Published: 2025-01-05

Table of Contents

Table of Contents

I to V

ಕನ್ನಡದಲ್ಲಿ ಕಾವ್ಯಲಕ್ಷಣ ಗ್ರಂಥಗಳು

ತೀ. ನಂ. ಶ್ರೀಕಂಠಯ್ಯ

01 to 37

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾವ್ಯಮೀಮಾಂಸೆ ಮತ್ತು ಕಾವ್ಯಲಕ್ಷಣ ಗ್ರಂಥಗಳ ಉಗಮ, ವಿಕಾಸ ಹಾಗೂ ಐತಿಹಾಸಿಕ ಮಹತ್ವವನ್ನು ಪ್ರೊ. ತೀ.ನಂ. ಶ್ರೀಕಂಠಯ್ಯನವರ ಬರಹಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಕ್ರಿ.ಶ. ಒಂಬತ್ತನೇ ಶತಮಾನದ 'ಕವಿರಾಜಮಾರ್ಗ'ದಿಂದ ಪ್ರಾರಂಭಿಸಿ ಹತ್ತೊಂಬತ್ತನೇ ಶತಮಾನದವರೆಗಿನ ಅನೇಕ ಲಕ್ಷಣ ಗ್ರಂಥಗಳ ವಿವೇಚನೆ ಇಲ್ಲಿದೆ. ನಾಗವರ್ಮನ 'ಕಾವ್ಯಾವಲೋಕನ', ಸಾಳ್ವನ 'ರಸರತ್ನಾಕರ', ಕವಿಕಾಮನ 'ಶೃಂಗಾರರತ್ನಾಕರ' ಮತ್ತು ತಿರುಮಲಾರ್ಯನ 'ಅಪ್ರತಿಮವೀರಚರಿತ' ಮುಂತಾದ ಪ್ರಮುಖ ಕೃತಿಗಳು ಅಲಂಕಾರ, ರಸ, ಮತ್ತು ಧ್ವನಿ ಸಿದ್ಧಾಂತಗಳಿಗೆ ನೀಡಿದ ಕೊಡುಗೆಗಳನ್ನು ದಾಖಲಿಸಲಾಗಿದೆ. ಸಂಸ್ಕೃತ ಕಾವ್ಯಮೀಮಾಂಸೆಯ ಪ್ರಭಾವದ ನಡುವೆಯೂ ಕನ್ನಡ ಲಕ್ಷಣ ಗ್ರಂಥಗಳು ಬೆಳೆದುಬಂದ ವಿಶಿಷ್ಟ ಬಗೆಯನ್ನು ಕಟ್ಟಿಕೊಡಲಾಗಿದೆ. ಪ್ರಾಚೀನ ಕೃತಿಗಳೊಂದಿಗೆ ತೀ.ನಂ.ಶ್ರೀ ಅವರ 'ಭಾರತೀಯ ಕಾವ್ಯ ಮೀಮಾಂಸೆ' ಕೃತಿಯು ಕನ್ನಡ ಶಾಸ್ತ್ರ ಪರಂಪರೆಗೆ ನೀಡಿದ ಸಾರ್ಥಕ ಕೊಡುಗೆಯನ್ನೂ ಇದು ಎತ್ತಿತೋರಿಸುತ್ತದೆ.

Read More »

ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ

ರಂಗನಾಥ ಕಂಟನಕುಂಟೆ

38 to 47

‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’ ಕೃತಿಯನ್ನು ಓದಿಕೊಳ್ಳುವಾಗ ಇರಬೇಕಾದ ಎಚ್ಚರವೆಂದರೆ ಈ ಕೃತಿ ಅಳಿವಿನ ಅಂಚಿನಲ್ಲಿರುವ ನುಡಿಗಳ ಬಗೆಗೆ ಇದುವರೆಗೆ ಕಟ್ಟಿಕೊಂಡಿರುವ ತಿಳಿವಿನಲ್ಲಿರುವ ಸಮಸ್ಯೆಯನ್ನು ಹೇಗೆ ಗುರುತಿಸಿದೆ ಎಂಬುದನ್ನು ಗಮನಿಸಬೇಕು. ನಂತರ ಆ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಹೇಗೆ ಬದಲಿ ದಾರಿಗಳನ್ನು ಕಂಡುಕೊಳ್ಳಬೇಕಿದೆ ಎಂಬುದರತ್ತ ಗಮನಹರಿಸಬೇಕಿದೆ. ಇಲ್ಲವಾದಲ್ಲಿ ಇದನ್ನು ಯಥಾಸ್ಥಿತಿವಾದಿಗಳು, ಪ್ರಭುತ್ವಗಳು, ಬಂಡವಾಳಶಾಹಿ ವ್ಯವಸ್ಥೆ, ಸಾಮಾಜಿಕ ಡಾರ್ವಿನ್ ವಾದಿಗಳು, ಮತ್ತು ಸದ್ಯ ಭಾಷಿಕ ಸಾಮ್ರಾಜ್ಯಶಾಹಿಗಳು ಅವರಿಗೆ ಬೇಕಾದಂತೆ ಓದಿಕೊಳ್ಳುವ ಸಾಧ್ಯತೆಯೂ ಇದೆ. ಅವರಿಗೆ ಅನುಕೂಲ ಮಾಡಿಕೊಡುವ ವಾದದಂತೆ ಕಾಣಬಹುದು. ಅಂತಹ ಉದ್ದೇಶ ಈ ಕೃತಿಯದಲ್ಲ. ಅದು ಅಳಿವಿನ ಅಂಚಿನಲ್ಲಿರುವ ನುಡಿಗಳ ಬಗೆಗೆ ಆಳವಾದ ಆಸಕ್ತಿಯನ್ನು ಹೊಂದಿದೆ. ಅಂತಹ ಆಸಕ್ತಿಯನ್ನು ಸರಿಯಾದ ತಿಳಿವಿನ ಬೆಳಕಿನಲ್ಲಿ ಇಟ್ಟು ಜನನುಡಿಗಳನ್ನು ಕಾಪಿಟ್ಟುಕೊಳ್ಳಲು ಜನಕೇಂದ್ರಿತ ಮತ್ತು ಕ್ರಿಯಾಸಾಧ್ಯತೆ ಇರುವ ನೈಜ ಚಿಂತನೆ ಮತ್ತು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಅಗತ್ಯವಿದೆ ಎಂಬುದನ್ನು ಸೂಚಿಸುವುದಾಗಿದೆ. ಹಾಗಾಗಿ ಈ ಕೃತಿ ವಾಗ್ವಾದಕ್ಕೆ ನೀಡಿರುವ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸಿ ಆ ದಿಸೆಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಹೊಸ ಮತ್ತು ಹೊರದಾರಿಗಳನ್ನು ಕಂಡುಕೊಳ್ಳಬೇಕಿದೆ.

