ವಸುಮತಿ ಉಡುಪ ಮತ್ತು ಸುನಂದಾ ಪ್ರಕಾಶ ಕಡಮೆ ಅವರ ಕಥೆಗಳಲ್ಲಿ ದಾಂಪತ್ಯ ಜೀವನದ ವೈವಿಧ್ಯಮಯ ಪರಿಕಲ್ಪನೆಗಳು

Main Article Content

ಶ್ವೇತಾ ಎಂ.
ಶಿವಕುಮಾರ ಡಿ.ಸಿ.

Abstract

ಈ ಲೇಖನವು ವಸುಮತಿ ಉಡುಪ ಮತ್ತು ಸುನಂದಾ ಪ್ರಕಾಶ ಕಡಮೆ ಅವರ ಕಥೆಗಳಲ್ಲಿ ಚಿತ್ರಿಸಿರುವ ದಾಂಪತ್ಯ ಜೀವನದ ವೈವಿಧ್ಯಮಯ ಪರಿಕಲ್ಪನೆಗಳನ್ನು ವಿಶ್ಲೇಷಿಸುತ್ತದೆ. ಮಾನವ ಸಂಬಂಧಗಳ ಸೂಕ್ಷ್ಮತೆಗಳನ್ನು ಅನಾವರಣಗೊಳಿಸುವಲ್ಲಿ ಈ ಇಬ್ಬರು ಲೇಖಕಿಯರ ನಿರೂಪಣೆಗಳು ಪ್ರೀತಿ, ಒಡನಾಟ, ಸಂಘರ್ಷ, ತ್ಯಾಗ ಮತ್ತು ಸಬಲೀಕರಣದ ಅನೇಕ ಆಯಾಮಗಳನ್ನು ಓದುಗರಿಗೆ ತಲುಪಿಸುತ್ತವೆ. ಕಥೆಗಳ ಮೂಲಕ ದಾಂಪತ್ಯ ಸಂಬಂಧಗಳಲ್ಲಿ ಲಿಂಗ ಪಾತ್ರಗಳು, ಕುಟುಂಬದ ನಿರೀಕ್ಷೆಗಳು, ಸಾಮಾಜಿಕ ಒತ್ತಡಗಳು ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಈ ಲೇಖನ ಪರಿಶೀಲಿಸುತ್ತದೆ.
ಈ ಲೇಖನವು ದಾಂಪತ್ಯ ಜೀವನವನ್ನು ಕೇವಲ ವೈಯಕ್ತಿಕ ಅನುಭವವಲ್ಲ, ಸಮಾಜದ ಮೌಲ್ಯಗಳು ಮತ್ತು ರೂಢಿಗಳು ನಿರಂತರವಾಗಿ ರೂಪಿಸುವ ಚಾರಿತ್ರಿಕ ಸಾಂಸ್ಕೃತಿಕ ಪ್ರಕ್ರಿಯೆಯಾಗಿ ಪರಿಗಣಿಸುತ್ತದೆ. ಹೀಗಾಗಿ, ವಸುಮತಿ ಉಡುಪ ಮತ್ತು ಸುನಂದಾ ಪ್ರಕಾಶ ಕಡಮೆ ಅವರ ಕಥೆಗಳು ಸಮಕಾಲೀನ ಸಮಾಜದಲ್ಲಿ ದಾಂಪತ್ಯ ಜೀವನದ ವಿಕಸನಶೀಲ ಸ್ವರೂಪವನ್ನು ಬೆಳಕಿಗೆ ತರುವ ಪ್ರಮುಖ ಸಾಹಿತ್ಯಿಕ ಆಕರಗಳಾಗಿವೆ.

Article Details

Section

Research Articles

Author Biographies

ಶ್ವೇತಾ ಎಂ.

ಸಂಶೋಧನಾರ್ಥಿ, ಕನ್ನಡ ವಿಭಾಗ, ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಂಗಳೂರು.

ಶಿವಕುಮಾರ ಡಿ.ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಶ್ವೇತಾ ಎಂ., & ಶಿವಕುಮಾರ ಡಿ.ಸಿ. (2025). ವಸುಮತಿ ಉಡುಪ ಮತ್ತು ಸುನಂದಾ ಪ್ರಕಾಶ ಕಡಮೆ ಅವರ ಕಥೆಗಳಲ್ಲಿ ದಾಂಪತ್ಯ ಜೀವನದ ವೈವಿಧ್ಯಮಯ ಪರಿಕಲ್ಪನೆಗಳು. ಅಕ್ಷರಸೂರ್ಯ (AKSHARASURYA), 7(06), 95 to 107. https://aksharasurya.com/index.php/latest/article/view/1342

References

ಸುಜ್ಞಾನಮೂರ್ತಿ ಬಿ., (2018), ಕುಟುಂಬ ವ್ಯವಸ್ಥೆ: ಮಾರ್ಕ್ಸ್‌ವಾದ ಸ್ತ್ರೀವಾದ, ಗದಗ: ಲಡಾಯಿ ಪ್ರಕಾಶನ.

ಗೀತಾ ಪ್ರಸಾದ್, (2019), ಸ್ತ್ರೀ ಕಥನ ರೂಪಸ್ವರೂಪ, ಬೆಂಗಳೂರು: ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್.

ಚಂದ್ರಶೇಖರ್ ಟಿ.ಆರ್., (2016), ಮಹಿಳಾ ಅಧ್ಯಯನ ಪರಿಭಾಷೆ, ಬೆಂಗಳೂರು: ಕುವೆಂಪು ಭಾಷಾಭಾರತಿ ಪ್ರಾಧಿಕಾರ.

ಸುನಂದಾ ಕಡಮೆ, (2016), ತುದಿ ಮಡಚಿಟ್ಟ ಪುಟ, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.

ಸುನಂದಾ ಕಡಮೆ, (2019), ಗಾಂಧಿ ಚಿತ್ರದ ನೋಟು, ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.

ಸುನಂದಾ ಕಡಮೆ, (2014), ದಾಂಪತ್ಯ ನಿಷ್ಠೆ, ಬೆಂಗಳೂರು: ಸೃಷ್ಟಿ ಪಬ್ಲಿಕೇಷನ್ಸ್.

ವಸುಮತಿ ಉಡುಪ, (2023), ನಿಲುಕಲೊಲ್ಲದ ಬದುಕು ಕಥೆಗಳು, ಬೆಂಗಳೂರು: ಅಂಕಿತ ಪುಸ್ತಕ.

Most read articles by the same author(s)