Published: 2024-09-05

Table of Contents

Table of Contents

I to V

ಗಾದೆ

ರಾಗೌ

01 to 34

ಪ್ರಸ್ತುತ ಲೇಖನವು ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದ ಖ್ಯಾತ ವಿದ್ವಾಂಸರಾದ ಡಾ. ರಾಗೌ (ರಾಮೇಗೌಡ) ಅವರ ಜೀವನ ಮತ್ತು ಸಾಹಿತ್ಯಕ ಕೊಡುಗೆಗಳ ಸಮಗ್ರ ನೋಟವನ್ನು ಪ್ರಸ್ತುತಪಡಿಸುತ್ತದೆ. ಇದು ಪ್ರಮುಖವಾಗಿ ಕನ್ನಡ ಗಾದೆಗಳ ಕುರಿತಾದ ಅವರ ವ್ಯಾಪಕ ಸಂಶೋಧನೆ, ವರ್ಗೀಕರಣ ಮತ್ತು ಸಂಗ್ರಹಣೆಯ ಮೇಲೆ ಬೆಳಕು ಚೆಲ್ಲುತ್ತದೆ. ಗಾದೆಗಳ ಸ್ವರೂಪ, ಲಕ್ಷಣ, ಉಗಮ, ಸಾಂಸ್ಕೃತಿಕ ಮಹತ್ವ ಮತ್ತು ರಚನಾತ್ಮಕ ಅಂಶಗಳನ್ನು ಈ ಪ್ರಬಂಧವು ಆಳವಾಗಿ ವಿಶ್ಲೇಷಿಸುತ್ತದೆ. ವಿವಿಧ ಗಾದೆಗಳನ್ನು ಉದಾಹರಿಸುವ ಮೂಲಕ, ಅವು ಜನಸಾಮಾನ್ಯರ ಸಾಮಾಜಿಕ ವಾಸ್ತವತೆಗಳು, ಮಾನವ ಮನೋವಿಜ್ಞಾನ, ವಿವೇಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದನ್ನು ಲೇಖನವು ವಿವರಿಸುತ್ತದೆ. ಅಂತಿಮವಾಗಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಯನಕ್ಕೆ ಶಾಸ್ತ್ರೀಯ ಚೌಕಟ್ಟನ್ನು ಒದಗಿಸುವಲ್ಲಿ ಮತ್ತು ಕರ್ನಾಟಕದ ಮೌಖಿಕ ಪರಂಪರೆಯನ್ನು ಉಳಿಸುವಲ್ಲಿ ಡಾ. ರಾಗೌ ಅವರ ಮಹತ್ತರ ಪಾತ್ರವನ್ನು ಈ ಲೇಖನವು ಒತ್ತಿಹೇಳುತ್ತದೆ.

Read More »

ಬೆಸಗರಹಳ್ಳಿ ರಾಮಣ್ಣ ಅವರ ‘ಬೇಲ’ ಕಥೆಯಲ್ಲಿನ ಬಹುತ್ವದ ಬೆರಗು

ಚಂದ್ರಶೇಖರ್ ಎನ್.

35 to 44

ಕನ್ನಡ ಕಥಾ ಜಗತ್ತಿನಲ್ಲಿ ಬೆಸಗರಹಳ್ಳಿ ರಾಮಣ್ಣನವರು ಮೂಡಿಸಿದ ಛಾಪು ಓದುಗ ಲೋಕಕ್ಕೆ ಇಂದಿಗೂ ಆಪ್ತವಾಗಿಯೇ ಇದೆ. ತಮ್ಮ ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಸಾಮರಸ್ಯವನ್ನು ಕಾಯ್ದುಕೊಂಡು ಅವರು ಮಾಡಿದ ಸಾಹಿತ್ಯ ಕೃಷಿ ವಿಶೇಷವಾದದ್ದು. ತಮ್ಮ ಬರಹಗಳಲ್ಲಿ ಮೂಡಿ ಬಂದಿರುವ ನಿರಾಡಂಬರ ಹಾಗೂ ಸಹಜತೆ ತಮ್ಮ ಬರಹದ ಶಕ್ತಿಯನ್ನು ಹೆಚ್ಚಿಸಿದೆ. ಒಬ್ಬ ಓದುಗನಿಗೆ ಕತೆಗಾರ, ಕಾದಂಬರಿಕಾರ ಕೊಡಮಾಡುವ ಭಾವನಾತ್ಮಕ ಸಾಂತ್ವನ ಇವರ ರಚನೆಗಳಲ್ಲಿ ಅಗಾಧವಾದ ಇಳುವರಿಯನ್ನು ನೀಡಿದೆಯೆಂದರೆ ತಪ್ಪಾಗಲಾರದು. ಇವರು ಸಮಾಜವನ್ನು ಕಂಡ, ಕಟ್ಟಿಕೊಟ್ಟ ನೋಟಕ್ರಮವೇ ಭಿನ್ನವಾದದ್ದು. ಸಾಮಾಜಿಕವಾದ ಹಾವು ಏಣಿಯಾಟದಲ್ಲಿ ಜಮೀನ್ದಾರಿ ಪದ್ದತಿ ಹಾಗೂ ವೇಶ್ಯಾವೃತ್ತಿಯ ಕರಾಳ ಮುಖವನ್ನು ‘ಬೇಲ’ ಕತೆಯಲ್ಲಿ ಅನಾವರಣಗೊಳಿಸಿದ್ದಾರೆ. ವೃತ್ತಿಯಲ್ಲಿ ನರ್ತಕಿಯಾದ ಸ್ಪುರದ್ರೂಪಿ ಹೆಣ್ಣು ಬೇಲ. ತನ್ನ ಮೈ-ಮಾಟದಿಂದಲೇ ಎಂಥವರನ್ನೂ ಸೆಳೆವ ಮಾಂತ್ರಿಕಶಕ್ತಿಯಿದ್ದವಳು. ಆದರವಳು ಈ ಕಥೆಗಾರನನ್ನು ಮೆಚ್ಚಿ ಹಚ್ಚಿಕೊಳ್ಳವ ಬಗೆ ಅವಳ ಅಂತರಂಗವನ್ನು ಬಹಿರಂಗಗೊಳಿಸುತ್ತದೆ. ಸದಾ ಸಮಾನತೆಗಾಗಿ ತುಡಿವ ಕತೆಗಾರನಿಗೆ ಅದೇ ಗುಣದ ಬೇಲ ಶರಣಾಗಿ ತನ್ನ ಕಾಯಕದ ಮೂಲಕವೇ ತನ್ನದೇ ಗಂಧರ್ವ ಜಾತಿಯಲ್ಲಿ ತನ್ನಂತೆ ಸ್ವಾವಲಂಬಿಯಾಗಿ ಬದುಕಲಾಗದೆ ಹವಣಿಸುತ್ತಿರುವ, ಅಸಹಾಯಕತೆಯ ಬಲೆಯಲ್ಲಿ ಸಿಲುಕಿರುವ ಅಸಂಖ್ಯ ಅಬಲೆಯರ ಪರವಾದ ದನಿಯಾಗಿ ನಿಲ್ಲುವ ಪ್ರಯತ್ನ ಹಾಗೂ ವ್ಯವಸ್ಥೆಯ ಬಗೆಗಿನ ಪ್ರತಿರೋಧ ಅವಳಲ್ಲಿನ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ. ವೈದ್ಯ ವೃತ್ತಿಯಲ್ಲಿ ಗ್ರಾಮೀಣ ಶ್ರಮಿಕವರ್ಗಕ್ಕೆ   ಸೇವೆ ಸಲ್ಲಿಸಿ ಸಾರ್ಥಕತೆಯನ್ನು ಮೆರೆದು, ಕೇವಲ ಕಥೆಯ ದೃಷ್ಟಿಯಿಂದಲ್ಲದೆ ನಿಜ ಬದುಕಿನಲ್ಲೂ ಸಾಮಾಜಿಕ ಬದಲಾವಣೆಗಾಗಿ ತಮ್ಮ ಗುರಿಗಳನ್ನು ನಿಶ್ಚಲವಾಗಿರಿಸಿಕೊಂಡು ಬದುಕಿದ ನಿಜ ಜೀವಿ ಬೆಸಗರಹಳ್ಳಿ ರಾಮಣ್ಣನವರು. 

