ಕನ್ನಡ ಸಾಹಿತ್ಯದಲ್ಲಿ ಬುದ್ಧನ ಮರು ನಿರೂಪಣೆ

Main Article Content

ಮಲ್ಲಿಕಾರ್ಜುನ ಎನ್.

Abstract

ಸಮಾಜದ ನಿರಂತರ ಬದಲಾವಣೆಗಳು ಮತ್ತು ವಿಘಟನೆಗಳಿಗೆ ಬುದ್ಧನ ಸಮಾನತೆ, ಕರುಣೆ ಹಾಗೂ ಸರಳತೆಯ ತತ್ವಗಳು ಶಾಶ್ವತ ಪರಿಹಾರವನ್ನು ಒದಗಿಸುತ್ತವೆ. ಪ್ರಾಚೀನ ಭಾರತದಲ್ಲಿ ಅಶೋಕನಂತಹ ದೊರೆಗಳ ಬೆಂಬಲದಿಂದ ಬೌದ್ಧಧರ್ಮವು ಜಾಗತಿಕವಾಗಿ ಬೆಳೆಯಿತು. ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು (ಬ್ರಾಹ್ಮಿ ಲಿಪಿ) ಹಾಗೂ ಸನ್ನತಿಯಂತಹ ನೆಲೆಗಳು ಇಲ್ಲಿನ ಬೌದ್ಧ ಪ್ರಭಾವವನ್ನು ಸಾಬೀತುಪಡಿಸುತ್ತವೆ. ಟಿ.ಎಸ್. ವೆಂಕಣ್ಣಯ್ಯನವರಂತಹ ವಿದ್ವಾಂಸರ ತರ್ಕದಂತೆ, ಬೌದ್ಧರೇ ಕನ್ನಡದ ಆದಿಕವಿಗಳಾಗಿದ್ದರೂ, ವೈದಿಕ ಧರ್ಮದ ಪುನರುತ್ಥಾನ, ಪುಷ್ಯಮಿತ್ರ ಶುಂಗನ ಆಕ್ರಮಣ ಹಾಗೂ ಇತರ ಧಾರ್ಮಿಕ ಸಂಘರ್ಷಗಳಿಂದಾಗಿ ಪ್ರಾಚೀನ ಕನ್ನಡ ಬೌದ್ಧ ಸಾಹಿತ್ಯವು ಸಂಪೂರ್ಣವಾಗಿ ನಾಶವಾಯಿತು. ಪ್ರಾಚೀನ ಕೃತಿಗಳು ನಷ್ಟವಾದರೂ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಜಿ.ಪಿ. ರಾಜರತ್ನಂ, ಕಾರಂತರಂತಹ ಅನೇಕ ಸೃಜನಶೀಲ ಲೇಖಕರು ಬುದ್ಧನ ತತ್ವಗಳನ್ನು ಮರುನಿರೂಪಿಸುವ ಮೂಲಕ ಆ ಸಾಹಿತ್ಯವನ್ನು ಮತ್ತೆ ಶ್ರೀಮಂತಗೊಳಿಸಿದ್ದಾರೆಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

Article Details

Section

Research Articles

Author Biography

ಮಲ್ಲಿಕಾರ್ಜುನ ಎನ್.

ಸಂಶೋಧನಾರ್ಥಿ, ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

How to Cite

ಮಲ್ಲಿಕಾರ್ಜುನ ಎನ್. (2026). ಕನ್ನಡ ಸಾಹಿತ್ಯದಲ್ಲಿ ಬುದ್ಧನ ಮರು ನಿರೂಪಣೆ. ಅಕ್ಷರಸೂರ್ಯ (AKSHARASURYA), 15(06), 79 to 92. https://aksharasurya.com/index.php/latest/article/view/2110

References

ಮಳಲಿ ವ. ಸು., (2013), “ಕನ್ನಡಿಗರಿಗೆ ಬೇಡವಾದನೇ ಬುದ್ಧ” (ಪ್ರಜಾವಾಣಿ ಪತ್ರಿಕೆ: 15-10-2013), ಬೆಂಗಳೂರು: ಪ್ರಜಾವಾಣಿ.

ಚಿದಾನಂದ ಮೂರ್ತಿ ಎಂ., (1966), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಸ್ವಪ್ನ ಬುಕ್ ಹೌಸ್.

ತಾಳ್ತಜೆ ವಸಂತಕುಮಾರ, (2005), ಬೌದ್ಧಾಯನ, ಮುಂಬಯಿ: ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ.

ಹೆಣ್ಣೂರು ಲಕ್ಷ್ಮೀನಾರಾಯಣ, (2007), ಅಸ್ಪೃಶ್ಯರು ಮತ್ತು ಶೂದ್ರರು ಉದ್ದಾರಕರು, ಬೆಂಗಳೂರು: ಮೂಲ ನಿವಾಸಿ ಶೂದ್ರಾತಿಶೂದ್ರ ಅಧ್ಯಯನ ಕೇಂದ್ರ.

ವಿಜಯಾ ಮಹೇಶ, ಬಹುಜನರ ಇತಿಹಾಸ, ಮೈಸೂರು: ಪ್ರಬುದ್ಧ ಪ್ರಕಾಶನ.

ಭಗವಾನ್ ಕೆ.ಎಸ್., (1990), ಹಿಂದೂ ಸಾಮ್ರಾಜ್ಯ ಶಾಹಿಯ ಇತಿಹಾಸ, ಮೈಸೂರು: ಮಹಿಮೆ ಪ್ರಕಾಶನ.

ಶೇಷಗಿರಿರಾವ್ ಎಲ್.ಎಸ್. ಮತ್ತು ಇತರರು, (1990), ಕನ್ನಡ, ಕನ್ನಡಿಗ, ಕರ್ನಾಟಕ, ಬೆಂಗಳೂರು: ಸ್ವಪ್ನ ಬುಕ್ ಹೌಸ್.

ಸದಾಶಿವ ಕೆ., ಪ್ರಾಚೀನ ಭಾರತದ ಇತಿಹಾಸ ಚರಿತ್ರೆ, ಮೈಸೂರು: ಚೇತನ ಬುಕ್ ಹೌಸ್.