ಪಾಂಚಜನ್ಯ
Main Article Content
Abstract
ಆಧುನಿಕ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ, ಜಗದಕವಿ, ರಸಋಷಿ ಮೊದಲಾದ ಹತ್ತಾರು ಅಭಿದಾನಗಳಿಗೆ ಪಾತ್ರರಾದವರು ರಾಷ್ಟ್ರಕವಿ ಕುವೆಂಪು. ಅವರಲ್ಲಿದ್ದ ಜಾಗೃತ ಪ್ರಜ್ಞೆ, ದರ್ಶನ ಶಕ್ತಿ, ಸಮ ಸಮಾಜ ಕಟ್ಟುವ ಹಂಬಲ, ಯುವಕರ ಬಗೆಗಿದ್ದ ಅದಮ್ಯ ಪ್ರೀತಿ ಮೊದಲಾದವು ಅವರು ಶತಮಾನದ ಕವಿಯಾಗಲು ಪ್ರೇರಣೆಯಾದ ಸಂಗತಿ.
ಇವರು ಬರೆದ ಅನೇಕ ಕವನ ಸಂಕಲನಗಳಲ್ಲಿ ಅತ್ಯಂತ ಪ್ರಮುಖವಾದುದು ಪಾಂಚಜನ್ಯ. ಇದು ವೈಚಾರಿಕ ಸಂಕಲನ ಎಂದೇ ಪ್ರಸಿದ್ಧವಾಗಿದೆ. ಇದನ್ನು ಕುವೆಂಪು ಅವರು ಬರೆದದ್ದು ತಾರುಣ್ಯದ ಆರಂಭಿಕ ಹಂತದಲ್ಲಿ. ಆ ಹೊತ್ತಿನ ಸಾಮಾಜಿಕ, ಆರ್ಥಿಕ, ರಾಜಕೀಯ ಸನ್ನಿವೇಶಗಳಿಗೆ ಕವಿಯಾಗಿ ಕುವೆಂಪು ಅವರ ಒಟ್ಟಾರೆ ಸ್ಪಂದನೆ ಏನು ಎಂಬುದನ್ನು ಪಾಂಚಜನ್ಯ ಕವನ ಸಂಕಲನ ಕಟ್ಟಿಕೊಡುವಲ್ಲಿ ಅತ್ಯಂತ ಯಶಸ್ವಿಯಾಗಿದೆ ಮತ್ತು ಮಾದರಿಯಾದ ಸಂಗತಿಗಳನ್ನು ಒಳಗೊಂಡಿದೆ. ಇಂತಹ ಅಮೂಲ್ಯ ಕವನ ಸಂಕಲನದ ಪರಿಚಯಾತ್ಮಕ ನೋಟ ಮತ್ತು ವಿಶ್ಲೇಷಣೆಯನ್ನು ಕಟ್ಟಿಕೊಡುವುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕುವೆಂಪು, (1933), ಪಾಂಚಜನ್ಯ, ಮೈಸೂರು: ಉದಯ ರವಿ ಪ್ರಕಾಶನ.
ಕೃಷ್ಣಕುಮಾರ್ ಸಿ. ಪಿ., (2004), ಕುವೆಂಪು ಸಾಹಿತ್ಯ ಸಂವಾದ, ಮೈಸೂರು: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ.
ನರಹಳ್ಳಿ ಬಾಲಸುಬ್ರಹ್ಮಣ್ಯಂ, (2004), ಬಾ ಕುವೆಂಪು ದರ್ಶನಕೆ, ಬೆಂಗಳೂರು: ಅಂಕಿತ ಪುಸ್ತಕ.