Read More »

‘ಶ್ರೀ ದೇವೀ ಮಹಾತ್ಮೆ’ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ

ಶ್ರೀದೇವಿ, ಧನಂಜಯ ಕುಂಬ್ಳೆ

45 to 54

ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನವು ವೈಶಿಷ್ಟ್ಯಪೂರ್ಣ ರಂಗಸ್ಥಳ, ಚೌಕಿ ಮತ್ತು ವೈವಿಧ್ಯಪೂರ್ಣ ಕುಣಿತ, ವೇಷಭೂಷಣ, ರಂಗಪ್ರಕ್ರಿಯೆಗಳಿಂದಾಗಿ ವಿಶ್ವದಾದ್ಯಂತ ವಿಶಿಷ್ಟ ಕಲೆಯಾಗಿ ಗುರುತಿಸಿಕೊಂಡಿದೆ. ಇಂತಹ ಯಕ್ಷಗಾನದಲ್ಲಿ ಪ್ರಮುಖ ಪಾತ್ರ ಅಥವಾ ಪಾತ್ರಧಾರಿ ಹಾಸ್ಯಗಾರರು. ಯಕ್ಷಗಾನದಲ್ಲಿ ನಿರ್ದೇಶಕನೆಂದೇ ಗುರುತಿಸಿಕೊಂಡಿರುವ ಭಾಗವತನ ನಂತರದ ಪ್ರಮುಖ ಸ್ಥಾನವನ್ನು ಹಾಸ್ಯಗಾರನು ಪಡೆದುಕೊಳ್ಳುತ್ತಾನೆ. ಚೌಕಿಯಲ್ಲಿ ದೇವರ ಪೀಠವನ್ನು ಇರಿಸಿದ್ದಕ್ಕೆ ಸಮಾನಾಂತರವಾಗಿ ಇನ್ನೊಂದು ಮೂಲೆಯಲ್ಲಿ ಹಾಸ್ಯಗಾರನು ಕುಳಿತುಕೊಳ್ಳುತ್ತಾನೆ. ಭಾಗವತರು ರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದರೆ, ಹಾಸ್ಯಗಾರರು ಚೌಕಿ ನಿರ್ವಹಣೆ ಮಾಡುತ್ತಾರೆ. ಹಾಸ್ಯಗಾರನಿಗೆ ಪ್ರತೀ ಪ್ರಸಂಗವು ರಂಗದಲ್ಲಿ ಯಾವ ರೀತಿ ಬಳಕೆಯಾಗಬೇಕೆಂಬ ಅರಿವು ಇರಬೇಕು. 
ಯಕ್ಷಗಾನದಲ್ಲಿ ಅತ್ಯಂತ ಹೆಚ್ಚು ಪ್ರದರ್ಶನಗೊಳ್ಳುತ್ತಿರುವ, ಜನಪ್ರಿಯವೂ, ಆರಾಧನಾ ಮಹತ್ವವನ್ನೂ ಒಳಗೊಂಡಿರುವ ಶ್ರೀದೇವೀ ಮಹಾತ್ಮೆ ಪ್ರಸಂಗದಲ್ಲಿ ಬರುವಂತಹ ಹಾಸ್ಯ ಪಾತ್ರಗಳು ಮತ್ತು ಹಾಸ್ಯಗಾರರು ನಿರ್ವಹಿಸುತ್ತಿದ್ದಂತಹ ಇತರ ಹಾಸ್ಯೇತರ ಪಾತ್ರಗಳನ್ನು ಅಧ್ಯಯನಕ್ಕೆ ಒಳಪಡಿಸುವುದು ಈ ಲೇಖನದ ಉದ್ದೇಶ.

Read More »

ನಾಗಚಂದ್ರನ ಪಂಪರಾಮಾಯಣದಲ್ಲಿ ‘ಲಕ್ಷ್ಮಣ’

ಉಮಾಶಂಕರ ಓಂ.

