ರಾಮಸತ್ವದ ಶೋಧವಾಗಿ ಡಿ.ವಿ.ಜಿ.ರವರ ‘ಶ್ರೀರಾಮ ಪರೀಕ್ಷಣಂ’
Main Article Content
Abstract
ಕನ್ನಡ ಕಾವ್ಯಪರಂಪರೆಯ ಬಹುಮುಖ್ಯ ಗುಣವಾದ ‘ಪ್ರಶ್ನಿಸುವ’ ಎದೆಗಾರಿಕೆಯನ್ನು ಡಿ.ವಿ.ಜಿ. ಅವರ ‘ಶ್ರೀರಾಮ ಪರೀಕ್ಷಣಂ’ ಕಾವ್ಯವು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡಿದೆ. ವಾಲ್ಮೀಕಿ ಹಾಗೂ ಕುವೆಂಪು ಅವರ ಕೃತಿಗಳ ಹಿನ್ನೆಲೆಯಲ್ಲಿ ಇದನ್ನು ಅವಲೋಕಿಸುತ್ತಾ, ರಾಮನ ಧರ್ಮರಕ್ಷಣೆಯ ಭರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಘಾಸಿಗೊಂಡ ಸ್ತ್ರೀಪಾತ್ರಗಳ ಆಂತರಿಕ ತಲ್ಲಣಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಅಹಲ್ಯೆ, ತಾರೆ, ಮಂಡೋದರಿ ಮತ್ತು ಸೀತೆಯರು ರಾಮನ ಆದರ್ಶ, ನ್ಯಾಯನಿರ್ಣಯ ಹಾಗೂ ಮೌಲ್ಯಗಳನ್ನು ಎದುರುಗೊಳ್ಳುವ ಬಗೆ ಅನನ್ಯವಾಗಿದೆ. ಪ್ರಕೃತಿ-ಸಂಸ್ಕೃತಿಯ ನಡುವಣ ಸಂಘರ್ಷ, ದಾಂಪತ್ಯದ ನೈತಿಕತೆ, ಹಾಗೂ ತಪ್ಪು-ಶಿಕ್ಷೆಗಳ ತಾರತಮ್ಯದ ಕುರಿತು ಈ ಮಹಿಳೆಯರು ಎತ್ತುವ ಪ್ರಶ್ನೆಗಳು ರಾಮನ ಉತ್ತರಗಳಿಗಿಂತಲೂ ಹೆಚ್ಚು ಪ್ರಖರವಾಗಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಲ್ಲಿ ಸತ್ಯವನ್ನು ಶೋಧಿಸಲು, ಮೌಲ್ಯಗಳನ್ನು ಮರುಪರಿಶೀಲಿಸಲು ಮೌನಕ್ಕಿಂತ ದಿಟ್ಟ ಪ್ರಶ್ನೆಗಳೇ ಹೆಚ್ಚು ಸೂಕ್ತ ಮಾರ್ಗ ಎಂಬುದನ್ನು ಈ ವಿಶ್ಲೇಷಣೆ ಸ್ಪಷ್ಟಪಡಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾಯಕ ಹಾ.ಮಾ. (ಸಂಪಾದಕರು), (2013), ಡಿ.ವಿ.ಜಿ. ಕೃತಿಶ್ರೇಣಿ - ಸಂಪುಟ 10, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ಕುವೆಂಪು, (1971), ಶ್ರೀರಾಮಾಯಣ ದರ್ಶನಂ, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ.