ಮಹಿಳಾ ಕಥಾ ಬರಹದಲ್ಲಿ ಆಧುನಿಕತೆ ಹಾಗೂ ಪರಂಪರೆ

Main Article Content

ಶ್ವೇತಾ ಎಂ.
ಶಿವಕುಮಾರ. ಡಿ.ಸಿ.

Abstract

ಮಹಿಳಾ ಕಥಾ ಸಾಹಿತ್ಯವು ಇಂದಿನ ಕಾಲಘಟ್ಟದಲ್ಲಿ ಒಂದು ಪ್ರಬಲ ಧ್ವನಿಯಾಗಿ ರೂಪುಗೊಂಡಿದೆ. ಈ ಸಾಹಿತ್ಯದಲ್ಲಿ ಮಹಿಳೆಯರ ಅನುಭವ, ಸಾಮಾಜಿಕ ಸ್ಥಿತಿ, ಆಂತರಿಕ ಸಂವೇದನೆಗಳು ಹಾಗೂ ತಾತ್ವಿಕ ಚಿಂತನೆಗಳು ಪ್ರಮುಖವಾಗಿ ವ್ಯಕ್ತವಾಗುತ್ತವೆ. ವಿಶೇಷವಾಗಿ ಆಧುನಿಕತೆ ಮತ್ತು ಪರಂಪರೆ ಎಂಬ ಎರಡು ಪ್ರಮುಖ ಬಿಂದುಗಳ ನಡುವಿನ ಸಂಬಂಧವನ್ನು ಮಹಿಳಾ ಲೇಖಕಿಯರು ತಮ್ಮ ಬರವಣಿಗೆಯ ಮೂಲಕ ಸೂಕ್ಷ್ಮವಾಗಿ ಅನಾವರಣಗೊಳಿಸುತ್ತಿದ್ದಾರೆ.
ಈ ಲೇಖನವು ಕನ್ನಡದ ಪ್ರಮುಖ ಮಹಿಳಾ ಲೇಖಕಿಯರಾದ ವೈದೇಹಿ, ವಸುಮತಿ ಉಡುಪ ಮತ್ತು ಸುನಂದಾ ಪ್ರಕಾಶ ಕಡಮೆ ಅವರ ಕಥೆಗಳ ವಿಶ್ಲೇಷಣೆಯ ಮೂಲಕ ಆಧುನಿಕತೆ ಹಾಗೂ ಪರಂಪರೆಯ ಪರಸ್ಪರ ಸಂಬಂಧವನ್ನು ವಿಶ್ಲೇಷಿಸುತ್ತದೆ. ಆಧುನಿಕತೆ ಹೆಸರಿನಲ್ಲಿ ಪರಂಪರೆಯ ತ್ಯಾಗವಲ್ಲದೆ, ಪರಂಪರೆಯ ಒಳಘಟ್ಟವನ್ನು ಗ್ರಹಿಸಿ, ಹೊಸದನ್ನು ಅಳವಡಿಸಿಕೊಂಡು ಅವರು ತಮ್ಮ ಕಥನ ಶೈಲಿಯನ್ನು ರೂಪಿಸುತ್ತಾರೆ.
ಈ ಕಥೆಗಳು ಕುಟುಂಬ, ಸಮಾಜ, ಧರ್ಮ, ಮಹಿಳಾ ಶೋಷಣೆ, ಜಾತಿ, ಲಿಂಗ, ಸಾಂಸ್ಕೃತಿಕ ಅನ್ವಯತೆ ಮೊದಲಾದ ಹಲವು ವಿಷಯಗಳನ್ನು ಒಳಗೊಂಡಿವೆ. ಆಧುನಿಕ ಮಹಿಳೆಯ ಆತ್ಮಅಭಿವ್ಯಕ್ತಿಗೆ ಈ ಕಥೆಗಳು ವೇದಿಕೆಯಾಗುತ್ತವೆ. ಇವುಗಳಲ್ಲಿ ಕಾಣಿಸುವ ಪಾತ್ರಗಳು ಪರಂಪರೆಗನುಗುಣವಾಗಿ ನಡೆದು, ಆಧುನಿಕ ಪ್ರಶ್ನೆಗಳನ್ನು ಎತ್ತಿ ಹಿಡಿಯುವ ಮೂಲಕ ಕಥೆಯೊಳಗೆ ಆಳವಾದ ಅರ್ಥವತ್ತಿತ್ವವನ್ನು ನೀಡುತ್ತವೆ.
ಆಧುನಿಕತೆ ಕೇವಲ ಪಶ್ಚಿಮೀಕರಣ ಅಥವಾ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಇದು ಮಹಿಳೆಯ ಆತ್ಮಬಲ, ಆತ್ಮಜ್ಞಾನದ ಪ್ರಗಟನೆಯಾಗಿ ಪರಿಗಣಿಸಲಾಗುತ್ತದೆ. ಅದೆಷ್ಟೋ ಬಾರಿ ಈ ಆಧುನಿಕ ಪ್ರಬುದ್ಧತೆ ಪರಂಪರೆಯೊಂದಿಗೇ ಬೆರೆತು ಹೊಸ ರೀತಿಯ ಕಥನತಂತ್ರಗಳಿಗೆ ದಾರಿ ಮಾಡಿಕೊಡುತ್ತದೆ. ಈ ದ್ವಂದ್ವದ ನಡುವೆಯೂ ಲೇಖಕಿಯರು ತಮ್ಮ ಸಾಹಿತ್ಯ ಶೈಲಿಯ ಮೂಲಕ ಪ್ರಬಲವಾಗಿ ಮಹಿಳಾ ಮನಸ್ಸಿನ ಆಳವನ್ನು ತೆರೆದಿಟ್ಟಿದ್ದಾರೆ.

Article Details

Section

Research Articles

Author Biographies

ಶ್ವೇತಾ ಎಂ.

ಕನ್ನಡ ವಿಭಾಗ, ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಂಗಳೂರು.

ಶಿವಕುಮಾರ. ಡಿ.ಸಿ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಶ್ವೇತಾ ಎಂ., & ಶಿವಕುಮಾರ. ಡಿ.ಸಿ. (2025). ಮಹಿಳಾ ಕಥಾ ಬರಹದಲ್ಲಿ ಆಧುನಿಕತೆ ಹಾಗೂ ಪರಂಪರೆ. ಅಕ್ಷರಸೂರ್ಯ (AKSHARASURYA), 7(03), 206 to 214. https://aksharasurya.com/index.php/latest/article/view/1205

References

ಕರೀಗೌಡ ಬೀಚನಹಳ್ಳಿ (ಸಂ), (2020), ಸ್ವಾತಂತ್ರ್ಯೋತ್ತರ ಕನ್ನಡ ಸಣ್ಣ ಕಥೆಗಳು, ಸಾಹಿತ್ಯ ಅಕಾಡೆಮಿ, ನವ ದೆಹಲಿ.

ಅಮೂರ ಜಿ.ಎಸ್., (2012), ಕನ್ನಡ ಕಥನ ಸಾಹಿತ್ಯ: ಸಣ್ಣಕಥೆ, ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು.

ವಸುಮತಿ ಉಡುಪ, (2010), ಕಥಾವಸಂತ-ಸಮಗ್ರ ಕಥಾ ಸಂಕಲನ: ಭಾಗ-1, ಶ್ರೀ ಕೃಷ್ಣ ಬುಕ್ ಏಜೆನ್ಸಿ, ಬೆಂಗಳೂರು.

ವೀಣಾ ಶಾಂತೇಶ್ವರ, (2010), ನಡೆದದ್ದೇ ದಾರಿ: ಸಮಗ್ರ ಕಥಾ ಸಾಹಿತ್ಯ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು.

ವೈದೇಹಿ, (2018), ವೈದೇಹಿ ಕಥೆಗಳು, ಅಕ್ಷರ ಪ್ರಕಾಶನ, ಹೆಗ್ಗೋಡು.

ಸುನಂದಾ ಪ್ರಕಾಶ ಕಡಮೆ, (2019), ಗಾಂಧಿಚಿತ್ರದ ನೋಟು, ಅಹರ್ನಿಶಿ ಪ್ರಕಾಶನ, ಶಿವಮೊಗ್ಗ.

Most read articles by the same author(s)