ಆಡಳಿತದಲ್ಲಿ ಕನ್ನಡ ಬಳಕೆ: ಚಾರಿತ್ರಿಕ ಸಮೀಕ್ಷೆ
Main Article Content
Abstract
ಕನ್ನಡ ಭಾಷೆಯು ಹಲ್ಮಿಡಿ ಶಾಸನದಿಂದ ಹಿಡಿದು ಪ್ರಸ್ತುತ ಜಾಗತೀಕರಣದವರೆಗೂ ಆಡಳಿತ ಭಾಷೆಯಾಗಿ ಬೆಳೆದುಬಂದ ಹಾದಿಯನ್ನು ಹಾಗೂ ಅದು ಎದುರಿಸಿದ ತಲ್ಲಣಗಳನ್ನು ಐತಿಹಾಸಿಕ ನೆಲೆಗಟ್ಟಿನಲ್ಲಿ ಇಲ್ಲಿ ವಿಶ್ಲೇಷಿಸಲಾಗಿದೆ. ಕದಂಬರು, ರಾಷ್ಟ್ರಕೂಟರು ಮತ್ತು ವಿಜಯನಗರದ ಅರಸರ ಕಾಲದಲ್ಲಿ ಸಾರ್ವಭೌಮ ಭಾಷೆಯಾಗಿದ್ದ ಕನ್ನಡ, ತರುವಾಯ ಮರಾಠಿ, ಉರ್ದು ಹಾಗೂ ಬ್ರಿಟಿಷ್ ಆಡಳಿತದಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡ ಬಗೆಯನ್ನು ದಾಖಲಿಸಲಾಗಿದೆ. ಬ್ರಿಟಿಷ್ ಅಧಿಕಾರಿಗಳು ಕನ್ನಡದಲ್ಲಿಯೇ ಆಡಳಿತ, ಕಾನೂನು ಮತ್ತು ಶಿಕ್ಷಣಕ್ಕೆ ನೀಡಿದ ಒತ್ತು ಗಮನಾರ್ಹವಾಗಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಜನಸಾಮಾನ್ಯರ ಭಾಷೆಯೇ ಆಡಳಿತ ಭಾಷೆಯಾಗಬೇಕೆಂಬ ಗಾಂಧೀಜಿ ಹಾಗೂ ರೂಸೋ ಅವರ ಆಶಯಗಳನ್ನು ಉಲ್ಲೇಖಿಸುತ್ತಾ, ಪ್ರಸ್ತುತ ಆಡಳಿತ, ನ್ಯಾಯದಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಾಗುತ್ತಿರುವ ಇಂಗ್ಲಿಷ್ ವ್ಯಾಮೋಹವು ಕನ್ನಡಿಗರ ಅಸ್ಮಿತೆಗೆ ಒಡ್ಡುತ್ತಿರುವ ಅಪಾಯಗಳ ಕುರಿತು ಗಂಭೀರವಾದ ಕಾಳಜಿಯನ್ನು ಅಭಿವ್ಯಕ್ತಪಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮಹದೇವ ಬಣಕಾರ, (1986), ಆಂಗ್ಲರ ಆಡಳಿತದಲ್ಲಿ ಕನ್ನಡ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.
ಎಂ. ಚಿದಾನಂದ ಮೂರ್ತಿ, (2010), ಹೊಸತು ಹೊಸತು, ಬೆಂಗಳೂರು: ಸಪ್ನ ಬುಕ್ ಹೌಸ್.
ಶ್ರೀನಿವಾಸ ಹಾವನೂರ, (2000), ಹೊಸಗನ್ನಡದ ಅರುಣೋದಯ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಶಿವರಾಮ ಪಡಿಕಲ್, (2001), ನಾಡು - ನುಡಿಯ ರೂಪಕ, ಮಂಗಳೂರು: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾಲಯ.
ಬರಗೂರು ರಾಮಚಂದ್ರಪ್ಪ, (2007), ಕನ್ನಡ ಪ್ರಜ್ಞೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.