ಬುದ್ಧಚಿಂತನೆ: ಅಹಿಂಸೆ

Main Article Content

ಅರುಣ್ ಕುಮಾರ್ ಎ.ವೈ.
ಶಿವಕುಮಾರ ಡಿ.ಸಿ.

Abstract

ಜಗತ್ತಿನ ಮಾನವತಾ ಸಾಕಾರಮೂರ್ತಿಗಳಲ್ಲಿ ಬುದ್ಧನು ಮುಖ್ಯನಾದವನು. ಆತನ ವಿಚಾರಧಾರೆಗಳನ್ನು ಚರ್ಚಿಸುವಾಗ ಮಾನವೀಯ ಮೌಲ್ಯಗಳನ್ನು ಬಿತ್ತರಿಸುವಲ್ಲಿ ಮುಖ್ಯವಾದದ್ದಾಗಿದೆ. ಈ ಹಿನ್ನೆಲೆಯಲ್ಲಿ ಬುದ್ಧನ ವಿಚಾರಧಾರೆಗಳು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ವ್ಯಾಪಿಸಿರುವುದು ಕಾಣಬಹುದಾಗಿದೆ. ಹೀಗಾಗಿ ಭೇದಭಾವ, ಅಸಮಾನತೆ, ಅನ್ಯಾಯ, ಹಿಂಸಾಚಾರ ಇವುಗಳಿಗೆ ವಿರುದ್ಧವಾಗಿ ಬುದ್ಧನ ವಿಚಾರಧಾರೆಗಳು ಮಾನವೀಯ ಅಂಶಗಳನ್ನು ಪ್ರಧಾನವಾಗಿರಿಸಿದೆ. ಸಮಾನತೆ, ಭ್ರಾತೃತ್ವ, ಸೌಹಾರ್ದತೆ, ಸ್ವಾತಂತ್ರ್ಯ ಈ ಅಂಶಗಳನ್ನು ಬುದ್ಧನ ನಿಲುವುಗಳು ಮಾನವ ಸಮಾಜಕ್ಕೆ ನೀಡಿದೆ ಎಂಬುದನ್ನು ಇಲ್ಲಿ ಅರ್ಥೈಸಬಹುದಾಗಿದೆ. ಶತಶತಮಾನಗಳಿಂದಲೂ ಉಳ್ಳವರು ಮತ್ತು ಇಲ್ಲದವರ ನಡುವಿನ ವ್ಯತ್ಯಾಸವನ್ನು ಕಾಣುವಾಗ ಇಲ್ಲದವರ ಮೇಲೆ ನಡೆದ ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ಬುದ್ಧನ ವಿಚಾರಧಾರೆಗಳು ಆರೋಗ್ಯಕರವಾಗಿಯೇ ಸವಾಲೆಸೆಗಿದೆ.
ಪ್ರಸ್ತುತ ಈ ಲೇಖನವು ಗೌತಮ ಬುದ್ಧನು ಜಗತ್ತಿಗೆ ತೋರ್ಪಡಿಸಿದ ಅಹಿಂಸಾ ಚಿಂತನೆಯನ್ನು ಇಲ್ಲಿ ಮುಖ್ಯವಾಗಿರಿಸಿಕೊಂಡು ಚರ್ಚಿಸಲಾಗಿದ್ದು, ಹಿಂಸೆ ಮತ್ತು ಅಹಿಂಸಾ ಪ್ರವೃತ್ತಿಗಳನ್ನು ತಿಳಿಯಪಡಿಸುವ ಮೂಲಕ ಸಕಲ ಜೀವರಾಶಿಗಳಲ್ಲೂ ಅಹಿಂಸೆಯೇ ಪ್ರಧಾನವಾಗಿರುವುದನ್ನು ಇಲ್ಲಿ ತಿಳಿಯಬಹುದಾಗಿದೆ. ಹೀಗಾಗಿ ಬುದ್ಧನ ಚಿಂತನೆಗಳಲ್ಲೊಂದಾದ ಅಹಿಂಸೆ’ಯನ್ನು ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ಬುದ್ಧನ ಅಹಿಂಸೆಯಾವುದೆಂದು ಅರಿಯುವುದು ಇಲ್ಲಿನ ಲೇಖನದಲ್ಲಿ ಕಾಣಬಹುದಾಗಿದೆ.ಬುದ್ಧಚಿಂತನೆ’ ಎನ್ನುವುದು ಒಂದು ಅರಿವು, ಎಚ್ಚರ ಹಾಗೂ ಮಾನವೀಯ ಪರವಾದದ್ದು ಎಂಬುದನ್ನು ಇಲ್ಲಿ ತಿಳಿಯಬಹುದು.

Article Details

Section

Research Articles

Author Biographies

ಅರುಣ್ ಕುಮಾರ್ ಎ.ವೈ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಪಿ.ಎನ್.ಸಿ. ಕಾಗ್ನೀಷಿಯೋ ಪದವಿ ಕಾಲೇಜು, ಬೆಂಗಳೂರು.

ಶಿವಕುಮಾರ ಡಿ.ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಜೈನ್ ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಅರುಣ್ ಕುಮಾರ್ ಎ.ವೈ., & ಶಿವಕುಮಾರ ಡಿ.ಸಿ. (2025). ಬುದ್ಧಚಿಂತನೆ: ಅಹಿಂಸೆ. ಅಕ್ಷರಸೂರ್ಯ (AKSHARASURYA), 7(03), 13 to 22. https://aksharasurya.com/index.php/latest/article/view/1186

References

ಚಂದ್ರಯ್ಯ ಬಿ.ನಂ., (2013), ಬುದ್ಧ ಧಮ್ಮ ಸಾಹಿತ್ಯ, ರಚನ ಪ್ರಕಾಶನ, ಬೆಂಗಳೂರು.

ಸಂಗನಾಳಮಠ ಯು.ಎನ್., (2018), ಬುದ್ಧ ಬೆಳಕು, ಶಕ್ತಿ ಪ್ರಕಾಶನ, ಬೆಂಗಳೂರು.

ಮುನಿವೆಂಕಟಪ್ಪ ವಿ., (2014), ಮಹಾಮಾನವ ಬುದ್ಧ, ಉದಯರವಿ ಆಫ್ ಸೆಟ್ ಪ್ರಿಂಟರ್ಸ್, ಮೈಸೂರು.

ಶಿವಣ್ಣ ತಿಮ್ಲಾಪುರ, (2022), ಅಹಿಂಸಾ ಮಾರ್ಗ, ಸ್ಟೂಡೆಂಟ್ ಬುಕ್ ಕಂಪನಿ, ಬೆಂಗಳೂರು.

ಜಗದೀಶಕೊಪ್ಪ ಎನ್., (2022), ಬುದ್ಧ ಮತ್ತು ಆತನ ಧಮ್ಮ, ಪಾಲಿ ಇನ್‌ಸ್ಟಿಟ್ಯೂಟ್, ಬೆಂಗಳೂರು.

ಅನುಪಮ ಎಚ್.ಎಸ್., (2020), ಬುದ್ಧಚರಿತೆ (ಕಥನ ಕಾವ್ಯ), ಲಡಾಯಿ ಪ್ರಕಾಶನ, ಗದಗ.

ಬಸವರಾಜು ಎಲ್. (ಸಂ), (2013), ಬಸವಣ್ಣನವರ ವಚನಗಳು, ಸ್ಟೂಡೆಂಟ್ ಬುಕ್ ಕಂಪನಿ, ಮೈಸೂರು.

Most read articles by the same author(s)