Read More »

ಮಹಿಳಾ ಯಕ್ಷಗಾನದ ಸವಾಲುಗಳು ಮತ್ತು ಸಾಧ್ಯತೆ

ಶುಭಾ ಮರವಂತೆ

48 to 54

ಮಹಿಳೆಯರಿಗೆ ಹೊಂದುವ ಕಥಾ ಸಂವಿಧಾನ, ನವೀನ ತಂತ್ರ ಪರಿಕರಗಳನ್ನು ನಾವೇ ಕಂಡುಕೊಳ್ಳುದರ ಮೂಲಕ ಯಕ್ಷರಂಗದಲ್ಲೊಂದು ಮಹಿಳಾ ಲೋಕವನ್ನು ಸೃಷ್ಟಿಸುವ ಸವಾಲು ನಮ್ಮ ಮುಂದಿದೆ. ನಮ್ಮ ನಡೆಯಲ್ಲಿ ಅನನ್ಯತೆಯ ದಾರಿ ಗುರುತುಗಳು ಬೇಕಾಗಿವೆ. ಪ್ರಯೋಗಶೀಲ ಮನಸ್ಸು ಬೆಳೆದರೆ ಯಕ್ಷಗಾನದ ಏಕತಾನತೆಯನ್ನು ಮಹಿಳೆಯರು ಮುರಿದು ಮರು ಕಟ್ಟಲು ಸಾಧ್ಯವಿದೆ. ಮೊದಲು ಮಹಿಳೆಯರು ಯಕ್ಷಗಾನ ನೋಡುವುದೆ ಅಪರಾಧವೆಂದು ಭಾವಿಸುವ ಕಾಲಘಟ್ಟದಿಂದ ಬಹುದೂರ ಬಂದಿದ್ದೇವೆ. ಗಂಡಸೊಬ್ಬನೆ ಕಲಾವಿದನಾಗಿ ಅವನಷ್ಟಕ್ಕೆ ಇದ್ದು ಕುಟುಂಬದಿಂದ ದೂರ ಉಳಿದು ಬದುಕುತ್ತಿದ್ದ ಕಾಲ ಈಗ ಬದಲಾಗಿದೆ. ಹೆಣ್ಣು ಮಕ್ಕಳಿಂದಾಗಿ ಮನೆ ಮನೆಯು ಕಲಾ ಕುಟೀರವಾಗಿದೆ. ಮಹಿಳೆ ತಾನೂ ಕಲಾವಿದೆಯಾಗಿ ಮಕ್ಕಳನ್ನೂ ಆ ದೆಸೆಯಲ್ಲಿ ಪ್ರೋತ್ಸಾಹಿಸುತ್ತಾ ಕುಟುಂಬವನ್ನೆ ಆ ಕಡೆಗೆ ಚಲಿಸುವಂತೆ ಮಾಡುತ್ತಿರುವುದು ವಿಶ್ವಕಲೆಯ ಮರು ಚೇತನಕ್ಕೆ ನಾಂದಿ ಹಾಡಿದೆ. ಮೇಳ ಎಂಬ ಸಾಂಸ್ಥಿಕ ಸ್ವರೂಪಕ್ಕೆ ಪರ್ಯಾಯವಾಗಿ ಮಹಿಳೆಯರು ಯೋಚಿಸಬೇಕಾಗಿದೆ. ಇಂದು ಜಾತಿ ಧರ್ಮ ಮೀರಿ ಕಲಾವಿದೆಯರು ಹುಟ್ಟಿಕೊಳ್ಳುತ್ತಿದ್ದಾರೆ. ಆರ್ಷಿಯಾ ಎನ್ನುವ ಮಂಗಳೂರಿನ ಮುಸ್ಲಿಂ ಮಹಿಳೆ ವೇಷ ಕಟ್ಟುವುದನ್ನು ನೊಡಿದರೆ, ಮಕ್ಕಳು, ವಿಕಲಚೇತನರು ಪ್ರದರ್ಶನ ನೀಡುತ್ತಿರುವುದನ್ನು ನೋಡಿದರೆ ಯಕ್ಷಗಾನವು ಸಾಗುತ್ತಿರುವ ದಿಕ್ಕು ತೃಪ್ತಿ ತಂದಿದೆ. ಪ್ರಸಂಗ ರಚನೆ, ಹಿಮ್ಮೇಳ, ಮುಮ್ಮೇಳ, ಅಧ್ಯಯನ, ಸಂಶೋಧನೆ ಹೀಗೆ ಎಲ್ಲಾ ರೀತಿಯಲ್ಲೂ ಮಹಿಳೆಯರು ಸಾಧಿಸುತ್ತಿರುವ ಮುನ್ನಡೆ ಸ್ವಾಗತಾರ್ಹ ಬದಲಾವಣೆ. ಯಕ್ಷಗಾನ ಮಹಿಳೆಯರಿಗೆ ಕೊಟ್ಟ ಅವಕಾಶ ದೊಡ್ಡದು. ಎಷ್ಟೋ ಬಾರಿ ಕಲಾವಿದ ತಾನು ನಿಜ ಜೀವನದಲ್ಲಿ ಸಾಧಿಸಲಾರದ್ದನ್ನು ಕಲೆಯ ಮೂಲಕ ಸಾಧಿಸುತ್ತಾನೆ. ಲಿಂಗಾತೀತ ದೇಹ ಮನಸ್ಸನ್ನು ಸಾಧಿಸಲು ಮಹಿಳೆ ಅಪೇಕ್ಷಿಸುವುದು ಸಹಜವಾದ ಪ್ರಕ್ರಿಯೆ. ಕಲಾವಿದೆಯರಿಗೆ ಇಲ್ಲಿ ಅದು ಸಾಧ್ಯವಾಗಿದೆ.