55 to 62

ಕಾವ್ಯದ ಪಾತ್ರಗಳನ್ನು ಸಮಾಜಮುಖಿಯಾಗಿಸುವುದು ಕವಿಯ ಸಾಮಾಜಿಕ ಕಾಳಜಿಯ ಪ್ರತೀಕವಾಗಿದೆ. ಇಂತಹ ಪಲ್ಲಟಾತ್ಮಕ ಚಿಂತನೆಯನ್ನು ಭಾರತದ ವಿವಿಧ ಬುಡಕಟ್ಟುಗಳ ರಾಮಾಯಣ-ಮಹಾಭಾರತದ ಕಥೆಗಳಲ್ಲಿ ಕಾಣುವಂತೆ ನಾಗಚಂದ್ರನ ರಾಮಚಂದ್ರಚರಿತ ಪುರಾಣಂನಲ್ಲೂ ಕಾಣಬಹುದಾಗಿದೆ. ನಾಗಚಂದ್ರನ ಮಾತುಗಾರಿಕೆ, ಮನುಷ್ಯ ಸ್ವಭಾವದ ಪರಿಚಯ, ಶ್ರೇಷ್ಠ ರೀತಿಯ ಪಾತ್ರ ಚಿತ್ರಣ ಇವುಗಳು ಉನ್ನತ ಮಟ್ಟದವು. ಈ ಕಾವ್ಯವು ರಾಮಕೇಂದ್ರಿತ ಕಥನವೇ ಆದರೂ ಪೂರ್ಣಕಾವ್ಯವನ್ನು ಲಕ್ಷಿಸಿದಾಗ ಲಕ್ಷ್ಮಣನು ಅನುನಾಯಕ ಅಥವಾ ಉಪನಾಯಕ ಎನ್ನುವುದಕ್ಕಿಂತ ‘ನಾಯಕನೇ ಹೌದು’ ಎಂಬಂತೆ ಕಾವ್ಯಾಭ್ಯಾಸಕರಿಗೆ ಕಾಣುತ್ತಾನೆ. ಕಾವ್ಯದ ಉದ್ದಕ್ಕೂ ಕಾಣುವ ಕಾರ್ಯೋತ್ಸುಕತೆಯೂ ಪೌರುಷವು ಲಕ್ಷ್ಮಣನದು. ಲಕ್ಷ್ಮಣನು ಕಥಾನಾಯಕನಲ್ಲ. ಆದರೆ ಕಥೆಯ ಉದ್ದಕ್ಕೂ ಪಾತ್ರವಹಿಸಿದ್ದಾನೆ. ರಾಮನು ಪಿತೃವಚನ ಪರಿಪಾಲಕನೆನಿಸಿಕೊಂಡರೆ ನಾಗಚಂದ್ರನ ಲಕ್ಷ್ಮಣನು ಮಾತೃ ವಚನ ಪರಿಪಾಲಕ ಎನಿಸಿಕೊಳ್ಳುವನು. ಸೀತೆಯಲ್ಲಿ ಮಾತೆಯನ್ನು ಕಂಡ ಲಕ್ಷ್ಮಣನು ಆಕೆಯನ್ನು ಅಡವಿಗಟ್ಟುವ ರಾಮನ ನಿಷ್ಕುರುಣೆಯ ನಿರ್ಧಾರವನ್ನು ಪ್ರತಿರೋಧಿಸುವ ಮೂಲಕ ಅಣ್ಣನ ಮಾತಿನ ಅಂಧಾನುಪಾಲಕನಲ್ಲ ವಿವೇಚನೆಯುಳ್ಳವನು ಎಂಬಂತೆ ನಡೆದುಕೊಂಡನು. ವನವಾಸದುದ್ದಕ್ಕೂ ಯುದ್ಧ ಸನ್ನಿವೇಶಗಳು ನಿಯಮಿತವಾಗಿ ಅವರ್ತವಾಗಿವೆ. ಇಲ್ಲಿ ಲಕ್ಷ್ಮಣನ ಕ್ಷಾತ್ರತನ ಪ್ರತಾಪವು ರಾಮನನ್ನು ನೇಪಥ್ಯಕ್ಕೆ ಸರಿಸುವಂತಿವೆ. ರಾಮನ ಜೀವನದುದ್ದಕ್ಕೂ ಲಕ್ಷ್ಮಣನು ಅತಿ ಸಮೀಪಾವರ್ತಿಯಾಗಿದ್ದನು. ಅದು ರಾಮನ ಯುದ್ಧ, ವಿವಾಹ, ವನವಾಸ, ವಿಜೃಂಭಣೆ ಮಾತ್ರವಲ್ಲದೆ ವಿರಹ-ವಿಯೋಗಗಳ ಸನ್ನಿವೇಶದಲ್ಲೂ ಲಕ್ಷ್ಮಣನೇ ಜೊತೆಗಿದ್ದನು. ಆದ್ದರಿಂದ ಲಕ್ಷ್ಮಣನಿಲ್ಲದ ಶೂನ್ಯತೆಯನ್ನು ಸಹಿಸಕೊಳ್ಳಲಾಗದೆ ರಾಮನು ಚಿತ್ತಭ್ರಮಣೆಗೊಂಡನು. ಒಟ್ಟಾರೆ, ವಂಶಗೌರವ ರಕ್ಷಿಸುವಲ್ಲಿ, ಭ್ರಾತೃತ್ವದಲ್ಲಿ ಹಾಗೂ ಕ್ಷಾತ್ರಗುಣದಲ್ಲಿ ಲಕ್ಷ್ಮಣನು ಒಂದು ಮಾದರಿಯೇ ಆಗಿದ್ದಾನೆ. ವೀರಾವೇಶವು ಸದಾ ಶಿಖರ ಮುಖಿಯಾಗಿರುವಂತೆ ಸಂತಾಪ-ಸಮಾದಾನ ಮತ್ತು ಪಾಪಪ್ರಜ್ಞೆಗಳು ಸಮಪಾತಳಿಯಲ್ಲಿ ಅಭಿವ್ಯಕ್ತಗೊಂಡಿವೆ. ಆದ್ದರಿಂದ, ನಾಗಚಂದ್ರನ ಪಂಪರಾಮಾಯಣವು ಜೈನ ಪರಿಕಲ್ಪನೆಯಂತೆ ‘ವಾಸುದೇವ-ಪ್ರತಿವಾಸುದೇವ’ ಕೇಂದ್ರಿತವಾಗಿರುವುದರಿಂದ ಇದು ರಾಮ-ಲಕ್ಷ್ಮಣರ ನಾಯಕತ್ವದ, ರಾವಣನ ಪ್ರತಿನಾಯಕತ್ವದ ಗುಣಾವಗುಣಗಳನ್ನು ಮಥಿಸುವ ಕಥೆಯಂತೆ ಕಾಣುತ್ತದೆ. ಇದನ್ನು ಕಥೆಯ ಸನ್ನಿವೇಶಗಳು ಪುರಾವೆಗೊಳಿಸುತ್ತವೆ. 

Read More »

ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ಪ್ರತಿಯಜಮಾನಿಕೆಯ ಸ್ವರೂಪ

ಗಣೇಶ, ನಿಂಗರಾಜು ಹೆಚ್. ಎಸ್.

