ಸ್ವಾತಂತ್ರ್ಯ ಹೋರಾಟಕ್ಕೆ ಹೂವಿನಹಡಗಲಿ ತಾಲ್ಲೂಕಿನ ಕೊಡುಗೆ
Main Article Content
Abstract
ಈ ಲೇಖನವು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಯನ್ನು ವಿವರಿಸುತ್ತದೆ. ಹೂವಿನಹಡಗಲಿಯು ಐತಿಹಾಸಿಕವಾಗಿ ಹಲವು ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಭಾರತದಲ್ಲಿ ಹೊತ್ತಿದ ಕಿಡಿಯು ಈ ತಾಲ್ಲೂಕಿನ ಜನರಲ್ಲಿ ರಾಷ್ಟ್ರಾಭಿಮಾನ ಮೂಡಿಸಿತು. ದೊಂಡಿಯಾವಾಘನ ದಂಗೆ, ನಗರ ಬಂಡಾಯ ಮತ್ತು 1858ರ ದಂಗೆಗಳು ಇಲ್ಲಿನ ಹೋರಾಟಕ್ಕೆ ಸ್ಫೂರ್ತಿಯಾಗಿದ್ದವು. ಕಾಯ್ದೆಭಂಗ ಚಳುವಳಿಯ ಸಂದರ್ಭದಲ್ಲಿ ಮಾಗಳ ಗ್ರಾಮದಲ್ಲಿ ಈಚಲ ಮರ ಕಡಿದು, ಹೆಂಡದ ಚೀಲ ನಾಶಪಡಿಸಿ ಪ್ರತಿಭಟಿಸಲಾಯಿತು. ಬಿ. ಲಂಕೆಪ್ಪ ನೆಗಳೂರು, ಧರ್ಮಣ್ಣ ಮುಂತಾದವರು ಸಕ್ರಿಯವಾಗಿ ಭಾಗವಹಿಸಿದ್ದರು. ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲೂ ಹಡಗಲಿಯು ಭಾಗವಹಿಸಿತ್ತು. ಹರಿಜನ ಕೇರಿಯಲ್ಲಿ ಅಂಗಡಿ ತೆರೆಯುವುದು, ಪ್ರಾಣಿಬಲಿ ನಿಷೇಧದಂತಹ ಸಾಮಾಜಿಕ ಸುಧಾರಣಾ ಚಟುವಟಿಕೆಗಳ ಮೂಲಕವೂ ರಾಷ್ಟ್ರ ಜಾಗೃತಿ ಮೂಡಿಸಲಾಯಿತು. ಧಾರವಾಡ ಜಿಲ್ಲೆಯ ಹೋರಾಟಗಾರರ ಪ್ರಭಾವವೂ ಇಲ್ಲಿನ ಚಟುವಟಿಕೆಗಳ ಮೇಲೆ ಇತ್ತು. ಈ ಎಲ್ಲಾ ನಿಸ್ವಾರ್ಥ ಹೋರಾಟಗಳು ತಾಲ್ಲೂಕಿನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಮುಖ ಕೊಡುಗೆಗಳಾಗಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಾಮತ್ ಸೂರ್ಯನಾಥ (ಸಂ)., ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ಗೀತಾಬುಕ್ ಹೌಸ್, ಮೈಸೂರು, 1974.
ಗೋಪಾಲರಾವ್ ಎಚ್.ಎಸ್., ಕರ್ನಾಟಕ ಏಕೀಕರಣ ಇತಿಹಾಸ, ನವಕರ್ನಾಟಕ ಪ್ರಕಾಶನ, ಬೆಂಗಳೂರು, 2018.
ಚಂದ್ರಶೇಖರ್ ಎಸ್., ಸುರೇಂದ್ರರಾವ್ ಬಿ. (ಸಂ)., ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು, 2016.
ಬಿಪಿನಚಂದ್ರ (ಮೂಲ), ಗೋಪಾಲರಾವ್ ಎಚ್.ಎಸ್. (ಅನು)., ಆಧುನಿಕ ಭಾರತದ ಇತಿಹಾಸ, ನವಕರ್ನಾಟಕ ಪ್ರಕಾಶನ, ಬೆಂಗಳೂರು, 2017.
ಮಂಜುನಾಥ ಎಸ್. ಪಾಟೀಲ, ಶ್ರೀನಿವಾಸ ಎಸ್. ಕಟ್ಟಿಮನಿ, ಡಾ. ಅಜೀದ ಇ. ಮಯರ್ (ಸಂ)., ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಳು, ಬಿ.ಎಲ್.ಡಿ.ಇ. ಸಂಸ್ಥೆ, ಜಮಖಂಡಿ, 2022.
ಮಹಾಬಲೇಶ್ವರಪ್ಪ ಬಿ.ಸಿ., ಹೈದರಾಬಾದ ಕರ್ನಾಟಕದಲ್ಲಿ ರಾಜಕೀಯ ಚಳುವಳಿಗಳು, ಶ್ರೀ ಗುರು ಪ್ರಕಾಶನ, ಕೊಟ್ಟೂರು, 2018.
ವಿಜಯ ಪೂಣಚ್ಚ ತಂಬಂಡ, ಸಮಕಾಲೀನ ಚರಿತ್ರೆಯ ವಿವಿಧ ಆಯಾಮಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2010.
ವಿರೂಪಾಕ್ಷಿ ಪೂಜಾರಹಳ್ಳಿ, ವಸಾಹತುಕಾಲೀನ ಬಳ್ಳಾರಿ ಜಿಲ್ಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2009.
ವಿರೂಪಾಕ್ಷಿ ಪೂಜಾರಹಳ್ಳಿ, ಏಕೀಕರಣ ಚಳವಳಿ ಮತ್ತು ಬಳ್ಳಾರಿ ಜಿಲ್ಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2014.
ಶೇಷಾದ್ರಿ ಬಿ., ಚಂದ್ರಶೇಖರ ಟಿ.ಆರ್. ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1998.
ಷೇಕ್ ಅಲಿ ಬಿ., (ಸಂ)., ಕರ್ನಾಟಕ ಚರಿತ್ರೆ ಸಂ07, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2018.
Outhore State Gazetteer: Bellary District, Government of Mysore, Bangalore, 1972.
Durgappa M.K., Freedom Movement in Bellary District, Dept. of. History, Gulbarga University, Gulbarga, 1996.