ಬನ್ನಂಜೆಯವರ ಬದುಕು-ಬರವಣಿಗೆ
Main Article Content
Abstract
ಬನ್ನಂಜೆ ಗೋವಿಂದಾಚಾರ್ಯರು ಭಾರತೀಯ ಸಂಸ್ಕೃತಿ, ವೇದಾಂತದ ಪ್ರಖರ ಚಿಂತಕರು, ಅಪ್ರತಿಮ ವಾಗ್ಮಿಗಳು ಹಾಗೂ ಶ್ರೇಷ್ಠ ಸಂಸ್ಕೃತ-ಕನ್ನಡ ವಿದ್ವಾಂಸರು. ಬಾಲ್ಯದಿಂದಲೇ ಅಸಾಧಾರಣ ಸ್ಮರಣಶಕ್ತಿ ಮತ್ತು ಜ್ಞಾನದಾಹ ಹೊಂದಿದ್ದ ಇವರು, ಬಹುಪಾಲು ಸ್ವಾಧ್ಯಾಯದ (ಸ್ವಯಂ-ಅಧ್ಯಯನ) ಮೂಲಕವೇ ಅಗಾಧ ಪಾಂಡಿತ್ಯವನ್ನು ಒಲಿಸಿಕೊಂಡರು. ಕೇವಲ ಶಾಸ್ತ್ರಾಧ್ಯಯನಕ್ಕೆ ಸೀಮಿತವಾಗದೆ, ಕನ್ನಡದಲ್ಲಿ ಸುಮಾರು ೯೪ ಮತ್ತು ಸಂಸ್ಕೃತದಲ್ಲಿ ೩೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಕಾಳಿದಾಸ, ಶೂದ್ರಕ, ಭವಭೂತಿಯಂತಹ ಮಹಾಕವಿಗಳ ಸಂಸ್ಕೃತ ನಾಟಕಗಳನ್ನು ಕನ್ನಡಕ್ಕೆ ಅತ್ಯಂತ ಸೃಜನಶೀಲವಾಗಿ ತಂದ ಕೀರ್ತಿ ಇವರದು. ‘ಆವೆಯ ಮಣ್ಣಿನ ಆಟದ ಬಂಡಿ’, ‘ನೆನಪಾದಳು ಶಕುಂತಲೆ’ ಮುಂತಾದ ಕೃತಿಗಳು ಅನುವಾದದ ಗಡಿಯನ್ನು ದಾಟಿ ಸ್ವತಂತ್ರ ಸೃಷ್ಟಿಗಳಂತೆ ಹೊಮ್ಮಿವೆ. ಪದ್ಮಶ್ರೀ ಪುರಸ್ಕೃತರಾದ ಆಚಾರ್ಯರ ಅಪರೂಪದ ಬದುಕು, ಅಗಾಧ ವಿದ್ವತ್ತು ಮತ್ತು ಬಹುಮುಖಿ ಬರವಣಿಗೆಯ ವಿಸ್ತಾರವನ್ನು ಇಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವೀಣಾ ಬನ್ನಂಜೆ (ಬರಹ) ಮತ್ತು ಬನ್ನಂಜೆ ಗೋವಿಂದಾಚಾರ್ಯ (ನಿರೂಪಣೆ), (2026), ಆತ್ಮನಿವೇದನೆ, ಹುಬ್ಬಳ್ಳಿ: ಸಾಹಿತ್ಯ ಪ್ರಕಾಶನ.
ಡಾಕ್ಟರ್ ಎಚ್. ವಿ. ನಾಗರಾಜರಾವ್, ಪ್ರೊಫೆಸರ್ ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ (ಸಂಪಾದಕರು), (2022), ಗೋವಿಂದಮಣಿದರ್ಪಣ, ಹೊಸಪೇಟೆ: ಯಾಜಿ ಪ್ರಕಾಶನ.
ಪ್ರೊಫೆಸರ್ ಮಲ್ಲೇಪುರಂ ಜಿ. ವೆಂಕಟೇಶ, ಕೃಷ್ಣರಾಜ ಕುತ್ಪಾಡಿ ಮತ್ತು ವೀಣಾ ಬನ್ನಂಜೆ (ಸಂಪಾದಕರು), (2022), ಬನ್ನಂಜೆಯವರೊಡನೆ ಉಪ-ವಾಸ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2019), ಋತುಗಳ ಹೆಣಿಗೆ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2019), ಮತ್ತೆ ರಾಮನ ಕತೆ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2019), ನೆನಪಾದಳು ಶಕುಂತಲೆ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2023), ಮಹಾಶ್ವೇತೆ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2019), ಹೇಳದೆ ಉಳಿದದ್ದು ಮತ್ತು ಇತರ ಕವನಗಳು, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2017), ಇನ್ನಷ್ಟು ಹೇಳದೆ ಉಳಿದದ್ದು (ಕವನಗಳು-ಹವನಗಳು), ಹೊಸಪೇಟೆ: ಯಾಜಿ ಪ್ರಕಾಶನ.