ಬಾಸವೂರು ಕಂಪಣದ ಶೈವ ಪುರುಷ ಶಿಲ್ಪಗಳು
Main Article Content
Abstract
ಪ್ರಸ್ತುತ ಲೇಖನವು ಪ್ರಾಚೀನ ಬಾಸವೂರು ಕಂಪಣದ (ಇಂದಿನ ಹಾವೇರಿ, ಹಾನಗಲ್, ಬ್ಯಾಡಗಿ ತಾಲ್ಲೂಕುಗಳ ಪ್ರದೇಶ) ಶೈವ ಪುರುಷ ಶಿಲ್ಪಗಳ ಸಮೀಕ್ಷೆ ನಡೆಸುತ್ತದೆ. ಕ್ರಿ.ಶ. 8 ರಿಂದ 13ನೇ ಶತಮಾನದ ಅಂತ್ಯದವರೆಗೆ ಅಸ್ತಿತ್ವದಲ್ಲಿದ್ದ ಈ ಆಡಳಿತ ಕೇಂದ್ರವು ಧಾರ್ಮಿಕ ಸಾಮರಸ್ಯಕ್ಕೆ ಹೆಸರುವಾಸಿಯಾಗಿತ್ತು. ಕ್ಷೇತ್ರಕಾರ್ಯದಲ್ಲಿ ದೊರೆತ ಶಿಲ್ಪಗಳನ್ನು ಪರಿಚಯಿಸುವುದು ಲೇಖನದ ಮುಖ್ಯ ಉದ್ದೇಶವಾಗಿದೆ. ಇಲ್ಲಿ ಶೈವಧರ್ಮವು ಪ್ರಬಲವಾಗಿತ್ತು ಎಂಬುದನ್ನು ಶಿವಲಿಂಗ, ಗಣಪತಿ, ಭೈರವ, ವೀರಭದ್ರ, ಕಾರ್ತಿಕೇಯ, ಹರಿಹರ, ಉಮಾಮಹೇಶ್ವರ, ರತಿ-ಮನ್ಮಥ ಹಾಗೂ ನಂದಿ ಶಿಲ್ಪಗಳ ಸಮೃದ್ಧಿ ಮತ್ತು ಮನೋಜ್ಞ ಕೆತ್ತನೆಗಳು ಸ್ಪಷ್ಟಪಡಿಸುತ್ತವೆ. ಈ ಶಿಲ್ಪಗಳು ಕಂಪಣದ ಪ್ರಬಲ ಶೈವ ಪರಂಪರೆ ಮತ್ತು ಕಲಾತ್ಮಕ ಅಭಿವ್ಯಕ್ತಿಯನ್ನು ಬಿಂಬಿಸುತ್ತವೆ. ವಿಶೇಷವಾಗಿ, ಕುಳೇನೂರಿನ ಏಕೈಕ ರತಿ-ಮನ್ಮಥ ಶಿಲ್ಪವು ವಿಶಿಷ್ಟವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಾರಂತ ಶಿವರಾಮ, (1975), ಚಿತ್ರಶಿಲ್ಪ ಮತ್ತು ವಾಸ್ತುಕಲೆಗಳು, ಪ್ರಸಾರಾಂಗ, ಕ.ವಿ.ವಿ. ಧಾರವಾಡ.
ಕುಲಕರ್ಣಿ ಡಿ.ಜಿ., (2007-08), ಹಾವೇರಿ ಜಿಲ್ಲೆಯ ತ್ರಿಕೂಟ ದೇವಾಲಯಗಳು, ಕರ್ನಾಟಕ ಸಂಶೋಧನಾ ಮಂಡಳ, ಧಾರವಾಡ.
ರಾಜಶೇಖರ ಎಸ್., (1988), ಕರ್ನಾಟಕ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಸುಜಾತಾ ಪಬ್ಲಿಕೇಶನ್, ಧಾರವಾಡ.
ರಾಮಚಂದ್ರರಾವ್ ಎಸ್.ಕೆ., (1975), ಮೂರ್ತಿಶಿಲ್ಪ ನೆಲೆ ಹಿನ್ನಲೆ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
ರಾಮಚಂದ್ರರಾವ್ ಎಸ್.ಕೆ., (1980), ಭಾರತದ ದೇವಾಲಯಗಳ ನೆಲೆ ಹಿನ್ನಲೆ, ಸ್ವತಂತ್ರ ಪ್ರಕಟಣೆ, ಬೆಂಗಳೂರು.