63 to 73

ಭಾರತದಂತಹ ದೇಶವು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ.  ಅಂತಹ ಪ್ರಾಬಲ್ಯಗಳ ಆಧಾರವು ಸಂಕೀರ್ಣ ಸ್ವರೂಪವನ್ನು ಹೊಂದಿದೆ.  ಭಾರತದ ವರ್ಣ ಆಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ, ವರ್ಣಾಸ್‌ನ ಮೇಲಿನ ಸ್ತರಗಳಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯ ವ್ಯವಸ್ಥೆಗಳು ಛಿದ್ರಗೊಳ್ಳುತ್ತಿವೆ.  ಸಬಾಲ್ಟರ್ನ್ ಅಡಿಯಲ್ಲಿ ಬರುವ ನಾಲ್ಕನೇ ವರ್ಣಾ, ಶೂದ್ರವರ್ಣ,  ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಭಾಗವಹಿಸುವಿಕೆಯಿಂದ ವಂಚಿತವಾಗಿದೆ. ಸಾಂಪ್ರದಾಯಿಕವಾಗಿ ಮೇಲ್ವರ್ಗದ  ಪ್ರಾಬಲ್ಯಗಳು ಕಠಿಣ ಅಭ್ಯಾಸಗಳನ್ನು ನಿರ್ಮಿಸುವ ಮೂಲಕ ಅಧೀನ ವರ್ಗವನ್ನು ಬಳಸಿಕೊಳ್ಳುತ್ತವೆ. ಈ ಅಧೀನ ನೆಲೆಗಳು ಮೇಲ್ಮಟ್ಟದ ಪ್ರಾಬಲ್ಯಗಳ ವಿರುದ್ಧ ಹೆಚ್ಚು ಸಹನೆ ಮತ್ತು ಮೂಕತನದಿಂದ ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ. ಅವರ ನೋವು ಮತ್ತು ಸಂಕಟಗಳನ್ನು ಹೊತ್ತುಕೊಂಡು.  ಆದರೆ ಅವರ ನೋವು ಮತ್ತು ಸಂಕಟಗಳನ್ನು ಬ್ರಿಟಿಷ್ ವಸಾಹತುಶಾಹಿ ಒದಗಿಸಿದ ಶಿಕ್ಷಣ ವ್ಯವಸ್ಥೆಯಿಂದ ಧ್ವನಿಸಲಾಯಿತು.  ಸುಧಾರಣಾ ಚಳುವಳಿ, ಸ್ವಾತಂತ್ರ್ಯ ಚಳುವಳಿ, ಸಾಮಾಜಿಕ ಚಳುವಳಿಗಳು, ಸ್ತ್ರೀವಾದ ಮತ್ತು ರಾಷ್ಟ್ರೀಯತೆಯ ಪ್ರಭಾವವು ತೀವ್ರವಾಗಿತ್ತು.  ಬದುಕುವ ಹಕ್ಕನ್ನು ತಿಳಿದಿಲ್ಲದ ವರ್ಗ, ಅವರು ಸ್ವಾಭಿಮಾನದ ಜೀವನವನ್ನು ಕಲಿಯಲು ಪ್ರಾರಂಭಿಸಿದರು.  ಈ ನಿಟ್ಟಿನಲ್ಲಿ, ನೈತಿಕ ದೀನದಲಿತ ವರ್ಗಗಳು ಹಳೆಯ ಪ್ರಾಬಲ್ಯವನ್ನು ಸಿಲುಕಿಸಲು ‘ಪ್ರತಿ-ಆಧಿಪತ್ಯ’ವನ್ನು ನಿರ್ಮಿಸಲು ಪ್ರಾರಂಭಿಸಿದವು.
ಪ್ರತಿ-ಆಧಿಪತ್ಯವು ಚಾಲ್ತಿಯಲ್ಲಿರುವ ಪ್ರಾಬಲ್ಯಕ್ಕೆ ವಿರುದ್ಧವಾದ ಅರ್ಥವಲ್ಲ.  ಆಂಟೋನಿಯೊ ಗ್ರಾಮ್ಸಿ ಪ್ರಕಾರ, ಪ್ರತಿ-ಆಧಿಪತ್ಯವನ್ನು ನಿರ್ಮಿಸುವುದು ಎಂದರೆ ಪ್ರತಿ ಆಡಳಿತವನ್ನು ಅಭಿವೃದ್ಧಿಪಡಿಸುವುದು ಎಂದರ್ಥವಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಅಸ್ತಿತ್ವದಲ್ಲಿರುವ ಸ್ಥಿತಿ ಮತ್ತು ರಾಜಕೀಯದಲ್ಲಿ ಅದರ ನ್ಯಾಯಸಮ್ಮತತೆಗೆ ಮುಖಾಮುಖಿ ಅಥವಾ ವಿರೋಧವಾಗಿದೆ. ಆದರೆ ಜೀವನದ ವಿವಿಧ ಕ್ಷೇತ್ರಗಳಲ್ಲಿಯೂ ಸಹ ಇದನ್ನು ಗಮನಿಸಬಹುದು. ಮೇಲಾಗಿ ಇದು ಸಮಾಜವಾದದ ಉದ್ದೇಶವೂ ಅಲ್ಲ. ಇದು ದೈನಂದಿನ ಜೀವನದಲ್ಲಿ ಸಾಂಪ್ರದಾಯಿಕ ಸರ್ವಾಧಿಕಾರಿ ಮೌಲ್ಯಗಳ ಪ್ರಭಾವವನ್ನು ಕರಗಿಸುವುದು ಮತ್ತು ಸಮಾನ ಸಾಮುದಾಯಿಕ ಜೀವನದ ಮೌಲ್ಯಗಳನ್ನು ಜನರು ಕಂಡುಕೊಳ್ಳುವ ವಾತಾವರಣವನ್ನು ಸೃಷ್ಟಿಸುವುದು. ಪ್ರತಿ-ಆಧಿಪತ್ಯದ ಧ್ಯೇಯವೆಂದರೆ ಶೋಷಣೆಯ ಪ್ರಾಬಲ್ಯ ಮತ್ತು ಅದರ ಮೌಲ್ಯಗಳನ್ನು ಕಿತ್ತೊಗೆಯುವುದು ಮತ್ತು ಸಮಾನತೆಯ ಜೀವನವನ್ನು ಸೃಷ್ಟಿಸುವುದು.  ಇಲ್ಲದಿದ್ದರೆ, ಮತ್ತೊಂದು ರೀತಿಯ ಪ್ರಾಬಲ್ಯ ವ್ಯವಸ್ಥೆಯು ಶೋಷಣೆಗೆ ಉದ್ಭವಿಸಬಹುದು.  ಆಧುನಿಕ ಕನ್ನಡ ನಾಟಕಗಳು ಇಂತಹ ಪ್ರತಿ-ಆಧಿಪತ್ಯವನ್ನು ಪ್ರತಿಪಾದಿಸಿವೆ ಮತ್ತು ಅಧೀನ ವರ್ಗಗಳು ಕೈಗೊಳ್ಳುವ ಪ್ರತಿಭಟನೆಯ ವಿವಿಧ ಸ್ವರೂಪಗಳನ್ನು ಚಿತ್ರಿಸುತ್ತದೆ.

Read More »

ಬುದ್ಧ ನಡೆದು ಬಂದದಾರಿ: ಒಂದು ಅವಲೋಕನ

ತಾರಾ ಬಿ. ಎನ್.

74 to 79

ಅರಿವಿನ ದಾರಿ ಕಾಣದೆ ಜನ ನರಳಾಡುವಾಗ ಅರಿತ ದಾರಿ ತೋರುವ ಮಹಾಪುರುಷರ ಅವತಾರವಾಗುತ್ತದೆ ಎಂಬುವುದು ಜನಾಭಿಪ್ರಾಯ. “ಯದಾ ಯದಾಹಿ ಧರ್ಮಶ್ಯ ಗ್ಲಾನಿರ್ಭವತಿ ಭಾರತ” ಎಂಬುದಕ್ಕೆ ಸಾಕ್ಷಿಯಾಗಿದ್ದೇ ಕ್ರಿ.ಪೂ. 6ನೇ ಶತಮಾನ. ಜಗತ್ತಿನಾದ್ಯಂತ ಅನೇಕ ಮಹಾಪುರುಷರ ಜನನವಾಗಿದ್ದು. ಅವರಲ್ಲಿ ಬೌದ್ಧ ಧರ್ಮದ ಪ್ರವರ್ತಕ ಗೌತಮ ಬುದ್ಧನೂ ಒಬ್ಬ. ಅಂತಹ ಬುದ್ಧ ನಡೆದು ಬಂದ ದಾರಿಯ ಅವಲೋಕನ ಈ ಸಂಶೋಧನಾ ಲೇಖನದ ಉದ್ದೇಶ.

Read More »

