ಕುಮಾರವ್ಯಾಸನ ವ್ಯಾಕರಣ: ಕೆ. ವೆಂಕಟರಾಮಪ್ಪನವರ ತಾತ್ವಿಕ ನಿಲುವುಗಳು

Main Article Content

ಅಶ್ವಿನಿ ಎ.

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದೇ ಪ್ರಸಿದ್ಧನಾದ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯು ಕೇವಲ ಭಾಷಾ ಸೌಂದರ್ಯಕ್ಕಷ್ಟೇ ಅಲ್ಲದೆ, ನಡುಗನ್ನಡ ಭಾಷಿಕ ಅಧ್ಯಯನದ ಅಪೂರ್ವ ಕಣಜವೂ ಆಗಿದೆ. ಕೆ. ವೆಂಕಟರಾಮಪ್ಪನವರ ಅಪ್ರಕಟಿತ ಪಿಎಚ್.ಡಿ. ಪ್ರಬಂಧವಾದ ‘ಕುಮಾರವ್ಯಾಸನ ವ್ಯಾಕರಣ’ವನ್ನು ಆಧರಿಸಿದ ತಾತ್ವಿಕ ನಿಲುವುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೇಶಿರಾಜನ ‘ಶಬ್ದಮಣಿದರ್ಪಣ’ದ ಮಾದರಿಯಲ್ಲಿಯೇ ಕುಮಾರವ್ಯಾಸನ ಕಾವ್ಯದ ವ್ಯಾಕರಣಾಂಶಗಳನ್ನು ಅಕ್ಷರ, ಸಂಧಿ, ನಾಮಪದ, ಸಮಾಸ, ತದ್ಭವ, ಕ್ರಿಯಾಪದ ಸೇರಿದಂತೆ ಒಂಬತ್ತು ಪ್ರಕರಣಗಳಲ್ಲಿ ಅವರು ವರ್ಗೀಕರಿಸಿದ್ದಾರೆ. ಹಳಗನ್ನಡದಿಂದ ನಡುಗನ್ನಡಕ್ಕೆ ಭಾಷೆ ಹೊರಳುವಾಗ ಆಗುವ ಧ್ವನಿಮಾ ಪಲ್ಲಟಗಳು, ಅಕ್ಷರ ಲೋಪ, ಯಕಾರ-ವಕಾರಾಗಮಗಳು, ತದ್ಭವಗಳ ಬಳಕೆ ಹಾಗೂ ಅನ್ಯದೇಶೀಯ (ಮರಾಠಿ) ಶಬ್ದಗಳ ಪ್ರಭಾವವನ್ನು ಅವರು ಸೋದಾಹರಣವಾಗಿ ನಿರೂಪಿಸಿದ್ದಾರೆ. ಕಾವ್ಯವೊಂದರ ವ್ಯಾಕರಣವನ್ನು ಪ್ರತ್ಯೇಕವಾಗಿ ರಚಿಸಿದ ಈ ವಿನೂತನ ಹಾಗೂ ವಿಶಿಷ್ಟ ಪ್ರಯೋಗವು ಕನ್ನಡ ಭಾಷೆಯ ಐತಿಹಾಸಿಕ ಮತ್ತು ತೌಲನಿಕ ಭಾಷಾವಿಜ್ಞಾನದ ಅಧ್ಯಯನಕ್ಕೆ ಅತ್ಯಂತ ಭದ್ರವಾದ ನೆಲೆಯನ್ನು ಒದಗಿಸಿಕೊಡುತ್ತದೆ.

Article Details

Section

Research Articles

Author Biography

ಅಶ್ವಿನಿ ಎ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 

How to Cite

ಅಶ್ವಿನಿ ಎ. (2026). ಕುಮಾರವ್ಯಾಸನ ವ್ಯಾಕರಣ: ಕೆ. ವೆಂಕಟರಾಮಪ್ಪನವರ ತಾತ್ವಿಕ ನಿಲುವುಗಳು. ಅಕ್ಷರಸೂರ್ಯ (AKSHARASURYA), 15(06), 05 to 20. https://aksharasurya.com/index.php/latest/article/view/2102

References

ವೆಂಕಟರಾಮಪ್ಪ ಕೆ., (ಅಪ್ರಕಟಿತ), ಕುಮಾರವ್ಯಾಸ ವ್ಯಾಕರಣ ಸಂಶೋಧನ ಮಹಾಪ್ರಬಂಧ, ಮೈಸೂರು: ಮೈಸೂರು ವಿ.ವಿ.

ಓಂಕಾರಪ್ಪ ಸಿ., (1995), ಕುಮಾರವ್ಯಾಸ ಭಾರತ ಭಾಷಾ ವೈಜ್ಞಾನಿಕ ವಿಶ್ಲೇಷಣೆ, ವಿಜಯನಗರ: ಸೃಷ್ಟಿ ಪಬ್ಲಿಕೇಷನ್ಸ್.

ಸೀತಾರಾಮಯ್ಯ ವಿ. (ಸಂಪಾದಕರು), (1973), ಕುಮಾರವ್ಯಾಸ, ಬೆಂಗಳೂರು: ಸಪ್ನ ಬುಕ್ ಹೌಸ್.

ಕುವೆಂಪು ಮತ್ತು ಮಾಸ್ತಿ (ಸಂಪಾದಕರು), (1958), ಕರ್ಣಾಟ ಭಾರತ ಕಥಾಮಂಜರಿ, ಮೈಸೂರು: ಪ್ರಸಾರಾಂಗ, ಮಾನಸ ಗಂಗೋತ್ರಿ, ಮೈಸೂರು ವಿ.ವಿ.