Read More »

ಕಿತ್ತೂರು ಸಂಸ್ಥಾನ: ರಾಣಿ ಚೆನ್ನಮ್ಮಳ ಸಾಂಸ್ಕ್ರತಿಕ ಪ್ರಜ್ಞೆ

ಭೋಜೇಗೌಡ ಕೆ.

55 to 62

ಕನ್ನಡ ಸಾಹಿತ್ಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳು ತಮ್ಮದೇ ಆದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತ ಸಂಸ್ಕೃತಿಯ ಹರಿಕಾರರಾಗಿ ಅದರ ಅನುಯಾಯಿಗಳಾಗಿ ಮತ್ತು ಆಚರಣೆಯ ಸಂಪನ್ಮೂಲ ವ್ಯಕ್ತಿಗಳಾಗಿ ಕಂಡು ಬರುತ್ತಾರೆ. ಅವರಲ್ಲಿ ಪ್ರಮುಖರಾಗಿ ಕಂಡು ಬರುವ ವ್ಯಕ್ತಿಗಳಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಸಂಸ್ಕೃತಿಯನ್ನು ಅನುಸರಿಸುತ್ತಾ, ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಆಚರಿಸುವ ಹಬ್ಬ, ಹರಿದಿನಗಳು, ಜಾತ್ರೆಗಳು, ಮಠಗಳ ಸಂಸ್ಕೃತಿ ಮತ್ತು ನಾಡಿನ ಸಂಸ್ಕೃತಿಗಳ ಅನಾವರಣ ಈ ಕಾದಂಬರಿಯಲ್ಲಿ ಪ್ರತಿಬಿಂಬಿತವಾಗಿರುವುದನ್ನು ಚಿತ್ರಿಸಲಾಗಿದೆ. 

Read More »

ತತ್ವಪದಕಾರ ಕುರುಬರ ಲಿಂಗಯ್ಯನವರ ಜೀವನ ಮತ್ತು ಸಾಧನೆ

ಬೋರಯ್ಯ ಪಿ. ಕೆ.

63 to 70

ಚಿತ್ರದುರ್ಗ ಜಿಲ್ಲೆ ಹಾಗೂ ತಾಲ್ಲೂಕಿನ ತುರುವನೂರು ಗ್ರಾಮದಲ್ಲಿ ವೀರಪ್ಪ ಮತ್ತು ಮಲ್ಲಮ್ಮ ಎಂಬ ಇಬ್ಬರು ದಂಪತಿಗಳಿಗೆ ಮಗನಾಗಿ ಹುಟ್ಟಿ, ಬಾಲ್ಯದಿಂದಲೂ ಕುತೂಹಲಕಾರಿಯಗಿ ಬೆಳೆದ ಕುರುಬರ ಲಿಂಗಯ್ಯನವರು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ “ಮಾರೀಜಾತ್ರೆ” ಎಂಬ ಕೃತಿಯನ್ನು ಬರೆಯುವುದರ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದ್ದಾರೆ. ಆಗಿನ ಕಾಲದಲ್ಲಿ ಕೆ.ಎಲ್.ಎಸ್. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಶ್ರೇಣಿಗಳಿಸಿ ಜಿಲ್ಲಾ ವಿದ್ಯಾಧಿಕಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು. ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡು ಸಾಹಿತ್ಯದ ಮೇಲೆ ಒಲವು ಇಟ್ಟುಕೊಂಡು ಅನೇಕ ಗ್ರಂಥಗಳನ್ನು ಓದಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಕತೆ, ನಾಟಕ, ಷಟ್ಪದಿ, ರಗಳೆ, ಶತಕ, ತ್ರಿಪದಿ, ಕಂದ ಪದ್ಯಗಳು, ತತ್ವಪದಗಳು, ಜೀವನ ಚರಿತ್ರೆ, ಅನುವಾದ ಮೊದಲಾದ ಪ್ರಕಾರಗಳಲ್ಲಿ ತಮ್ಮ ಬರವಣಿಗೆಯಲ್ಲಿ ರೂಪಿಸಿದ್ದಾರೆ. ಅವರು ಇಡೀ ಭಾರತೀಯ ಪರಂಪರೆಯಲ್ಲೆ ಅತೀ ಹೆಚ್ಚು ತತ್ವಪದಗಳನ್ನು ಬರೆದಿರುವವರ ಸಾಲಿನಲ್ಲಿ ಲಿಂಗಯ್ಯನವರು ಒಬ್ಬರೇ ಎಂದರೆ ಅತಿಶಯೋಕ್ತಿಯಾಗಲಾರದು. ಇದರ ಜೊತೆಗೆ ಸಂಸಾರ, ಶಿಕ್ಷಣ, ಸಾಮಾಜಿಕ ಹೋರಾಟಗಳನ್ನು ಮೈಗೂಡಿಸಿಕೊಂಡಿದ್ದರು. ವಿಶೇಷವಾಗಿ ಇವರ ತತ್ವಪದಗಳನ್ನು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರು ಕುರುಬರ ಲಿಂಗಯ್ಯನವರ ತತ್ವಪದಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಒಟ್ಟಾರೆಯಾಗಿ ಸಾಮಾಜಿಕ ಸಮಸ್ಯೆಗಳನ್ನು ಇವರು ತಮ್ಮ ತತ್ವಪದಗಳ ಮೂಲಕ ಟೀಕಿಸಿರುವುದು ವಿಶೇಷವಾಗಿದೆ. 

