ಕನ್ನಡ ಸಾಹಿತ್ಯ ಲೋಕಕ್ಕೆ ಬನ್ನಂಜೆಯವರ ಕೊಡುಗೆ
Main Article Content
Abstract
ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದು, ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸೃಜನಶೀಲ ಸಾಹಿತ್ಯ, ಅನುವಾದ, ನಾಟಕ, ಕವಿತೆ ಹಾಗೂ ವಿಮರ್ಶೆಯ ಮೂಲಕ ಅವರು ಕನ್ನಡದ ಘನತೆಯನ್ನು ಹೆಚ್ಚಿಸಿದ್ದಾರೆ. ಕಾಳಿದಾಸ, ಶೂದ್ರಕ, ಭವಭೂತಿ ಮುಂತಾದವರ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅತ್ಯದ್ಭುತವಾಗಿ ರೂಪಾಂತರಿಸಿದ ಅವರ ಕೌಶಲ್ಯ ಅನನ್ಯವಾದುದು. ‘ಬನ್ನಂಜೆ ಬರೆಹಗಳು’ ಸಂಪುಟಗಳಲ್ಲಿ ಅವರ ವೈವಿಧ್ಯಮಯ ಚಿಂತನೆಗಳು, ಸಂಶೋಧನೆ ಮತ್ತು ವಿಶಿಷ್ಟ ದರ್ಶನಗಳು ಅಡಕವಾಗಿವೆ. ಸಾಹಿತ್ಯ ಕೃಷಿ ಮಾತ್ರವಲ್ಲದೆ, ಪತ್ರಿಕೋದ್ಯಮ ಹಾಗೂ ಚಲನಚಿತ್ರ ಕ್ಷೇತ್ರಕ್ಕೂ (ಕಥೆ, ಚಿತ್ರಕಥೆ, ಸಂಭಾಷಣೆ) ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಯಾವುದೇ ಅನ್ಯ ಆಕರಗಳ ಹಂಗಿಲ್ಲದೆ, ಕೇವಲ ತಮ್ಮ ಅದ್ಭುತ ಸ್ಮರಣಶಕ್ತಿ ಮತ್ತು ವಿಷಯಜ್ಞಾನದಿಂದಲೇ ಆಳವಾದ ಒಳನೋಟಗಳನ್ನು ನೀಡಿದ ‘ವಿದ್ಯಾವಾಚಸ್ಪತಿ’ ಬನ್ನಂಜೆಯವರ ಬಹುಮುಖಿ ಸಾಧನೆ ಹಾಗೂ ಅವರ ಅಪೂರ್ವ ಸಾಹಿತ್ಯಿಕ ಮೌಲ್ಯಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಗರಾಜರಾವ್ ಎಚ್.ವಿ., ಮಲ್ಲೇಪುರಂ ಜಿ. ವೆಂಕಟೇಶ್, ಕೋರ್ಗಿ ಶಂಕರನಾರಾಯಣ ಉಪಾಧ್ಯಾಯ (ಸಂ.), (2022), ಗೋವಿಂದ ಮಣಿದರ್ಪಣ, ಹೊಸಪೇಟೆ: ಯಾಜಿ ಪ್ರಕಾಶನ.
ಮಲ್ಲೇಪುರಂ ಜಿ. ವೆಂಕಟೇಶ್, ಕೃಷ್ಣರಾಜ್ ಕುತ್ಪಾಡಿ, ವೀಣಾ ಬನ್ನಂಜೆ (ಸಂ.), (2019), ಬನ್ನಂಜೆಯವರೊಡನೆ ಉಪ-ವಾಸ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2019), ಋತುಗಳ ಹೆಣಿಗೆ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2002), ಬನ್ನಂಜೆ ಬರೆಹಗಳು-2, ಬೆಂಗಳೂರು: ಈಶಾವಾಸ್ಯ ಪ್ರತಿಷ್ಠಾನ ಉಡುಪಿ.
ಬನ್ನಂಜೆ ಗೋವಿಂದಾಚಾರ್ಯ, (2016-17), ಬನ್ನಂಜೆ ಬರೆಹಗಳು-3, ಬೆಂಗಳೂರು: ಈಶಾವಾಸ್ಯ ಪ್ರತಿಷ್ಠಾನ ಉಡುಪಿ.
ಬನ್ನಂಜೆ ಗೋವಿಂದಾಚಾರ್ಯ, (2025), ಬನ್ನಂಜೆ ಬರೆಹಗಳು-3, ಬೆಂಗಳೂರು: ಈಶಾವಾಸ್ಯ ಪ್ರತಿಷ್ಠಾನ ಉಡುಪಿ.
ಬನ್ನಂಜೆ ಗೋವಿಂದಾಚಾರ್ಯ, (2019), ಹೇಳದೆ ಉಳಿದದ್ದು ಮತ್ತು ಇತರ ಕವನಗಳು, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.
ಬನ್ನಂಜೆ ಗೋವಿಂದಾಚಾರ್ಯ, (2017), ಇನ್ನಷ್ಟು ಹೇಳದೆ ಉಳಿದದ್ದು (ಕವನಗಳು-ಹವನಗಳು), ಹೊಸಪೇಟೆ: ಯಾಜಿ ಪ್ರಕಾಶನ.