ಕುವೆಂಪುರವರ ‘ಜಲಗಾರ’ ನಾಟಕದಲ್ಲಿ ಕಾಯಕದ ತತ್ವ ಮತ್ತು ಸಾಮಾಜಿಕ ಸಂದೇಶ

Main Article Content

ಡಾ. ಪ್ರಭುದೇವ ಸಿ.

Abstract

ಕನ್ನಡ ಸಾಹಿತ್ಯದ ಮಹಾನ್ ಚಿಂತಕ ಕುವೆಂಪು ಅವರ “ಜಲಗಾರ” ನಾಟಕವು ಕಾಯಕದ ತತ್ವ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಸಮಾನತೆಯನ್ನು ಬಲವಾಗಿ ಪ್ರತಿಪಾದಿಸುವ ಪ್ರಮುಖ ಸಾಮಾಜಿಕ ಕೃತಿ ಆಗಿದೆ. ಈ ನಾಟಕವು ಶ್ರಮದ ಗೌರವವನ್ನು ಎತ್ತಿಹಿಡಿದು, ದೇವರ ಅಸ್ತಿತ್ವವನ್ನು ದೇವಸ್ಥಾನಗಳಲ್ಲಲ್ಲದೆ ಸಾಮಾನ್ಯ ಮನುಷ್ಯನ ದೈನಂದಿನ ಕಾಯಕದಲ್ಲಿ ಕಾಣಬೇಕೆಂಬ ನೂತನ ಚಿಂತನೆಗೆ ದಾರಿತೋರುತ್ತದೆ. ಜಲಗಾರ ಎಂಬ ಶ್ರಮಿಕನ ಪಾತ್ರದ ಮೂಲಕ ಜಾತಿ ವ್ಯವಸ್ಥೆಯ ಅನ್ಯಾಯ, ಧಾರ್ಮಿಕ ಮೌಢ್ಯತೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ತೀವ್ರವಾಗಿ ಪ್ರಶ್ನಿಸಲಾಗಿದೆ. ನಾಟಕದಲ್ಲಿ ಕಾಣುವ ವಿವಿಧ ಪಾತ್ರಗಳು ಸಮಾಜದ ವಿಭಿನ್ನ ಮನೋಭಾವಗಳನ್ನು ಪ್ರತಿಬಿಂಬಿಸುತ್ತವೆ. ವಿಶೇಷವಾಗಿ, ದೇವರ ನಿಜಸ್ವರೂಪವನ್ನು ಶ್ರಮ ಮತ್ತು ಸೇವೆಯಲ್ಲಿ ಕಾಣುವ ಸಂದೇಶವು ಮಾನವತಾವಾದದ ಮೌಲ್ಯಗಳನ್ನು ಬಲಪಡಿಸುತ್ತದೆ. ಈ ಅಧ್ಯಯನವು ನಾಟಕದ ವಿಷಯವಸ್ತು, ತಾತ್ವಿಕ ಹಿನ್ನೆಲೆ ಮತ್ತು ಸಾಮಾಜಿಕ ಸಂದೇಶಗಳನ್ನು ವಿಶ್ಲೇಷಿಸಿ, ಇಂದಿನ ಸಮಾಜದಲ್ಲಿಯೂ ಅದರ ಪ್ರಸ್ತುತತೆಯನ್ನು ಸ್ಪಷ್ಟಪಡಿಸುತ್ತದೆ.

Article Details

Section

Research Articles

Author Biography

ಡಾ. ಪ್ರಭುದೇವ ಸಿ.

ಕನ್ನಡ ಭಾಷಾ ವಿಭಾಗ ಪ್ರೆಸಿಡೆನ್ಸಿ ಕಾಲೇಜು (ಸ್ವಾಯತ್ತ), ಕೆಂಪಾಪುರ, ಹೆಬ್ಬಾಳ, ಬೆಂಗಳೂರು.

How to Cite

ಪ್ರಭುದೇವ ಸಿ. (2026). ಕುವೆಂಪುರವರ ‘ಜಲಗಾರ’ ನಾಟಕದಲ್ಲಿ ಕಾಯಕದ ತತ್ವ ಮತ್ತು ಸಾಮಾಜಿಕ ಸಂದೇಶ. ಅಕ್ಷರಸೂರ್ಯ (AKSHARASURYA), 15(06), 67 to 78. https://aksharasurya.com/index.php/latest/article/view/2109

References

ಚಕ್ಕರೆ ಶಿವಶಂಕರ್ (ಸಂಪಾದಕರು), (2004), ಸಹ್ಯಾದ್ರಿಯ ಸೂರ್ಯ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಕುವೆಂಪು (ಮತ್ತು ಕೆ.ಸಿ. ಶಿವಾರೆಡ್ಡಿ - ಸಂಪಾದಕರು), (2004), ಕುವೆಂಪು ಸಮಗ್ರ ನಾಟಕ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ರವಿಶಂಕರ ಎ.ಕೆ. ಮತ್ತು ಅನಿತ ಕೆ.ವಿ. (ಸಂಪಾದಕರು), (2019), ಬೇರು ತೇರು, ಧಾರವಾಡ: ಸಾಧನ ಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ.

ಸುಜಾತ ಲಕ್ಷ್ಮೀಪುರ, (2021), ವಿಚಾರವಾದಿ ಕುವೆಂಪು, ಬೆಂಗಳೂರು: ಸಿವಿಜಿ ಪಬ್ಲಿಕೇಷನ್ಸ್.

ಶಿವರುದ್ರಪ್ಪ ಜಿ.ಎಸ್. (ಸಂಪಾದಕರು), (2003), ಶ್ರೀ ಕುವೆಂಪು, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ತೇಜಾವತಿ ಕೆ. (2025). ಕುವೆಂಪುರವರ ಜಲಗಾರ ನಾಟಕ . ಅಕ್ಷರಸೂರ್ಯ (AKSHARASURYA), 5(06), 83 to 91. https://aksharasurya.com/index.php/latest/article/view/1096

ನಾಗೇಶ ಬಿ (2024). ಜಲಗಾರ ನಾಟಕ ಮತ್ತು ವಚನಕಾರರ ಕಾಯಕ ತತ್ವ. International Journal of Kannada Research; 10(2): 118-122. https://doi.org/10.22271/24545813.2024.v10.i2b.975

Most read articles by the same author(s)