ಹುಲಿಗಿಯ ಹುಲಿಗೆಮ್ಮ ದೇವಿ: ಒಂದು ಸಾಂಸ್ಕೃತಿಕ ನಂಬಿಕೆ

ನಾಯಕರ ಹುಲುಗಪ್ಪ

80 to 87

ತುಂಗಾಭದ್ರ ನದಿಯ ಎಡದಂಡೆಯ ಮೇಲಿರುವ ಕೊಪ್ಪಳ ಜಿಲ್ಲೆಯ, ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿಗೆ ಸೇರಿದ ಹುಲಿಗಿ ಗ್ರಾಮವು ಚಿಕ್ಕದಾದರೂ ಸಹ ಅದರ ಹೆಸರು ನೆರೆಯ ರಾಜ್ಯಗಳಿಗೂ ಹರಡಿಕೊಂಡಿದೆ. ಈ ಪ್ರದೇಶದಲ್ಲಿ ತುಂಗಾಭದ್ರ ನದಿ ಇರುವುದರಿಂದ ನೀರಾವರಿ ಸೌಲಭ್ಯದಿಂದಾಗಿ ಸದಾ ಭತ್ತ, ಕಬ್ಬುಗಳನ್ನು ಬೆಳೆಯುತ್ತಾ ಹಸಿರು ಸೀರೆಯುಟ್ಟಂತೆ ಕಂಗೊಳಿಸುತ್ತದೆ. ಹುಲಿಗಿ ಗ್ರಾಮದ ಜನಪದ ಸಂಸ್ಕೃತಿ ಇತಿಹಾಸವು ಕೊಪ್ಪಳ ಜಿಲ್ಲೆಯಿಂದ ಹೊರತಾಗಿರಲಿಲ್ಲ. ಜಿಲ್ಲೆಯ ಒಂದು ಭಾಗವಾಗಿರುವ ಹುಲಿಗಿ ಗ್ರಾಮವು ಅದರೊಂದಿಗೆ ತನ್ನ ಜನಪದ ಸಂಸ್ಕೃತಿ ಇತಿಹಾಸವನ್ನು ರೂಪಿಸಿಕೊಂಡಿದೆ. 
ಈ ಪ್ರದೇಶದಲ್ಲಿ ಎಲ್ಲಾ ಧರ್ಮಗಳು ಕಂಡುಬರುತ್ತವೆ. ಶೈವ, ಜೈನ, ವೈಷ್ಣವ, ಶಕ್ತ ಪಂಥಗಳು ಈ ಗ್ರಾಮದಲ್ಲಿರುವುದನ್ನು ಅಲ್ಲಿರುವ ದೇವಾಲಯಗಳಲ್ಲಿ ಅವುಗಳನ್ನು ಆರಾಧಿಸುವುದರಿಂದ ಕಾಣಬಹುದು. ಹುಲಿಗಿ ಗ್ರಾಮದಲ್ಲಿ ಸೋಮೇಶ್ವರ, ಪಾರ್ಶ್ವನಾಥ, ರಾಮ, ಹನುಮಂತ ಹಾಗೂ ಊರಮ್ಮ ದೇವಿಯ ದೇವಾಲಯಗಳು ಇವೆ. ಈ ಗ್ರಾಮದ ಅತ್ಯಂತ ಪ್ರಾಚೀನವಾದ ದೇವಾಲಯವೆಂದರೆ ಪಂಚಲಿಂಗೇಶ್ವರ ದೇವಾಲಯ. ಈ ದೇವಾಲಯದಲ್ಲಿರುವ ಐದು ದೇಗುಲಗಳೊಂದಿಗೆ ಸೋಮೇಶ್ವರ ದೇವಾಲಯವು ಕ್ರಿ.ಶ. 1088 ರಲ್ಲಿ ಸೋಮನಾಥನೆಂಬುವನಿಂದ ನಿರ್ಮಿತನಾಗಿದೆ. ಈ ದೇವಾಲಯದ ಪಕ್ಕದಲ್ಲಿಯೇ ಎರಡು ಈಶ್ವರ ದೇವಾಲಯ, ದಕ್ಷಿಣದಲ್ಲಿ ಮತ್ತೆರಡು ಈಶ್ವರ ದೇವಾಲಯಗಳನ್ನು ಹೊಂದಿ ಇದಕ್ಕೆ ಪಂಚಲಿಂಗೇಶ್ವರ ದೇವಾಲಯವೆಂದು ಕರೆದಿರುವರು. ಇದರ ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ನಿರ್ಮಿತಿಯಾಗಿದೆ. ಪಂಚಲಿಂಗೇಶ್ವರ ದೇವಾಲಯದ ನಿರ್ಮಾಣದ ಸಮಯದಲ್ಲಿಯೇ ಪಾರ್ಶ್ವನಾಥ ಬಸದಿಯನ್ನೂ ಸಹ ಈ ಗ್ರಾಮದಲ್ಲಿ ನಿರ್ಮಿಸಲಾಯಿತು. 
ಈ ಗ್ರಾಮವು ಪ್ರಸಿದ್ದಿಗೆ ಬಂದಿದ್ದು ಅಲ್ಲಿರುವ ಹುಲಿಗೆಮ್ಮ ದೇವಿಯ ದೇವಾಲಯದಿಂದ. ಹುಲಿಗೆಮ್ಮಳು ಎಲ್ಲಮ್ಮನ ಪರಮಾವತಾರವೆಂದು ಈ ಪ್ರದೇಶದ ಜನರ ನಂಬಿಕೆ. ಶಕ್ತಿ ದೇವತೆಯಾದ ಈ ಹುಲಿಗೆಮ್ಮಳು ಇಲ್ಲಿನ ಗ್ರಾಮದೇವತೆಯೂ ಆಗಿದ್ದಾಳೆ. ಉಗ್ರ ಸ್ವರೂಪಿಯಾಗಿರುವ ಈ ಮೂರ್ತಿಯನ್ನು ಶಾಂತಗೊಳಿಸುವ ಸಲುವಾಗಿ ಮೇಲಿಂದ ಮೇಲೆ ವಿಶೇಷ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ. ಎಲ್ಲಮ್ಮ ಹುಲಿಯ ಸವಾರಿ ಮಾಡಿದ್ದದರಿಂದ ಆಕೆಗೆ ಹುಲಿಗೆಮ್ಮ ಎಂಬ ಹೆಸರು ಬಂದಿತೆಂದು ಕೆಲವರ ನಂಬಿಕೆ. ಈ ದೇವಾಲಯವು 800 ವರ್ಷಗಳ ಹಿಂದೆ ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ಈ ದೇವಸ್ಥಾನದಲ್ಲಿ ಪ್ರತಿ ದಿನವೂ ಪೂಜಾಕಾರ್ಯಕ್ರಮಗಳಾದ ಕಂಕಣಧಾರಣೆ, ಬೋಳ ಹುಚ್ಚಯ್ಯನ ತೇರು ಮತ್ತು ಅಕ್ಕಿ ಪಡಿ ರಥೋತ್ಸವಗಳು ಸಾಮಾನ್ಯವಾಗಿ ಕಂಡುಬರುವಂತಹ ನಂಬಿಕೆ ಉತ್ಸವಗಳಾಗಿದ್ದರೆ, ಇಲ್ಲಿ ಕೊನೆಗೆ ನಡೆಯುವ ಬಾಳೆದಿಂಡಿನ ಉತ್ಸವ, ಪಾಯಸ ಮತ್ತು ಕೊಂಡದ ಉತ್ಸವ ಇವುಗಳು ಇಲ್ಲಿಯ ಜನರ ನಂಬಿಕೆ ಮತ್ತು ಪವಾಡ ಮತ್ತು ಸಾಂಸ್ಕೃತಿಕ ಆಚರಣೆಗಳಾಗಿ ಕಂಡುಬರುತ್ತವೆ.

Read More »

Indian Constitution: Crossing The Borders of Religion, Caste, Language and Culture

Prof. (Dr.) Fr. Davis Panadan Varghese CMI, Dr. Sini John

88 to 105

India, a highly diverse society, is an endangered pluralist polity. India is now challenged by forces that threaten its fragile political consensus. This paper is divided into different sections. The first section offers an overview of India’s diversity, state forms and nationalisms in broad brushstrokes. The second focuses on a particular change experience: constitution-making in India (1946–49). Shifting to the present, the third section discusses sources of inclusion and exclusion in the Indian polity. Focusing on reservations, discrimination against Muslims, Hindu nationalism and violence, it outlines key dimensions of exclusion in India today. The final section summarizes key lessons from the Indian experience with pluralism which takes the country beyond borders of religion, caste, language and culture. In the case of the Indian Constitution, the problem was not with its approach as with the normative resources fashioned, which remained deficient for the accommodation of religious diversity, and cultural diversities. It may be noted that the provisions of the Indian Constitution regarding the right to religious liberty cover all the freedoms relating to religion set forth in the Universal Declaration of Human Rights,1 which was adopted by the General Assembly of the United Nations at the Palais de Chaillot, Paris, on December 10, 1948. 