Read More »

ಬತ್ತಾಡ ಜನಾಂಗ-ಒಂದು ಅಧ್ಯಯನ

ಮಂಜುನಾಥ ಕೆ.ಎಸ್.

71 to 76

ಭಾರತದ ಮೇಲೆ ಪ್ರಭುತ್ವ ಸಾಧಿಸಲು ಬಂದ ಬ್ರಿಟಿಷರು ಸಾಮಾಜಿಕ ಕೆಳಸ್ತರದಲ್ಲಿರುವ ಜನರನ್ನು ಮತ್ತು ಅವರ ಜನಜೀವನವನ್ನು ಸಂಶೋಧನ ದೃಷ್ಟಿಯಿಂದ ನೋಡಿದರೆ ವಿನಃ ಈ ಜನರನ್ನು ಮುನ್ನೆಲೆಗೆ ತರುವ ಪ್ರಯತ್ನ ಪಡಲಿಲ್ಲ. ಹಿಂದಿನಿಂದ ಬಂದ ತಾರತಮ್ಯದ ವ್ಯವಸ್ಥೆಯನ್ನು ಹಾಗೆಯೇ ಮುಂದುವರಿಸಿದರು. ಹಾಗಾಗಿ ದೇಶದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಇಂತಹ ಮನೋಧ್ಯೇಯವನ್ನು ವಿರೋಧಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಇಂಗ್ಲೀಷ್ ಶಿಕ್ಷಣ ಪಡೆದವರಲ್ಲಿ ಆಧುನಿಕ ಪ್ರಜ್ಞೆ ಬೆಳೆಯುತ್ತಿದ್ದ ಕಾಲದಲ್ಲಿ ಬತ್ತಾಡ ಜನ ಸಮುದಾಯಗಳ ಜೀವನದಲ್ಲಿ ಅಂತಹ ಗಮನಾರ್ಹವಾದ ಬದಲಾವಣೆಗಳೇನೂ ಆಗಿರಲಿಲ್ಲ. ಅಂದಿನ ಮುಖ್ಯ ಬೆಳವಣಿಗೆಯೆಂದರೆ ಉದಾರವಾದ ಮಾನವೀಯತೆಯಷ್ಟೇ. ಆದರೆ ದೇಶಕ್ಕೆ ಸ್ವಾತಂತ್ರ್ಯಬಂದ ನಂತರದಲ್ಲಿ ಸಂವಿಧಾನದ ಶಾಸನಗಳಿಂದ ಸಾಮಾಜಿಕ ಚಲನೆ ಕಾಣಿಸಿಕೊಂಡಿದ್ದು ಇತ್ತೀಚೆಗೆ ಸ್ವಲ್ಪಮಟ್ಟಿಗೆ ವ್ಯಕ್ತಿ ಸ್ವಾತಂತ್ರ್ಯದೊರಕಿದೆ.
ಈ ಜಾಗತೀಕರಣ, ಆಧುನೀಕರಣ, ಕೈಗಾರೀಕರಣ ಹಾಗೂ ಮಾಹಿತಿ ಸ್ಪೋಟದಿಂದ ಬತ್ತಾಡ ಸಮಾಜವು ಮತ್ತೆ ಹೊಸ ಮಾರ್ಗದಲ್ಲಿ ಚಲಿಸಲು ಪ್ರಾರಂಭಿಸಿದೆ. ಈ ಹೊಸ ಚಲನೆಯಿಂದ ಮತ್ತೆ ಆಗಬಹುದಾದ ಬದಲಾವಣೆಗಳಿಗಿಂತ ಮುಂಚೆಯೇ ಇಂದಿನ ಸಮುದಾಯದ ಸ್ಥಿತಿ-ಗತಿಯನ್ನು ದಾಖಲಾತಿ ಮಾಡುವುದು ಅವಶ್ಯಕವಾಗಿದೆ. ಬತ್ತಾಡ ಸಮಾಜದವರು ಜಿಲ್ಲೆಯಲ್ಲಿ ತನ್ನದೇ ಆದ ಪ್ರಮುಖ ಸ್ಥಾನವನ್ನು ಹೊಂದಿದ್ದಾರೆ. ಅವರಲ್ಲಿನ ಅನೇಕ ಆಚರಣೆಗಳು ಮತ್ತು ಅವರ ಮೌಖಿಕ ಪರಂಪರೆಗಳು ಅವರ ಪ್ರಾಚೀನತೆಯನ್ನು ಸೂಚಿಸುತ್ತದೆ. ಇವರ ಮದುವೆ ಸಂಪ್ರದಾಯ, ಆಹಾರ ಪದ್ಧತಿ, ಬಾಲ್ಯ ವಿವಾಹ, ಅನಕ್ಷರತೆ, ನ್ಯಾಯ ಪಂಚಾಯಿತಿ ಮುಂತಾದವುಗಳ ನಿರ್ವಹಣಾ ವಿಧಾನಗಳು ನನ್ನಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು ಈ ಅಧ್ಯಯನವನ್ನು ಕೈಗೊಳ್ಳಲು ಪ್ರೇರಕನಾಗಿದ್ದೇನೆ.

