ಮ ಫುಲೆ, ಶಾಹೂ ಮಹಾರಾಜ, ನಾರಾಯಣ ಗುರು, ಪೆರಿಯಾರ್ ರಾಮಸ್ವಾಮಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ರಂತಹ ಮಹನೀಯರ ಹೋರಾಟದ ಫಲದಿಂದ ಹಾಗೂ ಡಾ. ಬಿ. ಆರ್. ಅಂಬೇಡ್ಕರ ಅವರು ನಿಜವಾದ ಸಾಮಾಜಿಕ ಸ್ವಾತಂತ್ರ್ಯ ನೀಡಲು ಹೋರಾಡಿದ್ದ ಮಹಾ ಪುರುಷ ಅವರು ರಚಿಸಿದಂತಹ ಸಂವಿಧಾನದಿಂದ ಇಂದು ಶೋಷಿತ ಸಮುದಾಯಗಳು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ನೆಮ್ಮದಿ ಜೀವನ ಸಾಧಿಸಲು ಕಾರಣವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Census of India 2011, Schedule Castes and Scheduled Tribes, Office of the Registrar General and Census Commissioner, Government of India, 28 Oct, 2013.
“Scheduled Caste Welfare - List of Scheduled Castes”, Ministry of Social Justice and Empowerment, Archived from the original on 13 Sep, 2012. Retrieved 16 Aug, 2012.
“2011 Census Primary Census Abstract”, Censusindia.nic.in. Retrieved 1 Oct, 2017.
“Half of India’s Dalit Population Lives in 4 States”, Times of India, Indiatimes.com. Retrieved 1 Oct, 2017.
“Text of the Constitution (Scheduled Castes) Order, 1950, as Amended”, Lawmin.nic.in. Retrieved 1 Oct, 2017.
“What is India’s Caste System?”, 20 July, 2017. Retrieved 6 April, 2019.
Bayly, Susan (July 1999), “Caste Society and Politics in India from the Eighteenth Century to the Modern Age by Bayly Susan”, Cambridge Core. Retrieved 6 April, 2019.
“Civil Rights/Society”, Encyclopaedia Britannica. Retrieved 6 April, 2019.
“Jati: The Caste System in India”, Asia Society. Retrieved 6 April, 2019.
“Scheduled Communities: A Social Development Profile of SC/ST’s (Bihar, Jharkhand & West Bengal)”, Planningcommission.nic.in. Retrieved 1 Oct, 2017.
“The Constitution (Scheduled Castes) Order, 1950”, Lawmin.nic.in.
“The Constitution (Scheduled Tribes)”, Lawmin.nic.in. Archived from the original on 20 Sep, 2017.
Metcalf, Barbara D., Thomas R., “A Concise History of Modern India”, New York, 2012, Cambridge, p-232, ISBN 978-1-107-67218-5.
“Constitution of India as of 29 Jul 2008”, The Constitution of India, Ministry of Law and Justice, Archived from the original on 9 Sep, 2014. Retrieved 13 April, 2011.
“Community Status Lapses on Conversion, Rules Madras High Court”, Thehindu.com, 24 June, 2013. Retrieved 1 Oct, 2017.