ಲಿಪಿಯ ಹುಡುಕಾಟದಲ್ಲಿ

Main Article Content

ಶ್ರೀಮತಿ ಹುದಾಹುಸನಾ ಇಸಾಮದಿ

Abstract

ಭಾಷೆಯೆಂಬುದು ಸಾಮಾಜಿಕ ಸಂಪನ್ಮೂಲ. ಒಂದು ನಾಗರಿಕತೆಯ ಸಂಸ್ಕೃತಿಯ, ಜೀವಾಳ. ಆದರೆ ಇದು ಅಮೂರ್ತ ಸ್ವರೂಪದ್ದು. ಇದರ ಅಮೂರ್ತ ಸ್ವರೂಪಕ್ಕೆ ರೂಪ ರೂಪಿಸುವ ಸಾಧನವೇ ʼಲಿಪಿʼ. ಲಿಪಿಯ ಉಗಮ, ವಿಕಾಸವು ಭಾಷೆಯಷ್ಟೇ ಹಳೆಯದು. ಇದು ಆದಿಮಾನವನ ಕಾಲದ ಚಿತ್ರಲಿಪಿ ಹಾಗೂ ಗುಹಾಲಿಪಿಯಿಂದ ಹಿಡಿದು ಇಂದಿನ ಆಧುನಿಕ ಲಿಪಿಯವರೆಗೆ, ನಡೆದು ಬಂದ ಹಾದಿ ಅತಿ ಸುದೀರ್ಘವಾದುದು. ಹಲವು ಎಡರು ತೊಡರುಗಳ ನಂತರವೂ ಸಾಹಿತ್ಯದ ಬೆಳಗುವಿಕೆಗೆ ಬೆಳಕಾಗಿದೆ. ಇದರ (ಲಿಪಿಯ) ಹುಡುಕಾಟವು ನಮ್ಮನ್ನು ಪೂರ್ವ ಇತಿಹಾಸದಿಂದ ಸಿಂಧೂ ಲಿಪಿ, ಖರೋಷ್ಕಿ ಲಿಪಿ, ಬ್ರಾಹ್ಮಿ ಲಿಪಿ, ದೇವನಾಗರಿ, ಕ್ಯೂನಿಫಾರಂ, ಹೈರೋಗ್ಲಿಫಿಕ್, ಕ್ರೀಟ್ ಲಿಪಿ, ಹಿಟ್ನೈಟ್ ಲಿಪಿ ಇನ್ನೂ ಮುಂತಾದವುಗಳ ಪರಿಚಯ ನಮ್ಮ ಭಾರತೀಯ ಇತಿಹಾಸದಲ್ಲಿ ಕಾಣಸಿಗುತ್ತದೆ. ಸಾಹಿತ್ಯವನ್ನು ಭಾಷೆಯು ಯಾವ ರೀತಿ ಪೋಷಕವಾಗಿ ಮಹತ್ವ ಪಡೆದಿದೆಯೋ, ಅದೇ ರೀತಿ ಭಾಷೆಗೆ ಪೋಷಕವಾಗಿ ಲಿಪಿಯು ಕೂಡ ಮಹತ್ವ ಪಡೆದಿದೆ ಎಂಬುದನ್ನು ನಾವು ಈ ಲೇಖನದಲ್ಲಿ ಕಾಣುತ್ತೇವೆ.

Article Details

Section

Research Articles

Author Biography

ಶ್ರೀಮತಿ ಹುದಾಹುಸನಾ ಇಸಾಮದಿ

ಅತಿಥಿ ಉಪನ್ಯಾಸಕರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆ, ನವನಗರ, ಹುಬ್ಬಳ್ಳಿ.

 

How to Cite

ಶ್ರೀಮತಿ ಹುದಾಹುಸನಾ ಇಸಾಮದಿ. (2025). ಲಿಪಿಯ ಹುಡುಕಾಟದಲ್ಲಿ . ಅಕ್ಷರಸೂರ್ಯ (AKSHARASURYA), 10(03), 115 to 121. https://aksharasurya.com/index.php/latest/article/view/1780

References

ಶೆಟ್ಟರ ಷ., (2014), ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ. ಅಭಿನವ ಪ್ರಕಾಶನ, ಬೆಂಗಳೂರು.

ಕನ್ನಡ ಶೈಲಿ ಕೈಪಿಡಿ, (2006), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸದಾನಂದ ಕನವಳ್ಳಿ, ವೀರಣ್ಣ ರಾಜೂರು (ಸಂ), (1998), ಮಹಾಮಾರ್ಗ ಎಂ.ಎಂ. ಕಲಬುರ್ಗಿ ಅಭಿನಂದನಾ ಗ್ರಂಥ, ವೀರಶೈವ ಅಧ್ಯಯನ ಸಂಸ್ಥೆ, ಗದಗ.

ನರಸಿಂಹಮೂರ್ತಿ ಎ.ವಿ., (2006), ಕನ್ನಡ ಲಿಪಿಯ ಉಗಮ ವಿಕಾಸ, ಸುವರ್ಣ ಸಾಹಿತ್ಯ ಗ್ರಂಥ ಮಾಲೆ, ಬೆಂಗಳೂರು.