Read More »

ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹೀಳಾ ಚಿಂತನೆ

ನಾಗೇಂದ್ರಪ್ಪ ಶಿವಶರಣಪ್ಪ

77 to 80

ಆಧುನಿಕ ಕಾವ್ಯಗಳನ್ನು ಅವಲೋಕಿಸಿದಾಗ ವಿಜಯಶ್ರೀ ಸಬರದರವರ ಕಾವ್ಯಗಳಲ್ಲಿ ಮಹಿಳಾ ಪರ ಚಿಂತನೆಗಳನ್ನು ಕಾಣುತ್ತೇವೆ. ಮಹಿಳೆಯನ್ನು ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಎರಡನೆಯ ದರ್ಜೆಯ ಪ್ರಜೆ ಎಂದು ಪರಿಗಣಿಸಿ ಆಕೆಯನ್ನು ವಿದ್ಯೆಯಿಂದ, ಅಸ್ತಿಯಿಂದ, ಸ್ವಾತಂತ್ರ್ಯದಿಂದ ದೂರವಿಡಲಾಗಿತ್ತು. ಆಕೆಗೆ ಸ್ವಾತಂತ್ರ್ಯವನ್ನು ಕೊಡಬಾರದು ಎಂದು ಈ ದೇಶದ ಧರ್ಮ ಗ್ರಂಥಗಳು ಹೇಳುತ್ತವೆ. ಆಕೆ ಮೈಲಿಗೆ, ಮಾಯೆ, ಚಂಚಲೆ, ಎಂದು ಕರೆಯುವುದರ ಮೂಲಕ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಮಹಿಳೆ ಜೀವನ ಪರ್ಯಂತ ಅಸ್ಪೃಶ್ಯಳಾಗಿ ಬದುಕುವಂತಹ ಅನಿವಾರ್ಯ ಪದ್ಧತಿ ಈ ದೇಶದ ಚರಿತ್ರೆಯಲ್ಲಿತ್ತು. ವೇದಗಳಲ್ಲಿ ಆಕೆಯನ್ನು ತುಂಬಾ ಹೀನಾಯವಾಗಿ ನೋಡುತ್ತಾರೆ. ಮಹಿಳೆಗೆ ಬುದ್ಧಿ ಕಡಿಮೆ ಇದೆ, ಅವಳ ಹೃದಯ ಕಿರುಬನಿಗಿಂತಲೂ ಕ್ರೂರವಾದುದು ಎಂದು ಹೇಳುತ್ತಾರೆ. ದೇಶದ ಪುರಾಣ, ಇತಿಹಾಸ, ಚರಿತ್ರೆ, ಯಜ್ಞಾವಲ್ಕ ಚಾಣುಕ್ಯ, ಮುಂತಾದವರು ಅವರ ಅಸ್ಥಿತ್ವವನ್ನು ನಿರಾಕರಿಸುತ್ತಲೇ ಬಂದಿದ್ದಾರೆ.

Read More »

ಚಿತ್ರದುರ್ಗ ಜಿಲ್ಲೆಯ ಛಲವಾದಿ ಸಮುದಾಯದ ಧಾರ್ಮಿಕ ಹಾಗೂ ಲೌಕಿಕ ಕಲೆಗಳ ಒಳನೋಟ

ಪ್ರಭುದೇವ ಸಿ., ಶಬೀನಾ

81 to 93

ಆಡು ಮುಟ್ಟದ ಸೊಪ್ಪಿಲ್ಲ ಕಲೆಗಳಿಲ್ಲದ ಸಮುದಾಯಗಳಿಲ್ಲ ಎಂಬಂತೆ ಕಲೆ ಎಂಬುದು ಯಾರ ಸ್ವತ್ತಲ್ಲ, ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತು ನಿಜ, ಅದರಂತೆ ಸಂಸ್ಕೃತಿಯ ಒಂದು ಭಾಗವಾಗಿರುವ ಕೆಲವು ಕಲೆಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಛಲವಾದಿ ಸಮುದಾಯದವರಿಗೆ ರಕ್ತದಿಂದಲೇ ಬಂದಿವೆ, ಈ ಸಮುದಾಯವು ಕಲಾ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸುತ್ತ ಕಲೆಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ. ಅವುಗಳೆಂದರೆ ಧಾರ್ಮಿಕ, ಲೌಕಿಕ, ಪ್ರದರ್ಶನತ್ಮಕ, ಜನಪದ ವೈದ್ಯ, ಸೋಭಾನೆ ಪದಗಳು ಮತ್ತು ಸಾಹಿತ್ಯಿಕ ಕಲೆಗಳು.

Read More »

ರಾಮನಗರ ತಾಲ್ಲೂಕಿನ ಜನಪದ ಗದ್ಯ ಸಾಹಿತ್ಯ: ಒಂದು ಅವಲೋಕನ

ತಿಮ್ಮೇಗೌಡ ಬಿ.ಪಿ.