Read More »

Degendering the Crafts: An Exploration of Brands working on Gender Neutral Handloom based clothing

Dhruv Srivastava, Shesha Kamboj, Shivangi Sudhanshu, Sonali Srivastav

106 to 112

This research paper delves into exploring the possibility of         disassociating gender norms from crafts and their subsequent societal acceptance. Crafts have long been associated with gender specific        stereotypes, with certain activities or creations often being categorised as “masculine” or “feminine”. However, there is a growing movement        towards making crafts more inclusive and gender-neutral. This study uses qualitative research methodologies such as in-person and online interviews, social media analysis and secondary data analysis. This study highlights the proactive approach adopted by various brands towards embracing gender neutrality in craft design and production, driven by a desire for inclusivity and acceptance within society. This study also           discusses the shift in the perspectives of the artisans, consumers and other stakeholders involved in production and consumption of these craft based products. It discusses how breaking free from traditional gender norms is making crafts more inclusive and accessible to a diverse range of consumers.

Read More »

Property Right Among Rural Women Hindu Succession (Amendment Act)

Saraswati

113 to 118

In England under common law a married lost her legal existence by the fact of marriage. In the words of Blackstone, “by marriage, the husband and wife are one person in law, that is, the very being or legal existence of the woman is suspended during the marriage, or at least is incorporated and consolidated in that of the husband”. “Upon this Principle, of a union of person in husband and wife”, he further adds, “depend almost all the legal rights, duties and disabilities that either of them acquires by marriage”. This principle very pointedly brings out the effect of the merger of the wife`s legal status into that of her husband on her property rights. Much of her person property whether possessed by heat the time of marriage or coming to her after marriage, either became absolutely his own, or during covert use might, if he chose, be made absolutely his own, so that even if the wife survived him, it went to his representatives. On the other hand, the wife`s freehold estates of which she was seized, vested in husband and wife both, but the husband acquired sole management and control during marriage. Though he could not sell it, but the birth of a child entitled him an interest for life by the courtesy of England. 
Under this common law scheme of property, which lasted up to 1870, “it is surely substantially true to say that marriage transferred the property of the wife to her husband”. In sum, the husband could say, “What is yours is mine; what is mine is my own”. The courts of equity mitigated of some extent the hardship of married women, which they encountered at the common law. Equity courts were not bound by the rules of common law and were free to “consider all the circumstances of those cases that came before them and to adopt the means to the end”. The goal was achieved by a systematic and ingenious development of the principle that “even though a person might not be able to hold property of his own, it might be held for his benefit by trustee whose sole duty was to carry out the terms of the trust. This principle created a separate property for the married woman for her separate use, on the basis of the declaration of the settlor. With regard to this separate property; the married woman was “released and freed from the fetters and disability of coverture, and invested with the rights and powers of a person who is sui Jusus”. However, even if the courts of equity were able to improve the lot of women, yet, it could not make a married woman, in respect of her separate property, a fame sole. 

Read More »

The Antyodaya Philosophy: Government Plan to Rural Development and Rural livelihood security

Shivanand Annappa Kamble

119 to 127

Antyodaya Mission is an initiative by the Indian government with a goal to bring optimal utilization and management of resources, convergence and accountability frameworks, and poverty eradication in rural and urban India. The mission is a part of the Deendayal Antyodaya Yojana - National Rural Livelihoods Mission (DAY-NRLM) and the Deendayal Antyodaya Yojana - National Urban Livelihoods Mission (DAY-NULM). It aims to target the poorest and most vulnerable households and transform them into sustainable livelihoods units.Under this mission, the government collects village-level data on infrastructure and economic activities to identify and prioritize the needs of the community.This data is then used to identify and select beneficiaries and provide them with various skill development and income-generating activities.
Implementation of Mission Antyodaya is done through a network of trained resource persons and community facilitators, who work together with communities to develop and implement a local development plan. The mission emphasizes transparency and accountability at all levels of its implementation, including regular monitoring and evaluation by various stakeholders.Overall, the Antyodaya Mission is a significant step towards reducing poverty and promoting sustainable livelihoods in India’s rural and urban areas. It highlights the importance of community participation, accountability, and data-driven decision making in achieving this goal. the term “antyodaya” the concept of Antyodaya as a philosophy and an approach to development was first articulated by Pandit Deendayal Upadhyaya, an Indian philosopher, economist and political leader.

Read More »

Instagram’s Role in Promoting Esports Culture and Awareness in India: A Study

Vinod Kumar D Chavan, N. Sanjeev Raj

128 to 134

In the dynamic landscape of modern entertainment, esports has emerged as a cultural force, capturing the attention of diverse audiences worldwide. This research investigates the pivotal role of the social media platform Instagram in fostering esports culture and augmenting awareness within the Indian context. The study addresses the scarcity of literature on the intersection of esports and Instagram, aiming to unravel the mechanisms through which this visual-centric platform contributes to the growth of esports culture in India.
Employing a mixed-methods approach, the study amalgamates qualitative content analysis of esports-related Instagram posts with a quantitative survey targeting Indian Instagram users. The qualitative analysis discerns prevalent themes in Instagram content, spanning tournaments, player profiles, and gaming insights. Meanwhile, the quantitative survey gauges user awareness and interaction with esports content on the platform. By intertwining these methods, the research seeks to decipher the multifaceted impact of Instagram on cultivating a dedicated esports community and amplifying the resonance of esports culture in India.
The anticipated findings envision an intricate connection between Instagram’s visual narrative and the propagation of esports culture, underscoring the potential of social media platforms in transforming niche interests into mainstream phenomena. This exploration into Instagram’s role as a catalyst for esports culture and awareness presents implications for fostering a symbiotic relationship between digital platforms and emerging cultural domains.

Read More »

ಯಾಜ್ಞಸೇನಿಯ ಆತ್ಮಕಥನ: ದಲಿತತ್ವದ ನೆಲೆಗಳು

ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ

135 to 142

ದಲಿತರು ಎಂದರೆ ಶೋಷಿತರು ಎನ್ನುವುದು ಕೇವಲ ಹಾಳೆಗಳಲ್ಲಿ, ಅಕ್ಷರ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ. ಸಮಾಜದಲ್ಲಿ ಅದು ರೂಢಿಗೆ ಬಂದೇ ಇಲ್ಲ. ದಲಿತ ಎಂದರೆ ಕೇವಲ ಜಾತಿ ಸೂಚಕ ಪದವಾಗಿ ಮಾತ್ರ ಬಳಕೆಯಲ್ಲಿದೆ. ಎಲ್ಲಾ ವಿದ್ವಾಂಸರ ಹೇಳಿಕೆ ಗಳನ್ನು ಆಧಾರವಾಗಿಟ್ಟುಕೊಂಡು, ಯಾವುದೇ ವರ್ಗದ ಶೋಷಿತ ಮಹಿಳೆಯನ್ನು ದಲಿತ ಮಹಿಳೆ ಎಂದು ಗುರುತಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿಯೇ ಮಹಾಭಾರತದಲ್ಲಿ ಮುಖ್ಯ ಪಾತ್ರವಾಗಿ ಕಾಣುವ ದ್ರೌಪದಿಯು ಮಾನಸಿಕವಾಗಿ, ಕೆಲವೊಮ್ಮೆ ದೈಹಿಕವಾಗಿ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದಾಳೆ. ಆದ್ದರಿಂದಲೇ ಈ ಲೇಖನದಲ್ಲಿ ಯಾಜ್ಞಸೇನೆಯನ್ನು ದಲಿತ ಸ್ತ್ರೀ ಎಂದು, ಅವಳ ಪ್ರಜ್ಞಾಪೂರ್ವಕವಾದ ವ್ಯವಸ್ಥೆಯ ವಿರುದ್ಧವಾದ ಧ್ವನಿಯನ್ನು ದಲಿತತ್ವದ ಧ್ವನಿಯಾಗಿ ಗುರುತಿಕೊಂಡು ಈ ಲೇಖನದಲ್ಲಿ ಚರ್ಚಿಸಿಲಾಗಿದೆ.

