ಭಾರತೀಯ ಸಂಸ್ಕೃತಿಯಲ್ಲಿ ಸಾಹಿತ್ಯ ಮತ್ತು ರಂಗಭೂಮಿ
Main Article Content
Abstract
ಸಾಹಿತ್ಯ ಮತ್ತು ರಂಗಭೂಮಿಯ ಪರಂಪರೆಗಳನ್ನು ಈ ಲೇಖನವು ತೌಲನಿಕವಾಗಿ ವಿಶ್ಲೇಷಿಸುತ್ತದೆ; ಚರ್ಚಿಸುತ್ತದೆ. ಸಂಸ್ಕೃತ ಸಾಹಿತ್ಯದಲ್ಲಿನ ಶ್ರವ್ಯಕಾವ್ಯ ಮತ್ತು ದೃಶ್ಯಕಾವ್ಯ ವರ್ಗೀಕರಣ, ಭರತಮುನಿಯ ನಾಟ್ಯಶಾಸ್ತ್ರ, ಧನಂಜಯನ ದಶರೂಪಕ ಹಾಗೂ ಅಶ್ವಘೋಷ, ಭಾಸ, ಕಾಳಿದಾಸ, ಶೂದ್ರಕ ಮೊದಲಾದ ನಾಟಕಕಾರರ ಕೃತಿಗಳ ಹಿನ್ನೆಲೆಯಲ್ಲಿ ಸಂಸ್ಕೃತ ರಂಗಪರಂಪರೆಯ ಸ್ವರೂಪವನ್ನು ಪ್ರಸ್ತುತ ಲೇಖನದಲ್ಲಿ ಸ್ಪಷ್ಟಪಡಿಸಿಕೊಳ್ಳಲಾಗಿದೆ. ನಾಟ್ಯಶಾಸ್ತ್ರಕ್ಕೂ ಪೂರ್ವದ ಗ್ರಾಮ್ಯ ರಂಗಪರಂಪರೆ ಮತ್ತು ನಂತರದ ಶಾಸ್ತ್ರೀಯ ಸಂಸ್ಕೃತ ರಂಗಭೂಮಿಯ ವಿಕಾಸವನ್ನು ಇಲ್ಲಿ ಚರ್ಚಿಸಲಾಗಿದೆ. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳ ವಾಚನ ಮತ್ತು ಪ್ರದರ್ಶನ ಪರಂಪರೆಗಳು ಭಾರತೀಯ ರಂಗಭೂಮಿಯ ಮೂಲಬೇರುಗಳಾಗಿದ್ದವು ಎಂಬ ಸಂಗತಿಯನ್ನು ಶೋಧಿಸಿಕೊಳ್ಳಲಾಗಿದೆ. ಗ್ರೀಕ್ ಮತ್ತು ಸಂಸ್ಕೃತ ನಾಟಕಗಳ ಸಾಮ್ಯ–ವೈಶಿಷ್ಟ್ಯಗಳನ್ನು ವಿಶ್ಲೇಷಿಸಿ, ಕನ್ನಡ ರಂಗಭೂಮಿಯ ಮೇಲಿನ ಅವುಗಳ ಪ್ರಭಾವವನ್ನು ಗುರುತಿಸಿಕೊಳ್ಳಲಾಗಿದೆ. ಗ್ರೀಕ್ ಮತ್ತು ಸಂಸ್ಕೃತ ಪರಂಪರೆಗಳಲ್ಲಿ ಮಹಾಕಾವ್ಯಗಳು ಮತ್ತು ಪುರಾಣಗಳು ನಾಟಕಗಳ ಕಥಾವಸ್ತುವಿಗೆ ಮೂಲವಾಗಿದ್ದರೂ, ಅವುಗಳನ್ನು ರಂಗರೂಪಕ್ಕೆ ಅಳವಡಿಸಿದ ವಿಧಾನಗಳು ಭಿನ್ನವಾಗಿರುವ ಕ್ರಮವನ್ನು ಇಲ್ಲಿ ಕಂಡುಕೊಳ್ಳಲಾಗಿದೆ. ಇದರೊಂದಿಗೆ ಸಾಹಿತ್ಯ ಮತ್ತು ನಾಟಕಗಳ ನಡುವಿನ ಅಂತರ್ ಸಂಬಂಧಗಳನ್ನು ತೌಲನಿಕ ಅಧ್ಯಯನದ ಮೂಲಕ ವಿವೇಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಾಲಸುಬ್ರಹ್ಮಣ್ಯ ಎನ್., (2001), ಅರಿಸ್ಟಾಟಲ್‌ನ ಕಾವ್ಯಮೀಮಾಂಸೆ, ಮೈಸೂರು: ಕಾವ್ಯಾಲಯ.
ಮರುಳಸಿದ್ದಪ್ಪ ಕೆ., (2002), ಆಧುನಿಕ ಕನ್ನಡ ನಾಟಕ, ಬೆಂಗಳೂರು: ಅಂಕಿತ ಪುಸ್ತಕ.
ರಂಗನಾಥ್ ಎಚ್.ಕೆ., (2000), ಕರ್ನಾಟಕ ರಂಗಭೂಮಿ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಶೇಷಗಿರಿರಾವ್ ಎಲ್.ಎಸ್., (1986), ಗ್ರೀಕ್ ರಂಗಭೂಮಿ ಮತ್ತು ನಾಟಕ, ಮೈಸೂರು: ಗೀತಾ ಬುಕ್ ಹೌಸ್.
ಆದ್ಯರಂಗಾಚಾರ್ಯ, (2003), ಭರತಮುನಿ ವಿರಚಿತ ನಾಟ್ಯಶಾಸ್ತ್ರ, ಹೆಗ್ಗೋಡು: ಅಕ್ಷರ ಪ್ರಕಾಶನ.
ಅಕ್ಷರ ಕೆ.ವಿ., (2000), ರಂಗಪ್ರಪಂಚ, ನವದೆಹಲಿ: ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ. (ಸೂಚನೆ: ಮೂಲದಲ್ಲಿ ಸ್ಥಳವಿರಲಿಲ್ಲ, NBT ಪ್ರಧಾನ ಕಚೇರಿಯ ಆಧಾರದ ಮೇಲೆ ನವದೆಹಲಿ ಸೇರಿಸಲಾಗಿದೆ)
ಅಕ್ಷರ ಕೆ.ವಿ., (1985), ರಂಗಪ್ರಯೋಗ, ಹೆಗ್ಗೋಡು: ಅಕ್ಷರ ಪ್ರಕಾಶನ.
ಕೃಷ್ಣಶಾಸ್ತ್ರೀ ಎ.ಆರ್., (1970), ಸಂಸ್ಕೃತ ನಾಟಕ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.