94 to 107

ಪರಂಪರಾಗತವಾಗಿ ಬಾಯಿಂದ ಬಾಯಿಗೆ ಬಂದ ಶಾಬ್ದಿಕ ಅಭಿವ್ಯಕ್ತಿಯನ್ನು ಜನಪದ ಸಾಹಿತ್ಯ ಎಂದು ಕರೆಯಬಹುದು. ಜನಪದ ಸಾಹಿತ್ಯ ಎಂಬುದು ʼಜನಪದರು ದಿನನಿತ್ಯದ ಕಾಯಕದಿಂದ ವಾಸಿಸುವ ಪರಿಸರದಿಂದ ಬದುಕಿನ ಪಲ್ಲಟಗಳು, ಹತಾಶೆ, ನೋವು ಸಿಟ್ಟು ಸೆಡವುಗಳಿಂದ ರೂಪುಗೊಂಡಿರುವಂತದ್ದು. ಜನಪದ ಸಾಹಿತ್ಯ ಬೇರೆಯಲ್ಲ ಇವರ ಬದುಕು ಬೇರೆಯಲ್ಲʼ ಎಂಬುದು ಗಮನಾರ್ಹ ವಿಚಾರವಾಗಿದೆ. ಜನಪದರಲ್ಲಿ ಪದ್ಯಸಾಹಿತ್ಯದಷ್ಟೇ ಗದ್ಯಸಾಹಿತ್ಯವು ಕೂಡಾ ನಿತ್ಯದಲ್ಲಿ ಬಳಕೆಯಾಗುವಂತದ್ದು. ಜನಪದ ಸಾಹಿತ್ಯ ಪ್ರಕಾರದಲ್ಲಿ ಗದ್ಯಸಾಹಿತ್ಯವು ಹಲವು ಆಯಾಮಗಳನ್ನು ಒಳಗೊಂಡಿರುವಂತದ್ದು. ಇಂತಹ ಸಾಹಿತ್ಯದಲ್ಲಿ ಗಾದೆಗಳು ಒಗಟುಗಳು, ಒಡಪುಗಳು, ಕಥೆಗಳು ಇತ್ಯಾದಿಗಳನ್ನು ಕಾಣಬಹುದು.
ಪ್ರಸ್ತುತ ಲೇಖನದಲ್ಲಿ ರಾಮನಗರ ತಾಲ್ಲೂಕಿನಲ್ಲಿ ಪ್ರಚಲಿತದಲ್ಲಿರುವ ಜನಪದ ಗದ್ಯ ಸಾಹಿತ್ಯವನ್ನು ಸಂಕ್ಷಿಪ್ತವಾಗಿ ಅವಲೋಕಿಸಲಾಗಿದ್ದು, ತಾಲ್ಲೂಕಿನಲ್ಲಿ ಜನಪದ ಸಾಹಿತ್ಯದ ಹುಟ್ಟಿಗೆ ಹೊಲಗದ್ದೆಗಳಲ್ಲಿನ ದುಡಿಮೆ, ಹಬ್ಬಹರಿದಿನಗಳು, ಜಾತ್ರೆಯ ಆಚರಣೆಯ ಭಾಗವಾಗಿ, ಮಹದೇಶ್ವರ ಮತ್ತು ಮಂಟೇಸ್ವಾಮಿಯ ಆಚರಣೆಗಳು, ಜನಪದರ ಮನಸ್ಸಿನ ಹತಾಶೆ, ಸಿಟ್ಟು, ಸಂತೋಷಗಳು, ನಿತ್ಯ ಜೀವನದ ಜಂಜಾಟಗಳು, ಸಹಜೀವನ, ಗ್ರಾಮೀಣ ಜನಜೀವನ ಕಾರಣವಾಗಿವೆ ಎಂದು ಸರಳವಾಗಿ ಹೇಳಬಹುದು.

Read More »

Literature and Hindi Cinema

Adnan Mohammed Ahmed Khan

108 to 113

Hindi cinema has a history of more than 100 years old. Dadasaheb Phalke after understanding the audience’s interest, screened a speechless film named “Raja Harishchandra” on 3 May 1913 at the Coronation Cinema House in Bombay. This is how the foundation of Indian cinema was laid. This was the first film to be fully recognized as the first Indian feature film. On March 14, 1931, Ardeshar Irani made the first spoken film in Hindi titled ‘Alam Ara’ through engineering cinema. The first talkie film presented by Prabhat Film was ‘Ayodhya Ka Raja’ which was released simultaneously in Hindi and Marathi. In 1937, Irani made the first colour cinema in India called ‘Kisan Kanya’. ‘Sant Tukaram’ produced by V Shantaram, was the first Indian film in Marathi to be honored at the Venice International Film Festival.
After the Second World War and independence, many films were made on nationalism and national sentiments. Besides, Hindi cinema played an important role in maintaining national unity and communal harmony. The 1960s are called the golden period of Hindi cinema. In this decade, Hindi cinema took a mature and huge form. Social and family cinema was made in the seventies. This decade is considered the star era. Hindi cinema of the eighties turned towards nudism due to Western influence. Action, masala, violence etc. dominated the films of the nineties. The Awakening in the twenty-first century brought about a complete change in Hindi cinema. Now Hindi cinema has taken a completely commercial form. The more knowledge science develops, the more the form of Hindi cinema will change, but Hindi cinema will continue to move forward keeping in mind Indian literature, society and culture.
Literature and cinema have an unbreakable relationship. Literature presents an ideal of cinema. While making cinema based on literary genres along with the content of novels, stories, drama, essays and poetry, art forms like language, figures of speech, images symbols etc. are also presented very effectively.