Read More »

ಬೆಳ್ವೊಲನಾಡಿನ ರಾಷ್ಟ್ರಕೂಟರ ಕಾಲದ ಶಾಸನೋಕ್ತ ಜೈನ ಮುನಿಗಳು

ಶರಣಪ್ಪ ಬಸಪ್ಪ ಜಗ್ಗಲ

143 to 151

“ಪೂರ್ಣತ್ವ ಸಂಪಾದನೆ ಜೀವನದ ಗುರಿ. ಜೀವವು ಆತ್ಮವಿಕಾಸದ ಮಹಾ ಕಮ್ಮಟವೆನಿಸಿದುದು. ಪರಿಪೂರ್ಣದೆಡೆಗೆ ಸಾಗಲು ಜೈನಧರ್ಮ ಆನಂದಮಯವಾಗಿದೆ, ಆಶಾವಾದಿಯಾಗಿದೆ”. ಇಲ್ಲಿ ಮನುಷ್ಯ ಸ್ವಪ್ರಯತ್ನದಿಂದ ಜೀವನವನ್ನು ಉತ್ತಮಗೊಳಿಸಿಕೊಂಡು, ಮಹೋನ್ನತವಾದುದನ್ನು ಸಾಧಿಸುತ್ತಾನೆ. ಇದೇ ಜೈನಧರ್ಮ ತತ್ವದಂತೆ ಕರ್ಮಬಂಧನಕ್ಕೊಳಗಾದ ಜೀವಾತ್ಮನು ಅನೇಕ ಭವಗಳನ್ನು ದಾಟುತ್ತ ಬಂದು, ಕರ್ಮಬಂಧವನ್ನು ಕಿತ್ತೊಗೆದು, ಭವಬಂಧನದಿಂದ ಮುಕ್ತಗೊಂಡು ಸಿದ್ದನಾಗುತ್ತಾನೆ. ತನ್ನಂತೆ ಇನ್ನುಳಿದ ಜೀವಾತ್ಮರೂ ಮುಕ್ತರಾಗಬೇಕೆಂಬ ಸದುದ್ದೇಶದಿಂದ ತಾನು ಕಂಡುಂಡ, ಅರಿತುಕೊಂಡ ಜ್ಞಾನದ ಹಿನ್ನೆಲೆಯಲ್ಲಿ ಈ ಜೀವಾಜೀವಗಳ ಸೃಷ್ಟಿ, ಸಂಸಾರದ ಕಲ್ಪನೆಯನ್ನು ಉಪದೇಶಿಸಿಸುವನು. ಜೀವಾತ್ಮನು ಬಯಸುವ ಅನಂತ ಸುಖವಾದ ಮುಕ್ತಿ ಪ್ರಾಪ್ತವಾಗಲು ಕಾಲಲಬ್ಬಿಗಿಂತ ಮೊದಲು ಸಮ್ಯಕ್ತ್ವಲಭಿಸಬೇಕು. ಜೀವನದಲ್ಲಿ ಸಮ್ಯಕ್ತ್ವಪ್ರಾಪ್ತಿ ತುಂಬ ಮಹತ್ವದ್ದು. ಸಮ್ಯಕ್ತ್ವವೆಂದರೆ ತತ್ವಪ್ರೀತಿ, ಸಮ್ಯಕ್ತ್ವವೆಂದರೆ ಆಧ್ಯಾತ್ಮದಲ್ಲಿ ಅಭಿರುಚಿ, ಸಮ್ಯಕ್ತ್ವವೆಂದರೆ ಆತ್ಮಶ್ರದ್ದೆ, ಈ ಶ್ರದ್ದೆ ವ್ಯವಹಾರ ಜೀವನದಲ್ಲಿ ಪ್ರಕಟವಾದರೆ, ಅಲೌಕಿಕ ಸುಖ ದೊರೆಯುತ್ತದೆ. 
ಜೈನಧರ್ಮ ಇಂದಿಗೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬರಲು ಬಹುಮುಖ್ಯ ಕಾರಣರು ಜಿನಮುನಿಗಳು. ಕಾಲಕಾಲಕ್ಕೆ ಈ ಧರ್ಮದ ಜನಸಾಂದ್ರತೆಯಲ್ಲಿ ಏರಿಳಿತ ಕಂಡರೂ; ಮುನಿಗಳು ಮಾತ್ರ ತಾವು ಆಚರಿಸುವ ಕಾಠಿಣ್ಯ ವ್ರತಗಳನ್ನು ಶಿಥಿಲಗೊಳಿಸಲಿಲ್ಲ. ಆದಿ ಕಾಲಕ್ಕಿದ್ದ ಮುನಿಯ ಸಿದ್ಧಾಂತಗಳೂ ಈಗಲೂ ಅಸ್ಥಿತ್ವದಲ್ಲಿವೆ ಎಂದರೆ ಅದಕ್ಕೆ ಜಿನಮುನಿಗಳೇ ಕಾರಣರಾಗುತ್ತಾರೆ. ದೈಹಿಕ ಮತ್ತು ಮಾನಸಿಕ ದಿಗಂಬರತ್ವವನ್ನು ಪಾಲಿಸುವ ಇವರು ಅತೀ ಕ್ಲಿಷ್ಟವಾದ ನಿಯಮಗಳ ಮೂಲಕ ದೇಹವನ್ನು ದಂಡಿಸುತ್ತಾರೆ. ಅತ್ಯುಚ್ಛ ‘ಕರ್ಮಸಿದ್ಧಾಂತ’ ಪರಿಪಾಲನೆ ಇವರ ಗುರಿ. ‘ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂ’ಗಳಲ್ಲಿ ಮುನಿಗಳು ಸಂಚರಿಸುತ್ತಾ, ಮಳೆಗಾಲದಲ್ಲಿ (ಚಾತುರ್ಮಾಸ) ಒಂದು ಕಡೆ ನೆಲೆ ನಿಲ್ಲುವರು. ಈ ಸಂದರ್ಭದಲ್ಲಿಯೇ ಮುನಿಗಳ ವಸತಿಗಾಗಿ ಕಟ್ಟಡಗಳು ನಿರ್ಮಾಣವಾದವು. ಮುಂದೆ ಇದೇ ವಸತಿ>ಬಸದಿಯಾಯ್ತು. ಬಸದಿಗೆ ಇನ್ನೊಂದು ಹೆಸರು ಚೈತ್ಯ. ಚೈತ್ಯವಾಸಿ ಮುನಿಪಂಗಡವು ಜೈನಧರ್ಮದಲ್ಲುಂಟು. ಚಾತುರ್ಮಾಸ ಸಂದರ್ಭದಲ್ಲಿ ಮುನಿಗಳು ಒಂದೇ ಕಡೆ ನೆಲೆ ನಿಲ್ಲುವುದರಿಂದ ಶ್ರಾವಕರ ಮೇಲೆ ಪ್ರಭಾವ ಬೀರಿ ಅವರು ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ಹುರಿದುಂಬಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಪಂಚಾಣುವ್ರತಗಳನ್ನು ಶ್ರಾವಕರಿಗೆ ಬೋಧಿಸುತ್ತ ತಾವೂ ಅನುಸರಿಸುತ್ತಾ ಬಂದಿದ್ದಾರೆ. ಹೀಗೆ ಪಾರಮಾರ್ಥಿಕ ಕಾರ್ಯದ ಜೊತೆಜೊತೆಗೆ ಆಂತರಿಕ ಕಷಾಯಗಳನ್ನು ಕಳೆದುಕೊಂಡು ಸಮಾಧಿ ಮರಣದ ಮೂಲಕ ಆತ್ಮವನ್ನು ಉದ್ಧಾರಗೊಳಿಸಿಕೊಳ್ಳುವ ಮುನಿಗಳ ನೂರಾರು ನಿದರ್ಶನಗಳು ಬೆಳ್ವೊಲನಾಡಿನಲ್ಲಿವೆ. ಮುಖ್ಯವಾಗಿ ಈ ನಾಡಿನಲ್ಲಿ ಆಳ್ವಿಕೆ ಮಾಡಿ ಜೈನಧರ್ಮಕ್ಕೆ ಅಪಾರವಾದ ಕೊಡುಗೆ ನೀಡಿರುವ ರಾಷ್ಟ್ರಕೂಟರ ಕಾಲ ಘಟ್ಟದ ಜೈನ ಮುನಿಗಳ ಕುರಿತು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

