ನಂದನ್‌ಕುಪ್ಪಳಿಯವರ ಭಾವರೇಖೆ: ಸ್ವಚ್ಛಂದ ಪ್ರೀತಿಗಾಗಿ ತುಡಿವ ಪರಿಶುದ್ಧ ಹೃದಯದ ಪಿಸುಮಾತು

Main Article Content

ಡಾ. ಶಿವಲಿಂಗೇಗೌಡ ಡಿ.

Abstract

ನಂದನ್ ಕುಪ್ಪಳಿಯವರ ‘ಭಾವರೇಖೆ’ ಕವನ ಸಂಕಲನವು ಪ್ರೀತಿ, ಪ್ರೇಮ ಮತ್ತು ವಿರಹಗಳ ಧ್ಯಾನದಲ್ಲಿ ಅರಳಿದ ಆಳವಾದ ಅರ್ಥವುಳ್ಳ ಹನಿಕವಿತೆಗಳ ಗುಚ್ಛವಾಗಿದೆ. ಕವಿಯ ಪ್ರೇಮವು ಕೇವಲ ಸ್ತ್ರೀ-ಪುರುಷರ ನಡುವಿನ ವ್ಯಕ್ತಿಗತ ನೆಲೆಯಲ್ಲಿ ನಿಲ್ಲದೆ, ತಾಯಿಪ್ರೀತಿ, ನಿಸರ್ಗಪ್ರೀತಿ ಹಾಗೂ ಬುದ್ಧನ ಜೀವಕಾರುಣ್ಯದಂತಹ ವಿಶ್ವಪ್ರೀತಿಯಾಗಿ ವಿಸ್ತಾರಗೊಳ್ಳುತ್ತದೆ. ಕವಿತೆಗಳಲ್ಲಿ ಪ್ರೀತಿಯನ್ನು ‘ಬೆಳಕು’ ಎಂಬ ಪರಿಣಾಮಕಾರಿ ಪ್ರತಿಮೆಯ ಮೂಲಕ ನಿರೂಪಿಸಲಾಗಿದ್ದು, ಅದು ಮನಸ್ಸಿನ ಕತ್ತಲನ್ನು ದೂರಮಾಡಿ, ಜಗತ್ತನ್ನು ಬೆಳಗುವ ಶಕ್ತಿಯಾಗಿ ಚಿತ್ರಿತವಾಗಿದೆ. ದ್ವೇಷ, ನೋವು, ವಿರಹ, ಹತಾಶೆಗಳನ್ನೂ ಪ್ರೀತಿಯಿಂದಲೇ ಸ್ವೀಕರಿಸುವ ಪರಿಶುದ್ಧ ಹೃದಯದ ಪಿಸುಮಾತುಗಳು ಇಲ್ಲಿವೆ. ಸರಳ ರಚನೆಯ ಈ ಹನಿಕವಿತೆಗಳು, ಮನುಷ್ಯನು ನಿಸರ್ಗದ ನಿರಂತರ ಚಲನೆಯ ಭಾಗವಾಗಿ ವಿಶ್ವಪ್ರೇಮವನ್ನು ಮೈಗೂಡಿಸಿಕೊಂಡು ಬದುಕುವ ಸಾರ್ಥಕತೆಯನ್ನು ಅತ್ಯಂತ ಮಾರ್ಮಿಕವಾಗಿ ಅಭಿವ್ಯಕ್ತಿಸುತ್ತವೆ.

Article Details

Section

Research Articles

Author Biography

ಡಾ. ಶಿವಲಿಂಗೇಗೌಡ ಡಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ, ಬೆಂಗಳೂರು ದಕ್ಷಿಣ.

How to Cite

ಶಿವಲಿಂಗೇಗೌಡ ಡಿ. (2026). ನಂದನ್‌ಕುಪ್ಪಳಿಯವರ ಭಾವರೇಖೆ: ಸ್ವಚ್ಛಂದ ಪ್ರೀತಿಗಾಗಿ ತುಡಿವ ಪರಿಶುದ್ಧ ಹೃದಯದ ಪಿಸುಮಾತು. ಅಕ್ಷರಸೂರ್ಯ (AKSHARASURYA), 15(06), 100 to 104. https://aksharasurya.com/index.php/latest/article/view/2112

References

ನಂದನ್ ಕುಪ್ಪಳಿ, (2024), ಭಾವರೇಖೆ, ಶಿಕಾರಿಪುರ: ಸುವ್ವಿ ಪಬ್ಲಿಕೇಷನ್ಸ್.

ನಂದನ್ ಕುಪ್ಪಳಿ, (2025), ನೀಲಿಹೂವಿನ ನೆನಪುಗಳು, ಶಿಕಾರಿಪುರ: ಸುವ್ವಿ ಪಬ್ಲಿಕೇಷನ್ಸ್.

ಲಂಕೇಶ್ ಪಿ., (2010), ನೀಲುಕಾವ್ಯ ಸಂಗ್ರಹ – 1, 2, 3, ಬೆಂಗಳೂರು: ಲಂಕೇಶ್ ಪ್ರಕಾಶನ.

Most read articles by the same author(s)