Read More »

ಕರಾವಳಿ ಜಾನಪದಕ್ಕೆ ಪುರುಷೊತ್ತಮ ಬಿಳಿಮಲೆಯವರ ಕೊಡುಗೆ

ಅಮರನಾಥ್‌ ಎನ್‌.

114 to 120

ಪುರುಷೋತ್ತಮ ಬಿಳಿಮಲೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಚಿಂತನಶೀಲ ಬರಹಗಾರರಲ್ಲೊಬ್ಬರು. ತಮ್ಮ ಜನಪದ ಸಂಶೋಧನೆ, ವಿಮರ್ಶೆ ಹಾಗೂ ಅಂಕಣ ಬರಹಗಳಲ್ಲಿ ಸಮಾಜದ ಸಂಸ್ಕೃತಿಯನ್ನು ಮತ್ತು ವರ್ತಮಾನದ ನೈಜತೆಯನ್ನು ಹಿಡಿದಿಟ್ಟಿದ್ದಾರೆ. ಇದು ಅವರ ಬರಹದಲ್ಲಿ ಪ್ರತಿ ಹಂತದಲ್ಲೂ ಸ್ಪಷ್ಟವಾಗಿ ತೋರುತ್ತದೆ.
ಬಿಳಿಮಲೆ ಅವರ ಸಂಶೋಧನಾ ಬರಹದಲ್ಲಿ ಕರಾವಳಿ ಮತ್ತು ಸುಳ್ಯ ಪರಿಸರ ಸಮಾಜದ ಬದುಕಿನ ಜನಪದ ಚಿತ್ರಣವನ್ನು ಜನಪದ ಹಿನ್ನೆಲೆಯಲ್ಲಿ ಗುರುತಿಸುವ ಮೂಲಕ ಹೊಸ ಚರ್ಚೆಗೆ ಅನುವು ಮಾಡಿಕೊಡುತ್ತಾರೆ. ಈ ಅಂಶವನ್ನು ಗಮನಿಸುವುದರ ಮೂಲಕ ಲೇಖಕರು ಮಾಡಿದ ಕರಾವಳಿ ಸಂಶೋಧನೆಯನ್ನು ಇಲ್ಲಿ ಚರ್ಚಿಸಿಲಾಗಿದೆ.

Read More »

ಕನ್ನಡ ಲಲಿತ ಪ್ರಬಂಧಗಳಲ್ಲಿ ಮಾನವೀಯ ಮೌಲ್ಯಗಳು

ನಿಕಿತಾ ರಮೇಶ ಚನ್ನಾಳೆ, ಮಹೇಶ ಚಿಂತಾಮಣಿ

121 to 127

ಕನ್ನಡ ಸಾಹಿತ್ಯದ ಅನೇಕ ಬರಹಗಳು ಸಮಾನತೆ, ಸ್ತ್ರೀವಾದ, ವಾಸ್ತವತೆ, ಸಮಾಜಿಕ ದೃಷ್ಟಿಕೋನ, ಕಲ್ಪನೆ ಹೀಗೆ ಅನೇಕ ವಿಷಯಗಳ ಬಗೆಗೆ ಬೆಳಕು ಚಲ್ಲಿವೆ. ಅದೇ ರೀತಿಯಲ್ಲಿ ಲಲಿತ ಪ್ರಬಂಧಗಳು ಕೂಡ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿವೆ. ಲಲಿತ ಪ್ರಬಂಧಗಳು ಕೂಡ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿವೆ. ಮೌಲ್ಯಗಳಿಲ್ಲದೆ ಇದ್ದರೆ ಅದು ಸಾಹಿತ್ಯವಲ್ಲ. ಹಾಗಾಗಿ ಯಾವುದೇ ಸಾಹಿತ್ಯ ಮಾನವೀಯ ಮೌಲ್ಯಗಳು ಪ್ರಮುಖವಾಗಿ ಒಳಗೊಂಡಿರಲೇಬೇಕು. ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಎ.ಎನ್. ಮೂರ್ತಿರಾವ್ ಅವರ ಪ್ರಬಂಧಗಳು ಮತ್ತು ಭುವನೇಶ್ವರಿ ಹೆಗಡೆಯವರ ಲಲಿತ ಪ್ರಬಂಧಗಳು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿವೆ. ಧಾರ್ಮಿಕ, ಸಮಾಜಿಕ, ಮಾನವೀಯ ಮೌಲ್ಯಗಳು ಬದುಕಿನ ಮೆಟ್ಟಿಲೇರಲು ಮೌಲ್ಯಗಳು ಪ್ರಮುಖವಾಗಿವೆ. ಮೌಲ್ಯಗಳು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಅತ್ಯಗತ್ಯ. 

Read More »

ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಬೆಳವಣಿಗೆ

ಸೋಮಶೇಖರ್ ಎಲ್. ಆರ್.

128 to 131

ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಕೂಡಗೆ ಅಪಾರವಾದದ್ದು ಜನಪದ ಸಾಹಿತ್ಯದ ಕಾಲದಿಂದಲ್ಲೂ ಮಹಿಳೆಯರು ತಮ್ಮ ಅನುಭವಗಳನ್ನು ತಮ್ಮ ಆತಂಕವನನ್ನು, ತಮ್ಮ ನೋವು ನಲಿವುಗಳನ್ನು ಮೌಖಿಕವಾಗಿ ವ್ಯಕ್ತಪಪಡಿಸುತ್ತಾ ಬಂದಿದ್ದಾರೆ . ಪ್ರಾಚೀನ ಕಾಲದಿಂದಲ್ಲೂ ಮಹಿಳೆಯರು ತಮ್ಮ ಮನನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿ ಪಡಿಸಲು ಆಯ್ಕೆಮಾಡಿಕೊಂಡ ಮಾರ್ಗವೆ ಬರವಣಿಗೆ, ಈ ಬರವಣಿಗೆಯ ಮೂಲಕ ಮಹಿಳಾಲೋಕದ ಬದುಕಿನ ಚಿತ್ರಣವನ್ನು ಜನರ ಮುಂದಿಡಲು ಬರೆಯಲು ಪ್ರಾರಂಬಿಸುತ್ತಾರೆ ಸಾಹಿತ್ಯದಲ್ಲಿ ಹೆಣ್ಣು ಹೇಗೆ ಬರವಣಿಗೆಯನ್ನು ಪ್ರಾರಂಬಿಸಿ ಮುನ್ನೆಲೆಗೆ ಬಂದಿದ್ದಾರೆ ಅವರ ಪ್ರತಿಭಾಶಕ್ತಿ ಅವರ ಕ್ರೀಯಾಶೀಲತೆ ಬರವಣಿಗೆಯಲ್ಲಿ ವ್ಯಕ್ತವಾಗಿರುವುದನ್ನು ಈ ಲೇಖನದಲ್ಲಿ ಕಾಣಬಹುದಾಗಿದೆ. 

Read More »

ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆ ಬದಲಾಗಬೇಕೆ?

ವೆಂಕೋಬರಾವ್ ಎಂ. ಹೊಸಕೋಟೆ

132 to 137

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕರ್ನಾಟಕ, ಕನ್ನಡ, ಕನ್ನಡಿಗ ಇನ್ನಿತರ ನೆಲೆಗಳಲ್ಲಿ ಪ್ರೇರಕಶಕ್ತಿಯಾಗಿ ದುಡಿಯುತ್ತಿದೆ. ನಾಡು ನುಡಿ ಚಿಂತನೆಗಳೊಂದಿಗೆ ಕನ್ನಡಿಗರನ್ನು ಒಂದು ಗೂಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ, ಸಾರ್ಥಕವಾದ ತನ್ನ ಅಸ್ತಿತ್ವವನ್ನು ಮೆರೆಸುತ್ತಾ ಬಂದಿದೆ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯನವರ ಶ್ರಮದ ಫಲವಾಗಿ ಪರಿಷತ್ತು ಸ್ಥಾಪನೆಗೊಂಡಿತು. ಅನಂತರದಲ್ಲಿ ಮಿರ್ಜಾ ಇಸ್ಮಾಯಿಲ್ ಅವರ ನೆರವಿನಿಂದ ಪುಷ್ಠಿ ಪಡೆಯಿತು. ಸಮ್ಮೇಳನಗಳನ್ನು ನಡೆಸಲು ಮೈಸೂರು ಸಂಸ್ಥಾನವು ಅನುದಾನ ರೂಪದಲ್ಲಿ ಹಣವನ್ನು ಕೊಡುತ್ತಿತ್ತು. ತದನಂತರ ಕರ್ನಾಟಕ ಸರ್ಕಾರವು ಅನುದಾನ ನೀಡುತ್ತಾ ಬರುತ್ತಿದೆ. ಸರ್ಕಾರ, ಸರ್ಕಾರೇತರ ಕನ್ನಡ ಸಂಘ ಸಂಸ್ಥೆಗಳು, ಕನ್ನಡ ಒಳಿತು ಉಳಿಯುವಿಕೆಗಾಗಿ, ಪರಿಷತ್ತಿನ ನೆರವಿಗೆ ಬಂದು ಸಮ್ಮೇಳನಗಳನ್ನು ನಡೆಸಲು ಅನುವು ಮಾಡಿಕೊಡಬೇಕಾಗಿದೆ. ಪರಿಷತ್ತು ಪ್ರಾರಂಭದ ದಿನಗಳಲ್ಲಿ ಒಂದು ಪ್ರಧಾನ ಸಮ್ಮೇಳನವನ್ನು ನಡೆಸುತ್ತಿತ್ತು ಕ್ರಮೇಣ ವಿಚಾರಗೋಷ್ಠಿಗಳು, ಉತ್ಸವಗಳು, ಆರಾಧನೆ, ಮರ್ಯಾದೆ, ಮುಖ್ಯವಾದ ವಾದಗಳು, ತತ್ವಗಳು ಮತ್ತು ಪ್ರಯೋಗಗಳನ್ನು ಆಯಾಕಾಲಮಾನದ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ನಾಡಿನ ಬದಲಾವಣೆಗಳಿಗೆ ಅನುಗುಣವಾಗಿ ನಡೆಸುತ್ತ ಬಂದಿದೆ. ಸಮ್ಮೇಳನಗಳಲ್ಲಿ ಪರಿಷತ್ತು ಮತ್ತು ಸರ್ಕಾರಗಳು ಕರ್ನಾಟಕ, ಕನ್ನಡಿಗ ಮತ್ತು ಕನ್ನಡ, ಶಿಕ್ಷಣ ಹಾಗೂ ಬದುಕಿನ ಇನ್ನಿತರ ಕ್ಷೇತ್ರಗಳಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಆಧುನೀಕತೆಯಲ್ಲಿಂದು ಸಾಹಿತ್ಯ ಸಮ್ಮೇಳನಗಳ ಪರಿಕಲ್ಪನೆಯು ಬದಲಾಗಬೇಕಾದ ಅನಿವಾರ್ಯತೆ ಇದೆ. 

Read More »