Read More »

ವೀರಾಂಗಿಣಿ ಅಕ್ಕಮಹಾದೇವಿ

ಶೀಲಾದೇವಿ ಎಸ್. ಬಿರಾದಾರ

152 to 156

ಹಳೆಗನ್ನಡ ಸಾಹಿತ್ಯವು ರಾಜ್ಯಾಶ್ರಯದಲ್ಲಿಯೇ ಪಂಡಿತ ಪಾಮರರಿಗೆ ಮಾತ್ರ ಸಿಮಿತವಾಗಿತ್ತು. ಹನ್ನೆರಡನೆ ಶತಮಾನದಲ್ಲಿ ವಚನ ಸಾಹಿತ್ಯಯೂ ತೀರಾ ಸರಳ ಸಹಜವಾಗಿ ತಾವು ಬೋದಿಸುವುದು ಸಾಮಾನ್ಯನಿಗೂ ತಲುಪಬೇಕು ಎಂಬ ಆಶಯ ಹೊಂದಿದವರು. ಶಿವಶರಣರು ಶಿವಶರಣೆಯರ ಆಲೋಚನೆಗಳನ್ನು ಅನುಭವಗಳನ್ನು ವಿಚಾರಧಾರೆಗಳೆ ವಚನ. ಜನಸಾಮಾನ್ಯರ ಭಾಷೆಯಲ್ಲಿಯೆ ತಮ್ಮ ಭಾವನೆಗಳನ್ನು ಅನಿಸಿಕೆಗಳನ್ನು ತತ್ವಗಳನ್ನು ಹಾಗೂ ಅವರ ಆತ್ಮಾನುಭವಗಳೇ ವಚನರೂಪದಲ್ಲಿ ವ್ಯಕ್ತಪಡಿಸಿದ್ದು ವಚನ ಸಾಹಿತ್ಯ. ವಚನ ಸಾಹಿತ್ಯ ವಿಶ್ವಕ್ಕೆ ಕೊಡುಗೆಯಾಗಿ ನೀಡಿರುವುದು ಕನ್ನಡ ಸಾಹಿತ್ಯದ ಹೆಮ್ಮೆಯಾಗಿದೆ. ವಚನ ಸಾಹಿತ್ಯದಲ್ಲಿ ಕಾಣಿಸುವ ವಿಶಿಷ್ಟ ಪ್ರತಿಭೆಯ ಮಹಿಳೆ ಅಕ್ಕಮಹಾದೇವಿ. ಕನ್ನಡ ಸಾಹಿತ್ಯದ ಮೊದಲ ಕವಿಯತ್ರಿ ಮತ್ತು ವಚನಗಾರ್ತಿ, 12 ನೆಯ ಶತಮಾನದ ಪ್ರಪ್ರಥಮವಾಗಿ ಪುರುಷರಿಗೆ ಸಮಾನವಾಗಿ ನಿಂತು ಜ್ಞಾನ, ವೈರಾಗ್ಯ ಭಕ್ತಿ, ನೇರ ದಿಟ್ಟತನದಿಂದ ಅಂದಿನ ಕಾಲದಲ್ಲಿ ಹೆಣ್ಣು ಮನೆಯಿಂದ ಹೊರಬರಲು ಹೆದುರುತ್ತಿದ್ದ ಸಮಯದಲ್ಲಿ ಆಧ್ಯಾತ್ಮ ಲೋಕದ ಕಡೆ ಸಾಗಿದವಳು. ಚನ್ನಮಲ್ಲಿಕಾರ್ಜುನನ್ನು ದರ್ಶನಕಾಗಿ ಎಲ್ಲವು ತೋರೆದು ಕಲ್ಯಾಣ ಪ್ರವೇಶ ಮಾಡಿ ಹಲವು ಪರೀಕ್ಷೆಗಳನ್ನು ಒಡ್ಡಿದರು ಭಯಪಡದೆ ಅಲ್ಲಮಪ್ರಭುವರಿಗೆ ಉತ್ತರಿಸಿದ್ದು ಅಕ್ಕಮಹಾದೇವಿ. ಪುರುಷರಿಗೆ ಸಮಾನವಾಗಿ ಸಾಹಿತ್ಯ ರಚನೆ ಮಾಡಿದ ಕೀರ್ತಿ ಅಕ್ಕಮಹಾದೇವಿಗೆ ಸಲ್ಲುತ್ತದೆ. ಅಕ್ಕನ ಚಿಂತನೆಗಳು ಅವಳಾಡುವ ಮಾತುಗಳು ಇಂದು ನಮ್ಮ ಆಧುನಿಕ ಸಮಾಜಕ್ಕೆ ಅವಶ್ಯಕವಾಗಿದೆ. 12ನೆಯ ಶತಮಾನ ಇಡಿ ವಿಶ್ವಕ್ಕೆ ಮಾದರಿಯಾಗಿರುವುದು ಸಮಾನತೆ ನೆಲೆಯು ಅದಕ್ಕೆ ಸಾಕ್ಷಿಯಾಗಿದೆ. ಕೆಟ್ಟ ಗುಣಗಳು ತುಂಬಿದ ಮನುಷ್ಯ ಕೇವಲ ಮನುಷ್ಯನಾದರೆ ಸಾಲದು ಅವನಲ್ಲಿ ಶಿವಭಕ್ತಿ, ಕರುಣೆ, ದಯ, ಮಾನವೀಯ ಮೌಲ್ಯಗಳು ಹೊಂದಿದವರು ನಿಜವಾದ ಮನುಷ್ಯನಾಗಲು ಸಾಧ್ಯ ಎಂದು ಅಕ್ಕಮಹಾದೇವಿಯ ನಿಲುವಾಗಿತ್ತು. ಅಂದಿನಿಂದ ಮಹಿಳೆಯರಿಗೆ ಸಮಾನವಾಗಿ ಕಂಡವರು ಬಸವಾದಿ ಶರಣರು. ಹೆಣ್ಣು ಕೀಳಲ್ಲ ಅವಳು ಸಾಧನೆ ಮಾಡಬಲ್ಲಳು ಎಂದು ಸಾಧಿಸಿದ್ದು ತೋರಸಿದ್ದು ಅಕ್ಕಳು.

Read More »